ಜಿನಬಜನ

ಸೆಪ್ಟೆಂಬರ್ 18ರ 2016 ರಂದು ನಡೆದ ವಲಯ 8 ಪದಾದಿಕಾರಿಗಳ ನಿರ್ದೇಶಕರುಗಳ ಕಾರ್ಯಗಾರದಲ್ಲಿ ಮಹಿಳಾ ವಿಭಾಗದ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ರವರು ಪ್ರಪ್ರಥಮ ಬಾರಿಗೆ ತಮ್ಮ ಯೋಜನೆಯೊಂದನ್ನು ಪ್ರಕಟಗೊಳಿಸಿದರು. ಅದುವೇ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ. ಅದರ ಉದ್ದೇಶ ಬಹಳ ಉನ್ನತವಾಗಿದ್ದು ಈಮೂಲಕ ಜೈನ ಸಮಾಜವನ್ನು ಸಂಘಟಿಸಬೇಕು ಹಾಗೂ ನಶಿಸಿ ಹೋಗುತ್ತಿರುವ ಪ್ರಾಚೀನ ಜೈನ ಪರಂಪರೆಯ ಜಿನ ಭಜನೆಯನ್ನು ಮತ್ತೊಮ್ಮೆ ಜಾರಿ ಮಾಡಬೇಕೆಂಬುದು ಅವರ ಆಶಯ.

 

ಜೈನ್ ಮಿಲನ್ ಸಂಸ್ಥೆಯ ಮೂಲಕ ಪ್ರತಿ ಊರಿನಲ್ಲೂ ಜೈನ ಭಾಂದವರು ಭಜನಾ ಮಂಡಳಿಗಳನ್ನು ಮಾಡಿ ಮುಂದೆ ಪ್ರತಿದಿವಸ ಹಾಡುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕು ಎಂಬುದು ಅವರ ಆಶಯವಾಗಿದೆ. ಅವರ ಈ ಉನ್ನತ ಮಟ್ಟದ ಯೋಜನೆಗೆ ರಾಜ್ಯದೆಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಎಲ್ಲಾ ದಿವಿಜನ್ ರವರು ಕೂಡ ಸೇರಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದ್ದಾರೆ. ಮಕ್ಕಳಲ್ಲೂ ಕೂಡ ಜಿನ ಭಕ್ತಿ ಗೀತೆಯನ್ನುಕೂಡ ಕಲಿಯಲು ಆಸಕ್ತಿ ಮೂಡಿಸಬೇಕು.  ಈ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ 5 ವಿಭಾಗದಲ್ಲಿ  ಸ್ಪರ್ಧೆ ನಡೆಯುತ್ತಿದ್ದು,13/11/2016 ರಂದು ಮಂಗಳೂರು ವಿಭಾಗದಲ್ಲಿ ವಿಜೃಂಭಣೆಯಿಂದ ನಡೆಯಿತು. ಅಲ್ಲಿನ  ಸಮಾರಂಭದಲ್ಲಿ ವಲಯದ ಕಾರ್ಯಾಧ್ಯಕ್ಷರಾದ ವೀರ್ ಕೇರ್ ಪ್ರಸನ್ನ ಕುಮಾರ್, ದಿಲೀಪ್ ಕುಮಾರ್ ಜೈನ್, ಪುಷ್ಪರಾಜ್ ಜೈನ್ ರವರು ಉಪಸ್ಥಿತರಿದ್ದರು. ಅಲ್ಲಿನ ವಿಭಾಗದ  40 ಭಜನಾ ಮಂದಳಿಗಳು ಭಾಗವಹಿಸಿದ್ದವು.  4 ಗುಂಪುಗಳನ್ನು ಅಂತಿಮ ಸುತ್ತಿಗೆ  ಆಯ್ಕೆ ಮಾಡಲಾಯಿತು.

 ಹಾಗೇ 27/11/2016 ರಂದು ಧಾರವಾಡದಲ್ಲಿ ಅತಿ ಸಂಭ್ರಮದಿಂದ  ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಲಯ  ಎಂಟರ್ ಅಧ್ಯಕ್ಷ ರಾದ ವಲಯ ವೀರ್ ಅಜ್ಜಪ್ಪಾಜಿ ರವರು , ಕಾರ್ಯದರ್ಶಿಗಳಾದ ಸುಮತಿ ಕುಮಾರ್ ರವರು ಹಾಗೂ ಎನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು . ಇಲ್ಲಿನ ಸ್ಪರ್ಧೆಯಲ್ಲಿ 18 ಭಜನಾ ಮಂದಳಿಗಳು ಭಾಗವಹಿಸಿದ್ದು, 4 ಗುಂಪುಗಳನ್ನುಅಂತಿಮ ಸುತ್ತಿಗೆ ಪರಿಗಣಿಸಲಾಯಿತು. 

ಮುಂಬರುವ ಡಿಸೆಂಬರ್4 ರಂದು ದಾವಣಗೆರೆ ವಿಭಾಗದ ಸ್ಪರ್ಧೆಯನ್ನು ಶಿವಮೊಗ್ಗದಲ್ಲೂ,ಬೆಂಗಳೂರು ವಿಭಾಗದ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಹಾಗೈ ಮೈಸೂರು ವಿಭಾಗದ ಸ್ಪರ್ಧೆಯನ್ನು ಡಿಸೆಂಬರ್ 25 ರಂದು ಮೈಸೂರಿನಲ್ಲಿ ನಡೆಸಲಾಗುವುದು. ಅವುಗಳ ವರದಿಯನ್ನು ಮುಂದಿನ ದಿನಗಳಲ್ಲಿ ವೀಕ್ಷಿಸಲಿದ್ದೀರಿ.

ಅಂತಿಮ ಸುತ್ತಿನ ಸ್ಪರ್ಧೆಯನ್ನು2017 ರ 7 ಮತ್ತು 8 ರಂದು ವೈಭವಯುತವಾಗಿ ನಡೆಸಲಾಗುತ್ತಿದ್ದು, ತಾರಾ ಬಳಗದವರ ಉಪಸ್ಥಿತಿಯು ಇರುತ್ತದೆಂದು ಅನಿತಾ ಸುರೇಂದ್ರ ರವರು  ಹೇಳಿದ್ದಾರೆ. ಒಟ್ಟನಲ್ಲಿ ಒಳ್ಳೆಯ ಕಾರ್ಯಗಳಿಗೆ ಮನಸ್ಸಿನೊಂದಿಗೆ ಯೋಜನೆಗಳ ಮುಖಾಂತರ  ಕಾರ್ಯರೂಪಕ್ಕೆ ತರಬೇಕಾಗಿರುವುದು ಅವಶ್ಯ ಎಂಬ ವಿಚಾರವನ್ನುಇಂತಹ ಒಳ್ಳೆಯ ಕೆಲಸಗಳು ನಿರೂಪಿಸುತ್ತವೆ.