ಅನಿತಾ ಸುರೇಂದ್ರ ಕುಮಾರ್

ಅನಿತಾ ಸುರೇಂದ್ರ ಕುಮಾರ್ ರವರು ಮಾತನಾಡಿ.

ಜ್ವಾಲಮಾಲಿನಿ ದೇವಿಗೆ ನಮಸ್ಕರಿಸುತ್ತ, ಭಜನೆಯ ಕಾರ್ಯಕ್ರಮಕ್ಕೆ ಆಶೀರ್ವಾದ ಸಹಕಾರ ಕೊಟ್ಟ ಪರಮಪೂಜ್ಯ 108 ಯುಗಳ  ಮುನಿ ಮಹಾರಾಜರಿಗೆ ನಮೋಸ್ತು ಹೇಳುತ್ತ. 3ವರ್ಷ ಇದ್ದು ನಮ್ಮ ಸಾಹಿತ್ಯವನ್ನು ಮೆಚ್ಚಿದ್ದಾರೆ ಹಾಗೂ ಸಹಕಾರ ನೀಡಿದ್ದಾರೆ. ಹಾಗೂ ಪ್ರೋತ್ಸಾಹಿಸಿದ ಎಲ್ಲ ಭಟ್ಟಾರಕರಿಗೂ  ಇಚ್ಚಾಮಿಗಳನ್ನು ತಿಳಿಸಿದರು.

ಭಜನಾ ಕಾರ್ಯಕ್ರಮವು ಯಶಸ್ಸು ಕಾಣಲು ನಾನು ಕಾರಣಳಲ್ಲ ಇದಕ್ಕೆ ದೇವರೆ ಕಾರಣ ನನ್ನ ಹೆಸರಿನ ಬದಲು ಪೂಜ್ಯ ಮುನಿಗಳು ಭಟ್ಟಾರಕರು, ಹೆಗ್ಗಡೆ ಯವರು ಹಾಗೂ ಹೇಮಾವತಿ ಅಕ್ಕನವರ ಹೆಸರನ್ನು ಹೇಳಿ ಎಂದರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧೆಗಳ ಭಜನಾ ಸ್ಪರ್ಧೆಯನ್ನು ಹಾಡಿ ಹೊಗಳಿದರು.

ಬಾವಜೀ ಮತ್ತು ಅಕ್ಕನವರ ಆಶೀರ್ವಾದ ಮತ್ತು ಭಜನೆಗೆ ಬಂದಂತಹ ಎಲ್ಲ ಶ್ರಾವಕರ ಶ್ರಾವಕಿಯರನ್ನು ಸ್ವಾಗತಿಸುತ್ತ ಮಾತುಗಳನ್ನು ಪ್ರಾರಂಭಿಸಿದರು.

ಈ ಕಾರ್ಯಕ್ರಮ ನಡೆಯ ಬೇಕು ಸಂಸ್ಕಾರ ಉಳಿಯ ಬೇಕು ಎಲ್ಲರು ಧಾರ್ಮಿಕವಾಗಿ ಒಗ್ಗಟ್ಟಾಗಿ ಸಮಾಜ ಸೇವೆಯನ್ನು ನೋಡಿಕೊಳ್ಳ ಬೇಕೆಂದು ಸಮಾಜ ಹೊಡೆಯ ಬಾರದು ಎಂದು ಸಹಕಾರವನ್ನು ಕೊಟ್ಟ ದಿಲೀಪ್ ಸುರಾನ ರವರಿಗೆ ಕೃತಜ್ಞತೆಗಳನ್ನು ತಿಳಿಸಿದರು. ಜಿನ ಭಜನೆ ವೀಕ್ಷಿಸಲು ಬಂದಂತಹ ಎಲ್ಲ ಪದಾಧಿಕಾರಿಗಳಿಗೆ ಸದಸ್ಯರಿಗೆ ಶ್ರಾವಕ ಶ್ರಾವಕಿಯರಿಗೆ ಹೊಸ ವರ್ಷದ ಶುಬಾಷಯಗಳನ್ನು ತಿಳಿಸಿದರು. ಕೆ ಜೆ ಎ ಪದಾಧಿಕಾರಿಗಳು ಮತ್ತು ಸದಸ್ಯರು ಕಳೆದ 8 ವರ್ಷಗಳಿಂದ  ಭವನವನ್ನು ಕೊಟ್ಟು ಸಹಾಯವನ್ನು ಮಾಡಿದ್ದಾರೆ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಸ್ಪರ್ಧಿಗಳು ಬಂದು ನಾವು ಭಕ್ತಿಯಲ್ಲಿ ಮುಳುಗುವ ಹಾಗೆ ಸುಂದರವಾಗಿ ಕಿವಿಗೆ ಇಂಪಾಗುವಂತೆ ಚನ್ನಾಗಿ ಹಾಡಿದವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದರು.

ಹಾಗೂ ಜಿನ ಭಜನಾ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಸ್ಪರ್ಧಾಳುಗಳ ಬಗ್ಗೆ ವಿಶ್ವಾಸ ಮತ್ತು ಅವರು ಗಾಯನದ ಬಗ್ಗೆ ಪ್ರಶಂಸಿಸಿದರು. ಸಮಂತ ಭದ್ರಚಾರ್ಯರು ತಿಳಿಸಿರುವ ಸ್ವಯಂಬು ಸ್ತೋತ್ರದಲ್ಲಿರುವ 24 ಸ್ತೋತ್ರದ ಮಹತ್ವವನ್ನು ಮತ್ತು ಬಸದಿಯಲ್ಲಿ ನಾವು ತೀರ್ಥಂಕರರು ಯಾರು ಎಂದು ತಿಳಿದಾಗ ಅ ಬಸದಿಯಲ್ಲಿರುವ ತೀರ್ಥಂಕರರಿಗೆ ಅರ್ಪಿತವಾಗುತ್ತದೆ ಎಂದು ತಿಳಿಸಿದರು. ನೆನ್ನೇ ನಡೆದ ನಾಟಕವನ್ನು ನಡೆಸಿಕೊಟ್ಟ ಸಂದೀಪ್ ರವರನ್ನು ಅವರು ನಡೆಸಿಕೊಟ್ಟ ನಾಟಕದ ಬಗ್ಗೆ ಪ್ರಶಂಸಿಸಿದರು ಹಾಗೂ ಧನ್ಯವಾದವನ್ನು ತಿಳಿಸಿದರು.

ಸಂಗೀತ ಮತ್ತು ಭಜನೆಯ ಮಹತ್ವವನ್ನು ತಿಳಿಸಿದರು. ಭಜನೆಯನ್ನು ಮನೆಯಲ್ಲಿ ಮಾಡಿದರೆ ಮನೆಯಲ್ಲಿರುವ ದುಷ್ಟ ಶಕ್ತಿಗಳು  ದೂರವಾಗುತ್ತದೆ ಹಾಗೂ ಭಜನೆ ಮಾಡುವುದರಿಂದ ಹಾಗೂ ಕೇಳುವುದರಿಂದ ವೈದ್ಯಕಿಯವಾಗಿ ಆರೋಗ್ಯ ಸಮಸ್ಯೆಗಳು ಸುದಾರಿಸುತ್ತದೆ ಎಂದು ತಿಳಿಸಿದರು.

ಭಜನಾ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಹೆಸರಿಸಿ ಅವರಿಗೆ ಅಭಿನಂದಿಸಿದರು.  ಹಾಗೂ ಜಿನ ಭಜನಾ ಸ್ಪರ್ಧೆಯಲ್ಲಿ ತೀರ್ಪುಗಾರರಾದ ಶಂಕರ್ ಶಾನುಭೋಗ್, ಸೌಮ್ಯ ಶ್ರೀಧರ್,ಮಿಥುನ್ ಚಕ್ರವರ್ತಿ, ನಮಿತಾ ಜೈನ್ ರವರಿಗೆ  ಅಭಿನಂದಿಸಿದರು. ಸಭಾ ಕಾರ್ಯಕ್ರಮವನ್ನು ಸುಂದರ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಇದು ಸ್ಪರ್ಧೆಯಲ್ಲಾ ಪ್ರತಿಭಾ ಪ್ರದರ್ಶನ ನೀವು ಫಲಿತಾಂಶಕ್ಕೆ ಬೇಸರ ಪಡದೆ ಸಿಕ್ಕಿದ ಅವಕಾಶಕ್ಕೆ ಸಂತೋಷ  ಪಡಿ ಫಲಕ್ಕಾಗಿ ಕೆಲಸ ಮಾಡಬಾರದು ಎಂದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್