ಹೊಸದುರ್ಗ ನಗರಕ್ಕೆ ಪ್ಪಪ್ರಥಮ ಬಾರಿಗೆನರಸಿಂಹರಾಜಪುರದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಕ್ಷ್ಮೀಸೇನಾಭಟ್ಟಾರಕಪಟ್ಟಾಚಾರ್ಯ ಮಹಾಸ್ವಾಮಿಗಳು ನವೆಂಬರ್ 6 ರಂದು ಪುರಪ್ರವೇಶ ಮಾಡಿದರು.
ಹೊಸದುರ್ಗದಜ್ಯೆನಬಾಂಧವರುಕಳಸಸಮೇತಪೂರ್ಣಕುಂಭದೊಡನೆಸ್ವಾಮೀಜಿಯವರನ್ನು ಸ್ವಾಗತಿಸಿದರು ಹಾಗೂ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಸದಿ ತಲುಪಿ ಅಲ್ಲಿ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಯವರ ಪಾದ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಜ್ಯೆನ್ ಮಿಲನ್ ವಲಯ 8ರ ಅಧ್ಯಕ್ಷರಾದ ಅಜ್ಜಪ್ಪ ನವರು ಹೊಸದುರ್ಗ ಜ್ಯೆನ ಸಮಾಜದ ಅಧ್ಯಕ್ಷ ರಾದ ಧನ್ಯ ಕುಮಾರ್ ರವರು ಕಾರ್ಯದರ್ಶಿಗಳಾದ ಇಂದ್ರ ಕುಮಾರ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.














