ಜೈನ ಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ 2018 ರಲ್ಲಿ ನಡೆಯಲಿರುವ ಪ್ರತಿ 12 ವರ್ಷಕ್ಕೊಮ್ಮೆ ನಡೆಯಲಿರುವ ಐತಿಹಾಸಿಕ ಮಹೋತ್ಸವ ಮಹಾಮಸ್ತಕಾಭಿಷೇಕದ ಶುಭ ಮುಹೂರ್ತದ ದಿನಾಂಕವನ್ನು ಪ್ರಕಟಿಸಲಾಯಿತು. ಹಾಗೂ ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಪತ್ರಿಕೆ ಯ ಉದ್ಘಾಟನೆ ಮಾಡಲಾಯಿತು.
13/11/2016 ರಂದು ಆಚಾರ್ಯ ಶ್ರೀ ಚಂದ್ರಪ್ರಭಮುನಿ ಮಹಾರಾಜರು ಹಾಗೂ ಮುನಿ ಸಂಘದವರ ಪಾವನ ಸಾನಿಧ್ಯ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಧ್ಯಕ್ಷತೆ ಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಏ. ಮಂಜು ರವರು , ಶಾಸಕರಾದ ಶ್ರೀ ಸಿ. ಎನ್. ಬಾಲಕ್ರಿಷ್ಣ ರವರು ವಿಧಾನ ಪರಿಷತ್ ಸದಸ್ಯ ರಾದ ಶ್ರೀ ಎಮ. ಗೋಪಾಲಸ್ವಾಮಿ, ಶ್ರೀ ಕೆ.ಟಿ. ಶ್ರೀ ಕಂಠೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಮಮತಾ ರಮೇಶ್ ರವರು,ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ಮಹಾಲಕ್ಷ್ಮಿ ರವರು, ಗ್ರಾಮ ಪಂಚಾಯಿತಿಯ ಹೇಮ ಪ್ರಭಾಕರ್ ರವರು ಮಹಾ ಮಸ್ತಕಾಭಿಷೇಕ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷರಾದ ಹರಿತ ಎನ್. ಕೆ. ಜೈನ್ ಹಾಗೂ ಕಾರ್ಯಧ್ಯಕ್ಷರಾದ ಏ. ಜಿತೇಂದ್ರ ಕುಮಾರ್ ರವರು,ಜಿ. ಪಿ. ಪದ್ಮಕುಮಾರ್ ರವರು, ವಿನೋದ್ ಬಾಟ್ಲೀವಾಲಾ, ತಹಸೀಲ್ದಾರ್ ಬಿ. ಪದ್ಮಾವತಿ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕ್ಷೇತ್ರದ ಸಂಪ್ರದಾಯದೊಂದಿಗೆ ಮಂತ್ರ ಘೋಷಗಳೊಡನೆ ಶುಭಾರಂಭಗೊಂಡ ಕಾರ್ಯಕ್ರಮ ಘಂಟಾ ನಾದ ಶಂಖಾನಾದ ಹಾಗೂ ಮಂಗಳ ವಾದ್ಯಗಳೊಡನೆ ಚಾಲನೆ ಗೊಂಡಿತು.
ಪತ್ರಿಕೆ ಉದ್ಘಾಟನೆಯನ್ನು ಮಹಾಮಸ್ತಕಾಭಿಷೇಕ ಮಹೋತ್ಸವದ ರಾಜ್ಯ ಸಮಿತಿಯ ಅಧ್ಯಕ್ಷರಾದ ಸಚಿವ ಏ. ಮಂಜುರವರು ಉದ್ಘಾಟಿಸಿದರು .ದಿನಾಂಕ ನಿಗದಿಯಾದ ಸಂಭ್ರಮದಲ್ಲಿ ನೆರೆದಿದ್ದ ಯುವಕ ಯುವತಿಯರು ನರ್ತಿಸಿದರು. ಹಾಗೂ ಅವರೊಡನೆ ಏ ಮಂಜುರವರು , ಹಾಗೂ ಬಾಲಕ್ರಿಷ್ಣ ರವರು ಭಾಗವಹಿಸಿ ಸಂಭ್ರಮಿಸಿದರು. ಮಹೋತ್ಸವ ಕುರಿತ ಕಾರ್ಯಕ್ರಮ ವರದಿಯನ್ನು ಶ್ರೀ ಚಾರುಕೀರ್ತಿ ಭಟ್ಟಾರಕರು ಘೋಷಿಸಿದರು. ಅವರು 12 ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿ ಮಸ್ತಾಭಿಷೇಕದ ದಿನಾಂಕವನ್ನು ತಿಳಿಸಿ ಎಲ್ಲರಿಗೂ ವಿವರಿಸಿ ಹೇಳಿದರು.
ನಂತರ ಏ. ಮಂಜು ರವರು ಮಾತನಾಡಿ ಇಂತಹ ಒಂದು ಮಹೋನ್ನತ ಕಾರ್ಯಕ್ರಮದ ಪತ್ರಿಕೆ ಉದ್ಘಾಟನೆಯನ್ನು ಮಾಡಿದ್ದು ನನ್ನ ಸೌಭಾಗ್ಯ ಎಂದು ಸಂತಸ ಪಟ್ಟು, ಧನ್ಯತಾ ಮನೋಭಾವದಿಂದ ನುಡಿದರು.














