ಬಸದಿ ಹೊಸಕೋಟೆ ಯುಗಲಮುನಿ ಪುರಪ್ರವೇಶ/ ಜ್ವಾಲಾಮಾಲನ್ಯೂಸ್ / 2023

ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಜೈ ಜಿನೇಂದ್ರ ವೀಕ್ಷಕರೇ,

ಮಂಡ್ಯ ಜಿಲ್ಲೆಯ ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ಕ್ಷೇತ್ರ  ಸಂಪೂರ್ಣ ಜೀರ್ಣೋದ್ದಾರ ಕಾರ್ಯ  ಪರಮಪೂಜ್ಯ ಯುಗಳ ಮುನಿಮಹಾರಾಜರುಗಳ ಮಾರ್ಗದರ್ಶನದಲ್ಲಿ ಸಮಿತಿ ರಚನೆಯಾಗಿದ್ದು  ಶ್ರೀ ಡಿ. ಸುರೇಂದ್ರಕುಮಾರ್ ರವರ ಅಧ್ಯಕ್ಷತೆಯಲ್ಲಿ  ನೆರವೇರಿಸಲಾಗುತ್ತಿದೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ತಮ್ಮ 25 ನೇ ಚಾತುರ್ಮಾಸ ಆಚರಿಸಲು  ವಿಹಾರ ಕೈಗೊಂಡಿರುವ ಯುಗಳ ಮುನಿಮಹಾರಾಜರು ಮಾರ್ಗಮಧ್ಯದಲ್ಲಿ ಬಸದಿ ಹೊಸಕೋಟೆಯಲ್ಲಿ ವಾತ್ಸವ್ಯ ಹೂಡಿ  ಜೀರ್ಣೋದ್ದಾರ ಪ್ರಗತಿ  ವೀಕ್ಷಿಸಲು  ಪುರಪ್ರವೇಶಗೈದ ಈ  ಸಂದರ್ಭದಲ್ಲಿ  ಭಗವಾನ್ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ  ನೆರವೇರಿಸಲಾಯಿತು. ಟ್ರಸ್ಟ್ ನ  ಪದಾದಿಕಾರಿಗಳು ಹಾಗೂ ಸುತ್ತಮುತ್ತಲಿನ  ಮೈಸೂರು , ಬೆಂಗಳೂರು, ತುಮಕೂರು, ಮಂಡ್ಯ , ಪಾಂಡವಪುರ, ಸಾಲಿಗ್ರಾಮ ಹಾಗೂ ಇನ್ನೂ ಹಲವಾರು ಕಡೆಯಿಂದ ಭಕ್ತಾದಿಗಳು ಅಭಿಷೇಕದಲ್ಲಿ ಪಾಲ್ಗೊಂಡು ಪುನೀತರಾದರು.