ಕಾರ್ಕಳ ಮಠದ ಬಸದಿ / KARKALA MATADA BASADI PROMO JM / jwalamalanews / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಶ್ರೀ ಜೈನ ಮಠ ದಾನಶಾಲೆ, ಕಾರ್ಕಳ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಧಾಮ ಸಂಪ್ರೋಕ್ಷಣ ಮತ್ತು ಶ್ರೀ ಮಠದ ನೂತನ ಕಟ್ಟಡದ ಪ್ರವೇಶೋತ್ಸವ

ಸಧರ್ಮ ಬಂಧುಗಳೇ  ಭೈರವದೇವ ಅರಸರಿಂದ  ಸ್ಥಾಪನೆಯಾದ ಪ್ರಾಚೀನ ಕಾರ್ಕಳ  ಶ್ರೀ ಜೈನ ಮಠ, ಶಿಥಿಲಗೊಂಡ ಕಾರಣ ಪೀಠಾದೀಶರಾಗಿರುವ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚರ್ಯವ್ಯ ಮಹಾಸ್ವಾಮಿಗಳು ಜೈನ ಮಠ, ದಾನಶಾಲೆ ಕಾರ್ಕಳ ಇವರ ಅಪೇಕ್ಷೆಯನ್ನು ಸಾಕಾರಗೊಳಿಸುವ ದೃಷ್ಠಿಯಿಂದ  ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಮತ್ತು ಜೈನ ಸಮಾಜ ಬಾಂಧವರ ಸಹಯೋಗದೊಂದಿಗೆ  ಸುಂದರವಾದ ವಿಶಾಲವಾದ ಹಾಗೂ ಆಗಮೋಕ್ತ ಪದ್ದತಿಯಂತೆ ವಾಸ್ತು ವಿನ್ಯಾಸ ಹೊಂದಿರುವ ಮಠದ ನೂತನ ಕಟ್ಟಡದ ನಿರ್ಮಾಣ ಕಾರ್ಯವು ದಿನಾಂಕ 20/8/2022 ರಂದು ಶಿಲಾನ್ಯಾಸ ಪೂರ್ವಕ ಪ್ರಾರಂಭಗೊಂಡು ಇದೀಗ  ಲೋಕಾರ್ಪಣೆಗೆ ಸಿದ್ದವಾಗಿದೆ. ಪರಮಪೂಜ್ಯ 108 ಅಮೋಘಕೀರ್ತಿ ಮುನಿಮಹಾರಾಜರು ಮತ್ತು 18 ಅಮರಕೀರ್ತಿ ಮುನಿಮಹಾರಾಜರ ಪರಮಪೂಜ್ಯ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು  ಶ್ರೀ ಜೈನಮಠ ಕಾರ್ಕಳ ಇವರ ಸಾನಿಧ್ಯ ಹಾಗೂ ಮಾರ್ಗದರ್ಶನ ಮತ್ತು ಸಮಸ್ತ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಜೈನಮಠ ನೂತನ ಕಟ್ಟಡದ ಪ್ರವೇಶೋತ್ಸವ  ಕಾರ್ಯಕ್ರಮ . ದಿನಾಂಕ 24/01/224 ರಿಂದ 26/01/2024 ರವರೆಗೆ  ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ. ಶ್ರೀ ಮಠದ ನೂತನ ಕಟ್ಟಡದ  ಪ್ರವೇಶೋತ್ಸವದ  ದಿನಾಂಕ 25/01/2024 ನೇ ಗುರುವಾರದಂದು  ಮಧ್ಯಾಹ್ನ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಪರಮಪೂಜ್ಯ ಯುಗಳ ಮುನಿಮಹಾರಾಜರುಗಳು ಪಾವನ ಸಾನಿಧ್ಯ ವಹಿಸಲಿದ್ದು ಸಮಸ್ತ ಭಟ್ಟಾರಕರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ರಾಜರ್ಷಿ ಡಾ|| ಡಿ. ವೀರೇಂದ್ರ ಹೆಗಗಡೆಯವರು  ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ  ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವರು ಉಡುಪಿ ಜಿಲ್ಲೆ ,ಕರ್ನಾಟಕ ಸರ್ಕಾರ . ಮತ್ತು ಶ್ರೀ ವಿ. ಸುನೀಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ.ಇವರುಗಳು ಪಾಲ್ಗೊಳ್ಳಲಿದ್ದು ಗೌರವ ಉಪಸ್ಥಿತಿಯಲ್ಲಿ  ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಧರ್ಮಸ್ಥಳ , ಶ್ರೀ ಡಿ. ಸುರೇಂದ್ರ ಕುಮಾರ್ ಧರ್ಮಸ್ಥಳ, ಶ್ರೀ ಹರ್ಷೇಂದ್ರ ಕುಮಾರ್ ಧರ್ಮಸ್ಥಳ , ಶ್ರೀ ಕೆ. ಅಭಯ್ ಚಂದ್ರ ಜೈನ್ ಮಾಜಿ ಸಚಿವರು, ಕರ್ನಾಟಕ ಸರ್ಕಾರ,  ಡಾ|| ಎಂ. ಎನ್ ರಾಜೇಂದ್ರ ಕುಮಾರ್ , ಕಾರ್ಕಳ ಅಧ್ಯಕ್ಷರು, ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಶ್ರೀ ಎಂ.ಕೆ ವಿಜಯ್ ಕುಮಾರ್  ನ್ಯಾಯವಾದಿಗಳು ಕಾರ್ಕಳ. ಶ್ರೀ ಪುಷ್ಪರಾಜ್ ಜೈನ್ ಅಬೀಷ್ ಬಿಲ್ಡರ್ಸ್ ಮಂಗಳೂರು. ಇವರುಗಳು ಪಾಲ್ಗೊಳ್ಳಲಿದ್ದಾರೆ.

ಈ ಸಮಾರಂಭಕ್ಕೆ ತಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇವೆ. ಅಧ್ಯಕ್ಷರು ಮತ್ತು ಸದಸ್ಯರುಗಳು, ನೂತನ ಕಟ್ಟಡ ನಿರ್ಮಾಣ ಸಮಿತಿ, ಜೈನ ಮಠ ಕಾರ್ಕಳ. ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿಯವರಾದ ಶ್ರೀ ಧನಕೀರ್ತಿ ಕಡಂಬರವರು ಹಾಗೂ ಧರ್ಮಸ್ಥಳದ  ಧರ್ಮಾಧಿಕಾರಿಗಳವರ ಆಪ್ತ ಕಾರ್ಯದರ್ಶಿಯವರಾದ ಶ್ರೀ ಎ. ವೀರುಶೆಟ್ಟಿರವರು  ಮುತುವರ್ಜಿ ವಹಿಸಿ ಸೇವೆ ಸಲ್ಲಿಸುತ್ತಿದ್ದು ಕಾರ್ಯಕ್ರಮವು ಜ್ವಾಲಾಮಾಲಾ ಡಾಟ್ ನ್ಯಾಸ್ ನಲ್ಲಿ  ನೇರ ಪ್ರಸಾರಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ  ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜೈನ ಮಠ ಕಾರ್ಕಳ  ಇವರ ಅಪೇಕ್ಷೆಯಾಗಿದೆ.