ಜೈ ಜಿನೇಂದ್ರ ವೀಕ್ಷಕರೆ, ಅಮ್ಮಿನಬಾವಿ, ಧಾರವಾಡ ಜಿಲ್ಲೆಯಲ್ಲಿರುವ ಈ ಗ್ರಾಮ ಧಾರವಾಡದಿಂದ 11 ಕಿ, ಮೀ ದೂರದಲ್ಲಿದೆ. ಅಮ್ಮಿನಬಾವಿ ಗ್ರಾಮದ ದೇಸಾಯಿ ಮನೆತನದ ಪೂರ್ವಜರು ಮತ್ತು ಇಂದಿನವರು ಕೈ ಗೊಂಡ ಧಾರ್ಮಿಕ ಸಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳು ಗಮನಿಯ. ಇಲ್ಲಿ ಕ್ರಿ.ಶ 12ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ನೇಮಿನಾಥನ ಬಸದಿ ಇದೆ.
ಈ ಬಸದಿಯ ಅಂತರಾಳದಲ್ಲಿ ಇರುವ ಸಮಕಾಲಿನ ಚಂದ್ರನಾಥ ತೀರ್ಥಂಕರರ ಶಿಲ್ಪದ ಪಾದ ಪೀಠದ ಮೇಲೆ ಇರುವ ಶಾಸನದಲ್ಲಿ ಕೊರೆಯಲ್ಪಟ್ಟ ನಿರೂಪಣೆ ಇಂದ ಮೂಲತಃ ಚಂದ್ರನಾಥ ಬಸದಿ ಇತ್ತು ಎಂದು ಸ್ಪಷ್ಟವಾಗುತ್ತದೆ. ಕ್ರಿ.ಶ ಸುಮಾರು 15 16ನೇಯ ಶತಮಾನದಲ್ಲಿ ಇದು ಶಾಂತಿನಾಥ ಬಸದಿ ಎಂದು ವಿಜಯಣ್ಣ ಕವಿಯ ದ್ವದಶಾನು ಪ್ರೇಕ್ಷೆಯ ಕಾವ್ಯದಲ್ಲಿ ದಾಖಲಾಗಿದೆ. ಸುಮಾರು 19ನೇ ಶತಮಾನದಿಂದ ಇಚೇಗೆ ನೇಮಿನಾಥ ಬಸದಿಯಾಗಿದೆ, 1999ರಲ್ಲಿ ಇಲ್ಲಿನ ಶಿಖರ ಹಾಗೂ ಮಾನಸ್ಥಂಭ ನಿರ್ಮಾಣಗೊಂಡಿದೆ.
ಅದಪ್ಪ ದೇಸಾಯಿ ಹಾದಿಯಾಗಿ ಇಲ್ಲಿಯವರೆಗಿನ ದೇಸಾಯಿ ಮನೆತನದವರು ಸ್ಥಳಿಯ ಬಸದಿಯನ್ನು ಕಾಲಾಂತರವಾಗಿ ಜೀರ್ಣೋದ್ಧಾರ ಮಾಡಿಸಿ ಇದರಲ್ಲಿ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆದುಬರಲು ಭೂ-ದಾನ ಮಾಡಿದ್ದಾರೆ.
ಪ್ರಸ್ತುತ ಈ ಬಸದಿಯ ಮೂಲ ಮೂರ್ತಿ ಭಗವಾನ್ ಶ್ರೀ 1008 ನೇಮಿನಾಥರ ಮೂರ್ತಿ, ಮುಂಬಾಗದಲ್ಲಿ ಜೀರ್ಣೋದ್ಧಾರದ ಸಮಯದಲ್ಲಿ ದೊರೆತ ಅದ್ಬುತ ಪ್ರತಿಮೆ 24 ತೀರ್ಥಂಕರರುಗಳ ಬಿಂಬವನ್ನು ಒಳಗೊಂಡಿದೆ. ಇದನ್ನು ಚವ್ವಿಸ ಮೂರ್ತಿ ಎಂದೇ ಸ್ಥಳಿಯರು ಕರೆಯುತ್ತಾರೆ, ಹಾಗೂ ದಿನದಲ್ಲಿ ಮೂರು ವರ್ಣದಲ್ಲಿ ಈ ಮೂರ್ತಿ ಗೋಚರಿಸುತ್ತದೆ. ಇಲ್ಲಿ ದೇಸಾಯಿ ಮನೆತನದವರು ಪ್ರತಿಷ್ಟಾಪಿಸಿದ ಮನೆ ದೇವತೆಯಾದ ಶ್ರೀ ಮಾತೆ ಪದ್ಮಾವತಿ ದೇವಿ ಪೂಜಿಸಲ್ಪಡುತ್ತಾರೆ.
ಅದೇ ಮನೆತನದವರಿಂದಲೇ ಶುದ್ದ ನೀರಿಗಾಗಿ ನಿರ್ಮಾಣಗೊಂಡ ಒಂದು ಬೃಹತ್ ಬಾವಿಗೆ ಪದ್ಮಾವತಿ ಅಮ್ಮನವರ ಬಾವಿ ಎಂದು ಹೆಸರಿಸುತ್ತಾರೆ. ಕಾಲಾಂತರವಾಗಿ ಅಮ್ಮನವರ ಬಾವಿ ನಂತರ ಅಮ್ಮಿನಬಾವಿಯಾಗಿ ಗ್ರಾಮದ ಹೆಸರಾಗಿ ನಿಲ್ಲುತ್ತದೆ.
ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತಿರುವ ಈ ಪುಣ್ಯ ಕ್ಷೇತ್ರಕ್ಕೆ ತಾವು ಒಮ್ಮೆ ಬೇಟಿನೀಡಿ.
ಈ ಕ್ಷೇತ್ರ ಪರಿಚಯದ ಪ್ರಾಯೋಜಕರು ಹಜಾರೆ ಟೆಕ್ಸ್ ಟೈಲ್ಸ್ ಹೋಲ್ ಸೇಲ್ ಬಜಾರ್ ರಬಕವಿ ಮತ್ತು ಹಜಾರೆ ಫೌಂಡೇಶನ್ಸ್ ನ ಪದ್ಮಾವತಿ ಇಂಟರ್ ನ್ಯಾಷಿನಲ್ ಸ್ಕೂಲ್ ಪಿ ಯೂ ಸೈನ್ಸ್ ಅಂಡ್ ಕಮಾರ್ಸ್ ಕಾಲೇಜ್ ರಬಕವಿ ಬಾಗಲಕೋಟೆ.
ಈ ಸಂಸ್ಥೆಯ ಮಾಲೀಕರಾದ ಸತೀಶ್ ವಿ ಹಜಾರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಜ್ವಾಲಮಾಲ ಸಲ್ಲಿಸುತ್ತಿದೆ.














