ಎಲ್ಲರಿಗೂ ಜೈ ಜಿನೇಂದ್ರ, ರಾಜ್ಯದೆಲ್ಲೇಡೆ ಸಂಚಲನ ಮಾಡುತ್ತಿರುವ ಮನಮನಗಳನ್ನ ಬೆಸೆಯುತ್ತ ಮನೆ ಮಾತಾಗಿರುವ ಮಂಗಳಕರ ಸದ್ಗುಣಗಳಿಂದ ನೇದ ಮಾಲೆಯೇ ಈ ಜಿನ ಭಜನೆ. ಬೆಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯ ಉದ್ಘಾಟನೆ. ಭಾರತೀಯ ಜೈನ್ ಮಿಲನ್ ವಲಯ 8ರ ಜಿನ ಭಜನಾ ಸ್ಪರ್ಧೆ ಇಂದು ಕರ್ನಾಟಕ ಜೈನ್ ಅಸೋಸಿಯೇಷನ್ ಶ್ರೀ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಸಭಾ ಭವನದಲ್ಲಿ ನಡೆಯಿತು ಭಾರತೀಯ ಜೈನ್ ಮಿಲನ್ 8ರ ಬೆಂಗಳೂರು ವಿಭಾಗಮಟ್ಟದ ಜಿನ ಭಜನೆ ಸಿಜನ್ 8 ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಹಿರಿಯ ಸಾಹಿತಿ ಧಾರಿಣಿ ಅವರನ್ನ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳದ ಸುರೇಂದ್ರ ಕುಮಾರ್ ರವರು ಜಿನ ಭಜನಾ ಕೇಂದ್ರ ಸಮಿತಿಯ ಮಾರ್ಗ ದರ್ಶಕರಾದ ಶ್ರೀಮತಿ ಶ್ರದ್ದ ಅಮಿತ್, ಭಾರತೀಯ ಜೈನ್ ಮಿಲನ್ ವಲಯ 8ರ ಬೆಂಗಳೂರು ವಿಭಾಗಿಯ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್, ಉಪಾಧ್ಯಕ್ಷರಾದ ಭರತೇಶ್ ಜಗಶೆಟ್ಟಿ, ಜಂಟಿ ಕಾರ್ಯದರ್ಶಿ ಸುಕಾನಂದ್, ನಿರ್ದೇಶಕ ಪಿ ಅಜಿತ್ ಕುಮಾರ್, ಅನಿತಾ ವಾಸುದೇವ್ ಸೇರಿದಂತೆ ಜೈನ ವಿವಿಧ ಸಂಘಟನೆಗಳ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.
ಶರ್ಮಿಳ ಜಿನೇಶ್ ಹಾಗೂ ಮುನಿರಾಜ್ ರಂಜಾಳ್ ಜಿನ ಭಜನಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಈ ಜಿನ ಭಜನೆಯಲ್ಲಿ ಕಿರಿಯರ ವಿಭಾಗದಲ್ಲಿ 9 ತಂಡಗಳು ಹಾಗೂ ಹಿರಿಯರ ವಿಭಾಗದಲ್ಲಿ 17 ತಂಡಗಳು ಸೇರಿ ಒಟ್ಟು 26 ತಂಡಗಳು ಭಾಗವಹಿಸಿದ್ದವು. ದೀರಜ್ ಹೊಳೆನರಸೀಪುರ ಇವರು ಸ್ವಾಗತಿಸಿ ಕಾರ್ಯಕ್ರಮವನ್ನ ನಿರೂಪಿಸಿದರು. ಭಾರತೀಯ ಜೈನ್ ಮಿಲನ್ ವಲಯ 8 ಬೆಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆ ಜಿನ ಭಜನಾ ಸ್ಪರ್ಧೆಯ ಫಲಿತಾಂಶ ಸುವರ್ಣ ತಂಡವಾಗಿ ರತ್ನತ್ರೇಯ ಜೈನ್ ಮಿಲನ್ ತಂಡ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನ ದಿವ್ಯದ್ವನಿ ತಂಡ, ದ್ವಿತೀಯ ಸ್ಥಾನ ಸಧಾ ಮೋಸ್ತು ತಂಡ, ತೃತೀಯ ಸ್ಥಾನ ಆಗಮ ತಂಡ. ಅದೇ ರೀತಿಯಲ್ಲಿ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನ ಜ್ಞಾನಮತಿ ತಂಡ, ದ್ವಿತೀಯ ಸ್ಥಾನ ಶೃತಜ್ಞಾನ ತಂಡ, ತೃತೀಯ ಸ್ಥಾನ ನಂದಾವರ್ತ ತಂಡ ಬಹುಮಾನಗಳನ್ನು ಪಡೆದು ಕಾರ್ಯಕ್ರಮವು ಸುಂದರವಾಗಿ ಯಶಸ್ವಿಯಾಗಿ ಮೂಡಿ ಬಂತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













