ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜಗದ್ಗುರು ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮಿಗಳವರು :- ಸಧರ್ಮ ಬಂಧುಗಳೇ, ಶ್ರೀ ಕ್ಷೇತ್ರ ಸ್ವಾದಿ ದಿಗಂಬರ್ ಜೈನಮಠ ಸುಮಾರು 2ನೇ ಶತಮಾನದಿಂದ ಧರ್ಮ ಪ್ರಚಾರ ಮಾಡುತ್ತ ಇಂದಿಗೂ ಕೂಡ ತನ್ನ ಅಸ್ಥಿತ್ವವನ್ನು ಕಪಾಡಿಕೊಂಡು ಬಂದಿದೆ. ಶ್ರೀ ಕ್ಷೇತ್ರದ ಮೂಲ ನಾಯಕರಾದಂತಹ ಸುಮಾರು 18 ನೂರು ವರ್ಷ ಪ್ರಾಚೀನ ಇತಿಹಾಸವನ್ನು ಹೊಂದಿರುವಂತಹ 1008 ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಬಸದಿ ಈ ಕ್ಷೇತ್ರದ ಗರಿಮೆಯನ್ನು ಹೆಚ್ಚಿಸಿದೆ, ಆನೇಕ ಆಚಾರ್ಯರು ಉಪಾಧ್ಯಾಯರು ಸಂತರುಗಳು ತ್ಯಾಗಿಗಳು ಭಟ್ಟಾರಕರು ಶ್ರಾವಕರು ಆದಿನಾಥ ತೀರ್ಥಂಕರರು ಉಪಾಸನೆಯನ್ನು ಮಾಡಿಕೊಂಡು ಪುಣ್ಯವನ್ನ ಗಳಿಸಿರುತ್ತಾರೆ ಅಂತಹ ಒಂದು ಆದಿನಾಥ ಬಸದಿಯ ವಿಶೇಷತೆ ಎಂದು ಹೇಳಿದರೆ ಭಗವಂತನ ಅಭಿಷೇಕವನ್ನು ಮಾಡಿ ಗಂಧೋದಕವನ್ನು ಯಾರು ಧಾರಣೆ ಮಾಡುತ್ತಾರೆ ಅವರಿಗೆ ಸಂಪೂರ್ಣ ರೋಗಗಳು ಗುಣಮುಖವಾಗಿ ಅನಂತ ಸುಖವನ್ನು ಪ್ರಾಪ್ತಿಮಾಡಿಕೊಳ್ಳುತ್ತಾರೆ ಎನ್ನುವುದು ಈ ಕ್ಷೇತ್ರದ ಇತಿಹಾಸ.
ಆದಿನಾಥ ಬಸದಿ 2ನೇ ಶತಮಾನದಲ್ಲಿ ಕಟ್ಟಿದರು ಕೂಡ ತದನಂತರ ಹತ್ತನೇ ಶತಮಾನದಲ್ಲಿ ಚಾವುಂಡರಾಯನ ಮಗನಿಂದ ಜಿನ ದೇವನನಿಂದ ಈ ಬಸದಿ ಜೀರ್ಣೋದ್ಧಾರಗೊಳ್ಳುತ್ತದೆ. ತದನಂತರ 16 ನೇ ಶತಮಾನದಲ್ಲಿ ಇಲ್ಲಿಯ ರಾಜನಾಗಿರುವಂತಹ ಅರಸಪ್ಪ ನಾಯಕನಿಂದ ಬಸದಿ ಜೀರ್ಣೋದ್ಧಾರಗೊಳ್ಳುತ್ತದೆ. ನಂತರ ಬಂದಂತಹ ಸಧಾಶಿವ ನಾಯಕ ರಾಜರು ಕ್ಷೇತ್ರದ ಆದಿನಾಥ ಬಸದಿ ಜೀರ್ಣೋದ್ಧಾರ ಹಾಗೆ ದತ್ತಿಯನ್ನು ಬಿಟ್ಟು ಆದಿನಾಥ ಭಗವಂತನ ಸೇವೆಯನ್ನು ಮಾಡಿರುತ್ತಾರೆ.
ನಂತರ ಇಂದಿನ ಸ್ವಾಮೀಜಿಯವರು ಆದಿನಾಥ ಬಸದಿಯ ಜೀರ್ಣೋದ್ಧಾರವನ್ನು ಮಾಡಿಸಿ ಸಂಪೂರ್ಣ ಧರ್ಮಸಧೆಯನ್ನು ಜಾಗೃತಗೊಳಿಸಿದರು. ಬಸದಿ ಕಾಲಕಾಲಕ್ಕೆ ಜೀರ್ಣೋದ್ದಾರ ಕಂಡರು ಸಹ ಮಲೆನಾಡಿನ ಹೆಚ್ಚು ಮಳೆ ಹಾಗೂ ಬಿಸಿಲು ಮತ್ತು ಚಳಿಗೆ ಬಸದಿಯ ಮೇಲ್ಛಾವಣಿ ಕುಸಿತ ಕಂಡು, ಗರ್ಭಗುಡಿಯಲ್ಲಿ ಭಗವಂತನ ಮೇಲೆ ಮಳೆಗಾಲದಲ್ಲಿ ನೀರು ಸೋರುತ್ತಿತು. ಈ ಒಂದು ಕಾರಣಕ್ಕೆ ಫೌಂಡೇಶನ್ ಕೂಡ ಶಿಥಿಲವಾಗಿದರಿಂದ ಬಸದಿಯನ್ನು ಪುನರ್ ನಿರ್ಮಾಣ ಮಾಡಬೇಕು ಜೀರ್ಣೋದ್ಧಾರ ಮಾಡಬೇಕು ಎಂಬ ಭಾವನೆಯಿಂದ ಸರ್ಕಾರಕ್ಕೆ ಈ ವಿಷಯ ತಿಳಿಸಿದಾಗ ಸರ್ಕಾರದವರು ಬಸದಿ ಜೀರ್ಣೋದ್ಧಾರಕ್ಕೆ ಅನುಧಾನವನ್ನು ನೀಡಿದರು. ಸಮಸ್ತ ಸಧರ್ಮ ಶ್ರಾವಕ ಶ್ರಾವಕಿಯರಲ್ಲಿ ತಿಳಿಸುವುದೇನೆಂದರೆ ಆದಿನಾಥ ಬಸದಿಯನ್ನು ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ದಾರ ಮಾಡಬೇಕು ಎಂಬ ಸಂಕಲ್ಪವನ್ನ 108 ಮುನಿ ಶ್ರೀ ಪುಣ್ಯಸಾಗರ ಮಹಾರಾಜರ ಆಶೀರ್ವಾದದಿಂದ ಬಸದಿಯ ಸಂಕಲಪವನ್ನು ಮಾಡಲಾಗಿದೆ.
ಏಪ್ರಿಲ್ 12 ತಾರೀಖು ಬಸದಿಯ ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮವನ್ನ ಆಚಾರ್ಯ ಶ್ರೀ ದೇವನಂದಿ ಮಹಾರಾಜರ ಪರಮ ಶಿಷ್ಯರಾದಂತಹ ಯುಗಳ ಮುನಿಗಳಾದಂತಹ 108 ಮುನಿಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜರು 108 ಮುನಿಶ್ರೀ ಅಮರ ಕೀರ್ತಿ ಮುನಿ ಮಹಾರಾಜರ ಪಾವನ ಸಾನಿಧ್ಯ ಆಶೀರ್ವಾದದಲ್ಲಿ ಬಸದಿಯ ಜೀರ್ಣೋದ್ಧಾರವನ್ನ ಇಲ್ಲಿ ನೇರವೇರುತ್ತಿದೆ. ಅದೆ ಸಂದರ್ಭದಲ್ಲಿ ಹೊಂಬುಜ ಶ್ರೀಗಳು ಕೂಡ ಆಗಮಿಸುತ್ತಾ ಇದ್ದಾರೆ. ಎಲ್ಲರು ಕೂಡ ಈ ಒಂದು ಪೂಜೆಯಲ್ಲಿ ಆಗಮಿಸಿ ಆ ಒಂದು ಪುಣ್ಯ ಲಾಭವನ್ನ ಪ್ರಾಪ್ತಿಮಾಡಿಕೊಳ್ಳ ಬೇಕು ಎಂದು ಅಪೇಕ್ಷಿಸುತ್ತೀವಿ. ಈ ಒಂದು ಪ್ರಾಚೀನ ಬಸದಿಯನ್ನ ಜೀರ್ಣೋದ್ಧಾರ ಮಾಡುವುದಕ್ಕೆ ತನು ಮನ ಧನದ ಸಹಕಾರವವನ್ನು ನೀಡಿ ಅನಂತ ಪುಣ್ಯವನ್ನ ಪ್ರಾಪ್ತಿಮಾಡಿಕೊಳ್ಳ ಬೇಕು ಎಂದು ಅಪೇಕ್ಷಿಸುತ್ತೀವಿ. 100 ಬಸದಿಯನ್ನು ಕಟ್ಟಿಸುವುದಕಿಂತ ಒಂದು ಹಳೆಯ ಬಸದಿಯನ್ನು ಜೀರ್ಣೋದ್ದಾರ ಮಾಡಿದೆ ಅನಂತ ಪುಣ್ಯ ಲಾಭವಾಗುತ್ತದೆ ಎಂದು ಹೇಳಿ ಗುರುಗಳು ತಿಳಿಸಿರುತ್ತಾರೆ. ಬಸದಿ ಜೀರ್ಣೋದ್ದಾರಕ್ಕೆ ತಾವೆಲ್ಲರು ಸಹಕರಿಸಿ ಬಸದಿಯ ಒಂದು ಪುನರ್ ನಿರ್ಮಾಣವನ್ನ ಸಂಪೂರ್ಣ ಶಿಲಾಮಯವಾಗಿ ಮಾಡೋಣ ಎಂಬ ಭಾವನೆಯನ್ನು ಮಾಡುತ್ತ ಎಲ್ಲರಿಗೂ ಶುಭವಾಗಲಿ ಎಂದು 12 ತಾರೀಖಿಗೆ ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಈ ಪೂಜೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿಗೊಳಿಸ ಬೇಕು ಎಂದು ತಮ್ಮಲಿ ಅಪೇಕ್ಷಿಸುತ್ತೇನೆ ಎಲ್ಲರಿಗು ಶುಭಾಶೀರ್ವಾದಗಳು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














