ಜಮಖಂಡಿ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯನ್ನು ಸವಿನೋಟವನ್ನು ನೋಡೋಣ. ಭಾರತೀಯ ಜೈನ್ ಮಿಲನ್ 8 ಜಿನ ಭಜನಾ ಸ್ಪರ್ಧೆ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಸಭಾಭವನದಲ್ಲಿ ನಡೆಯಿತು ಭಾರತೀಯ ಜೈನ್ ಮಿಲನ್ ವಲಯ 8ರ ಜಮಖಂಡಿ ವಿಭಾಗ ಮಟ್ಟದ ಜಿನ ಭಜನೆ ಸೀಸನ್ 8 ರ ಉದ್ಘಾಟನೆಯನ್ನು ಸಿದ್ದರಾಜು ಪೂಜಾರಿಯವರು ನೆರವೇರಿಸಿ ಉದ್ಘಾಟನ ಭಾಷಣವನ್ನ ಮಾಡಿದರು. ಅಧ್ಯಕ್ಷತೆಯನ್ನು ವಿ ಜೀವಂದರ್ ಕುಮಾರ್ ರವರು ವಯಿಸಿದ್ದರು, ಮುಖ್ಯ ಅತಿಥಿಗಳಾಗಿ ವೀರ್ ಆಶೋಕ್ ಬಾಳಿಕಾಯಿ, ಕಾರ್ಯದರ್ಶಿಗಳು ಭಾರತೀಯ ಜೈನ್ ಮಿಲನ್ ವಲಯ 8 ದಾರವಾಡ. ಆದಿನಾಥ ನರಸ್ಗೊಂಡ್ ಅಬಕಾರಿ ನಿರೀಕ್ಷಕರು ಜಮಖಂಡಿ ದಯಾನಂದ್ ಶಿರ್ಗಾರ್ ಅಧ್ಯಕ್ಷರು, ಪಾರ್ಶ್ವನಾಥ್ ಯೂತ್ ಕಮಿಟಿ ಜಮಖಂಡಿ, ಬಿ ಪಿ ಪರಂಗೊಂಡ್ ಹೋಸ್ ವಾಲ್ ರವರು ವಯಿಸಿದ್ದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನ ಮಹಾವೀರ್ ಶಾ ಪುರ್ ರವರು ನೆರವೇರಿಸಿದರು. ಧೀರಜ್ ಜೈನ್, ಸಿದ್ದರಾಜ್ ಪೂಜಾರಿ, ನಮಿತಾ ಪರಮ್ರಾಜ್ ರವರು ಜಿನ ಭಜನಾ ಸ್ಪರ್ಧೆಯ ತೀರ್ಪುಗಾರರಾಗಿದರು. ಹಲವಾರು ತಂಡಗಳು ಕೂಡ ಭಾಗವಹಿಸಿದ್ದವು.
ಅದೇ ರೀತಿ ಸಂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನ ವಿಜೀವಂದರ್ ಕುಮಾರ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಬಿ ಪಿ ನ್ಯಾಮಗೌಡರವರು ಭಾಷಣವನ್ನ ಮಾಡಿದರು. ಪ್ರಶಾಂತ್ ಉಪಾಧ್ಯಾಯ್, ನೇಮಿನಾಥ ನರಸ್ಗೊಂಡ್, ಸುಶೀಲ್ ಕುಮಾರ್ ಬೇಳಗಲಿ ಅತಿಥಿಗಳು ಆಗಮಿಸಿದ್ದರು. ಯಶಸ್ಸಿನ ಮೆಟ್ಟಿಲುಗಳನ್ನ ಏರಿ ಜಿನ ಭಜನಾ ಕಾರ್ಯಕ್ರಮವು ಸಂಪನ್ನಗೊಂಡಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













