ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಐತಿಹಾಸಿಕ ಪುಣ್ಯ ತೀರ್ಥಕ್ಷೇತ್ರ ಕಾರ್ಕಳ, ಪ್ರಕೃತಿಯ ರಮಣೀಯ ಸಾದೃಶ್ಯ ಧಾರ್ಮಿಕ ಆಧ್ಯಾತ್ಮಿಕ ಶ್ರದ್ಧಾ ಭಕ್ತಿಗೆ ಸಧಾ ಸೂಚನೆಗೆಯುವ ಅಪೂರ್ವ ತಾಣ 18 ಜೈನ ಚೈತ್ಯಾಲಯಗಳ ನಿರ್ಮಾಣವು ಭೈರವ ಅರಸ ಪರಂಪರೆಯ ಧಾರ್ಮಿಕ ಮನೋಧರ್ಮವನ್ನು ಮತ್ತೆ ಮತ್ತೆ ನೆನಪಿಸುವಂತಿದೆ ಕರಿಕಲ್ಲಿನ ನಾಡು ಕಾರ್ಕಳ ಕಾರ್ಕಳದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಭಗವಾನ್ ಬಾಹುಬಲಿಯ ಕಪ್ಪು ಶಿಲೆಯ ಏಕ ಶಿಲಾ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಜೈನ ಬಸದಿಗಳನ್ನು ವಿಶಿಷ್ಟ ವಾಸ್ತು ಶೈಲಿಗಳಲ್ಲಿ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸಿರುವುದು ವಿಶೇಷ. ಜೈನ ಧರ್ಮದ ಪರಂಪರೆಯಲ್ಲಿ ಗುರುಗಳಿಗೆ ಪ್ರಥಮ ಸ್ಥಾನವನ್ನು ಕಲ್ಪಿಸಲಾಗಿದೆ. ಲಲಿತ ಕೀರ್ತಿ ಪೀಠದಲ್ಲಿ ಭಟ್ಟಾರಕ ಸ್ವಾಮೀಜಿಗಳವರು ಪೀಠಾಧ್ಯಕ್ಷರಾಗಿರುತ್ತಾರೆ. ಸುಮಾರು ಒಂದು ಸಾವಿರ ವರ್ಷಗಳಿಗೂ ಮಿಕ್ಕಿದ ಅವಧಿಯಲ್ಲಿ ರಾಜಾಶ್ರಯ ಪಡೆದ ಕಾರ್ಕಳ ರಾಜರ ಗುರುಗಳಾದ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಶುಭಾಶೀರ್ವಾದ ಪ್ರೇರಣೆ ಮಾರ್ಗದರ್ಶನದಿಂದ ಜಿನ ಮಂದಿರಗಳ ನಿರ್ಮಾಣ ಹಾಗೂ ಪಂಡಿತರಿಗೆ ಕವಿಗಳಿಗೆ ಮನ್ನಣೆಯೂ ದೊರೆಯುತ್ತೆಂಬುವುದು ದಾಖಲಾರ್ಹ ಸಂಗತಿಯಾಗಿದೆ.
ಕಾರ್ಕಳ ಶ್ರೀ ಮಠದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಕೂಷ್ಮಾಂಡಿನಿ ದೇವಿಯನ್ನು ನಿತ್ಯವು ಆರಾಧಿಸುವ ಬಸದಿ ಇದೆ. ರಟ್ಟೇಶ್ವರಿ ಮತ್ತು ಕಲ್ಕುಡ ದೈವಗಳಿಗೂ ಸ್ಥಾನವಿದೆ. ಶ್ರೀಮಠದ ವ್ಯಾಪ್ತಿ ಹೆಚ್ಚಿದರು ಸ್ಥಿರಾಸ್ತಿ ಇದ್ದರು ಶ್ರೀ ಮಠದ ನಿರ್ಮಾಣವನ್ನು ಕಳೆದ ಶತಮಾನದಲ್ಲಿ ಸುಕ್ಷ್ಮವಾಗಿ ಮಾಡಲಾಗಿತ್ತು. ಇಲ್ಲಿನ ಶ್ರೀ ಮಠ ಶಿಥಿಲಗೊಂಡ ಕಾರಣದಿಂದಲು ಸ್ಥಳಾವಕಾಶದ ದೃಷ್ಠಿಯಿಂದಲು ಕಿರಿದಾಗಿರುತ್ತದೆ. ಹಾಗಾಗಿ ಶ್ರೀ ಜೈನ ಮಠದ ಪೀಠಾಧಿಪತಿಗಳಾದ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಅಪೇಕ್ಷೆಯಂತೆ ಮಠವನ್ನು ವಿನೂತನ ವಾಸ್ಥುಶೈಲಿಯಲ್ಲಿ ನಿರ್ಮಿಸಲು ಜೈನ ಸಮಾಜದ ಮಹಾನಿಯರೊಂದಿಗೆ ಹಾಗೂ ಗಣ್ಯರೊಂದಿಗೆ ಸಮಾಲೋಚಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಂಪೂರ್ಣ ಮುತುವರ್ಜಿ ವಹಿಸಿ ಮಾರ್ಗದರ್ಶನ ನೀಡಿ ಸುಂದರವಾದ ಆಗಮೋಕ್ತ ಪದ್ಧತಿಯಂತೆ ವಾಸ್ತು ವಿನ್ಯಾಸ ಹೊಂದಿರುವ ಮಠದ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಪ್ರಸ್ತುತ ನೂತನ ಮಠದ ನಿರ್ಮಾಣದ ಸಂಕಲ್ಪ ಅನುಷ್ಠಾನಗೊಳ್ಳಲು ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಈ ಬಗ್ಗೆ ಮಾತನಾಡಿದ್ದಾರೆ.
( ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಾತನಾಡಿ :- ಕಾರ್ಕಳ ಕ್ಷೇತ್ರದಲ್ಲಿ ಬೈರವರಸರ ವಂಶ ನೆಲೆಯೂರಿ ಬಹಳಷ್ಟು ದೊಡ್ಡ ಧರ್ಮ ಪ್ರಭಾವನೆ ಮಾಡಿದ್ದಾರೆ. ಬೈರವರಸರ ವಂಶ ಪಾರಂಪರೆ ಮುಂದೆ ರಕ್ಷಣೆಯಾಗಬಹುದು ಎಂಬ ದೃಷ್ಟಿಯಿಂದ ಸುತ್ತಮುತ್ತ ಇಲ್ಲಿನ ಜೈನ ಸಮಾಜದವರು ಪ್ರತ್ಯೆಕವಾಗಿ ಕಟ್ಟಿರುವುದರಿಂದ 18 ಜಿನ ಮಂದಿರಗಳು ಇಲ್ಲಿ ಸ್ಥಾಪನೆಯಾಯಿತು. ನಂತರ ಇದನ್ನು ಮುಂದುವರೆಸಿ ಕೊಂಡು ಸಮಾಜ ಮತ್ತು ಸಂಘ ಸಂಸ್ಥೆಗಳು ಹೋದವು. ಈ ಮಠ ಬಹಳ ಪುರಾತನವಾದ್ದರಿಂದ ಅದನ್ನು ಪುನರ್ ಜೀರ್ಣೋದ್ಧಾರ ಮಾಡ ಬೇಕಾದ ಸಂದರ್ಭದಲ್ಲಿ ಎಲ್ಲರಿಗೂ ತಿಳಿಸಿ ಧರ್ಮಸ್ಥಳದ ರಾಜರ್ಷಿ ಡಾ|| ವೀರೇಂದ್ರ ಹೆಗ್ಗಡೆಯವರು ಬಹಳ ದೊಡ್ಡ ಉದ್ದೇಶ ಇಟ್ಟುಕೊಂಡು ಎಲ್ಲರನ್ನು ಸೇರಸಿಕೊಂಡು ಮಠಗಳ ಜೀರ್ಣೋದ್ಧಾರ ಪ್ರಾರಂಭಿಸಿದ್ದಾರೆ. ಎಂದು ತಿಳಿಸಿ ಮಠದ ವಾಸ್ತು ಶಿಲ್ಪಗಳ ಬಗ್ಗೆ ವಿವರಿಸಿದರು.)
ಶ್ರೀಗಳವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಸಲಹೆ ಸಹಕಾರ ಬಯಸಿ ನೂತನ ಮಠದ ರೂಪುರೇಶಿ ಪಡೆದಿದ್ದಾರೆ. ಹಾಗೂ ಪೂಜ್ಯ ಕಾವಂದರಿಗೆ ಶ್ರೀ ಮಠದೊಂದಿಗೆ ಇರುವ ನಿಕಟ ಬಾಂಧವ್ಯದ ಬಗ್ಗೆ ಸ್ವತಃ ಅವರೆ ಹೇಳಿದ್ದಾರೆ ಒಮ್ಮೆ ನೋಡಿಬರೋಣ.
(ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು :- ಜೈನ ಸಮಾಜದಲ್ಲಿ ಒಂದೊಂದು ಕ್ಷೇತ್ರವನ್ನ ಕೆಲವು ಮಠಗಳಿಗೆ ಸಂಪರ್ಕ ಇಟ್ಟುಕೊಂಡು ಆ ಮಠದ ಭಟ್ಟಾರಕರು ಮಾರ್ಗದರ್ಶನ ಕೊಟ್ಟು ಜೈನ ಧರ್ಮವನ್ನು ರಕ್ಷಿಸ ಬೇಕು ಜೈನ ಕ್ಷೇತ್ರವನ್ನು ರಕ್ಷಿಸ ಬೇಕು ಜೈನ ಧರ್ಮಿಯರಿಗೆ ಮಾರ್ಗದರ್ಶನ ಕೊಡುತ್ತ ಬರಬೇಕು ಎಂಬ ಪದ್ದತಿ ಇತ್ತು. ಧರ್ಮಸ್ಥಳ ಕ್ಷೇತ್ರ ಕಾರ್ಕಳ ಶ್ರೀಮಠಕ್ಕೆ ಸಂಬಂಧಪಟ್ಟದ್ದಾಗಿರುವುದರಿಂದ ಎಲ್ಲ ಕಾರ್ಯಗಳಲು ಕೂಡ ಕಾರ್ಕಳದ ಶ್ರೀ ಮಠದ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ. ಮಠ ದುರ್ಬಲವಾಗಿ ಜೀರ್ಣವಾಗಿದಾಗ ದೈವ ಪ್ರೇರನೆಯಂತೆ ಈ ಜೈನ ಮಠವನ್ನು ನನ್ನ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿಯ ಎಲ್ಲ ಸದಸ್ಯರು ಸೇರಿ ಜೀರ್ಣೋದ್ಧಾರಮಾಡಲಾಗಿದೆ. ಮುಂದಿ 24 ಜನವರಿ ಇಂದ 26 ರವರೆಗೆ ಮೂರು ದಿನಗಳ ಕಾಲ ಈ ಜೈನ ಮಠದ ಜೀರ್ಣೋದ್ದಾರದ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರು ಬಂದು ಭಾಗವಹಿಸ ಬೇಕು ಪೂಜ್ಯ ಶ್ರೀಗಳವರ ಆಶೀರ್ವಾದ ಪಡೆಯ ಬೇಕು ಎಲ್ಲರಿಗೂ ಸ್ವಾಗತವನ್ನು ಬಯಸುತ್ತೇನೆ. ಜನವರಿ ತಿಂಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ತಾವೇಲ್ಲರು ಬಂದು ಭಾಗವಹಿಸ ಬೇಕು ಜೈನ ಮಠಕ್ಕೆ ಬೆಂಬಲ ಕೊಡ ಬೇಕು ಮುಂದಿನ ದಿನಗಳಲ್ಲಿ ಕಾರ್ಕಳದ ಜೈನ ಮಠ ಸಮಸ್ತ ಜೈನ ಸಮಾಜಕ್ಕೆ ಮಾರ್ಗ ದರ್ಶನ ಕೊಡುತ್ತಾ ಇರಬೇಕು ಎಂದು ಆಶಿಸುತ್ತೇನೆ ಪೂಜ್ಯ ಭಟ್ಟರಕರ ಪರವಾಗಿ ಆಹ್ವಾನಿಸಿದರು.)
ನಿರಂತರ ಊಟೋಪಚಾರ ವ್ಯವಸ್ಥೆಗೂ ಹೊಸ ಮಠ ಸಮುಚ್ಚಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಶ್ರೀ ಮಠದ ಪಕ್ಕದಲ್ಲಿ ಶ್ರಾವಿಕಾಶ್ರಮವು ವಿಧ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಅವಕಾಶ ಕಲ್ಪಿಸಿದೆ. ಇಲ್ಲಿನ ಶ್ರೀಮಠದಿಂದ ಸಮಾಜಮುಖಿ ಅಭಿವೃದ್ಧಿ ಕಾರ್ಯಗಳು ಸಾಮರಸ್ಯ ಭಾವದಿಂದ ಈಡೇರುತ್ತಿರುವುದು ಗಮನಾರ್ಹವಾದುದು. ಈಗಾಗಲೆ ಯಾತ್ರಿಕರ ಅನುಕುಲತೆಗಾಗಿ ಶ್ರೀ ಮಠದ ನಿರ್ವಹಣೆಯಲ್ಲಿರುವ ಯಾತ್ರಿನಿವಾಸ ಛತ್ರದ ವ್ಯವಸ್ಥೆಯು ಸಹಕಾರಿಯಾಗಿದೆ. ಕಟ್ಟಡದ ನಿರ್ಮಾಣದ ಜವಾಬ್ಧಾರಿಯನ್ನು ವಹಿಸಿಕೊಂಡಿರುವ ಪುಷ್ಪರಾಜ್ ಜೈನ್ ರವರು ಮಾತನಾಡುತ್ತ (ಪರಂಪರೆ ಹಾಗೂ ಆಧುನಿಕತೆಯ ದೃಷ್ಠಿಯಿಂದ ಈ ಕಟ್ಟಡವನ್ನು ನೂರಾರು ವರ್ಷಗಳ ದೃಷ್ಠಿಇಟ್ಟು ನಿರ್ಮಿಸಲಾಗಿದೆ. ಸುತ್ತು ಮಾದರಿಯ ಸಂಕೀರ್ಣದಿಂದ ಕೂಡಿದ್ದು ಅದರಲ್ಲಿ ಗರ್ಭ ಗುಡಿ ಯಕ್ಷಿಮಂಟಪ ಮತ್ತು ನಮಸ್ಕಾರ ಮಂಟಪ ಇರುವ ಒಂದು ಉತ್ತಮ ಜಿನ ಮಂದಿರ. ಮುಂಭಾಗದಲ್ಲಿ ಸ್ವಾಗತ ಕಛೇರಿ ವಿಶಾಲವಾದ ಧರ್ಮ ಚಾವಣಿ ಇದ್ದು ಈಶಾನ್ಯ ಭಾಗದಲ್ಲಿ ಗ್ರಂಥಾಲಯ ಹಾಗೂ ಧ್ಯಾನ ಕೊಠಡಿ ಇರುತ್ತದೆ. ಭದ್ರತೆಯ ದೃಷ್ಠಿಯಿಂದ ಎತ್ತರದ ಕಾಂಪೌಡ್ ಅನ್ನು ನಿರ್ಮಾಣವಾಡಲಾಗಿದೆ ಎಂದು ಹಾಗೂ ಇನ್ನೂ ಹಲವು ಜಿನ ಮಂದಿರದ ವಿನ್ಯಾಸವನ್ನು ವಿವರಿಸಿದರು.)
ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ|| ಹೇಮಾವತಿ ವೀರೇಂದ್ರ ಹೆಗ್ಗಡೆಯವರು ಮಾತೃಶ್ರೀ ರತ್ನಮ್ಮನವರ ಅಪೇಕ್ಷೆಯನ್ನು ಇಡೈರಿಸುತ್ತಿದ್ದಾರೆ. ಶ್ರೀ ಜೈನ ಮಠಕ್ಕೆ ನೂತನ ಕಟ್ಟಡ ನಿರ್ಮಾಣವು ಧರ್ಮ ಕಾರ್ಯಗಳಿಗೆ ಕೇಂದ್ರವಾಗಲಿದೆ. ಶ್ರೀ ಚಂದ್ರನಾಥಸ್ವಾಮಿ ಶ್ರೀ ಕೂಷ್ಮಾಂಡಿನಿ ದೇವಿ ಬಸದಿ ಆಗಮೋಕ್ತ ವಾಸ್ತು ಶಿಲ್ಪ ಶಾಸ್ತ್ರಕ್ಕನುಗುಣವಾಗಿ ನಿರ್ಮಾಣಗೊಂಡು ಮಾದರಿ ಗುರುಮಠವಾಗಿ ಭಕ್ತರ ನಿರೀಕ್ಷೆಗಳಿಗೆ ಪೂರಕವಾಗಿರಲಿ ಅಭಿವೃದ್ಧಿಯ ಸಂಕೇತವಾಗಿರಲಿ ಎಂಬುವುದು ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಮುಂದಿನ ಪೀಳಿಗೆಯ ಜೈನ ಶ್ರಾವಕ ಶ್ರಾವಕಿಯರಿಗೆ ಜಿನ ಧರ್ಮಪಥದ ವಾತ್ಸಲ್ಯ ದಾರಿ ದೀಪವಾಗಲಿ ಎಂಬ ಶುಭ ಸಂಕಲ್ಪ ಮಾಡೊಣ್ಣ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














