ಮಹಿಳಾ ಸಮ್ಮೇಳನವಾಗಿ ಕಾರ್ಯಕ್ರಮ

ರಾಷ್ಟ್ರಮಟ್ಟದ ಜೈನ ಮಹಿಳಾ ಸಮ್ಮೇಳನದಲ್ಲಿ ದಿನಾಂಕ 13/08/2017ರಂದು ಪೂಜ್ಯಶ್ರೀ ಮಾತಾಜಿಯವರಿಂದ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿತ್ತು.  ಕಾರ್ಯಕ್ರಮದಲ್ಲಿ ಸಿದ್ದದೇವಿಯವರು ಪ್ರಾಸ್ಥಾವಿಕ ಭಾಷಣ ಮಾಡಿ ಮಾತನಾಡಿ ಇಂದು ಮಹಿಳೆಯರ ಉನ್ನತ ಶಿಕ್ಷಣಕ್ಕೆ ಹೇಗೆ ವಿರೋಧವಿಲ್ಲವೋ ಅದೇ ರೀತಿ ಧಾರ್ಮಿಕ ಶಿಕ್ಷಣಕ್ಕೂ ವಿರೋಧ ಮಾಡಬಾರದು. ಧಾರ್ಮಿಕ ತಳಹದಿಯ ಮೇಲೆ ಶಿಕ್ಷಣ ಉದ್ಯೋಗ ಕುಟುಂಬ ನಿರ್ವಹಣೆ ನಡೆಯಬೇಕು. ಆಗ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ವಿಶ್ವ ಶಾಂತಿ ಸಾಕಾರಗೊಳ್ಳುತ್ತದೆ ಎಂದು  ಅಭಿಪ್ರಾಯಪಟ್ಟರು.

ಬೋಪಾಲ್ ನ ಡಾ||  ಸುಧಾ ಮಲೈಯಾ ರವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ವಿಶ್ವ ಶಾಂತಿಯ ಬಗ್ಗೆ ಧ್ವನಿ ಎತ್ತುವುದು  ಅತ್ಯವಶ್ಯಕವಾಗಿದೆ  ಶತಮಾನಗಳಿಂದಲೂ  ಶಾಂತಿ ಅಹಿಂಸೆಯನ್ನು ದ್ಯೇಯವಾಗಿಸಿಕೊಂಡು ನೆಲೆ ನಿಂತಿರುವ  ಜೈನ ಧರ್ಮದ ಅಸ್ತಿತ್ವ ಹೊಂದಿರುವ ಭಾರತ ದೇಶ ಪ್ರಪಂಚಕ್ಕೆ ಶಾಂತಿ ಸೌಹಾರ್ದತೆಯ ಅರಿವು ಮೂಡಿಸುವ ಅಗತ್ಯತೆ ಇದೆ. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಿದಾಗ ಮಾತ್ರ ವಿಶ್ವ ಶಾಂತಿಯ  ಕನಸು ಸಹಕಾರಗೊಳ್ಳುತ್ತದೆ. ಅಹಿಂಸೆ , ಸತ್ಯ ಅಪರಿಗ್ರಹಗಳನ್ನು ಪಾಲಿಸಿತ್ತಾ ದಶ ಧರ್ಮಗಳ ಬುನಾದಿಯ ಮೇಲೆ ಬದುಕು ಮತ್ತು ಬದುಕಲು ಬಿಡು ಎಂಬ ತತ್ವವನ್ನಾದರಿಸಿ ಬಾಳುತ್ತಿರುವ ಭಾರತ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಮಹಾ ಮಸ್ತಕಾಭಿಷೇಕದ  ರಾಷ್ಟ್ರೀಯ ಸಮಿತಿಯ ಅಧ್ಯಕ್ಷೆ ಸರಿತಾ ಎಮ್. ಕೆ ಜೈನ್ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾ ಅನಂತ್ ರಾಜ್ , ಭೂಪಾಲ್ ನ ಐ ಎ ಎಸ್ ಅಧಿಕಾರಿ  ಡಾ|| ಸುಧಾ 

ಮಲೈಯಾರವರು ಉಪಸ್ಥಿತರಿದ್ದರು.