ಮೋರುಗೇರಿ

ಜೈ ಜೀನೇಂದ್ರ ವೀಕ್ಷಕರೇ ನಮ್ಮ ಇಂದಿನ ಪಯಣ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಗೇರಿ ಗ್ರಾಮದಲ್ಲಿ ಇರುವ ಬ್ರಹ್ಮ ದೇವರ  ಕ್ಷೇತ್ರ ಅತಿಶಯ ಕ್ಷೇತ್ರವಾಗಿದೆ  ಇಲ್ಲಿನ ಮೂಲ ಮೂರ್ತಿ ಶ್ರೀ ಶೀಥಲನಾಥ ತೀರ್ಥಂಕರರು ಹಾಗೂ ಯಕ್ಷ ಶ್ರೀ ಬ್ರಹ್ಮದೇವರ ಬಸದಿ ಇದಾಗಿದ್ದು ಭಾಗದ ಅನೇಕ ಜೈನ ಮನೆತನಗಳಿಗೆ ಮನೆದೇವರಾಗಿದ್ದಾನೆ ಸಕಲ ಸಂಪತ್ತನ್ನು ಬೇಡಿದ ವರವನ್ನು ಕೊಡುವ ಕಾಮಧೇನು ಮನೆಯಲ್ಲಿ ಯಾವುದೇ ಶುಭಕಾರ್ಯ ನೆಡೆಯುವ ಮುನ್ನ ಇಲ್ಲಿಗೆ ಬಂದು ಬ್ರಹ್ಮದೇವರ ಆರ್ಶೀರ್ವಾದ ತೆಗೆದುಕೊಂಡು ಹೋಗುವುದು ಇಲ್ಲಿಯ ಸಂಪ್ರದಾಯ ಇದು ಅತ್ಯಂತ ಪ್ರಾಚೀನ ಜೈನ ದೇವಾಲಯವಾಗಿದ್ದು ಸುಮಾರು 11ನೇ ಶತಮಾನ ದಿರಬಹುದು ಎಂದು ಪ್ರತೀತಿ ಮೊದಲಿನ ಹಳೆ ಪುರಾತನ  ದೇವಾಲಯ ಜೀರ್ಣೋದ್ದಾರ ಮಾಡಿ ಶ್ರೀ ಬ್ರಹ್ಮದೇವರಿಗೆ ಪೂಜೆ ಪುನಸ್ಕಾರಗಳು ಆಗಮೋಪ್ತವಾಗಿ ನೆಡೆಯಲು ಕಾಯಂ ಪುರೋಹಿತರ ನೇಮಕ ಮಾಡಲಾಗಿದೆ ಕಾಯಂ  ಪುರೋಹಿತರ ನೇಮಕ ಮಾಡಲಾಗಿದೆ ಹಾಗೂ ವಾಸಕ್ಕೆ ಸುಸಜ್ಜಿತ ಮನೆಯನ್ನು ಬೆಂಗಳೂರಿನಲ್ಲಿ  ನಿರ್ಮಲಮ್ಮ ಮತ್ತು ಕುಟುಂಬದವರು ನಿರ್ಮಿಸಿಕೊಟ್ಟಿದ್ದಾರೆ ಶ್ರೀ ಜೆ ಜಿನದಪ್ಪ ನವರು ಹಾಗೂ ಸಂಘಡಿಗರು ಸೇರಿ ಶ್ರೀ ಬ್ರಹ್ಮದೇವರ ಟ್ರಸ್ಟ್ ನೊಂದಾಯಿಸಿ ಬಹಳಷ್ಟು ಅಭಿವೃಧ್ದಿ ಕಾರ್ಯದಲ್ಲಿ ಒಂದಾದ ಸಂಪೂರ್ಣ ಕಲ್ಲಿನ ಶಿಲೆಗಳಿಂದ ನಿರ್ಮಿಸಿರುತ್ತಾರೆ ಹಾಗೂ ದೇವಸ್ಥಾನದ ಸುತ್ತಲೂ ಕಾಪೌಂಡ್ ನಿರ್ಮಿಸಿರುತ್ತಾರೆ ಇದೀಗ ದಾನಿಗಳಿಂದ ಉಗ್ರಾಣ ಅಡುಗೆ ಮನೆ ಭವ್ಯವಾದ ಅಡುಗೆಮನೆ 35/45 ಅಡಿಯಲ್ಲಿ ನಿರ್ಮಿಸಲಾಗುತ್ತಿದೆ ಕೆಲಸ ಪ್ರಗತಿಯಲ್ಲಿದೆ ಇಲ್ಲಿ ಪ್ರತಿ ಅಮವಾಸ್ಯೆಯ ದಿನ ವಿಷೇಶ ಪೂಜೆ ಇರುತ್ತದೆ ಶ್ರಾವಣಮಾಸದ ಕೊನೆಯ ಭಾನುವಾರ ಪಲ್ಲಕ್ಕಿ ಉತ್ಸವ ಇದ್ದು ದಿನ ತಾಳೆ ಮನೆಗೆ ದೇವರು ಹೋಗಿ ಬರುತ್ತದೆ ಜನವರಿಯಲ್ಲಿ ವಿಷೇಶ ದಿನಗಳಲ್ಲಿ ಬಂಗಾರದ ಮೂರ್ತಿ ಇಟ್ಟು ಪಂಚ ದ್ರವ್ಯ ಇಟ್ಟು ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ ಎರಡು ವಿಷೇಶ ದಿನಗಳಲ್ಲಿ ಸಾವಿರಾರು ಭಕ್ತಾಧಿಗಳು ಬಸದಿಗೆ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.ಶ್ರೀರ್ಘದಲ್ಲಿ ನೆಡೆಯುವ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಹಾಗೂ ಅಭಿವೃದ್ದಿ ಕಾರ್ಯಗಳನ್ನು  ಹೊಂಬುಜ ಮಠದ ಡಾಕ್ಟರ್ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹಾಗಾಗಿ ನೀಡುವ ಸಲಹೆ ಮಾರ್ಗದರ್ಶನ  ಉಪದೇಶ ಹಾಗೂ ಅವರ ಆರ್ಶೀರ್ವಾದ ದೊಂದಿಗೆ ಇಲ್ಲಿ ನೆಡೆಸಲಾಗುತ್ತದೆ ಜೈ ಜೀನೇಂದ್ರ ವಿಜಯನಗರ ಜಿಲ್ಲೆ ಮೋರಗೇರಿ ಗ್ರಾಮದಲ್ಲಿ ಬ್ರಹ್ಮ ಯಕ್ಷ ದೇವಸ್ಥಾನದಲ್ಲಿ ನಾವೆಲ್ಲಾ ಇದೇವೆ ಇವರು ಅಧ್ಯಕ್ಷರು ಇವರು ಕಝಾನ್ಸಿ ನಾವು ಸಂಘಟನಾ ಕಾರ್ಯದರ್ಶಿ ಇದು ಸುಮಾರು 10ನೇ ಶತಮಾನದಿಂದ ಇದೆ ಇದಕ್ಕೆ 24 ಎಕರೆ ಜಮೀನು ಇದೆ ಸದ್ಯಕ್ಕೆ ವಿಜಯಕುಮಾರ್ ಪಂಡಿತರು ಪೂಜೆ ನೆಡೆಸಿಕೊಂಡು ಹೊಗುತ್ತಿದ್ದಾರೆ ಇಲ್ಲಿ ಜೈನ ಸಮಾಜ ಇರುವುದು 3 ಮನೆ ನಾವು ಒಂದು ಟ್ರಸ್ಟ್ ಮಾಡಿಕೊಂಡಿದ್ದೇವೆ 1990 ರಿಂದ ಟ್ರಸ್ಟ್ ಕಾರ್ಯ ನೆಡೆಯುತ್ತಿದೆ ಎಲ್ಲಾ ಶ್ರಾವಕರಿಂದ ದೇಣಿಗೆ ಪಡೆದು ನಮ್ಮ ಕೈಯಲ್ಲಿ ಎಷ್ಟೂ ಆಗುತ್ತೋ ಅಷ್ಡು ಜೀರ್ಣೋಧ್ದಾರ ಮಾಡಿದ್ದೇವೆ ಹಿಂದೆ ಊಟದ ಹಾಲ್ ಅಡುಗೆ ಮನೆ ಉಗ್ರಾಣ ಕಟ್ಟಿಸುತ್ತಾ ಇದ್ದೇವೆ ಅದು ಈಗ ಪ್ರಗತಿಯಲ್ಲಿದೆ ಯಾರಾದರೂ ಭಕ್ತರು ಬಂದರೆ ಉಳಿದು ಕೊಳ್ಳಲು ವ್ಯವಸ್ಥೆ ಇದೆ.ಪಂಡಿತರೆಲ್ಲಾ ಬಂದಂತಹ ಶ್ರಾವಕರಿಗೆ ಅನುಕೂಲತೆ ಮಾಡಿಕೊಡುತ್ತಿದ್ದಾರೆ ತಾವು ಒಮ್ಮೆ ಬಂದು ಕ್ಷೇತ್ರ ದರ್ಶನ ಪಡೆಯಬೇಕೆಂದು ಕೇಳಿಕೊಳ್ಳುತ್ತೇನೆ