ಪ್ರಥಮಾ ಚಾರ್ಯ ಚಾರಿತ್ರ್ಯ ಚಕ್ರವರ್ತಿ ಶ್ರೀ 108 ಶಾಂತಿಸಾಗರ ಮಹಾರಾಜರ ಹುಟ್ಟೂರು ನಿಪ್ಪಾಣಿ ತಾಲ್ಲೂಕಿನ ಭೋಜ ಗ್ರಾಮದಲ್ಲಿದ್ದು ಇದರ ಸುಂದರ ದೃಶ್ಯಾವಳಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.
ಈ ಕ್ಷೇತ್ರದಲ್ಲಿ 1008 ಶಾಂತಿನಾಥರ ಜಿನಮಂದಿರ ಹಾಗೂ 24 ತೀರ್ಥಂಕರರ ಅಮೃತಶಿಲೆಯಿಂದ ಮಾಡಲ್ಪಟ್ಟ ಸುಂದರ ಮಾನಸ್ಥಂಭ ಇದೆ. ಕೆಳಭಾಗದಲ್ಲಿ ಗುಹೆಯ ಆಕಾರದಲ್ಲಿ ಜಿನಮಂದಿರವಿದ್ದು ಅಲ್ಲಿ ವಿವಿಧ ಬಗೆಯ ರತ್ನಗಳಿಂದ ಮಾಡಲ್ಪಟ್ಟ 720 ಚತುರ್ವಂಶಿಕ ಜಿನಬಿಂಬಗಳು ಸುತ್ತಲೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಒಮ್ಮೆಯಾದರೂ ವೀಕ್ಷಕ ಭಾಂದವರು ಇಲ್ಲಿ ಭೇಟಿ ನೀಡಿ ಇಲ್ಲಿ ಮನೋಜ್ಞ ಸುಂದರ ದೃಶ್ಯವನ್ನು ತಮ್ಮದಾಗಿಸಿಕೊಳ್ಳಿ . ಇಲ್ಲಿ ಶಾಂತಿಸಾಗರ ಗುರು ಮಂದಿರ ನಿರ್ಮಾಣವಾಗಿದ್ದು ವಿಶಾಲವಾಗಿದೆ ಹಾಗೆಯೇ 17 ಅಡಿ ಎತ್ತರದ ಶಾಂತಿಸಾಗರ ಮಹಾರಾಜರ ಶಾಂತಿಯ ಪ್ರತಿಮೆ ಸ್ಥಾಪನೆಯಾಗಿದ್ದು ಶಾಂತಿಸಾಗರ ಮಹಾರಾಜರು ಜೀವ ತಳೆದಂತೆ ಭಾಸವಾಗುತ್ತಿದೆ.
ಗುರುಉಪದೇಶದ ಸಲುವಾಗಿ ಪ್ರವಚನ ಸಭಾಭವನ ಹಾಗೂ ಯಾತ್ತಿಗಳಿಗೆ ಭೋಜನ ಗೃಹದ ವ್ಯವಸ್ಥೆ ಕೂಡ ಇದೆ. ದೇಶದ ಹಲವೆಡೆಯಿಂದ ಸುಮಾರು 300 ಕ್ಕೂ ಹೆಚ್ಚು ಶ್ರಾವಕ ಶ್ರಾವಕಿಯರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದು ಇದೀಗ ಹೊಸದಾಗಿ ಯಾತ್ರಿ ನಿವಾಸದ ನಿರ್ಮಾಣ ಕೂಡ ಆಗಿದ್ದು ಹೊಸದಾಗಿ ಆಗಿದ್ದು ಯಾತ್ರಿಗಳಿಗೆ ಅನುಕೂಲವಾಗಲಿದೆ. ಸ್ಥವನಿಧಿ ಕ್ಷೇತ್ರವನ್ನು ಭೇಟಿನೀಡಲಿರುವ ಯಾತ್ರಾರ್ಥಿಗಳು ಭೋಜಗ್ರಾಮದ ದರ್ಶನ ಪಡೆಯಲು ಮರೆಯದಿರಿ.














