ಪುಟ್ಟೇನಹಳ್ಳಿ – ಪ್ರೋಮೋ -28-07-2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಜೈ ಜಿನೇಂದ್ರ ವೀಕ್ಷಕರೆ

ಪುಟ್ಟೇನಹಳ್ಳಿ ಭಗವಾನ್ ಶ್ರೀ 1008 ಶೀತಲನಾಥ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ 29 ನೆಯ ವಾರ್ಷಿಕ ಪೂಜಾ ಮಹೋತ್ಸವದ ಆತ್ಮೀಯ ಆಹ್ವಾನ. ದಿನಾಂಕ 28/07/2024 ನೇ ಭಾನುವಾರದಂದು ಶ್ರೀ ಕ್ಷೇತ್ರ ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳವರ ಪಾವನ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಜಿನಗುಣ ಸಂಪತಿ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಮಸ್ತ ಶ್ರಾವಕ ಶ್ರಾವಕಿಯರು ತಪ್ಪದೇ ಭಾಗವಹಿಸಿ ಪುಣ್ಯಭಾಗಿಗಳಾಗಿ ಎಂದು ಸಮಿತಿ ವತಿಯಿಂದ ವಿನಂತಿಸಿದ್ದಾರೆ. ಈ ಕಾರ್ಯಕ್ರಮವು ಜ್ವಾಲಾಮಾಲ ನ್ಯೂಸ್ ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ.