ವೀಕ್ಷಕ ಬಂಧುಗಳೇ ಇಂದಿನ ನಮ್ಮ ಕ್ಷೇತ್ರ ಪರಿಚಯ ವಿಜಯನಗರ ಜಿಲ್ಲೆಯ ಹರಪ್ಪನ ಹಳ್ಳಿ ತಾಲ್ಲೂಕಿನ ಹೃದಯ ಭಾಗದಲ್ಲಿರುವ 1008 ಶ್ರೀ ಶಾಂತಿನಾಥ ತೀರ್ಥಂಕರರ ಜೈನ ಬಸದಿ ಈ ಬಸದಿಯು ಅತ್ಯಂತ ಪುರಾತನ ಬಸದಿಗಳಲ್ಲಿ ಒಂದಾಗಿದ್ದು ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾಗಿದೆ ಈ ಬಸದಿಯನ್ನು 2003ರಲ್ಲಿ ಆಚಾರ್ಯ ಶ್ರೀ ಅಮೃತ ಸಿರಿ ಮುನಿ ಮಹಾರಾಜರ ಪ್ರೇರಣೆ ಮತ್ತು ಮಾರ್ಗದರ್ಶನ ಹಾಗು ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರ ಮಹಾಸ್ವಾಮೀಜಿಗಳವರು ಶ್ರೀ ಜೈನ ಮಠ ಹೊಂಭುಜ ಇವರ ನೇತೃತ್ವದಲ್ಲಿ ಹಾಗೂ ಪಾವನ ಸಾನಿಧ್ಯದಲ್ಲಿ ಹಳೆಯ ಶಿಲ್ಪ ಕಲೆಗೆ ಯಾವುದೇ ಧಕ್ಕೆ ಉಂಟುಮಾಡದೇ ಜೀರ್ಣೋಧ್ದಾರ ಮಾಡಿ ಪಂಚಕಲ್ಯಾಣ ನೆರೆವೇರಿಸಲಾಗಿದೆ
ಈ ಬಸದಿಯಲ್ಲಿ 12ನೇ ಶತಮಾನದ 1008 ಶ್ರೀ ಶಾಂತಿನಾಥ ತೀರ್ಥಂಕರರ ಜಿನ ಬಸದಿ ಇದೆ.ಮತ್ತು 10ನೇ ಶತಮಾನದ ಸುಪಾರ್ಶ್ವನಾಥ ತೀರ್ಥಂಕರರು ಹಾಗೂ ಚಂದ್ರನಾಥ ತೀರ್ಥಂಕರರ ಜಿನ ಬಿಂಬವು ಕೂಡ ಇದೆ ಹಾಗೂ ಧರಣೇಂದ್ರ ಪದ್ಮಾವತಿ ದೇವಿಯ ವಿಷೇಶ ಮೂರ್ತಿ ಇದ್ದು ಇದು ಏಕಶಿಲೆಮೂರ್ತಿಯಲ್ಲಿ ಪಾರ್ಶ್ವನಾಥ ಸ್ವಾಮಿ ಮತ್ತು ಧರಣೇಂದ್ರ ಪದ್ಮಾವತಿ ದೇವಿಯ ವಿಗ್ರಹ ಇದೆ ಇಂತಹ ವಿಗ್ರಹ ದೇಶದ ಯಾವ ಭಾಗದಲ್ಲಿಯೂ ಕಾಣಸಿಗುವುದಿಲ್ಲ ಈ ಜಿನಮಂದಿರದಲ್ಲಿ ಜಿನರಾತ್ರಿ ನವರಾತ್ರಿ ನವಗ್ರಹಶಾಂತಿ ಪಂಚಾಮೃತ ಅಭಿಷೇಕ ಸೇವೆ ಮಾಡಿದರೇ ತಾಯಿ ಪದ್ಮಾವತಿ ದೇವಿ ಕರುಣಿಸುವಳೆಂಬ ನಂಬಿಕೆ ಶ್ರಾವಕರಲ್ಲಿದೆ ಹರಪ್ಪನಹಳ್ಳಿ ಹೊರಭಾಗದಲ್ಲಿರು ಚಾರಣಗಿರಿ ಬೆಟ್ಟದ ಮೇಲೆ ಶ್ರೀ ಬ್ರಹ್ಮದೇವರ ದೇವಸ್ಥಾನ ವಿದ್ದು ಈ ಬೆಟ್ಟಕ್ಕೆಚಾರಣಮುನಿಗಳು ಭೇಟಿ ನೀಡಿದ್ದರಿಂದ ಈ ಬೆಟ್ಟಕ್ಕೆ ಚಾರಣಗಿರಿ ಎಂದು ಪ್ರಸಿದ್ದವಾಗಿದೆ ಬೆಟ್ಟದ ಕೆಳಗೆ ಶ್ರೀ 1008 ಪಾರ್ಶ್ವನಾಥ ಮತ್ತು ಮಾತೆ ಪದ್ಮಾವತಿ ಮಂದಿರವಿದೆ ಇಲ್ಲಿ ಪ್ರತಿ ಅಮಾವಾಸ್ಯೆ ದಿನದಂದು ವಿಷೇಶ ಪೂಜೆ ಮತ್ತು ಅನ್ನಸಂತರ್ಪಣೆ ನೆಡೆಯುತ್ತದೆ ಇಂತಹ ಪುರಾತನ ಬಸದಿಯನ್ನು ಒಮ್ಮೆ ಭೇಟಿ ನೀಡಿ ಪುಣ್ಯಭಾಗಿಗಳಾಗ ಬೇಕಾಗಿ ಸಮಿತಿವತಿಯಿಂದ ಆಗ್ರಹಿಸಿದ್ದಾರೆ ನಾನು ಹರಪ್ಪನ ಹಳ್ಳಿ ಚಂದ್ರಪ್ರಭ ಪಂಡಿತ್ ಕೋಟೆ ಶಾಂತಿನಾಥ ಸ್ವಾಮಿ ಅರ್ಚಕನಾಗಿ ಇಲ್ಲಿ ನಮ್ಮ ತಂದೆಯವರು ಮತ್ತು ನಮ್ಮಿಂದ ಈ ಬಸದಿಯನ್ನು ಮಾಡುತ್ತಾ ಬಂದಿದ್ದೇವೆ ಪ್ರಾಚೀನವಾದಂತಹ ಈ ದೇವಸ್ಥಾನ 10 ಅಥವಾ 12ನೇ ಶತಮಾನದ್ದು ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ ಒಬ್ಬರು ಅತ್ತಿಮಬ್ಬೆ ಬಸದಿ ಎಂದು ಹೇಳುತ್ತಿದ್ದಾರೆ ಇಲ್ಲಿ ಯಾವುದು ಲಿಖಿತವಾಗಿ ಸಿಕ್ಕಿಲ್ಲ ಇಲ್ಲಿ ಪ್ರಾಚೀನವಾದಂತಹ ಶಾಂತಿನಾಥ ಸ್ವಾಮಿ ಬಸದಿ 10ನೇ ಶತಮಾನದ ಮೂರ್ತಿ ಒಂದಿದೆ ಆನಂತರ 12ನೇ ಶತಮಾನದ ಮೂರ್ತಿ ಇದೆ ಹೊಂಬುಜದ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಯವರು ನಮಗೆ ಇಲ್ಲಿ ಒಂದು ಪ್ರಾಚೀನವಾದಂತಹ ಜಗನ್ಮಾತೆ ಧರಣೇಂದ್ರ ಪದ್ಮಾವತಿ ಅಮ್ಮನವರು ಮತ್ತು ಪಾರ್ಶ್ವನಾಥ ಸ್ವಾಮಿ ಅಮ್ಮನವರು ಒಂದೇ ಶಿಲೆಯಲ್ಲಿ ಇಲ್ಲಿ ನೆಲೆಸಿದ್ದಾರೆ ಹಿಂದೆ ಪ್ರತಿ ಶುಕ್ರವಾರ ಬೆಳಗ್ಗೆ ಸಾಯಂಕಾಲ ಎರಡು ಹೊತ್ತು ಅಭಿಷೇಕ ಆಗುತ್ತಿತ್ತು ಈಗ ನವರಾತ್ರಿ ಒಳಗೆ ಮದುವೆ ಆಗದಿದ್ದವರು ಆನಂತರ ಮಕ್ಕಳಾಗದಿದ್ದವರು ಇಲ್ಲಿಗೆ ಬಂದು ನವಗ್ರಹಶಾಂತಿ ಮತ್ತು ಪದ್ಮಾವತಿ ಅಮ್ಮನವರ ಪೂಜೆ ಅಭಿಷೇಕ ಪ್ರಸಾದ ಆದ ನಂತರ ಅವರಿಗೆ ವರ್ಷದ ಒಳಗೆ ವಿವಾಹ ಆಗುವಂತಹ ಸಾಧ್ಯತೆ ಇದೆ ಪ್ರತಿ ವರ್ಷ ನವರಾತ್ರಿ ಒಳಗೆ ನಾವು ಮಾಡುತ್ತಾ ಇದ್ದೇವೆ ಎಲ್ಲಾ ಕಡೆಯಿಂದಲೂ ಜನಗಳು ಬರುತ್ತಾ ಇದ್ದಾರೆ ಹಾಗೇಯೆ ಇದು ಇತಿಹಾಸ ಪ್ರಾಚೀನವಾದಂತಹ ದೇವಸ್ಥಾನ ವಿಜಯನಗರ ಜಿಲ್ಲೆ ಬಿಜಾಪುರ ಪಾರ್ಶ್ವನಾಥ ಸ್ವಾಮಿ ಬಸದಿಯಿಂದ ಶ್ರವಣಬೆಳಗೊಳ ಹೋಗುವುದಕ್ಕೆ ಇದೇ ದಾರಿ ಎಲ್ಲಾ ಮುನಿಗಳು ಬಂದು ಹೋಗುತ್ತಾರೆ ಇಲ್ಲಿಗೆ ಆನಂತರ ನಮ್ಮ ಕಮಿಟಿಯವರೆಲ್ಲಾ ಮುನಿನಿವಾಸ ಬಂದಂತಹವರಿಗೆಲ್ಲಾ ಸ್ವಾಮಿಗಳಿಗೆ ತ್ಯಾಗಿಗಳಿಗೆ ಆಹಾರ ದಾನ ಮಾಡುತ್ತಿದ್ದಾರೆ ಬಹಳ ಶ್ರೇಷ್ಟವಾದಂತಹ ಈ ಜಿನ ಮಂದಿರ ಸಹಸ್ರಾರು ಮುನಿಗಳು ಆಚಾರ್ಯ ಶಾಂತಿ ಸಾಗರ ಹಿಂದಿರುವಂತಹವರು ಮುನಿಗಳು 9 ದಿವಸ ಪಂಚಕಲ್ಯಾಣ ಪ್ರತಿಷ್ಟೆ ಮಾಡಿದಂತಹ ಜಿನ ಮಂದಿರ ಬಹಳ ಪ್ರಾಚೀನವಾದದ್ದು ಆಚಾರ್ಯ ಅವರ ನಂತರ ಅಮೃತ ಸೇನ ಮುನಿಮಹಾರಾಜರು 3 ವರ್ಷ ಇಲ್ಲಿ ಚಾರ್ತುರ್ಮಾಸ ಮಾಡಿದ್ದಾರೆ ಹಾಗೇಯೇ ನಾನ ಮುನಿಗಳು ಇಲ್ಲಿ ಚಾರ್ತುರ್ಮಾಸ ಮಾಡಿ ಹೋಗಿದ್ದಾರೆ ಇದು ಇತಿಹಾಸವಾದಂತಹ ಜಿನ ಮಂದಿರ ಸಮಸ್ತ ಶ್ರಾವಕ ಶ್ರಾವಕಿಯರಿಗೆ ಇಚ್ಚಿತ ಪಲವನ್ನು ಕೊಡುವಂತಹ ಜಗನ್ಮಾತೆ ಧರಣೇಂದ್ರ ಪದ್ಮಾವತಿ ಅಮ್ಮನವರು ಇದ್ದಾರೆ ಎಲ್ಲರ ಕಷ್ಟಗಳನ್ನು ಪಾರುಮಾಡುವಂತಹ ಶಕ್ತಿ ಇದೆ ಮದುವೆ ಆಗದಿದ್ದವರಿಗೆ ಸಂತಾನ ಆಗದಿದ್ದವರಿಗೆ ವಿಷೇಷವಾದಂತಹ ಪೂಜೆ ಹೋಮ ಇತ್ಯಾದಿ ಕ್ರಿಯೆಗಳನ್ನು ಮಾಡಿದರೆ ಇಲ್ಲಿ ಆಗುತ್ತದೆ ಎಂಬ ನಂಬಿಕೆ ಇದೆ ಹಾಗೆಯೇ ಎಲ್ಲರಿಗೂ ಜೈ ಜೀನೇಂದ್ರ,













