ಕ್ಷೇತ್ರ ಪರಿಚಯ- 31 / ಗೊಮ್ಮಟ ಗಿರಿ / ಬಿಳಿಗೆರೆ / ಮೈಸೂರು ಜಿಲ್ಲೆ.

ಭಗವಾನ್ ಬಾಹುಬಲೀಶನ, ಗೂಮ್ಮಟೇಶನ ಅಜಾನು ಬಾಹುವಿನ ನಾಮ ಹಲವಾರು ಹಾಗೂ ಅವನ ಪ್ರೇಕ್ಷಣೇಯ ಸುಂದರ ಸ್ಥಳಗಳು ಹಲವು ಅವುಗಳಲ್ಲಿ ಒಂದು ಕ್ಷೇತ್ರವಾದ ಗೂಮ್ಮಟಗಿರಿಯು ಒಂದು. ಮೈಸೂರಿನಿಂದ 20 ಕೀ ಮೀ ದೂರ ಇರುವ ಹುನುಸೂರ್ ತಾಲ್ಲೂಕ್ ನ ಬಿಳಿಕೆರೆ ಹೋಬಳಿಯಲ್ಲಿದೆ.ನೂರು ಅಡಿ ಎತ್ತರ, ಮುವತ್ತು ಅಡಿ ಅಗಲ ಇರುವ ಈ ಗಿರಿಗೆ ಸುಮಾರು 80 ರಿಂದ 85 ಮೆಟ್ಟಿಲುಗಳಿವೆ.ಶಿಲ ಪ್ರವೇಶ ದ್ವಾರವನ್ನು ದಾಟಿ ಮುಂದೆಸಾಗಿದರೆ, ಕಾಣಸಿಗುವುದೇ ಕಿರಿದಾದ  ಪ್ರದೇಶದಲ್ಲಿದ್ದರು ಅತ್ಯಂತ ಅಪರೂಪದ ರಮಣಿಯವಾಗಿರುವ ಗೂಮ್ಮಟನ ಮನೂಜ್ಞ ಮೂರ್ತಿ‍‍‍‍‍ , ಹನ್ನೂಂದು, ಹನ್ನೆರಡನೇ ಶತಮಾನದೆಂದು ಹೇಳಲಾಗುವ, ಈ ಮೂರ್ತಿ ಎಲ್ಲಾ ಗೂಮ್ಮಟ್ಟನ ಮೂರ್ತಿ‍‍‍‍‍ಗಿಂತ ವಿಬಿನ್ನವಾದ ಅಂಶವನ್ನು ಒಳಗೂಂಡಿದೆ,ಅದೇ ಮೂರ್ತಿಯ ಪಾದಗಳ ಬಳಿಇರುವ ಸರ್ಪಗಳು, ಬೆರೇಲ್ಲೂ ಕಾಣಸಿಗದು, ಸುಮಾರು 800 ವರ್ಷ್ಗಳ, ಪುರಾತನ ಮೂರ್ತಿಯನ್ನು 1950 ರಲ್ಲಿ ಧರ್ಮಪುರಾದಿಗಳಾದ ಸಿ.ಬಿ.ಎನ್, ಚಂದ್ರಯ್ಯ ಮತ್ತು ಶ್ರಾವಕರಿಂದ ಈ ಕ್ಷೇತ್ರವನ್ನು ಅಭಿವೃದ್ಧಿಗೂಳಿಸಲಾಯಿತು, ಈ ಹಿಂದೆ ಗೂಮ್ಮಟಪುರ ಎಂದು ಕರೆಯಲ್ಪಡುತ್ತಿದ್ದ ಈ ಸತ್ಥಳದ ಉಲ್ಲೇಖವನ್ನು, ಕನ್ನಡದ ಕವಿಯಾದ ಮಂಗರಸನು ತನ್ನ ನೇಮಿಜಿನೇಶನ ಸಂಗತಿಯಲ್ಲಿ ಉಲ್ಲೇಖಿಸಿಸುರುವುದು ಕಂಡುಬರುತ್ತದೆ.ಈ ಒಂದು ಪ್ರಶಾಂತ ಪರಿಸರದಲ್ಲಿ,ಬೆಟ್ಟದ ಕೆಳಗೆ ಸಂವೇದ ಶಿಖರ್ಜಿ‍ 24 ಕೂಟಗಳನ್ನು, ಪಾವಪುರಿ ಮಾದರಿಯ ಜಲಮಂದಿರ,ಕೈಲಾಸ ಗಿರಿ,ಸಮೋಸರಣ ಮಂದಿರ ಸೇರಿದಂತೆ ಎಲ್ಲವನ್ನು ಈಚೆಗೆ ನೂತನ ಕಾಯಕಲ್ಪ ನೀಡಿ ಜೀರ್ಣೋದ್ದಾರಗೂಳಿಸಿ, ಒಟ್ಟಾರೆ ಹೇಳುವುದಾದರೆ ಪ್ರೇಕ್ಷಣೀಯ ಸ್ಥಳವಾಗಿ ಪರಿಣಮಿಸಿದೆ.ಮೈಸೂರಿಗೆ ಆಗಮಿಸಿದ ಬಂಧುಗಳು ಈ ಪ್ರಕೃತಿದತ್ತ ಪ್ರೇಕ್ಷಣೀಯ ಸ್ಥಳದ ದರುಶನ ಪಡೆಯಬಹುದು.ಇಲ್ಲಿ ಪ್ರತಿ ವರ್ಷ್ ವು ಚಿನ್ಮಯನಿಗೆ ಮಹಾಮಸ್ತಾಕಭಿಶೇಕ ವಿಜೃಂಭಣೆಯಿಂದ ನೆಡೆಯುತ್ತಿದ್ದು, ಶ್ರೀ ಗೂಮ್ಮಟಗಿರಿ ಕ್ಷೇತ್ರ ಸೇವ ಸಮಿತಿಯವರ ಹಾಗೂ ಸುತ್ತಲಿನ ಧರ್ಮಬಂಧುಗಳ ಸಹಕಾರದಿಂದ ಕರೋನ ಕಾರಣದಿಂದ ಸರಳವಾಗಿ 77 ನೇ ವರ್ಷ ದ ಆಚರಣೆ ನೆರವೇರಿಸಲಾಯಿತು.