ವಾರದ ಜೈನ ಸುದ್ದಿಗಳಿಗೆಲ್ಲಾ ನಿಮಗೆಲ್ಲಾ ಸ್ವಾಗತ:
ಮುಖ್ಯಾಂಶಗಳು:
ಬೆಳಗಾವಿ ಜಿಲ್ಲೆಯ ಬೋಜಗ್ರಾಮದಲ್ಲಿ ಪಂಚಕಲ್ಯಾಣ ಮಹೋತ್ಸವ.
ಶ್ರೀ ರಂಗಪಟ್ಟಣದ ಆದಿನಾಥ ಸ್ವಾಮಿ ಜಿನ ಮಂದಿರದಲ್ಲಿ ನಡೆದ ದೀಪೋತ್ಸವ.
ಚಾತುರ್ಮಾಸ ಸ್ವಾಧ್ಯಾಯ ಮುಗಿದು ವಿಹಾರದತ್ತ ತ್ಯಾಗಿಗಳು.
ಶ್ರೀ ಕ್ಷೇತ್ರ ಸ್ವಾಧಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮ.
ವರ್ಧಮಾನ ಗಿರಿಯಲ್ಲಿ ಮಾನಸ್ತಂಭ ನಿರ್ಮಾಣಕಾರ್ಯ
ಜಿನಸಮ್ಮಿಲನ ಅಂಗವಾಗಿ ನಡೆದ ಕವಿಗಳ ಸಮ್ಮೇಳನ.
ಜೈನ ಇಂಜಿನಿಯರ್ ವೇಬಿನರ್ ಗಳ ಆರಂಭ
ಸುದ್ದಿಗಳ ವಿವರ:
20ನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರ್ಯ ಚಕ್ರವರ್ತಿ 108 ಶಾಂತಿಸಾಗರ ಮುನಿ ಮಹಾರಾಜರ ಪಂಚಕಲ್ಯಾಣ ಮಹೋತ್ಸವದ ಪುಟ್ಟ ವರದಿ.
ಬೆಳಗಾವಿ ಜಿಲ್ಲೆ ನಿಪ್ಪಾನಿ ತಾಲ್ಲೂಕಿನ ಭೋಜ ಗ್ರಾಮದಲ್ಲಿ 2/11/2020ರಿಂದ ಪಂಚಕಲ್ಯಾಣ ಪೂಜೆ ಆರಂಭವಾಗಿದ್ದು ಮೊದಲನೆಯ ದಿನ ಶಾಂತಿಸಾಗರಂ ತೀರ್ಥ ಕ್ಷೇತ್ರದ ನಿರ್ಮಾತೃಗಳು ಮತ್ತು ತಪೋಭೂಮಿ ತೀರ್ಥ ಕ್ಷೇತ್ರದ ನಿರ್ಮಾತೃಗಳಾದ ಆದ 108 ಶ್ರೀ ಪ್ರಜ್ಙಾಸಾಗರ ಸಾನಿಧ್ಯದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಶ್ರೀಯುತ ಅಣ್ಣಾಸಾಬ ಜೊಲ್ಲೆ , ನಿಪ್ಪಾಣಿ ವಿಧಾನ ಸಭಾ ಸದಸ್ಯೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಇವರಿಂದ ದ್ವಜಾರೋಹಣ ನಡೆಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭೋಜ ಗ್ರಾಮದ ಶ್ರಾವಕರಾದ ಶ್ರೀ ಸಚ್ಚಿನಾ ಕೆಸ್ತೆ ಶ್ರೀ ಸುನೀಲ ಪಾಟೀಲ, ಶ್ರೀ ಸಂದೀಪ ಪಾಟೀಲ ಪಿ ಕೆ ಪಿ ಎಸ್ ನ ಚೇರ್ ಮೆನ್ ರಾದ ಶ್ರೀ ಆಪಗೌಡ ಪಾಟೀಲ ,ಶ್ರೀ ಭರತ ಕುಪಾನಥೈ ಶ್ರೀ ಪ್ರಶಾಂತ ಪಾಟೀಲ ಮತ್ತು ಸುತ್ತಮುತ್ತಲಿನ ಗ್ರಾಮಗಳಾದ ಬೆಳತಗ, ಬೆಡಕಿಹಾಳ, ಬೆರೆತಗ, ಮಾಂಗೂರ, ಗೋರಗಾವದ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.
ಕಾರ್ತಿಕ ಪೌರ್ಣಮಿ ಪ್ರಯುಕ್ತ ಶ್ರೀ ರಂಗಪಟ್ಟಣದ ಶ್ರೀ ಆದಿನಾಥ ಭಗವಂತನ ಜಿನಮಂದಿರದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಲ್ಲದೇ ನೆರೆದಿದ್ದ ಭಕ್ತರಲ್ಲಿ ಭಕ್ತಿಭಾವ ಮೂಡಿಸಿತ್ತು.
ಶ್ರೀ ಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಪ್ರಗತಿಯಲ್ಲಿದ್ದು , ಒಂದು ಪುಟ್ಟ ಮಾಹಿತಿ ಇಲ್ಲಿದೆ,. ಶ್ರೀ ಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠದಲ್ಲಿ ಇಸ್ರೋ ಸಂಸ್ಥೆಯಿಂದ ನೀಡಿರುವ ಹತ್ತು ಕಲೋವ್ಯಾಟ್ ನ ಸೋಲಾರ್ ವಿದ್ಯುತ್ ಅಳವಡಿಸುವ ಕಾರ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಜೈನ ಮಠದಲ್ಲಿ ಯಾತ್ರಿ ನಿವಾಸದ ಕಟ್ಟಡದ ಕಾರ್ಯ ಭರದಿಂದ ಸಾಗಿದೆ.
ಚಾತುರ್ಮಾಸದ ಸ್ವಾಧ್ಯಾಯ ಮುಗಿದು ತ್ಯಾಗಿಗಳು ವಿಹಾರ ಆರಂಭಿಸಿದ್ದಾರೆ. ಇಲ್ಲಿದೆ ಹುಬ್ಬಳ್ಳಿಯಿಂದ ಬಂದ ಸುದ್ದಿ ವಿವರ . ಹುಬ್ಬಳ್ಳಿಯಿಂದ ತ್ಯಾಗಿಗಳ ವಿವರ.ಚಾತುರ್ಮಾಸ ಕಾಲ ಮುಕ್ತಾಯಗೊಂಡಿದ್ದು ಕುಂಭೋಜ ಬಾಹುಮಲಿ ಕ್ಷೇತ್ರದಲ್ಲಿ ನಡೆದ ಎರಡು ಚಾತುರ್ಮಾಸಗಳನ್ನು ಸ್ವಾಧ್ಯಾಯದಲ್ಲಿ ಪೂರ್ಣಗೊಳಿಸಿ ಮಹಾರಾಷ್ಟ್ರದ ಬಾಹುಬಲಿ ಕ್ಷೇತ್ರದಿ್ಂದ ಜಗದ್ವಿಖ್ಯಾತ ಶ್ರವಣಬೆಳಗೊಳದ ಬಾಹುಬಲಿ ದರ್ಶನಕ್ಕೆ ವಿಹಾರ ಕೈಗೊಂಡಿರುವ ಪರಮಪೂರ್ಯ ಮುನಿಶ್ರೀ ಶ್ರೀಥಸಾಗರ ಮುನಿಮಹಾರಾಜರು . ಪರಮಪೂಜ್ಯ ಮುನಿಶ್ರೀ ಶ್ವೇಶಸಾಗರ ಮಹಾರಾಜರು ನವೆಂಬರ್ 28ರಂದು ಹುಬ್ಬಳ್ಳಿಗೆ ಆಗಮಿಸಿದಾಗ ದಿಗಂಬರ ಜೈನ ಸಮಾಜದ ಪರವಾಗಿ ಮುನಿದ್ವಯರನ್ನು ಭಕ್ತಿಪೂರ್ವಕ ಬರಮಾಡಿಕೊಳ್ಳಲಾಯಿತು. ಜಿನವಾಣಿಯ ಶತದ್ ಸ್ವಾಧ್ಯಾಯ ಮಾಡಿ ಎಷ್ಟು ಸ್ವಾಧ್ಯಾಯ ಮಾಡಿದರೂ ಕಡಿಮೆಯೇ ಸ್ವಾಧ್ಯಾಯ ಮಾಡಿ ಆಚರಣೆಯಲ್ಲಿ ಅಳವಡಿಸಿಕೊಳ್ಳಿ ಆಗ ಮಾತ್ರ ಆತ್ಮವಾಲೋಕನ ಸಾಧ್ಯ ಎಂದು ತಮ್ಮ ಪ್ರವಚನದ ಮೂಲಕ ಹೇಳಿದರು.ಒಂದು ದಿನದ ವಾಸ್ತವ್ಯದ ನಂತರ ವಿಹಾರ ಮಾಡಿ ಸನ್ಮತಿ ತ್ಯಾಗಿ ಗಣನ ಮಾರ್ಗವಾಗಿ ನವಗ್ರಹ ತೀರ್ಥವನ್ನು ತಲುಪಿ ಕ್ಷೇತ್ರ ಪ್ರವರ್ತಕ ಆಚಾರ್ಯ ಶ್ರೀ ಗುಣಧರ್ಣಿ ಮಹಾರಾಜರೊಂದಿಗೆ ಉಭಯ ಕುಶಲೋಪರಿ ನಡೆಸಿದರು. ಕ್ಷೇತ್ರದ ಮಾತಾಜಿಯವರು , ಕ್ಷುಲ್ಲಕ ನಮಿತಸಾಗರರು , ಸ್ವಸ್ಥಿಶ್ರೀ ಧರ್ಮಸೇನಾ ಭಟ್ಟಾರಕರು ಮುನಿಶ್ರೀಗಳ ದರ್ಶನ ಪಡೆದರು. ಕ್ಷೇತ್ರ ದರ್ಶನದ ನಂತರ ಮುಂದಿನ 15 ದಿನಗಳಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳವನ್ನು ತಲುಪವವರಿದ್ದಾರೆ.
ಹುಬ್ಬಳ್ಳಿಯ ಸಮೀಪ ವರ್ಧಮಾನಗಿರಿಯಲ್ಲಿ ಭರದಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾನಸ್ತಂಭದ ಕಾಮಗಾರಿಯನ್ನು ಪರಿಶೀಲಿಸಲು ಆಗಮಿಸಿದ್ದ ಸ್ವಸ್ಥಿ ಶ್ರೀ ಧರ್ಮಸೇನಾ ಭಟ್ಟಾರಕರು ಹಾಗೂ ಕ್ಷುಲ್ಲಕ ನಂದಿತ ಸಾಗರರು ಸೂಕ್ತ ಸಲಹೆಗಳನ್ನು ನೀಡಿದರು ಮತ್ತು ಕ್ಷೇತ್ರದ ಅಭಿವೃದ್ದಿಗೆ ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು ಸಮಾಜ ಬಾಂಧವರು ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.
ಸುಹಾಸ್ ಸಿ. ಯುವ ಜೈನ ಮಿಲನ್ ಇವರ ಸಮ್ಮಿಲನದ ಪ್ರಯುಕ್ತ ಕರ್ನಾಟಕದಲ್ಲಿ ಜೈನಧರ್ಮ ಫೇಸ್ ಬುಕ್ ಪುಟದ ಸಹಭಾಗಿತ್ವದಲ್ಲಿ ಕವಿ ಸಮ್ಮೇಳನ ನಡೆಯಿತು. ದಿನಾಂಕ 29/11/2020 ರಂದು ಸುಹಾಸ್ ಸಿ. ಯುವ ಜೈನ ಮಿಲನ್ ನ ಮಹಾತ್ವಾಕಾಂಕ್ಷಿ ಜಿನಸಮ್ಮಿಲನ 2020 ರ ನಡೆದ ಕಾರ್ಯಕ್ರಮ ಮೂಡುಬಿದಿರೆ ಶ್ರೀ ಜೈನ ಮಠದ ಕಾರ್ಯಕ್ರಮ ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕರ ಘನ ಉಪಸ್ಥಿತಿ ಮತ್ತು ಅತಿಥಿಯಾಗಿದ್ದ ಯಶೋಧರ ಶಾಸ್ತ್ರಿ ಕಾರ್ಕಳ ಇವರ ಉಪಸ್ಥಿತಿಯೊಂದಿಗೆ ಯಶಸ್ವಿಯಾಗಿ ನಡೆಯಿತು. ನಾಡಿನ ಹಿರಿಯ ಹಾಗೂ ಕಿರಿಯ ಸಾಹಿತಿಗಳು ಕವನ ವಾಚನ ಮಾಡಿದರು. ಶ್ವೇತಾ ನಿಹಾಲ್ ಜೈನ್ ರವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಇಂದು ದಿವ್ಯವಾದ ಜಲ ಗಂಧ ಅಕ್ಷತೆ ಮತ್ತು ಧೂಪ, ಚರವು, ದೀಪ ಮತ್ತು ಬಲಗಳಿಧಮ ಪೂಜಿಸುವ ಒಂದು ಸುಸಂದರ್ಭ ಇಂತಹ ಒಂದು ಅಷ್ಟಾನಿಕದ ಸುಸಂದರ್ಭದಲ್ಲಿ ಕಾವ್ಯ ರಸಾಯನವನ್ನು ಉಣಬಡಿಸಿದ ಎಲ್ಲಾ ಹಿರಿಯ ಹಾಗೂ ಕಿರಿಯ ಕವಿಗಳಿಗೆ ವಿಶೇಷವಾಗಿ ಮಂಗಳ ಶುಭಾಶೀರ್ವಾದದೊಂದಿಗೆ ತಿಳಿಸಲು ಸಂತೋಷವಾಗುತ್ತಿದೆ ಎಂದು ಸ್ವಾಮೀಜಿಯವರು ತಿಳಿಸಿದರು ದಿನಾಂಕ 3/12/2020 ರಂದು ವಕೀಲರ ದಿನಾಚರಣೆಯ ಪ್ರಯುಕ್ತ ಸುಹಾಸ್ ಸಿ. ಯುವ ಜೈನ ಮಿಲನ್ ಇವರ ಜಿನಸಮ್ಮಿಲನದ ಪ್ರಯುಕ್ತ ಜೈನ ವಕೀಲರ ಸಮ್ಮಿಲನವು ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ ಪೇಜ್ ನ ಸಹಭಾಗಿತ್ವದಲ್ಲಿ ನಡೆಯಿತು. ಸೀನಿಯರ್ ಕೌನ್ಸಿಲ್ ಇ.ಆರ್ ಇಂದ್ರಕುಮಾರ್ ಹಿರಿಯ ನ್ಯಾಯಾವಾದಿ ಎಂ.ಕೆ ವಿಜಯ್ ಕುಮಾರ್ ಕಾರ್ಕಳ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದರು. ಸಮಾರಂಭವನ್ನು ಉದ್ದೇಶಿಸಿ ವಕೀಲರುಗಳಾದ ನಾಗಶ್ರೀ ಮುಪ್ಪಾನೆ ಬೆಂಗಳೂರು. ಶ್ವೇತಾ ಜೈನ್ ಮೂಡುಬಿದಿರೆ , ಜಿನೇಂದ್ರಕುಮಾರ್ ಬೆಂಗಳೂರು ಯಶೋಧರ ಅಧಿಕಾರಿ ಬೆಂಗಳೂರು ಎಲ್ಲರೂ ಸಮಯೋಚಿತವಾಗಿ ಮಾತನಾಡಿದರು. ಸುಹಾಸ್ ಸಿ. ಯುವ ಜೈನ ಮಿಲನ್ ನ ಅಧ್ಯಕ್ಷರಾದ ಸಂತೋಷ್ ಅವರು ಜಿನ ಸಮ್ಮಿಲನದ ರೂಪುರೇಷೆಗಳನ್ನು ಪ್ರಾಸ್ಥಾವಿಕ ನುಡಿಗಳಲ್ಲಿ ತಿಳಿಸಿದರು.
6/12/2020 ರ ಭಾನುವಾರದಂದು ನಡೆಯಲಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಜೈನ್ ಮಿಲನ್ ನ ರಾಷ್ಟ್ರಿಯ ಕಾರ್ಯಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್ ರವರು ಹಾಗೂ ಜೈನ್ ಇಂಜಿನಿಯರಿಂಗ್ ಫೋರಂನ ಸ್ಥಾಪಕ ಅಧ್ಯಕ್ಷರಾದ ಶ್ರೀ ಎಮ್ .ಜೆ. ಸುರೇಂದ್ರಕುಮಾರ್ ರವರು ಹಾಗೂ ಮುಖ್ಯ ಅತಿಥಿಗಳಾಗಿ ಟಾಟಾ ಕಂನ್ಸಲ್ಟೆನ್ಸಿ ಸರ್ವಿಸ‍್ ನ ಹಿರಿಯ ಉಪಾಧ್ಯಕ್ಷರಾದ ಶ್ರೀ ನಾಗರಾಜ್ ಜಿಜಾರಿ ರವರು ವಹಿಸಲಿದ್ದು ಈ ಕಾರ್ಯಕ್ರಮವು ನಿಮ್ಮ ಜ್ವಾಲಾಮಾಲಾ ನ್ಯೂಸ್ ನಲ್ಲಿ ನೇರಪ್ರಸಾರ ಗೊಳ್ಳಲಿದೆ.
ಇಲ್ಲಿಯವರೆಗೆ ವಾರದ ಜೈನ್ ಸುದ್ದಿಗಳು ಪ್ರಸಾರವಾಯಿತು. ಮುಂದಿನ ಸುದ್ದಿಗಳ ವೀಕ್ಷಣೆಗಾಗಿ ಕಾಯುತ್ತಿರಿ ಜ್ವಾಲಾಮಾಲಾ ನ್ಯೂಸ್.














