ಜ್ಞಾನದೀಪಿಕೆಗಳು-05 / 11-06-2021 / jwalamalanews / 2021

-: ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್ :

ಹಿಂದಿನ ಹಾಗೂ ಸಮಕಾಲೀನ ಪುಸ್ತಕಗಳ ಪರಿಚಯ. ಕಾರ್ಯಕ್ರಮ ನಡೆಸಿಕೊಡುವವರು ಡಾ.ಪದ್ಮಿನಿ ನಾಗರಾಜು.

ಜ್ನಾನ ದೀಪಿಕೆಗಳು

 

ಈ ದಿವಸ ನಾವು ಪರಿಚಯ ಮಾಡಿಕೊಡುವ 2 ಕೃತಿಗಳು ಬಹಳ ಪ್ರಮುಖವಾದಂತಹ  ಲೀಲಾವತಿ ಪ್ರಬಂಧಂ ಹಾಗೂ ಮತ್ತೊಂದು  ಡಾ|| ಎಂ.ಡಿ  ವಸಂತ್ ರಾಜ್ ರವರು ಬರೆದಿರುವಂತಹ ಜೈನಾಗಮ ಇತಿಹಾಸ ದೀಪಿಕೆಗಳು.

 

ಡಾ|| ಪದ್ಮಿನಿ ನಾಗರಾಜು,

 

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ,ನವದೆಹಲಿ.

 

ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ

ಇವರು ಈ ಕಾರ್ಯಕ್ರಮದಲ್ಲಿ ಈ ಎರಡು ಕೃತಿಗಳ ಬಗ್ಗೆ ತಿಳಿಸುತ್ತಾ  1966 ರಲ್ಲಿ ಈ ಕೃತಿಗಳನ್ನು ತಾಳೆಗರಿಗಳಲ್ಲಿ ಬರೆದು , ಸಂಪಾದನೆ ಮಾಡಿರುವುದು ಕೆ. ಎನ್ ವೆಂಕಟರಾಮುರವರು, ಹಾಗೂ ದೇ. ಜವರೇಗೌಡರವರು ನಮಗೆಲ್ಲಾ ಗೊತ್ತಿರುವವರು  ಇವರರಿಬ್ಬರೂ ಸೇರಿ ಈ ಕೃತಿಗಳನ್ನು ಸಂಪಾದನೆಯನ್ನು ಮಾಡಿರುವಂತಹುದು ಮತ್ತು ಆ ಕಾಲದಲ್ಲೇ 1966ರ ಕಾಲಕ್ಕೆ ಇವುಗಳ ಬೆಲೆ 20 ರೂ.ಗಳು ಇತ್ತು ಸಾಧಾರಣ ಕೃತಿ 15 ರೂಪಾಯಿಗಳಿದ್ದವು  ಇಡೀ ಕೃತಿಯನ್ನು ತಂದಂತಹವರು ಕರ್ನಾಟಕದ ಕವಿಕಾವ್ಯಮಾಲೆ ಎನ್ನುವ ಶಾರದಾ ಮಂದಿರ ಮೈಸೂರು ಇಲ್ಲಿ ಪ್ರಕಟಗೊಂಡಿತು ಎಂದು ಮಾಹಿತಿಯಿದೆ.

ಲೀಲಾವತಿ ಪ್ರಬಂಧಂ ಎನ್ನುವಂತಹುದು ಲೀಲಾವತಿ ಕಥೆ ಆದರೂ ಕೂಡ ಬಹಳ ಮುಖ್ಯವಾಗಿ ಭಾರತೀಯರಿಗೆ ಅತ್ಯಂತ ಪ್ರಿಯವಾದಂತಹ ಹೆಸರು ಇದು. ಈ ಹೆಸರಿನಲ್ಲಿ ರಸಸಂಪತ್ತನ್ನು ಇಲ್ಲಿ ತುಂಬಿರುವುದಕ್ಕೆ  ಮಾಯಾ ರಾಕ್ಷಸನ ಹೆಂಡತಿ ಲೀಲಾವತಿ ಹಾಗೂ ಪುರಾಣಗಳಲ್ಲಿ ಮತ್ತು ಪ್ರಾಕೃತದಲ್ಲಿ ರಚಿತವಾದಂತಹ ನಿರ್ವಾಣ ಲೀಲಾವತಿ ಎನ್ನುವ ಹೆಸರಿನ ಕಾವ್ಯ ಕೂಡ ಬಹಳ ಮಹತ್ವದ್ದು. ಇದೊಂದು ಅತ್ಯಂತ ವಾಸವದತ್ತೆ ಕಥೆಯಾದರೂ ಕೂಡ ಲೀಲಾವತಿ ಕಥೆ ಎಂದು ಹೇಳುತ್ತಾರೆ. ಈ ಕೃತಿಯಲ್ಲಿ ಬಹಳ ಮಹತ್ವದ್ದು ನಾವೇನು ಇವತ್ತು ಆರಾಧನೆ ಮಾಡಬೇಕಾದಾಗೆಲ್ಲಾ ಅನೇಕ ಗುಣಗಳು ಬಹಳ ಪ್ರಶ್ನೆಗಳು ಬರುತ್ತವೆ, ಯಕ್ಷ ಯಕ್ಷಿಣಿಯರನ್ನು ಪೂಜೆ ಮಾಡಬೇಕೋ ಬೇಡವೋ ಎಂದು . ಅಂದರೆ ಈ ಲೀಲಾವತಿ ಪ್ರಬಂಧದಲ್ಲಿ ಅದಕ್ಕೊಂದು ದಾಖಲೆಯನ್ನು ಕೊಡುತ್ತಾರೆ. ಶೃಂಗಾರ ಕಾವ್ಯವಾದ ಲೀಲಾವತಿ ಕಾವ್ಯದಲ್ಲಿ ಮತ ಪ್ರಕ್ರಿಯೆಗಳ

ತೊಡಕಿಲ್ಲದೇ  ಪರಮತ ದ್ವೇಷದಿಂದ ಕಾಲುಷ್ಯಗೊಳ್ಳದ ಜೈನ ಮತದ ಸುಂದರ  ವಾತಾವರಣವನ್ನು ತಲುಪಿಸಿದ್ದಾರೆಂದು ಇದರಲ್ಲಿ ಬರೆಯುತ್ತಾ ಹೋಗುತ್ತಾರೆ. ಇಲ್ಲಿ ಬಹಳ ಮುಖ್ಯವಾಗಿ ಜೈನ ದೇವತೆಗಳಲ್ಲೆಲ್ಲಾ ಪದ್ಮಾವತಿಯ ಪ್ರಭಾವವೇ  ಮೇಲುಗೈ ಆಗಿರುವಂತಹ ಅಂಶವನ್ನು ತಿಳಿಸಿದ್ದಾರೆ. ಕನ್ನಡ ನಾಡಿನಲ್ಲಿ ಯಕ್ಷಿ ಪೂಜೆ ಕ್ರಿ.ಶ 2ನೆಯ ಶತಮಾನದಿಂದಲೂ  ರೂಡಿಯಲ್ಲಾಗಿರುವುದು ತಿಳಿದುಬಂದಿದೆ. ಯಕ್ಷರಲ್ಲೆಲ್ಲಾ ಪದ್ಮಾವತಿಗೆ  ಅಗ್ರಸ್ಥಾನ ಅವಳೆ ಮುಖ್ಯ ಅನ್ನುವಂತಹದನ್ನು ಕೂಡ  ಇಲ್ಲಿ ದಾಖಲು ಮಾಡುತ್ತದೆ. ನ್ಯೇಮಿನಾಥ ತೀರ್ಥಂಕರರ  ಯಕ್ಷಿಯಾದ ಅಂಬಿಕೆಯ ಹಸರೂ ಸಹ ಮಿಂಚಿ ಮಾಯವಾಗುತ್ತದೆ. ಆದರೆ ಇಲ್ಲಿ ಘಟನಾ ಸನ್ನಿವೇಶಗಳಲ್ಲಿ ಈ ಕೃತಿ ಸಿಗುತ್ತದೋ ಇಲ್ಲವೋ ನನಗೆ ಮಾಹಿತಿಯಿಲ್ಲ ಕನ್ನಡ ಕವಿಕಾವ್ಯ ಮಾಲೆಯಲ್ಲಿ  ಇದು ಪ್ರಕಟವಾಗಿರುವಂತಹ ಮಹತ್ವದ ಕೃತಿ ಎಂದು ತಿಳಿಸಿಕೊಟ್ಟಿದ್ದಾರೆ.

 

ಮತ್ತೊಂದು ಕೃತಿ ನಮಗೆ ಸಮಕಾಲೀನ ಬದುಕಿನಲ್ಲಿ ನೋಡಬೇಕಾದಂತಹ ಕೃತಿ ಡಾ|| ಎಂ.ಬಿ ಬಸಂತ್ ರಾಜು ಅವರು ಬರೆದಿರುವಂತಹ ಜೈನಾಗಮ  ಇತಿಹಾಸ ದೀಪಿಕೆ. ಇದು ಅತ್ಯಂತ ಮಹತ್ವದ ಕೃತಿ. ಡಾ|| ಎಂ.ಡಿ ಬಸಂತ್ ರಾಜ್ ರವರು ಮಂಡ್ಯ ಜಿಲ್ಲೆಯ  ಕೆ. ಆರ್ ಪೇಟೆ  ತಾಲ್ಲೂಕಿನ ವರು . ಇವರು ಭಗವಾನ್ ಪಾರ್ಶ್ವನಾಥ ಸ್ವಾಮೀಜಿಯವರ ಅನನ್ಯ ಭಕ್ತರೂ ಅರ್ಚಕರೂ ಜ್ಯೋತಿಷ್ಯ  ವಿದ್ವಾನರು ಆಗಿದ್ದಂತಹ ಧರ್ಮರಾಜು ಪಂಡಿತರು  ಮತ್ತು  ಶ್ರೀಮತಿ ಬೊಮ್ಮಾಸಂನ ಮಗ ಇದ್ದರು  ಆರಂಭದ ವಿದ್ಯಾಭ್ಯಾಸದ ನಂತರ ಸಂಸ್ಕೃತದಲ್ಲಿ ಎಂ.ಬಿ.ಎ  ಮಾಡಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತ್ರಿವಿಕ್ರಮನ ಪ್ರಾಕೃತ ಶಬ್ದಾನು ಶಾಸನ ಎಂಬ ಕೃತಿಗೆ ಡಾಕ್ಟರೇರ್ ಪದವಿಯನ್ನು ಪಡೆಯುತ್ತಾರೆ. ಅವರು ನಿವೃತ್ತಿಯಾದ ನಂತರ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಜೈನ ಶಾಸಕರ ವಿಭಾಗದ ಮುಖ್ಯಸ್ಥರಾಗಿ  ಉತ್ತಮ ಸೇವೆ ಸಲ್ಲಿಸಿಸ್ದರು.  ಇವರು ಬಹಳಷ್ಟು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಬಹಳ ಮುಖ್ಯವಾಗಿ  ಕನ್ನಡದ ಅರ್ಥ ಸಮ್ಮೇತ ಸಂಪಾದಿಸಿರುವಂತಹ ಉಪಾಸಕ ಆಚಾರ , ವಿಶಾಪಹಾರ ಸ್ತೋತ್ರ , ಪಾತ್ರ ಕೇಸರಿ ಸ್ವಾಮಿ ಸ್ತೋತ್ರ ಈ ತರಹ  ಅನೇಕ ಗ್ರಂಥಗಳನ್ನು ಕನ್ನಡದಲ್ಲಿ ಸಂಪಾದನೆ ಮಾಡಿದ್ದಾರೆ. ಸನ್ಮತಿ