ದಾವಣಗೆರೆ ವಿಭಾಗ

ವೀಕ್ಷಕರೆ ಇದೀಗ ಮಧ್ಯಕರ್ನಾಟಕ ದಾವಣಗೆರೆ ವಿಭಾಗ ಮಟ್ಟದ ಸ್ಪರ್ಧೆಗೆ ಬರುವುದಾದರೆ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಕೃಪಾ ಆಶೀರ್ವಾದದೊಂದಿಗೆ, ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆ ಯವರು ಮಹಾಸ್ವಾಮೀಜಿಗಳವರ ಕೃಪಾ ಆಶೀರ್ವಾದದೊಂದಿಗೆ ದಾವಣಗೆರೆ ಜೈನ್ ಮಿಲನ್ ಮತ್ತು ಆದಿನಾಥ ಜೈನ್ ಮಿಲನ್ ಹಾಗೂ ಸಮಸ್ತ ದಿಗಂಬರ ಜೈನ ಸಮಾಜ ದಾವಣಗೆರೆ ಇವರುಗಳ ಆತಿಥ್ಯ ದಲ್ಲಿ ಜಿನ ಭಜನಾ ಸ್ಪರ್ಧೆಯು 8 ನೇ ಆವೃತಿ ದಿನಾಂಕ 17-11-2024 ನೇ ಭಾನುವಾರ ದಾವಣಗೆರೆಯ ಕುವೆಂಪು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಸಲಾಯಿತು. ಉಷಾ ಜಯಪ್ರಕಾಶ್ ರವರು ಕಾರ್ಯಕ್ರಮವನ್ನ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರ್ ಹೆಚ್ ಪಿ ಸುಮತಿ ಕುಮಾರ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೈನ್ ಮಿಲನ್ ನ ಹಾಗೂ ವಿಭಾಗೀಯ ಪದಾಧಿಕಾರಿಗಳು ಭಾಗವಹಿಸಿದ್ದರು. ನಂತರದಲ್ಲಿ ಜಿನ ಭಜನಾ ಸ್ಪರ್ಧೆಗಳು ಕಿರಿಯರ ವಿಭಾಗದಿಂದ 3 ತಂಡಗಳು, ಹಿರಿಯ ನಾಗರೀಕ ವಿಭಾಗದಿಂದ 3 ಸುವರ್ಣ ತಂಡಗಳು ಹಾಗೂ ಹಿರಿಯ ವಿಭಾಗದಿಂದ 30 ತಂಡಗಳು ಭಜನೆಯಲ್ಲಿ ಪಾಲ್ಗೊಂಡು ಇಂಪಾಗಿ ಹಾಡಿ ಎಲ್ಲರ ಮನಗೆದ್ದರು.

ಸಮಾರೋಪ ಸಮಾರಂಭದಲ್ಲಿ  ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಪ್ರಶಸ್ತಿಪ್ರಧಾನ ಮಾಡಿದರು. ಅಲ್ಲದೇ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪದ್ಮಪ್ರಕಾಶ್ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಿ ಸುನೀಲ್ ಕುಮಾರ್ ರವರು, ಶ್ರೀ ಜಿತೇಂದ್ರ ಕುಮಾರ್ ಬೇತುರು ರವರು, ರತ್ನರಾಜು ರವರು, ಎಸ್ ಸಿ ಪ್ರಶಾಂತ್ ರವರು, ಮಹಾವೀರ್ ಬೋವಿ, ಶ್ರೀ ವಿಲಾಸ್ ಪಾಸಣ್ಣ ನವರು, ಹೀಗೆ ಅನೇಕ ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ವಿಭಾಗದ ಎಲ್ಲ ನಿರ್ದೇಶಕರುಗಳು ಹಾಗೂ ಸಮಾಜದ ಎಲ್ಲ ಬಂಧುಗಳು ಹಾಗೂ ವಿಭಾಗದ ಕಾರ್ಯದರ್ಶಿಗಳಾದ ಭರತ ರಾಜ್ ಆಜಾರೆಯವರು ಶ್ರಮವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನ ನಡೆಸಿಕೊಟ್ಟರು. ಈ ವಿಭಾಗದ ಬಹುಮಾನ ವಿಜೇತರ ತಂಡಗಳ ವಿವರ ಈ ರೀತಿ ಇದೆ. ಹಿರಿಯರ ತಂಡದ ವಿಜೇತರು ಪ್ರಥಮ ಬಹುಮಾನ ರತ್ನಾತ್ರೇಯ ಜಿನ ಭಜನಾ ತಂಡ ಹೊಸದುರ್ಗ, ಎರಡನೇಯ ಬಹುಮಾನ ಇಷ್ಟೋಪದೇಶ ಮಹಿಳಾ ಭಜನಾ ತಂಡ ತಡಸ, ಮೂರನೇ ಬಹುಮಾನ ಶ್ರೀ 1008 ಭಗವಾನ್ ಶ್ರೀ ಪಾರ್ಶ್ವನಾಥ ಭಜನಾ ತಂಡ  ಅಮಕೊಪ್ಪ, ನಾಲ್ಕನೇ ಬಹುಮಾನ ರತ್ನತ್ರೇಯ ತಂಡ ಮಂಟಗಣಿ, ಹಿರಿಯ ನಾಗರೀಕರ ಸುವರ್ಣ ತಂಡದ ವಿಜೇತರು ಹರಿಹಂತ ಜಿನ ಭಜನಾ ತಂಡ ದಾವಣಗೆರೆ, ಕಿರಿಯರ ತಂಡದ ವಿಜೇತರ ಪಟ್ಟಿ ಈ ರೀತಿ ಇದೆ ಪ್ರಥಮ ಬಹುಮಾನ ರತ್ನತ್ರೇಯ ಚಿಣ್ಣರ ಬಳಗ ಹೊಸದುರ್ಗ, ದ್ವಿತೀಯ ಬಹುಮಾನ ಜಿನ ವಾಣಿ ತಂಡ ಅಟ್ಟಬಯಲು, ತೃತೀಯ ಬಹುಮಾನ ಜೈನ ಸಾಂಸ್ಕೃತಿಕ ಕಾಲ ತರಬೇತಿ ಸಂಸ್ಥೆ ವೀರಾಪುರ, ನಾಲ್ಕನೇ ಬಹುಮಾನ ಮಹಾವೀರ ಬಾಲ ಮಂಡಲ ಅಮಕೊಪ್ಪ.

ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್