ಸಾಮಾನ್ಯವಾಗಿ ಕಲ್ ಅಥವಾ ಕಲ್ಲು ಎನ್ನುವ ಪದಗಳಿಂದ ಅಂತ್ಯವಾಗುವ ಸ್ಥಳ ನಾಮಗಳು ಪ್ರಾಚೀನ ಇತಿಹಾಸವನ್ನು ಹೊಂದಿರುತ್ತವೆ. ಉದಾಹರಣೆಗೆ ಸಂಕನಕಲ್ಲು , ಪಟ್ಟದಕಲ್ಲು, ಇಡಕಲ್ಲು ಹೀಗೆ ಈ ಮೂರುಗಳು ಶಿಲಾಯುಗದಿಂದ ಹಿಡಿದು ಪ್ರಾಚೀನ ಕಾಲದ ಇತಿಹಾಸನ್ನು ಹೊಂದಿರುವುದನ್ನು ಗಮನಿಸಬಹುದಾಗಿದೆ. ಇದೇ ಮಾದರಿ ಸ್ಥಳಗಲ್ಲು ಕಲುಬುರುಗಿ ಜಿಲ್ಲೆಯಲ್ಲಿ ಕೂಡ ಇದೆ. ಅವುಗಳಲ್ಲಿ ಇಲ್ಲಿನ ಆಳಂದ ತಾಲ್ಲೂಇನ ತಡಕಲ್ಲು ಗ್ರಾಮದ ಬಗ್ಗೆ ಹಾಗೂ ಇಲ್ಲಿನ ಪ್ರಾಚೀನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾದ ಗ್ರಾಮದ ಮಧ್ಯ ಭಾಗದಲ್ಲಿರುವ ಶಾಂತಿನಾಥ ಜಿನಮಂದಿರವನ್ನು ಪರಿಚಯಿಸುತ್ತಿದ್ದೇವೆ. ಈ ಮಂದಿರ ಬಹಳಪ್ರಸಿದ್ದ ಕ್ಷೇತ್ರವಾಗಿದೆ. ಸಂಪೂರ್ಣ ನವೀಕರಣಗೊಂಡ ಜೈನ ಮಂದಿರದಲ್ಲಿ ಹನ್ನೆರಡನೆಯ ಶತಮಾನದ ಭಗವಾನ್ ಶಾಂತಿನಾಥ ತೀರ್ಥಂಕರರು ಇಲ್ಲಿನ ಮೂಲ ಮೂರ್ತಿ . ಈ ಮೂರ್ತಿಯು ನಗರದ ಹೊರವಲಯದ ಜಮೀನಿನಲ್ಲಿ ದೊರೆತಂತಹ 5 ಅಡಿ ಎತ್ತರದ ಮನಮೋಹಕವಾದ ಮೂರ್ತಿ. ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಮೂರ್ತಿಯ ಅಕ್ಕಪಕ್ಕದಲ್ಲಿ ಅಮೃತಶಿಲೆಯಲ್ಲಿ ಕಡೆಯಲಾದ ಭಗವಾನ್ ಶ್ರೀ ಪಾರ್ಶ್ವನಾಥ ಹಾಗೂ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯ ಮೂರ್ತಿಗಳಲನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಮಾತೆ ಸರಸ್ವತಿ ದೇವಿಯ ವಿಗ್ರಹವಿದ್ದು ಮಸೀದಿಯ ಕೆಳಗೆ ಸಿಕ್ಕಿದ್ದಾಗಿದೆ. ಈಗಿನ ಪಂಡಿತರಾದ ಶಾಂತಿನಾಥ ಪಂಡಿತ್ ರವರ ತಂದೆ ಶ್ರೀ ಸುರೇಂದ್ರನಾಥ್ ಪಂಡಿತ್ ರವರ ಪ್ರೇರಣೆ ಹಾಗೂ ಆಚಾರ್ಯರಾದ ಶ್ರೀ ಪಾಯಸಾಗರ್ ಮುನಿಮಹಾರಾಜರ ಆಶೀರ್ವಾದದಿಂದ ತಡಕಲ್ಲು ಗ್ರಾಮಸ್ಥರ ಸಹಕಾರದಿಂದ 1954 ರಲ್ಲಿ ಮೂರ್ತಿಯನ್ನು ಮಂದಿರದಲ್ಲಿ ಇಡಲಾಗಿದೆ. ನಂತರ 2009 ರಲ್ಲಿ ಮಾತೆಗೆ ವಜ್ರ ಲೇಪನ ಮಾಡಿಸಿದ್ದಾರೆ. 1990ರಲ್ಲಿ ಆಳಂದ ಜೈನ ಸಮುದಾಯದವರು ಶ್ರೀ ಪ್ರದೀಪ್ ನಾನಚಂದಶಹ್ ನೇತೃತ್ವದಲ್ಲಿ ಮಂದಿರದ ಜೀರ್ಣೋದ್ದಾರ ಕಾರ್ಯವನ್ನು 1990 ರಿಂದ 2000 ಇಸವಿಯವರೆಗೂ ನಡೆದು ಏಪ್ರಿಲ್ ತಿಂಗಳಿನಲ್ಲಿ ಪಂಚಕಲ್ಯಾಣ ಮಾಡಲಾಗಿದೆ. ಪ್ರತಿವರ್ಷ ನವರಾತ್ರಿ ಉತ್ಸವ ಹಾಗೂ ವಾರ್ಷಿಕೋತ್ಸವ ಆಚರಣೆ ವಿ್ಋಂಭಣೆಯಿಂದ ನಡೆಸಲಾಗುತ್ತದೆ.
ಜಿನಬಿಂಬದಲ್ಲಿ ಪುರಾತನ ಜಿನಬಿಂಬಗಳನ್ನು ಸಹ ಸಂಗ್ರಹಣೆ ಮಾಡಲಾಗಿದ್ದು ಪೂಜಾರಾಧನೆಗಳು ಅಚ್ಚುಕಟ್ಟಾಗಿ ಶ್ರೀ ಶಾಂತಿನಾಥ ಪಂಡಿತ್ ರವರು ತಮ್ಮ ಮಗ ಸುನೀಲ್ ಕುಮಾರ್ ಪಂಡಿತ್ ಹಾಗೂ ಮೊಮ್ಮಗ ಸಂವೇದ್ ರವರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ನೋಡಲು ತುಂಬಾ ಆಕರ್ಷಣಿಯವಾಗಿದೆ ಈ ಜಿನಮಂದಿರ ತಾವುಗಳೂ ಸಹ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿ.














