ಮಲೇಶ್ವರ #/ಕುದುರೆಮುಕ #ಕ್ಷೇತ್ರಪರಿಚಯ

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಧರ್ಮಯಾತ್ರೆ

ವೀಕ್ಷಕರೆ ಇಂದಿನ ನಮ್ಮ ಕ್ಷೇತ್ರ ಪರಿಚಯ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಂಸೆ ಗ್ರಾಮದ ಮಲೆನಾಡ ಮಡಿಲು ಸಹ್ಯಾದ್ರಿ ತಪ್ಪಲಿನಲ್ಲಿರುವ ಸುಂದರ ಊರು ಮಲ್ಲೇಶ್ವರ. ಇಲ್ಲಿ ಸುಮಾರು 50 ಜೈನ ಶ್ರಾವಕ ಕುಟುಂಬಗಳಿದ್ದು ಎಲ್ಲರು ಖುಷಿಯನ್ನು ಅವಲಂಭಿಸಿ ಜೀವನ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಈ ಊರಿನಲ್ಲಿ 300 ವರ್ಷಗಳಷ್ಟು ಇತಿಹಾಸ ಇರುವ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ಮತ್ತು ಮಾತೆ ಶ್ರೀ ಭಗವತಿ ಪದ್ಮಾವತಿ ಅಮ್ಮನವರ ದೇವಸ್ಥಾನವಿದೆ.

ಬಸದಿ ಹಾಗೂ ದೇವಸ್ಥಾನದಲ್ಲಿ ನಿತ್ಯ ಅಭಿಷೇಕ, ಪೂಜೆ, ಅರಾಧನೆಗಳು, ದಶ ಲಕ್ಷಣ ಪರ್ವ, ಕಾರ್ತಿಕ ದೀಪೋತ್ಸವ, ನವರಾತ್ರಿ ಉತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ. ಬಸದಿ ಮತ್ತು ದೇವಸ್ಥಾನದ ನಿರ್ವಹಣೆಯನ್ನು ಊರಿನ ಶ್ರಾವಕರನ್ನೊಳಗೊಂಡ 1008 ಚಂದ್ರನಾಥ ಜೈನ ದಿಗಂಬರ ಮುನಿ ಭಕ್ತ ಸೇವ ಸಮಾಜ ಸಂಘ ಮಲ್ಲೇಶ್ವರ ಎಂಬ ಸಂಘದ ಮೂಲಕ ಮಾಡುತ್ತಿದೆ.

ಸಂಘದ ಹಾಲಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಶ್ರೀಪಾಲಯ್ಯ ನವರ ನೇತೃತ್ವದಲ್ಲಿ ಈ ಹಿಂದೆ ಬಸದಿಯನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು ದೇವಸ್ಥಾನಕ್ಕೆ ಅಗತ್ಯವಾಗಿರುವ ಸಭಾಭವನವನ್ನು ನಿರ್ಮಾಣಮಾಡಲಾಗಿದೆ. ಭಗವತಿ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನವು ತುಂಬ ಶೀಥಿಲಗೊಂಡಿದ್ದರಿಂದ ಊರಿನ ಜೈನ ಬಾಂಧವರು ಸೇರಿ ಈ ದೇವಿಯ ದೇವಸ್ಥಾನವನ್ನು ಶೀಲಾಮಯ ದೇವಸ್ಥಾನವನ್ನಾಗಿ ಮತ್ತು ಚಂದ್ರ ಶಾಲೆಯನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಯೋಜನೆಯನ್ನು ತಯಾರಿಸಿದಾಗ ಈ ಕಾರ್ಯಕ್ಕೆ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳ ವೆಚ್ಚ ತಗುಲುತ್ತಿದ್ದು ಕಾರ್ಕಳ ಶ್ರೀ ಜೈನ ಮಠದ ಶ್ರೀ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಅಮೃತ ಹಸ್ತದಿಂದ ಶಿಲಾನ್ಯಾಸ ಗೊಳಿಸಿ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳವರ ಶುಭ ಆಶೀರ್ವಾದದಿಂದ ಕಳಸ ಸೀಮೆಯ ಬಸದಿಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ ಸಿ ಧರಣೇಂದ್ರಯ್ಯ ನವರ ಮಾರ್ಗದರ್ಶನದಲ್ಲಿ ಜೀರ್ಣೋದ್ದಾರ ಕಾರ್ಯವನ್ನು ಕೈಗೊಂಡಿದ್ದಾರೆ.

 ಇದೇ ಮಲ್ಲೇಶ್ವರ ಬೆಟ್ಟದಲ್ಲಿ ಇರುವ ಕೊಡಮಣಿತ್ತಾಯ ದೈವ ಸ್ಥಾನವು ಸುಮಾರು 500 ವರ್ಷಗಳಷ್ಟು ಇತಿಹಾಸವಿರುವ ದೈವಸ್ಥಾನವಾಗಿದೆ. ಇಲ್ಲಿ ನೆಲೆಸಿರುವ  ಕೊಡಮಣಿತ್ತಾಯ ದೈವವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವೇಣೂರಿನ ಪಿರಂಜೆ ಇಂದ ಮಲ್ಲೇಶ್ವರ ಬೆಟ್ಟಕ್ಕೆ ಬಂದು ನೆಲೆ ನಿಂತು ಇಲ್ಲಿನಿಂದ ಸಂಸೆಯ ಪದ್ಮಾವತಿ ಅಮ್ಮನವರ ಜಾತ್ರೆಯ ಸಂದರ್ಭದಲ್ಲಿ ತನ್ನ ಬಂಡಾರವನ್ನು ತೆಗೆದುಕೊಂಡು ಹೋಗಿ ನಮಗೆ ಧರ್ಮನಿಯಮ ಕೊಡುವಂತೆ ಆಜ್ಞೆಮಾಡಿರುತ್ತದೆ. ಈ ಕೊಡಮಣಿತ್ತಾ ಮೂಲಸ್ಥಾನ ಸಂಸೆ ಮೂರ್ನಾಡಿಗೆ ಸಂಬಂಧಿಸಿದ್ದಾಗಿದ್ದು ಮೂರ್ನಾಡು ಎಂದರೆ ಮಲ್ಲೇಶ್ವರ, ಸಂಸೆ, ಎಸ್ಕೆಮೆಗಲ್ ಎಂಬ ಮೂರು ಊರುಗಳು ಸೇರಿ ಪ್ರತಿವರ್ಷ ಪೆಬ್ರವರಿ 8ನೇ ತಾರೀಖಿ ನಂದು ಈ ಬೆಟ್ಟದಲ್ಲಿ ಧರ್ಮದೇವತೆಗಳ ಜಾತ್ರ ಮಹೋತ್ಸವವು ನಡೆಯುತ್ತದೆ. ಜಾತಿ ಮತ ಬೇದವಿಲ್ಲದೆ ಎಲ್ಲರು ಈ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮನ್ನು ನಾವು ತೊಡಗಿಸಿಕೊಂಡು ದೈವದ ಕೃಪೆಗೆ ಪಾತ್ರರಾಗುತ್ತಾರೆ. ಇಂತಹ ಒಂದು ಸುಂದರ ತಾಣದಲ್ಲಿರುವ ಬಸದಿಯನ್ನು ಹಾಗೂ ದೈವಸ್ಥಾನವನ್ನು ನೋಡಲು ಒಮ್ಮೆ ಮರೆಯದಿರಿ.

 

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್