ವೀಕ್ಷಕ ಬಂಧುಗಳೇ ಇಂದಿನ ವಿಶೇಷ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಜಾತ್ರಾಮಹೋತ್ಸವದ ಅಮೋಘ ಕ್ಷಣಗಳನ್ನು ಇಲ್ಲಿ ಸಂಕಲಿಸುತ್ತೇವೆ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾ ಸಂಸ್ಥಾನ ಮಠದಲ್ಲಿ ಶತಮಾನಗಳ ಪರಂಪರೆಯಿಂದ ನೆಡೆದುಕೊಂಡು ಬಂದಂತೆ ಭಗಾವಾನ್ ಶ್ರೀ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾ ರಥೋತ್ಸವ ಪರಮಪೂಜ್ಯ ಜಗದ್ಗುರು ಸ್ವಸ್ತಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ದಿನಾಂಕ 31-03-2025 ರಿಂದ 14-04-2025ರ ವರೆಗೆ ಕ್ಷೇತ್ರದ ಭಂಡಾರ ಬಸದಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವಿಧಿಪೂರ್ವಕವಾಗಿ ವೈಭವಯುತವಾಗಿ ನೆರವೇರಿದವು ಮೊದಲನೇ ದಿನವಾದ ಮಾರ್ಚ್ 31ನೇ ತಾರೀಖಿನಂದು ಬ್ರಾಹ್ಮಿ ಮಹೋರ್ತದಲ್ಲಿ ಸಂಧ್ಯಾವಂದನೆ ಸಕಲೀಕರಣ ನಾಂದಿ ಮಂಗಳಪೂಜೆ ನೆಡೆದು ಅಂದು ರಥಮನೆಯಿಂದ ರಥವನ್ನು ಹೊರತಂದು ಪರಮಪೂಜ್ಯ ಶ್ರೀಗಳಿಂದ ಪೂಜೆ ಸಲ್ಲಿಸಲಾಯಿತು,ಬ್ರಾತಶ್ರೀ ಕರ್ಮಯೋಗಿ ಚಾರುಕೀರ್ತಿ ಶ್ರೀಗಳವರ ದ್ವಿತೀಯ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಚರಣ ಪಾದುಕೆ ಪೂಜೆಗೈದು ಈ ಸುಸಂಧರ್ಭ ನಿಶಿದ್ದಿ ಬೆಟ್ಟವು ಚಾರುಗಿರಿ ಎಂದು ನಾಮಕರಣ ಗೊಂಡಿತು,ಹಾಗೂ ಸಭಾಕಾರ್ಯಕ್ರಮದ ಮೂಲಕ ಕಂಬದಹಳ್ಳಿ ಶ್ರೀಗಳವರು ರಾಜಕೀಯ ಮುಖ್ಯಸ್ಥರು ಉಪಸ್ಥಿತಿಯಲ್ಲಿ ಧರ್ಮಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿತು ಏಪ್ರಿಲ್ 1ರಂದು ಜಾತ್ರ ಮಹೋತ್ಸವದ ಅಂಗವಾಗಿ ಜಕ್ಕಣ್ಣಮ್ಮ ಶ್ರೀ ನೇಮಿನಾಥ ತೀರ್ಥಂಕರರ ಬಸದಿಯಲ್ಲಿ ವಿಷೇಶ ಅಭಿಷೇಕ ಮಹಾಮಂಗಳಾರತಿ ಸಹಿತ ಭಗವಾನ್ ಶ್ರೀ ನೇಮಿನಾಥ ತೀರ್ಥಂಕರರಿಗೆ ಮಹಾನೈವೇದ್ಯ ಸಮರ್ಪಣೆಯ ಮೂಲಕ ಪ್ರಾಚೀನ ಪದ್ದತಿಯ ಆಚರಣೆಯೊಂದಿಗೆ ನೆರವೇರಿತು ಅಂದು ಅಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಏಪ್ರಿಲ್ 2ರಂದು ವಿಂಧ್ಯಗಿರಿ ಶಿಖರಚೂಡಾಮಣಿ ಗೊಮ್ಮಟೇಶ್ವರ ಭವ್ಯಮೂರ್ತಿ ಭಗವಾನ್ ಶ್ರೀ ಬಾಹುಬಲಿ ಉನ್ನತಮೂರ್ತಿ ಚೈತ್ರ ಶುಧ್ದ ಪಂಚಮಿ ಕ್ರಿಸ್ತ ಶಕ 981ರಂದು ಪ್ರತಿಷ್ಠಾಪಿತಗೊಂಡು ಇಲ್ಲಿಗೆ 1044ನೇ ಪ್ರತಿಷ್ಟಾಮಹೋತ್ಸವದ ಪ್ರಯುಕ್ತ ವಿಷೇಶ ಮಹಾ ಪಾದ ಪೂಜೆ ಭವ್ಯವಾಗಿ ನೆರವೇರಿತು.ದಂಡ ಅನ್ನುವುದು ಒಂದು ಗೌರವ ರಾಜದಂಡ ಎಂದು ಹೇಳುತ್ತಿವಿ.ಭಗವಂತರಿಗೆ ಇಡಿಯುವಂತಹ ಗೌರವ ಹಾಗೆ ಅವೆಲ್ಲಾ ಸೇವಾ ಉಪಕರಣಗಳು ಆ ಸೇವಾ ಉಪಕರಣಗಳನ್ನು ಈ ಒಂದು ಸಂಧರ್ಭದಲ್ಲಿ ನೂತನವಾಗಿ ಮಾಡಿಸಲಾಗಿದೆ ಒಟ್ಟು 3 ಜೊತೆ ಬೆಳ್ಳಿಯ ದಂಡಗಳು ಒಂದು ಜೊತೆ ಸ್ವರ್ಣನಿರ್ಮಿತ ಬಂಗಾರದ ದಂಡಗಳನ್ನು ನೂತನವಾಗಿ ಮಾಡಲಾಗಿದೆ.ಅವೆಲ್ಲವುಗಳನ್ನು ಇಂತ ಶ್ರೇಷ್ಟದಿನ ಬಾಹುಬಲಿ ಸ್ವಾಮಿಯ ಪ್ರತಿಷ್ಟಾಪನೆಯ ದಿನದಂದು ಆ ಎಲ್ಲಾ ದಂಡಗಳನ್ನು ಚಾಮರಗಳನ್ನು ಬಾಹುಬಲಿ ಸ್ವಾಮಿಗೆ ಅರ್ಪಣೆಮಾಡಬೇಕು ಎಂದು ತರಲಾಗಿದೆ.ಇನ್ನು 3ಮತ್ತು4 5ರಂದು ಕ್ಷೇತ್ರದ ಎಲ್ಲಾ ಬಸದಿಯಲ್ಲೂ ಆರಾಧನೆ ಅಭಿಷೇಕ ಕೈಗೊಳ್ಳಲಾಗಿದ್ದು 3ನೇ ತಾರೀಖಿನಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಬಿಂದಿಗಿರಿಯ ವದೇಗಲ್ ಬಸದಿ ಚೆನ್ನಣ್ಣನ ಬಸದಿ ಸಿದ್ದರ ಬಸದಿ ಜಾರುಗುಪ್ಪೆ ಶ್ರೀ ಪಾಶ್ವನಾಥ ಬಸದಿಗಳಲ್ಲಿ ವಿಷೇಶ ಆರಾಧನೆ ಮತ್ತು ಅಭಿಷೇಕ ನೆಡೆದವು.4ನೇ ತಾರೀಖಿನಂದು ಸಿದ್ದಾಂತ ಬಸದಿ ಅಕ್ಕನ ಬಸದಿ ಲಕ್ಕಿ ಬನ ಶ್ರೀ ಪಾರ್ಶ್ವನಾಥ ಬಸದಿ ಅಭಿಷೇಕ ಆರಾಧನೆಗಳು ನೆಡೆಯುತ್ತವೆ 5ನೇ ತಾರೀಖಿನಂದು ಚಂದ್ರಗಿರಿ 7 ಬಸದಿಯಲ್ಲಿಯೂ ಆರಾಧನೆ ಅಭಿಷೇಕ ನೆರವೇರಿದವು. 6ನೇ ತಾರೀಖಿನಂದು ನೂತನವಾಗಿ ಆಚಾರ್ಯ ಶ್ರೀ ಕೊಂತಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ಪ್ರತಿಷ್ಟಾಪನೆಗೊಂಡು ಭಂಡಾರ ಬಸದಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಪಂಚಕಲ್ಯಾಣ ನೆರವೇರಿ 48 ದಿನಗಳ ಮಂಡಲಪೂಜೆಯ ಪ್ರಯುಕ್ತ ವಿಷೇಶ ಅಭಿಷೇಕ ಸರ್ವದೋಷ ಪ್ರಾಯಶ್ಚಿತ ವಿಧಾನ ನೆರವೇರಿತು













