ಹೊಳೆನರಸಿಪುರ / ಪ್ರೋಮೋ

ಜೈ ಜೀನೇಂದ್ರ ಬಂಧುಗಳೇ ನೀವು ಈವಾಗ ನೋಡುತ್ತಾ ಇರುವುದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ 1008 ನೇಮಿನಾಥ ತೀರ್ಥಂಕರರ ಜೈನ ಬಸದಿ 850ಕ್ಕೂ ಹೆಚ್ಚೂ ಪುರಾತನವಾದ ಹಳೆಯ ಬಸದಿ ಶ್ರೀ ನೇಮಿನಾಥ ತೀರ್ಥಂಕರರ ಬಸದಿ ಇತಿಹಾಸದ ಪುಟಗಳನ್ನು ನಾವು ಅವಲೋಕನಮಾಡುತ್ತಾ ಹೋದಾಗ ಹೊಳೆನರಸಿಪುರದಲ್ಲಿ ಎರಡು ಬಸದಿಗಳಿದ್ದವು ಆದರೆ ಕಾಲಾವಾಶೇಷದ ಹೊಡೆತಕ್ಕೆ ಸಿಕ್ಕಿ ಆದರೆ ಒಂದು ಬಸದಿ ಗುರುತಿಗೆ ಸಿಗದ ಹಾಗೆ ಆಗಿದೆ ಆದರೆ ನಮ್ಮ ಪುಣ್ಯ ಲಭ್ಯತೆಯಿಂದ ಇಂದು ಕೂಡ ಹೊಳೆನರಸಿಪುರದಲ್ಲಿ ನೇಮಿನಾಥ ತೀರ್ಥಂಕರರ ಬಸದಿ ಇದೆ ಗಂಗ ಅರಸರ ಪ್ರಸಿದ್ದ ಮಂತ್ರಿಯಾಗಿದ್ದ ಚಾವುಂಡರಾಯನ ಕಾಲದಲ್ಲಿ ಈ ಬಸದಿ ನಿರ್ಮಾಣವಾಗಿದೆ ಎಂದು ಹೆಸರು ಇದೆ ಅದೇ ರೀತಿ ಈ ಬಸದಿಯು ಅನೇಕ ವೈಶಿಷ್ಟ ಗಳಿಂದ ಕೂಡಿರುಕಂತಹದ್ದು ಉದಾರಣೆಗೆ ಇಲ್ಲಿ ಮನೋಜ್ಞವಾದ ನೇಮಿನಾಥ ತೀರ್ಥಂಕರರ ಖಡ್ಗಾಸನದ ಮೂರ್ತಿ ಇದ್ದು ಅತೀ ವಿರಳವೇ ಎಂದು ಹೇಳಬಹುದು ನೇಮಿನಾಥ ತೀರ್ಥಂಕರರ ಬಸದಿ ಇರುವಂತಹದ್ದು ಅದರ ಜೊತೆಗೆ ಗುಳ್ಳಕಾಯಜ್ಜಿಯ ಪ್ರತಿಮೆ ನಾವೇನು ಶ್ರವಣಬೆಳಗೊಳದಲ್ಲಿ ನೋಡುತ್ತೇವೆ ಅದನ್ನು ಬಿಟ್ಟರೆ ನಾವು ಗುಳ್ಳಕಾಯಜ್ಜಿ ಪ್ರತಿಮೆ ಅಜ್ಜಿಯ ರೂಪದಲ್ಲಿ ಇರಕಂತಹದ್ದು ನಮ್ಮ ಹೊಳೆನರಸೀಪುರದಲ್ಲಿ ಅದೇ ರೀತಿಯಲ್ಲಿ ಇನ್ನೋಂದು ವಿಷೇಶ ಅಂದರೆ ಅಶ್ವರೂಢ ಸ್ವಪರಿವಾರ ಸಮೇತ ಬ್ರಹ್ಮಯಕ್ಷ ಇರುಕಂತಹದ್ದು ಹೀಗೆ ಅನೇಕ ಹಲವಾರು ವೈಷಿಷ್ಟತೆಗಳಿಂದ ಕೂಡಿದಂತಹ ಈ ಒಂದು ಬಸದಿಗೆ  ಬರುವಂತಹ ಏಪ್ರಿಲ್ 30 ರಿಂದ ಮೇ 4ರವರೆಗೆ ವೈಭವಯುತವಾದ ಧಾಮಸಂರಕ್ಷಣೆ ಹಾಗೂ ಮಾನಸ್ಥಂಭೋಪರಿ ಪಂಚಕಲ್ಯಾಣ ಮಹೋತ್ಸವ ಜರುಗಲಿದೆ ಶ್ರೀ ಕ್ಷೇತ್ರ ಶ್ರವಣಬೆಳಗೊಳದ  ಶ್ರೀಮದ್ ಅಭಿನವ ಚಾರುಕೀರ್ತಿ ಪಂಡಿತಾವರ್ಯ ಮಹಾಸ್ವಾಮೀಜಿಗಳವರು ಹಾಗೂ ಶ್ರೀ ಕ್ಷೇತ್ರ ಕನಕಗಿರಿಯ ಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ದಿವ್ಯ ನೇತೃತ್ವ ಹಾಗೂ ಪಾವನ ಸಾನಿಧ್ಯದಲ್ಲಿ ಅವರೋಟ್ಟಿಗೆ ಶ್ರೀ ಕ್ಷೇತ್ರದ ಕಂಬದಹಳ್ಳಿಯ ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಹಾಗೇಯೇ ಅರತಿಪುರದ ಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಈ ಶುಭಕಾರ್ಯಕ್ರಮದಲ್ಲಿ ಬಂದು ಪಂಚಕಲ್ಯಾಣವನ್ನು ನೆರೆವೇರಿಸಲಿದ್ದಾರೆ ಅನೇಕ ಕಾಣದ ಕೈಗಳು ಸಹಾಯವನ್ನು ನೀಡುತ್ತಾ ಬಂದಿವೆ ಈ ಒಂದು ಬಸದಿಯ ಜೀರ್ಣೋಧ್ದಾರ ಆಗಬೇಕು ಅಂದರೆ ಅನೇಕ ಮಹನೀಯರ ಕೊಡುಗೆ ಇದೆ ಅದೇ ರೀತಿಯಲ್ಲಿ ಈಗಾಗಲೇ ತಿಳಿಸಿದ ಹಾಗೆ ಈ ಒಂದು ಪುರದಲ್ಲಿ ಒಂದೇ ಒಂದು ಜೈನ ಮನೆ ಉಳಿದಿದ್ದು ಅದರ ನಿರ್ವಹಣೆಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ ಅವರಿಗೆ ಸಹಾಯವನ್ನು ಅನೇಕ ಅಕ್ಕ ಪಕ್ಕದ ಊರಿನವರು ಶ್ರಾವಕರು ಅಂದರೆ ತುಮಕೂರು ಹಾಸನ ಮೈಸೂರು ಶ್ರವಣಬೆಳಗೊಳ ಅದಲಗಿರಿ ಮುಳ್ಳೂರು ಸಾಲಿಗ್ರಾಮ ಮಂಡ್ಯ ಬೆಳಗಾವಿ ಮಹಾರಾಷ್ಟ್ರ ಇನ್ನೂ ಅನೇಕ ಅನೇಕಗಳಿಂದ ಕೂಡ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಮುಂದೆ ಏಪ್ರಿಲ್ 30 ರಿಂದ ಮೇ 4ರವರೆಗೆ ವೈಭವಯುತವಾದಂತಹ  ಪಂಚಕಲ್ಯಾಣ ಕಾರ್ಯಕ್ರಮ ನೆರೆವೇರಲಿದೆ ತಾವೆಲ್ಲರೂ ಕೂಡ ಅತೀ ಆಸಕ್ತಿಯಿಂದ ಹೆಚ್ಚು ಹೆಚ್ಚು ನಮ್ಮ ಕಾರ್ಯಕ್ರಮಕ್ಕೆ ಬಂದು ವೈಭವವಾಗಿ ನೆರೆವೇರಲು ಯಶಸ್ಸಿಗೆ ಕಾರಣರಾಗಬೇಕೇಂದು ಕೇಳಿಕೊಳ್ಳುತ್ತೇನೆ. ಮತ್ತೋಮ್ಮೆ ಎಲ್ಲರಿಗೂ ಜೈ ಜೀನೇಂದ್ರ.