ಪಂಚ ಪರಮೇಷ್ಠಿ ವಿಧಾನ ಮೈಸೂರು/ ಜ್ವಾಲಾಮಾಲಾ ನ್ಯೂಸ್ / 2023

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ಬಿ ಜೆ ಸತ್ಯಪ್ರೇಮ ಬೆಂಗಳೂರು ಇವರ ಪ್ರಯೋಜಕತ್ವದಲ್ಲಿ ಮೈಸೂರಿನ ಕೋಟೆ ಶ್ರೀ ಶಾಂತಿನಾಥ ಬಸದಿಯಲ್ಲಿ ಪದ್ಮಶ್ರೀ ಜೈನ ಮಹಿಳಾ ಸಮಾಜದ ಹಾಗೂ ದಿಗಂಬರ ಜೈನ ಸಮಾಜ ಮತ್ತು ಚಾತುರ್ಮಾಸದ ಉಪಸಮಿತಿ ಸಹಯೋಗದೊಂದಿಗೆ ಪಂಚಪರಿಮೇಷ್ಠಿ ವಿಧಾನವನ್ನ ಶ್ರೀ 108 ಪ್ರಗಲ್ಬ ಸಾಗರ ಮುನಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಸ್ವಸ್ತಿಶ್ರೀ ಡಾ|| ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಸ್ವಾಮೀಜಿಯವರು ಮೂಡುಬಿದ್ರೆ. ಇವರ ಪಾವನ ಸಾನಿಧ್ಯದಲ್ಲಿ ಸಂಪನ್ನಗೊಳಿಸಲಾಯಿತು.

ಮೈಸೂರಿನ ಧರ್ಮ ಬಂಧುಗಳು ಪೂಜಾ ಕಾರ್ಯದಲ್ಲಿ ಆರಾಧನೆಯಲ್ಲಿ ಭಾಗವಹಿಸಿದರು. ಪ್ರಯೋಜಕರಾದ  ಬಿ ಜೆ ಸತ್ಯಪ್ರೇಮ ರವರ ಕುಟುಂಬ ವರ್ಗದವರು ಎಲ್ಲರೂ ಭಾಗವಹಿಸಿ ಆರಾಧನೆ ಯಶಸ್ವಿಯಾಯಿತು.

ಪದ್ಮಶ್ರೀ ಜೈನ ಮಹಿಳಾ ಸಮಾಜದ ಸದಸ್ಯರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಸ್ವಸ್ತಿಶ್ರೀ ಡಾ|| ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಸ್ವಾಮೀಜಿಯವರು ಮಾತನಾಡಿ ತೀರ್ಥಂಕರರ ಗುಣಗಳನ್ನು ಕುರಿತು ವಿವರಿಸುದರು ಹಾಗೂ  ಪಂಚಪರಿಮೇಷ್ಠಿ ಪೂಜಾವಿಧಾನವನ್ನು ಮತ್ತು  ಪೂಜಾ ಮಹತ್ವವನ್ನು ತಿಳಿಸಿದರು.

ನಂತರ ಮುನಿ ಶ್ರೀ 108 ಶ್ರೀ ಪ್ರಗಲ್ಬ ಸಾಗರ ಮುನಿ ಮಹಾರಾಜರ ಪ್ರವಚನಾ ಕಾರ್ಯಕ್ರಮ ನಡೆಯಿತು.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್