ಬೈಲುಪುರ/ವಾರಣಾಸಿ

ವಿಕ್ಷಕ ಬಂಧುಗಳೆ ನಾವ್ ಇಂದು ಹೊರರಾಜ್ಯದ ಜೈನ ತಿರ್ಥಕ್ಷೇತ್ರದ ದರ್ಶನ ಪಡೆಯುತ್ತಿದ್ದೇವೆ

ನಾವು ಇಂದು ಕಾಶಿಯ ವಾರಣಸಿಯಲ್ಲಿದ್ದೇವೆ ಕಾಶಿ ಎಂದು ಕರೆಯಲ್ಪಡುವ ಈ ಕ್ಷೇತ್ರವು ಜೈನರ ಪ್ರಮುಖ ತಿರ್ಥಕ್ಷೇತ್ರವಾಗಿದೆ, ಇಲ್ಲಿ ಜೈನ ತಿರ್ಥಂಕರರು ಆದ ಭಗವಾನ್ ಶ್ರೀ ಪಾಶ್ಚನಾಥ, ಶ್ರೇಯಾಂಕನಾಥ, ಸುಪಾಶ್ವಾನಾಥ, ಹಾಗೂ ಚಂದ್ರಫ್ರಭ ತಿರ್ಥಂಕರರ ಜನ್ಮ ಭೂಮಿಯಾಗಿದೆ ಇಂದಿನ ನಮ್ಮ ಸಂಚಿಕೆಯಲ್ಲಿ ಶ್ರೀ ಸಾವಿರದೆಂಟು ಭಗವಾನ್ ಪಾಶ್ವನಾಥ ತಿರ್ಥಂಕರರ ಜನ್ಮಭೂಮಿ ಬೇಲೂರು ಜೀನ ಮಂದಿರ ದರ್ಶನ ಪಡೆಯುತ್ತಿದ್ದೀರಿ

ಇದು ಬನಾರಸ್ ಹಿಂದೂ ವಿಶ್ವವಿದ್ಯನಿಲಯದಿಂದ ನೂರು ಕೀ ಮಿ ದೂರವಿದೆ ಮುಖ್ಯ ದ್ವಾರವನ್ನು ಪ್ರವೇಶಿಸಿ ಸುಂದರ  ಮೆಟ್ಟಿಲುಗಳೆರಿ ಸಾಗಿದಾಗ  ವಿಶಾಲವಾದ ಹಜಾರಕ್ಕೆ ಕಾಲಿಟ್ಟಾಗ ಸುತ್ತಲು ನೋಡಸಿಗುವ ವಾತವರಣ ಮನಸ್ಸಿಗೆ ಮುದಗೋಳಿಸುತ್ತದೆ

9 ರಿಂದ 11ನೇ ಶತಮಾನದ ಸುಮಾರು 2 ರಿಂದ 3 ಅಡಿ ಎತ್ತರದ ಕಪ್ಪು ಶಿಲೆಯ ಪಾಶ್ವನಾಥರ ಮುದ್ದದ ವಿಗ್ರಹ ಹಾಗೂ ಅಲ್ಲಿನ 2 ಅಡಿ ಎತ್ತರದ ಬಿಳಿಯ ಬಣ್ಣದ ಪಾಶ್ವನಾಥನ ವಿಗ್ರಹ ಪ್ರತಿಮೆಯನ್ನು ಕಾಣಬಹುದು

ಅಕ್ಕ ಪಕ್ಕದ ಮಂಟಪದಲ್ಲಿ ಪುರತನ ಜಿನವಿಭಗಳ ದರುಶನವಾಗುತ್ತದೆ ಮಂದಿರದ ಗೋಡೆಗಳು ಧಾರ್ಮಿಕ ಚಿತ್ರಗಳಿಂದ ಅಲಂಕೃತಗೊಂಡಿದೆ

ಮಂದಿರದ ಕೆಳಭಾಗದಲ್ಲಿ ಆನೇಕ ವಾರನಾಸಿಯಲ್ಲಿ ಸಿಕ್ಕ ಭಗ್ನಗೊಂಡ ರೀತಿಯಲ್ಲಿ ಹಾಗು ಸುಸ್ಥಿಯಲ್ಲಿರು ಅನೇಕ ವಿಗ್ರಹಗಳು ಕಾಣಬಹುದು, ಕಾಶಿಗೆ ನೀವು ಭೇಟಿ ನಿಡಿದಾಗ ಕಂಡಿತ ಒಮ್ಮೆ ದರುಶನ ಪಡೆಯಿರಿ