ಪ್ರೀಯ ವಿಕ್ಷಕ ಬಂಧುಗಳೆ ಕಡಲತೀರದಿಂದ ನಿಮ್ಮನ್ನು ಸಿಲಿಕಾನ್ ಸಿಟಿ, ಉದ್ಯಾನ ನಗರಿ ಬೆಂಗಳೂರಿನತ್ತ ಕರೆದೊಯುತ್ತಿದ್ದೇವೆ ನಗರದ ಒತ್ತಡದ ಜೀವನ ಶೈಲಿಯ ನಡುವೆಯು ಧರ್ಮ ಪ್ರಭಾವನ ಕಾರ್ಯಕ್ರಮಗಳನ್ನು ಧರ್ಮತ್ಮರೆಲ್ಲರೂ ಸೇರಿ ಹಮ್ಮಿಕೊಳ್ಳುತ್ತ ಬಂದಿರುವ ಯಶಸ್ವೀ ಟ್ರಸ್ಟ್ ಆಗಿ ಹೊರಹೊಮ್ಮಿರುವ ಬೆಂಗಳೂರಿನ ಪುಟ್ಟೇನಹಳ್ಳಿಯ ಭಗವಾನ್ ಶ್ರೀ ಶೀತಲನಾಥ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ತನ್ನ 29 ನೇ ವಾರ್ಷಿಕ ಪೂಜಾ ಮೊಹೋತ್ಸವವನ್ನು ದಿನಾಂಕ 28-7-2024 ರಂದು ಆಚರಿಸುತ್ತಿದೆ ಪರಮಪೂಜ್ಯ ಜಗತ್ಗುರು ಸ್ವಸ್ತಿ ಶ್ರೀ ಡಾ|| ದೇವೆಂದ್ರ ಕೀರ್ತಿ ಭಟ್ಟರಕ ಮಹಾ ಸ್ವಾಮೀಜಿಯವರು ಪಾವನ ಸಾನಿಧ್ಯದಲ್ಲಿ ನೆಡೆಸಲಾಯಿತು ಮೊಹೋತ್ಸವದ ಪ್ರಯುಕ್ತ ಅಜ್ಞಾತ ಮೊಹೋತ್ಸವ ಹಾಗು ಜೀನಗುಣ ಸಂಪತಿ ಆರಾಧನೆ, ಸಹಿತ ಭಗವಾನ್ ಶ್ರೀ ಶೀತಲನಾಥರಿಗೆ ಪಂಚಮೃತ ಅಭಿಷೇಕವನ್ನು ವೈಭವವಾಗಿ ನೆಡೆಸಲಾಯಿತು ಮಾನವಿ ಮಹಿಳ ಸಮಾಜ ಇವರ ಸಂಯೋಗದಲ್ಲಿ ನೆಡೆದ ಮೋಹತ್ಸವದಲ್ಲಿ ಟ್ರಸ್ಟ್ ಪದಾದಿಕಾರಿಗಳು ಹಾಗು ಎಲ್ಲ ಟ್ರಸ್ಟೀಗಳು ಭಾಗವಹಿಸಿದ್ದರು ಹಾಗು ಅಪಾರ ಸಂಖ್ಯೆಯಲ್ಲಿ ಧರ್ಮ ಬಂಧುಗಳು ಪಾಲ್ಗೋಂಡಿದ್ದರು ಹಾಗೇ ಕಾರ್ಯಕ್ರಮ ಯಶಸ್ವೀ ಕಂಡಿತ್ತು.
ನೀವು ನೋಡುತ್ತಿದ್ದೀರಿ ಮೋಹತ್ಸವದ ದೃಶ್ಯವಳಿಗಳನ್ನ.
29 ವರ್ಷಗಳ ಹಿಂದೆ ಜೆ.ಪಿ. ನಗರ ಜೈನ್ ಮಿಲನ್ ಸದಸ್ಯರೆಲ್ಲರೂ ಸೇರಿ ದೇವಸ್ಥನ ಮಾಡಬೇಕು ಎಂದು, ಪೂಜೆ ಪುನಸ್ಕರ ಮಾಡಬೇಕು ಎಂದು ಅಂದುಕೂಳ್ಳುವಾಗ ತುಂಬಾ ದೂರ ಪ್ರಯಾಣಿಸಬೇಕಿತ್ತು, ಆದರೆ ಹಿರಿಯರೆಲ್ಲ ಸೇರಿ ನಮ್ಮ ಚಿಕ್ಕಪೇಟೆಯ ಪುರೋಹಿತರಾದ ನೇಮಿಚಂದ್ರಯ್ಯನವರ ಒಂದು ಭಾವನೆಯನ್ನ ಸ್ವೀಕಾರ ಮಾಡಿ ಇಲ್ಲಿ ಈ ಜೀನಾಲಯವನ್ನು ಕಟ್ಟಿಸಿದರು 1994-1995 ರಲ್ಲಿ ನೇರವೆರಿತು ಹಿರಿಯರ, ಹಾಗು ಜ್ಞಾನಿಗಳ ತಿಳುವಳಿಕೆ ಇಂದ ಜೀನ ದೇವಾಲಯ ನೇರವೇರಿತು. ಬಹಳ ವಿಸ್ತಾರವಾಗಿ ನಮ್ಮ ಜೆ,ಪಿ ನಗರ ಸುತ್ತಮುತ್ತ ಇರುವಂತಹದ್ದು ಬೇರೆ ಜಿಲ್ಲೆಯ ಜನರು ಬರುವಂತೆ ಅನುಕೂಲವು ಇದೆ ಕಳೆದ 10 ವರ್ಷಗಳ ಹಿಂದೆ ಮನಸ್ಥನದ ಪ್ರತಿಷ್ಠಪನೆ ನೆರವೇರಿದ ಮೇಲೆ ಬರುವ ಜನಸಂಖ್ಯೆ ಹೆಚ್ಚಗಿದೆ ಹೀಗೆ ನಾವು ಧರ್ಮದ ಹೆಸರಿನಲ್ಲಿ ಮಾಡುವ ಕೆಲಸಗಳು ಅದರ ಫಲ ಬಹಳ ವಿಸ್ತಾರವಾಗಿರುತ್ತದೆ ಇಲ್ಲಿ ಆಗಿರುವ ಪ್ರಗತಿ ಸಮದಾನ ತಂದಿದೆ ಇದು ವಿಶಾಲವಾಗಿ ಬೆಳೆದು ನೂರಾರು ಜೀವಿಗಳಿಗೆ ಆಶ್ರ ಯ ನೀಡುತ್ತದೆ ಶೀತಲ್ ನಾಥ್ ತೀರ್ಥಂಕರ ಸನ್ನಿದನದಲ್ಲಿ ನೀಡಿ ಈ ದಾನದ ಪ್ರಯತ್ನ ನಿರಂತರವಾಗಿ ನೆಡೆಯುತ್ತ ಬಂದಿದೆ ಆನೇಕ ಮುನಿಗಳು ಸಾಧುಗಳು ಎಲ್ಲಾ ಸೇರಿ ಇಲ್ಲಿ ಬಂದು ಈ ಜಾಗವನ್ನು ನೋಡಿದಮೇಲೆ ಬಹಳ ಪ್ರಸನ್ನ ಚಿತ್ತರಾಗಿದ್ದಾರೆ ಹಾಗು ವಾಸ್ತವ್ಯಮಾಡಿ ಹೋಗಿರುತ್ತಾರೆ.














