ದಿಗಂಬರ ಜೈನ ಸಮಾಜ ಮೈಸೂರು ಸನ್ಮಾನ/ ಶ್ರವಣಬೆಳಗೊಳ

ಶ್ರೀ ದಿಗಂಬರ ಜೈನ ಸಮಾಜ ಮೈಸೂರಿನ ನೂತನ ಪದಾದಿಕಾರಿಗಳಿಗೆ ಶ್ರವಣಬೆಳಗೊಳದ  ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರಿಂದ ಸನ್ಮಾನ ಸಮಾರಂಭವನ್ನು ದಿನಾಂಕ 24/12/2016 ರಂದು ಶ್ರವಣಬೆಳಗೊಳದಲ್ಲಿ ನೆರವೇರಿತು. ಅಶೋಕ್ ಕುಮಾರ್ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸೌಮ್ಯ ಸರ್ವೇಶ್ ಪ್ರಾರ್ಥನೆ ಹಾಡಿದರು. 

     ಶ್ರೀ ದಿಗಂಬರ ಜೈನ ಸಮಾಜದ ಪ್ರತಿ ಪದಾದಿಕಾರಿಗಳಿಗೂ  ಸನ್ಮಾನಿಸಿ ಆಶೀರ್ವದಿಸಿದರು.

 ನಂತರ  ನೂತನ ಅಧ್ಯಕ್ಷರಾದ  ಸುನೀಲ್ ಕುಮಾರ್ ರವರು ಮಾತನಾಡಿ, ತಮ್ಮ ಅವಧಿಯಲ್ಲಿ ಉತ್ತಮ ಕೆಲಸಗಳ ಬಗ್ಗೆ ಭರವಸೆಯನ್ನು ನೀಡಿದರು. ನಂತರ ಮಾಜಿ ಅಧ್ಯಕ್ಷರಾದ  ಪ್ರಕಾಶ್ ಬಾಬುರವರು ಶ್ರೀಗಳು ನೀಡಿದ ಉನ್ನತ  ಜವಾಬ್ದಾರಿಯನ್ನು ಹಸ್ತಾಂತರ ಮಾಡಿದರು. 

  ತದನಂತರ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮೈಸೂರಿನ ದಿಗಂಬರ ಜೈನ ಸಮಾಜದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಶ್ರೀ ಅಜಿತ್ ಕುಮಾರ್ ರವರು,  ಪದ್ಮಶ್ರೀ ಮಹಿಳಾ ಜೈನ ಸಮಾಜದ ಅಧ್ಯಕ್ಷರಾದ ಶೀಲಾ ಅನಂತ್ ರಾಜ್ ಶ್ರವಣ ಬೆಳಗೊಳದ ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷರಾದ ಪೂರ್ಣಿಮ ಅನಂತ ಪದ್ಮನಾಭ್ , ದಿಗಂಬರ ಜೈನ ಸಮಾಜದ  ಅಧ್ಯಕ್ಷರಾದ ಜಿ. ಪಿ. ಪದ್ಮನಾಬ್ ರವರು ಉಪಸ್ಥಿತರಿದ್ದರು.