ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಮತ್ತು ಪದ್ಮ ಶ್ರೀ ಜೈನ ಮಹಿಳಾ ಸಮಾಜದವತಿಯಿಂದ ಎಮ್, ಎಲ್ ಜೈನ್ ಬೋರ್ಡಿಂಗ್ ಹೊಮ್ ನಲ್ಲಿ ಮುನಿಶ್ರೀ 108 ಪಾವನ ಕೀರ್ತಿ ಮುನಿ ಮಹಾರಾಜರ ವರ್ಷಯೋಗ ಚಾತುರ್ಮಾಸದ ವ್ರತಸಮಾರೋಪ ಹಾಗೂ ಪಿಂಚಿ ಪರಿವರ್ತನ ಕಾರ್ಯಕ್ರಮ ನಡೆಯಿತು.
ದಿನಾಂಕ 20-10-2016ನೇ ಭಾನುವಾರದಂದು ಮಧ್ಯಾನ 3ಗಂಟೆಗೆ ಹೊರಟ ಬೌವ್ಯ ಮೆರವಣಿಗೆ ಅಶೋಕ ರಸ್ತೆ ಮಹಾವೀರ ನಗರ ದಿಂದ ಹಾದು ಎಮ್, ಎಲ್ ಜೈನ್ ಬೋರ್ಡಿಂಗ್ ತಲುಪಿತು. ಕಾರ್ಯಕ್ರಮದ ಮುಂಚೆ ಪಿಂಚಿ ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ವರ್ಷಯೋಗ ಎಂದಾಗ ಮಳೆಗಾಲದ ದಿನಗಳು ಇಂದು ಸ್ಮರಣೆಗೆ ಬರುತ್ತದೆ. ಇಂತಹ ದಿನಗಳಲ್ಲಿ ಮುನಿಗಳು ಒಂದೆಡೆ ನೆಲಸಿ ಚಾತುರ್ಮಾಸ ವ್ರತ ಗ್ರಹಣ ಮಾಡುತ್ತಾರೆ. ಚಾತುರ್ಮಾಸವು ಮುಗಿದ ನಂತರ ಪುನಃ ಮೋಹವನ್ನು ಗೆಲ್ಲಲು ಪರಿಗ್ರಹದಿಂದ ದೂರವಿರಲು ವಿಹಾರವನ್ನು ಕೈಗೊಳ್ಳುತ್ತಾರೆ. ವಿಹಾರದ ಮೊದಲು ತಮ್ಮ ಬಾಹ್ಯಲಿಂಗ ಚಿಹ್ನೆಗಳಾದ ಪಿಂಚಿ ಕಮಂಡಲವನ್ನು ಬದಲಾಯಿಸುತ್ತಾರೆ. ಕಾರಣ ದ್ರವ್ಯ ಎಂದ ಮೇಲೆ ಉತ್ಪಾದ ವ್ಯಯ ಎನ್ನುವುದು ಸಾಮಾನ್ಯ ಗುಣ. ಕೋಮಲತೆ, ಸುಕುಮಾರತೆ, ಹಗುರವಾಗಿರುವಿಕೆ, ಧೂಳು ಗ್ರಹಿಸದಿರುವಿಕೆ, ಬೆವರು ಅಂಟ್ಟಿಕೊಳ್ಳದಿರುವಿಕೆ ಎಂಬ ಐದು ಗುಣಗಳ ಕಾರಣ ಪಿಂಚಿ ಪಿಚಿಕ ಏನಿಸಿಕೊಳ್ಳುತದೆ. ಇಂತಹ ಸಹಜ ಗುಣಗಳು ದೂರವದಾಗ ಜೀವಿಗಳಿಗೆ ಅಭಯದಾನವು ದೂರವಾಗುತ್ತದೆ. ಹಾಗಾಗಿ ಪಿಂಚಿ ಪರಿವರ್ತನೆ ಸಾಧುಗಳು ಮಾಡುತ್ತಾರೆ. ವರ್ಷಯೋಗದಲ್ಲಿ ಮುನಿಗಳ ಸಾನಿಧ್ಯ ಮತ್ತು ಅವರಿಗೆ ಪಿಂಚಿ ಪರಿವರ್ತನೆ ಮಾಡಿಸುವಿಕೆ ನಮ್ಮ ನಿಮ್ಮೆಲ್ಲರ ಕರ್ತವ್ಯ, ಹಾಗೂ ಸೌಭಾಗ್ಯವು ಪುಣ್ಯ ಸಂಪಾಧನೆಯು ಹೌದು.
ನಂತರ ಸಂಜೆ 6 ಗಂಟೆಗೆ ಕುಮಾರಿ ಅಪೂರ್ವ ವೃಷಭ ರಾಜ್ ರವರಿಂದ ಪ್ರಾರ್ಥನೆ ಹಾಗೂ ದಿಗಂಬರ ಜೈನ ಸಮಾಜದ ಕಾರ್ಯದರ್ಶಿಗಳಾದ ಅಜಿತ್ ಕುಮಾರ್ ರವರ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ತೇಜಸ್ವಿನಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಗಣ್ಯರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಡಾಕ್ಟರ್ ಸುರೇಶ್ ಜೈನ್ ರವರು ವರ್ಷಯೋಗದ ಬಗ್ಗೆ ತಿಳಿಸಿಕೊಟ್ಟರು. ಪ್ರೊಫೆಸರ್ ದೇವೇಂದ್ರ ಕುಮಾರ್ ಹಾಗೂ ಬಿ,ಎಸ್ ಪ್ರಕಾಶ್ ಜೊತೆಗೂಡಿ ಬೋಲಿ ಪ್ರಕ್ರಿಯೆ ನರೆವೇರಿಸಿಕೊಟ್ಟರು.
ಬೋಲಿಯನ್ನು ತಮ್ಮದಾಗಿಸಿಕೊಂಡಾಗ ದಾನಿಗಳಾದ ವಿಮಲ್ ಜೈನ್ ಪಿಂಚಿ, ಡಾಕ್ಟರ್ ಅಶೋಕ್ ಕುಮಾರ್ ಕಮಂಡಲ, ಶುಭಾನಾಗರಜ್ ಶಾಸ್ತ್ರ, ಜಗದೀಶ್ ರವರು ಜಪಮಾಲೆ, ಸತ್ಯೇಂದ್ರ ಹೊರನಾಡ್ ಆರತಿ ಹಾಗೂ ಸ್ವದೇಯ ಸಂಘದವರು ಶಾಸ್ತ್ರದಾನವನ್ನು ಅತ್ಯಂತಹ ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು.
ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ದಾನಿಗಳಿಗೆ ಸನ್ಮಾನಿಸಲಾಯಿತು. ಪದ್ಮದನ್ಯಕುಮಾರ್ ರವರ ವಂದನಾರ್ಪಣೆ ನೆರೆದಿದ್ದ ಶ್ರವಕ ಶ್ರವಕಿಯರೆಲ್ಲರು ಸೇರಿ ಮುನಿಗಳಿಗೆ ಆರತಿಮಾಡುವುದರ ಮೂಲಕ ಕಾರ್ಯಕ್ರಮ ಕೊನೆಗೊಂಡಿತು. ದಿಗಂಬರ ಸಮಾಜದ ಅಧ್ಯಕ್ಷರಾದ ಎಂ,ಆರ್ ಸುನೀಲ್ ಕುಮಾರ್ ಹಾಗೂ ಪದಾಧಿಕಾರಿಗಳು, ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಶೀಲಾಅನಂತ್ ರಾಜ್ ರವರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.














