ಜಿನ ಬಜನಾ ಸೀಸನ್-8 ರಲ್ಲಿ ಸಂಗೀತಾ ಕಟ್ಟಿ ಭಾಷಣ

ಖ್ಯಾತ ಹಿನ್ನೇಲೆ ಗಾಯಕಿಯಾದ ಸಂಗೀತಾ ಕಟ್ಟಿ ಯವರ ವೇದಿಕೆ ಭಾಷಣ :- ಬೃಹತ್ ಸಭೆಗೆ ನಮಸ್ಕಾರಗಳನ್ನು ತಿಳಿಸಿದರು. ಇದು ಬರಿ ಜೈನ್ ಮಿಲನವಲ್ಲ ಸಂಸ್ಕೃತಿಗಳ ಮಿಲನ, ಸಪ್ತಸ್ವರಗಳ ಮಿಲನ, ಏಳು ಬಣ್ಣಗಳ ಮಿಲನ, ಎಲ್ಲರ ಹೃದಯದಲ್ಲಿ ಪ್ರೀತಿ ವಾತ್ಸಲ್ಯ ಅಭಿಮಾನ ವಿಶ್ವಾಸ ಇವೆಲ್ಲವುದರ ಸಂಮಿಲನವಾಗಿರುವಂತಹ ಒಂದು ಸುಂದರವಾದ ಮಿಲನ ಸುಮಧುರವಾದಂತಹ ಮಿಲನ ಎಂದರು. ನನ್ನನ್ನು ಈ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಮಾಡಿದ ಈ ಸಮಿತಿಗೆ ಅಭಿನಂದಿಸಿದರು. ಹಾಗೂ ಅವರು ವಿಧ್ಯೆಯನ್ನು ಕಲಿಸಿದಂತಹ ಗುರುಗಳನ್ನು ನೆನಪಿಸಿಕೊಂಡರು. ಮತ್ತು ಗುರುವಿನ ಮಹತ್ವವನ್ನು ತಿಳಿಸಿದರು. 4 ವರ್ಷದ ಹಿಂದೆ ಲಕ್ಷದೀಪೋತ್ಸವಕ್ಕೆ 20 ನಿಮಿಷದ ಒಂದು ಸಣ್ಣ ಕಥೆಗೆ ಸಂಗೀತ ನಿರ್ದೇಶನವನ್ನು ಮಾಡಿ ಹಾಡುವಂತಹ ಅವಕಾಶ ದೊರೆಯಿತು ಎಂದು ಅದರ ಸಾಲುಗಳನ್ನು ಹಾಡಿದರು.

ನಾನು ಕೇಳಿದ ಕೇಲವುಂದು ಭಜನೆಗಳಲ್ಲಿ ಭಕ್ತಿ ಶಕ್ತಿ ಆತ್ಮಾನಂದ ತುಂಬಿ ತುಳುಕುತ್ತಿತ್ತು ಎಂದರು ಮತ್ತು ಜನಸಾಮಾನ್ಯರಿಗೆ ಸಂಗೀತ ಭಕ್ತಿ ಸಂಗೀತದ ಮೂಲಕ ತಲುಪಿದ ಪರಿಯನ್ನು ತಿಳಿಸಿದರು. ಭಕ್ತಿಯ ಮೂಲಕ ಹಾಗೂ ಸಂಗೀತದ ಮೇಲಿನ ಭಕ್ತಿಯ ಮೂಲಕ ಸ್ವರಗಳ ಮೇಲಿನ ಭಕ್ತಿಯ ಮೂಲಕ ನಿಮ್ಮ ಸಾಧನೆ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಎಲ್ಲರಿಗೂ ಶುಭಹಾರೈಸಿದರು. ಆಧುನಿಕ ದಿನಗಳಲ್ಲಿ ಸಂಗೀತದ ಕಲೆಯ ಪರಂಪರೆಯನ್ನು ತೋರಿಸಲು ಸಾಧ್ಯವಾಗುವುದಿಲ್ಲ ಎಂದರು.

ಸುರೇಂದ್ರ ಕುಮಾರ್ ರವರಿಗೆ ಮತ್ತು ಅನಿತಾ ಸುರೇಂದ್ರ ಕುಮಾರ್ ರವರಿಗೆ ವಂದನೆಗಳನ್ನು ತಿಳಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್