-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಜೈ ಜಿನೇಂದ್ರ ವೀಕ್ಷಕರೆ, ಮಲೆನಾಡಿನ ಪ್ರಶಾಂತ ವಾತಾವರಣದಲ್ಲಿ ಹಸಿರು ಸಿರಿಯ ನಡುವಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಮೆಗುಂದ ಹೋಬಳಿಯಲ್ಲಿ ಕಂಗೊಳಿಸುತ್ತದೆ ಒಂದು ಐತಿಹಾಸಿಕ ಜಿನಾಲಯ. 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿ, ಈ ಬಸದಿಯು ಶೃಂಗೇರಿ ಇಂದ 23 ಕಿ.ಮೀ ಹಾಗೂ ಹೊರನಾಡಿನಿಂದ 21 ಕಿ.ಮೀ ಹಂತರದಲ್ಲಿದೆ. ಬಸದಿಯ ಮುಂಭಾಗದಲ್ಲಿ ಬೃಹತ್ ಆದ ಏಕ ಶಿಲೆಯ ಬ್ರಹ್ಮ ಸ್ಥಂಭವಿದ್ದು ಮೇಲಿನ ಕೂಟದಲ್ಲಿ ಬ್ರಹ್ಮ ದೇವರನ್ನು ಮತ್ತು ಮಾನಸ್ಥಂಭದ ಬುಡದಲ್ಲಿಯು ಬ್ರಹ್ಮ ಯಕ್ಷನನ್ನು ನಾಲ್ಕು ದಿಕ್ಕುಗಳಲ್ಲಿಯು ಪ್ರತಿಷ್ಠಾಪಿಸಲಾಗಿದೆ. ಇಲ್ಲಿಯ ಬ್ರಹ್ಮ ದೇವರು ಬಹು ಕಾರ್ಣಿಕರಾಗಿದ್ದಾರೆ.
ಬಸದಿಯ ಒಳಭಾಗಕ್ಕೆ ಬಂದರೆ ಮಾತೆ ಪದ್ಮಾವತಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಗಿದೆ ಹಾಗೂ ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿಯ ಜಿನ ಬಿಂಬವು ಎಂತವರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ. ಶ್ರಾವಕ ವೃಂದ್ದ ಪ್ರಸನ್ನತೆಗೆ ಸ್ವಾಮಿಯ ಮುಗ್ದ ಮುಖವೇ ಮಾರ್ಗ ಕಲ್ಪಿಸುವಂತಿದೆ. ಕಾರ್ಕಳದ ಜೈನ ಮಠಕ್ಕು ಹಾಗೂ ಇಲ್ಲಿನ ಬಸದಿಗು ಅನಾದಿಕಾಲದಿಂದಲು ನಂಟಿದೆ. ಕಳಸ ಸೀಮೆಯ ಬಸದಿಗಳಲ್ಲಿ ಮೆಗುಂದ ಬಸದಿಯು ಮುಖ್ಯ ಕೇಂದ್ರಿಯ ಬಸದಿಯಾಗಿದೆ. ಇಲ್ಲಿ ಪ್ರತಿ ನಿತ್ಯದ ಪೂಜೆ ಹಾಗುವಾಗ ಕಾರ್ಕಳ ಮಠ ಆಗು ಭಟ್ಟಾರಕರ ಹೆಸರನ್ನು ಉದ್ಗರಿಸಲಾಗುತ್ತದೆ. ಬಸದಿಯ ಒಳ ಭಾಗದಲ್ಲಿ ಬೃಹತ್ ಆದ ಹಳೆಗನ್ನಡದಲ್ಲಿ ರಚಿತವಾದ ಎರಡು ಶಿಲಾಶಾಸನಗಳನ್ನು ಕಾಣಬಹುದು, ಆದರೆ ಈ ಶಾಸನಗಳು ಬಸದಿಯ ನಿರ್ಮಾಣದ ಕುರಿತು ಯಾವ ವಿವರಣೆಯನ್ನು ನೀಡುವುದಿಲ್ಲಾ. ಇದು ಕೇವಲ ದಾನ ಶಾಸನವಾಗಿ ಸುಮಾರು 590 ವರ್ಷಗಳ ಹಿಂದೆ ಇದರ ರಚನೆಯಾಗಿದ್ದು ಇದರಲ್ಲಿ ಪ್ರಥಮವಾಗಿ ತೀರ್ಥಂಕರರ ಸ್ತುತಿ ಇದ್ದು ತದನಂತರ ಪೆನುಸೋಗೆ ಮೂಲದ ದೇಶಿ ಗಣಕ್ಕೆ ಸೇರಿದ ದೇವಚಂದ್ರ ಭಟ್ಟಾರಕರು ಎನ್ನುವ ಮುನಿಗಳ ಕುರಿತು ಬಿರುದು ಬಾವಲಿಗಳನ್ನು ನೀಡಿದ್ದು ಅವರ ಚರಣ ಭಕ್ತರು ಎಂಬುದಾಗಿ ಹೇಳಿ ಹೊಂಬುಜದ ಜಿನ ದತ್ತರಾಯರ ವಂಶಸ್ಥರ ಮುಂದಿನ ಪೀಳಿಗೆ ಅರಸರ ಹೆಸರು ಹಾಗೂ ಕೆಲ ಮಹಿಳೆಯರ ಹೆಸರು ದಾನ ಶ್ರೇಷ್ಠಿಗಳ ಹೆಸರು ಮತ್ತು ಮಾಣಿಕ್ಯ ಶೆಟ್ಟಿ ಎಂಬ ಶ್ರೀಮಂತ ವರ್ಧಕರ ಹೆಸರನ್ನು ಸ್ಥಾಪಿಸಲಾಗಿದೆ. ಹಿಂದೆ ಇಲ್ಲಿ ಲಲಿತಪುರ ಬ ಹೆಸರಿದ್ದು ಶಾಸನದಲ್ಲಿ ಪ್ರಸ್ಥಾಪಿಸಿದ ವ್ಯಕ್ತಿಗಳೆಲ್ಲರು ಲಲಿತ ಪುರದ ಶಾಂತಿನಾಥ ಸ್ವಾಮಿ ಬಸದಿಗೆ ಏರಳವಾಗಿ ದಾನದತಿಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಬಸದಿಯು ಇನ್ನೊಂದು ಮಹಡಿಯನ್ನು ಹೊಂದಿದ್ದು ಅಲ್ಲಿ ಪಾರ್ಶ್ವನಾಥ ಸ್ವಾಮಿಯ ಪ್ರತಿಷ್ಟೆ ಮಾಡಲಾಗಿತ್ತು ಎಂದು ಕೂಡ ಈ ಶಾಸನದ ಮೂಲಕ ತಿಳಿಯಬಹುದು. ಆದರೆ ತದನಂತರ ಅದು ಕಾಣಸಿಗುವುದಿಲ್ಲ.
ಇತ್ತೀಚೆಗೆ ಮೇಗಿನ ನೆಲೆಯಲ್ಲಿ ಮುನಿಸುವ್ರತ ತೀರ್ತಂಕರರನ್ನು ಪ್ರತಿಷ್ಠಾಪಿಸಲಾಗಿದೆ. ಇದಕ್ಕೆ ಕಾರಣಗಳು ಕೂಡ ತಿಳಿದು ಬಂದಿಲ್ಲಾ, ಈ ಬಸದಿಗೆ ಸಂಬಂಧಿಸಿದಂತೆ ಮೆಗುಂದದಲ್ಲಿ ಒಂದು ಜೈನ್ ಹೆಗ್ಗಡೆ ಮನೆತನವನ್ನು ಕೂಡ ಕಾಣಬಹುದು. ಈ ಹಿಂದೆ ಇಲ್ಲಿನ 5 ಕಿ.ಮೀ ದೂರದಲ್ಲಿರುವ ಮೇಗೂರಿನ ಶ್ರೀ ವೆಂಕಟರಮಣ ಸ್ವಾಮಿ ದೇಗುಲದ ಜಾತ್ರ ಮಹೋತ್ಸವದಲ್ಲಿ ಹೆಗ್ಗಡೆ ಮನೆಯ ಮುಖ್ಯಸ್ಥರನ್ನು ದಂಡಿಗೆಯ ಮೇಲೆ ವಿಜೃಂಭಣೆಯಿಂದ ಕರೆದೊಯ್ಯುತಿದ್ದರು ಹಾಗೂ ಆ ಮಹೋತ್ಸವದ ಮೊದಲ ಪೂಜೆ ಹೆಗ್ಗಡೆ ಮನೆತನದ ಹೆಸರಿನಲ್ಲಿ ನಡೆಯುತ್ತಿತ್ತು.
ಇತ್ತೀಚೆಗೆ ಶ್ರೀ ಪಾರ್ಶ್ವನಾಥ ಸ್ವಾಮಿಯ ಜಿನ ಬಿಂಬವನ್ನು ಕೂಡ ಇಲ್ಲಿ ಪ್ರತಿಷ್ಠಾಪಿಸಲು ಬೃಹತ್ ಮಟ್ಟದ ತಯಾರಿ ನಡೆದಿದೆ.
ಬಸದಿಯ 2 ಕಿ.ಮೀ ಅಂತರದಲ್ಲಿ ಶ್ರೀ ಪಂಚಮಿ ಕಲ್ಲು ಕ್ಷೇತ್ರವನ್ನು ಹಾಗೂ ಇಲ್ಲಿ ಹಲವಾರು ಮುನಿಗಳ ಸಮಾದಿಯನ್ನು ಕಾಣಬಹುದು. ಎಷ್ಟು ಜನರೆಂದು ಸ್ಪಷ್ಟವಾಗಿ ಕಂಡು ಬಂದಿರುವುದಿಲ್ಲ ಆದರೆ ಇಬ್ಬರು ಮುನಿಗಳ ಹೆಸರನ್ನು ಶಿಲೆಯಲ್ಲಿ ಕೊರೆದಿದ್ದು ಸ್ಪಷ್ಟವಾಗಿ ಓದಲು ಸಾದ್ಯವಾಗುವುದಿಲ್ಲ. ಪ್ರಕೃತಿಯ ದೀರ್ಘಕಲಾದ ಹೊಡೆತದಿಂದ ಶಾಸನಗಳ ಅಕ್ಷರಗಳು ಅಳಿಸಿಹೊಗಿದೆ. ಬಂಡೆಯ ಅಡಿ ಭಾಗದಲ್ಲಿ ಮಳೆ ಗಾಳಿಗಳಿಂದ ಬಿಸಿಲಿನ ಹೊಡೆತಕ್ಕೆ ಪರಾಗಲು ಗುಹೆಗಳನ್ನು ಕೂಡ ಕಾಣಬಹುದು. ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ಶ್ರೀ ಶಾಂತಿನಾಥ ಸ್ವಾಮಿಯ ಉತ್ಸವ ಜಿನ ಬಿಂಬವನ್ನು ಮಾತೆ ಪದ್ಮಾವತಿ ಅಮ್ಮನವರ ಉತ್ಸವದ ಮೂರ್ತಿಯನ್ನು ಪಂಚಮಿ ಕಲ್ಲಿಗೆ ಶ್ರಾವಕ ಶ್ರಾವಕಿಯರು ಸೇರಿ ಉತ್ಸವದ ಮೂಲಕ ಹೊತ್ತುಕೊಂಡು ಹೋಗಿ ಅಲ್ಲಿ ವಿಶೇಷ ಪೂಜೆಯನ್ನು ಹೋಮಾದಿಗಳನ್ನು ನೆರೆವೇರಿಸಿ ಪ್ರಸಾದ ಸ್ವೀಕರಿಸಿ ನಂತರ ಹಿಂತಿರುಗುವರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್
.














