ಧರ್ಮ ಬಂಧುಗಳೇ ಕರ್ನಾಟಕ ಜೈನ್ ಅಸೋಸಿಯೇಷನ್ಸ್ ಬೆಂಗಳೂರಿನ ಪಧಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಚುನಾವಣೆಯಲ್ಲಿ ಕಾರ್ಯಕಾರಿಯಾಗಿ ಆಯ್ಕೆಯಾಗಿರುವ ಅಭ್ಯರ್ಥಿ ಶ್ರೀಮತಿ ಆಶಾಪ್ರಭುರವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ ಅವರನ್ನು ಪ್ರೋತ್ಸಾಹಿಸಿದ ತಮ್ಮೆಲ್ಲರಿಗೂ ಮನಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುವುದರ ಮೂಲಕ ಈ ಒಂದು ಕಿರುಪರಿಚಯವನ್ನು ಮಾಡಿಕೊಳ್ಳುತ್ತಿದ್ದಾರೆ ಕರ್ನಾಟಕ ಜೈನ್ ಅಸೋಸಿಯೇಷನ್ಸ್ ಕಾರ್ಯಕಾರಿ ಸಮಿತಿಯ ಜಂಟಿಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಜಿನ ಮಂದಿರ ಟ್ರಸ್ಟ್ ನ ಕಾರ್ಯದರ್ಶೆಯಾಗಿ 2009ರಿಂದ ಸೇವೆ ನೀಡಿದರು ಅಲ್ಲದೇ ಶ್ರೀ ಕನಕಗಿರಿ ಜೈನ ಮಠದ ಟ್ರಸ್ಟಿಯಾಗಿ ಹಾಗು ಎಲ್ಲಾ ಜೈನಮಠದ ಸಕ್ರೀಯ ಕಾರ್ಯಕರ್ತೆಯಾಗಿ ಸೇವೆಸಲ್ಲಿಸಿದರು ಹಾಗು ಹಲವಾರು ಧಾರ್ಮಿಕ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಮುಂಚೂಣಿಯಲ್ಲಿರುವ ಧೀಮಂತ ಮಹಿಳೆ ಬನ್ನಿ ಅವರಿಂದಲೇ ಅವರ ಪರಿಚಯ ಕೇಳೋಣ,
ಎಲ್ಲರಿಗೂ ಜೈಜೀನೇಂದ್ರ ನಾನು ಆಶಾಪ್ರಭು ನಿಮ್ಮೆಲ್ಲರಿಗೂ ಪರಿಚಯಿದೆ ಎಂದು ತಿಳಿದುಕೊಂಡಿದ್ದೇನೆ 1969 ನಾನು ಹುಟ್ಟಿದ್ದು ಮಧುಗಿರಿ ನನ್ನ ಜನ್ಮಸ್ಥಳ ಅಲ್ಲಿಂದ ನನ್ನ ಜೀವನಯಾತ್ರೆ ಬೆಂಗಳೂರಿಗೆ ಬಂದು ತಲುಪಿದೆ ಪ್ರಾಥಮಿಕ ಮಧುಗಿರಿಯಲ್ಲಿ ಫ್ರೌಢಶಿಕ್ಷಣವನ್ನು ಬೆಂಗಳೂರು ಮಧ್ಯದಲ್ಲಿ 2 ವರ್ಷ ತುಮಕೂರಿನಲ್ಲಿ ಮುಗಿಸಿದೆ, ಬೆಂಗಳೂರಿನಲ್ಲಿ ವಿಧ್ಯವರ್ಧಕ 10ನೇ ತರಗತಿ ಮಾಡಿ ಬಿ ಎ ಎಮ್ ಎಸ್ ಕಾಲೇಜ್ ಅಲ್ಲಿ ಬಿ ಎ ಮುಗಿಸಿದೆ ಬೆಸಿಕ್ ಆಗಿ ಹೇಳಬೇಕೆಂದರೆ ಸೈನ್ಸ್ ಸ್ಟೂಡೆಂಟ್ ಆಗಿದ್ದೇ ನನ್ನ ಅಪ್ಪನಿಗೆ ಮೆಡಿಕಲ್ ಓದಿಸಿ ಡಾಕ್ಟರ್ ಮಾಡಬೇಕು ಎನ್ನುವುದು ಅವರ ಕನಸಾಗಿತ್ತು ನನ್ನ ಮಲ್ಟಿ ಆಕ್ಟಿವಿಟಿಸ್ ನಲ್ಲಿ ಮೆಡಿಕಲ್ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ ಆ ಮುನಿಸಿಗೆ ಅಪ್ಪ ಬೇಗ 1987 ರಲ್ಲಿ ನನ್ನ ಮದುವೆಮಾಡಿದರು ನನ್ನ ಕೈಹಿಡಿದಂತಹ ವ್ಯಕ್ತಿ ಜೀನೇಂದ್ರಕುಮಾರ್ ಅಂತ ಆಗ ಅವರು ಹಾಸನ್ ಡಿಸಿ ಆಫೀಸ್ ನಲ್ಲಿ ಎಫ್ ಡಿ ಸಿ ಆಗಿದ್ದರು ಈಗ ರಿಟೈಡ್ ಆಗುವಾಗ ಡೆಪುಟಿತಹಸ್ದಾರ್ ಆಗಿ ಸ್ಟೇಟ್ ಎಲೆಕ್ಷನ್ ಕಮಿಟಿಯಿಂದ ಲಾಸ್ಟ್ ಇಯರ್ ರಿಟೈಡ್ ಆದರು ನನಗೆ ಒಬ್ಬ ಮಗನಿದ್ದಾನೆ ಮಗನಿಗೆ 2017ರಲ್ಲಿ ಮದುವೆಮಾಡಿದ್ದೇನೆ ಅವನು ಅವನ ಹೆಂಡತಿ ಅವಾಯ್ ಅಲ್ಲಿ ಇದ್ದಾರೆ ನನ್ನ ಮುಂದಿನದು ಹೇಳಬೇಂದರೆ ನಾನು ಸೈನ್ಸ್ ಸ್ಟೂಡೆಂಟ್ ಆಗುವುದಕ್ಕೆ ಆಗಲಿಲ್ಲ ಅಂದಮೇಲೇ ಬಿಎ ತಗೋಂಡೆ ಮಗು ಆಗಿತ್ತು ಆದ್ದರಿಂದ ಹಾಟ್ಸ್ ನಲ್ಲಿ ಡಿಗ್ರಿ ಮುಗಿಸಿದೆ ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಎಮ್ ಎ ಸೋಷಿಯಾಲಜಿ ಮಾಸ್ಟ್‍ರ್ ಮಾಡಿಕೊಂಡೆ ಅದರಲ್ಲಿ ಬೇರೆ ಏನಾದರೂ ಮಾಡಬೇಕೇಂಬ ಹುಚ್ಚಿತ್ತು ಡಿಪ್ಲೋಮೋ ಇಂಟೀಯರ್ಸ್ ಎಂಬ ಕೋರ್ಸ್ ನ್ನು ಮಾಡಿಕೊಂಡೆ ಹೀಗೆ ಮಾಡುತ್ತಾ ಜೀವನ ಕಳೆಯುತ್ತಾ ಇತ್ತು ನನಗೂ ಸಮಾಜಕ್ಕೂ ಯಾವ ಸಂಬಂಧವೂ ಇರಲಿಲ್ಲ ಹಾಗೆ ಇರುವಾಗ 1998-99ಕ್ಕೆ ಆಲ್ ಮೋಸ್ಟ್ ಜೈನ ಸಮಾಜಕ್ಕೆ ಹತ್ತಿರ ಹಾಗಲಿಕ್ಕೆ ಶುರುವಾಗಿದ್ದೆ 2002ರಲ್ಲಿ ಕರ್ನಾಟಕ ಜೈನ ಭವನ ಕನ್ ಸ್ಟ್ರೆಕ್ಷನ್ ಶುರುವಾಗಿತ್ತು ಶುರುವಾದಾಗ ಅಪ್ಪ ಮತ್ತು ನನ್ನ ಆಂಕಲ್ ರಘುಚಂದ್ರ ಅಂತ ಅವರ ಫ್ಯಾಮಿಲಿ ನಮ್ಮ ಫ್ಯಾಮಿಲಿ ಸೇರಿಕೊಂಡು ಒಂದು ರೂಮಿಗೆ ಡೊನೆಷನ್ ಕೊಡೋಣ ಒಂದು ರೂಮಿಗೆ 25.000 ಕೊಡೋಣ ಜೀತೇಂದ್ರಕುಮಾರ್ ಆಂಕಲ್ ಗೆ ಕೊಟ್ಟು ಬಾ ಎಂದು ಅಡ್ರೆಸ್ ಕೊಟ್ಟಿದ್ದರು ಆಗ ಅವರ ಮನೆಗೆ ಹೊಗಿದ್ದೆ 2002 ನೇ ಇಸವಿಯಲ್ಲಿ ಎನಮ್ಮ ನೀನು ಕೆ ಜಿ ಎ ಮೆಂಬರ್ ಆಗಿದ್ದೀರ ಎಂದು ಕೇಳಿದರು ಇಲ್ಲ ಆಂಕಲ್ ಹಂಗದರೆ ಏನು ಎಂದಾಗ ತಗೋಳಮ್ಮ ಅಪ್ಲಿಕೇಷನ್ ಮನೆಯಲ್ಲಿ ಯಾರು ಯಾರು ಇದ್ದೀರ ಎಂದು 3 ಅಪ್ಲಿಕೇಷನ್ ಕೊಟ್ಟರು ಆ ಆಪ್ಲಿಕೇಷನ್ ತಂದು 2002ರಲ್ಲಿ ಕೆ ಜಿ ಎ ಮೆಂಬರ್ ಆದೆ ಅದಾದನಂತರ ನನಗೆ ಒಂದು ಲೆಟರ್ ಬಂತು ಈತರ ಒಂದು ಎಲೆಕ್ಷನ್ ಇದೆ ಯಾರಾದರು ಸೇರಬಹುದು ಇಷ್ಟ ಇದ್ದವರು ಬನ್ನಿ ಅಂತ ಆಗ ಆಂಕಲ್ ನ ರಿಕ್ವೆಸ್ಟ್ ಮಾಡಿಕೊಂಡು ಹೋದೆ ಈತರ ಎಲೆಕ್ಷನ್ ಗೆ ಅಂತ ನಿಮಗೆ ಹೆಂಗೆಸಾಧ್ಯ ಮಾಡಲಿಕೆ ಕಷ್ಟಆಗುತ್ತೆ ಅನುಭವ ಆಗಬೇಕು ನಿನಗೆ ಎಂದು ಹೇಳಿದರು ನೋಡಮ್ಮ ಪ್ರಯತ್ನಮಾಡು ಒಳ್ಳೆದಾಗುತ್ತೆ 2003ರಲ್ಲಿ ನನಗೆ ಕೊಂಗಲ್ ಬ್ರಹ್ಮದೇವ್ ಅವರು ಅಪ್ಲಿಕೇಷನ್ ಗೆ ಸಹಿ ಮಾಡಿದರು ನಿರ್ಮಲಮ್ಮ ಆಂಟಿ ಮತ್ತು ಪಚ್ಚಣ್ಣ ಆಂಕಲ್ ನೆನೆಸಿಕೊಳ್ಳಬೇಕು ಅದು ನಿಜವಾಗಲು ಸುರೇಶ್ ಜೈನ್ ಸರ್ ಬಂದು ನಿರ್ಮಲಮ್ಮ ಮತ್ತು ಪಚ್ಚಣ್ಣ ಆಂಕಲ್ ಗೆ ಇವಳಿಗೆ ಏನು ಗೊತ್ತಿಲ್ಲ ಸುಲಭವಾಗಿ ಮೆಂಬರ್ ಆಗಲಿಕೆ ಹೊರಟಿದ್ದಾಳೆ ನೀವೆಲ್ಲಾ ಸಹಕಾರ ಕೊಡಬೇಕು ಎಂದು ಹೇಳಿದಾಗ ಆಗ ನಿರ್ಮಲಮ್ಮ ಹೆಣ್ಣು ಮಗಳು ಮುಂದೆ ಬರುವುದಕ್ಕೆ ಹೊರಟಿದ್ದಾಳೆ ಬರಲಿ ಬಿಡಪ್ಪ ಅಂದರು ಎಲ್ಲರಿಗೂ ಹೇಳುತ್ತೀನಿ ಮಾರನೇ ದಿನ ಎಲೆಕ್ಷನ್ ದಿನ ಕೆ ಜಿ ಎ ಭವನದ ಮುಂದೆ ಕುಳಿತುಕೊಂಢು ಬಂದವರಿಗೆಲ್ಲಾ ಹೆಣ್ಣುಮಗಳು ಓಟು ಹಾಕಿ ಕೇಳಿಕೊಳ್ಳುತ್ತಾ ಬಂದರು ಅವತ್ತು ಅವರ ಆರ್ಶೀರ್ವಾದ ಜೀತೇಂದ್ರಕುಮಾರ್ ರವರ ಆರ್ಶೀವಾದ ಅವರ ಬಳಗದಲ್ಲಿ ನಾನು ಒಬ್ಬಳಾಗಿ ನನ್ನನ್ನ ನಾನು ಗುರಿತಿಸಿಕೊಳ್ಳಲು ಸಾಧ್ಯವಾಯಿತು 2003 ರಿಂದ ಕರ್ನಾಟಕ ಜೈನ್ ಅಸೋಸಿಯೇಷನ್ ನಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ ಇದನ್ನು ಬಿಟ್ಟು ಹೊರತು ಪಡಿಸಿ ಹೇಳಬೇಕೆಂದರೆ 99ರಿಂದ ಕನಕಗಿರಿ ಜೈನ ಮಠ ಎನ್ ಆರ್ ಪುರ ಜೈನ ಮಠ ನನ್ನ ಮನೆಯವರ ಬಗ್ಗೆ ಹೇಳಬೇಕೆಂದರೆ ಜೀನೇಂದ್ರ ಕುಮಾರ್ ರವರು ಅವರು ಮೂಲತಹ ಶ್ರವಣಬೆಳಗೊಳದವರು ಪುರೋಹಿತರ ಫ್ಯಾಮಿಲಿಯವರು ಮಠದ ಪಕ್ಕದಲ್ಲ ಪಕ್ಕದಮನೆ ಅವರ ತಾತರವರಿಗೆ ಸೇರಿದ್ದಾಗಿತ್ತು ಇವಾಗ ಅವರಿಗೆ ಸೇರಿದೆ.ಪ್ರತಿ ವರ್ಷ ಬೆಟ್ಟದ ಸರಥಿ ಪೂಜೆಗೆ ಬರುತ್ತೆ ಹಾಗಾಗಿ ಆ ದೇವಸ್ಥಾನಕ್ಕೂ ಜೈನ ಸಮೂದಾಯಕ್ಕೂ ಪೂಜೆ ಸಲ್ಲಿಸಲ್ಲಿಕೆ ಅವಾಗ ಅವಾಗ ಹೋಗುತ್ತಾ ಇದ್ದರು ಅವರ ಮೂಲಕವಾಗಿ ನಾನು ಇದರ ಒಳಗೆ ಬರಲಿಕೆ ಅವಕಾಶವಾಯಿತು.ಶ್ರವಣಬೆಳಗೊಳ ಮಠದಲ್ಲೂ ನಾನು ಇದ್ದೆ ಇದು ಆದಮೇಲೆ ನಾನು ಯಾವ ನಾನು ಯಾವಾಗ ಕರ್ನಾಟಕ ಅಸೋಸಿಯೇಷನ್ಸ್ಎಕ್ಸುಕ್ಯುಟಿವ್ ಮೆಂಬರ್ 2003ರಲ್ಲಿ ಆದೆ 2004-2005ರಲ್ಲಿ ನಿರ್ಮಲ್ ಕುಮಾರ್ ಆಂಕಲ್ ಎಲ್ಲದಕ್ಕೂ ಕೆಫೆಬಲ್ ಡು ಯೆನಿ ಥಿಂಗ್ ಆಶಾ ಮಧ್ಯರಾತ್ರಿ 2 ಗಂಟೆವರೆಗೆ ಅಕೌಂಟೇಷನ್ ಕಮಿಟಿಯಲ್ಲಿದ್ದಾಗ ನಾನು ನಿರ್ಮಲ್ ಕುಮಾರ್ ಆಂಕಲ್ ಅನಿಲ್ ಕುಮಾರ್ ಸರ್ 3 ಜನ ಕೆಲಸ ಮಾಡುತ್ತಿದ್ದೀವಿ ರಾತ್ರಿ 2 ಗಂಟೆಗೆ ಮನೆಗೆ ಡ್ರಾಪ್ ಮಾಡುತ್ತಾ ಇದ್ದರು ಮಲಗಿ ಎದ್ದು ಮತ್ತೆ ಬೆಳಗ್ಗೆ 6 ಗಂಟೆಗೆ ಬಂದು ಯಾರು ಬಂದರು ಎಷ್ಟು ಬಸ್ ಜನ ಬಂದರು ಅವರ ವ್ಯವಸ್ಥೆಗಳೇನು ಹಗಲು ರಾತ್ರಿಯೇಂದಲೇ ಕೆಲಸ ಮಾಡುತ್ತಿದ್ದಿವಿ,
ನನಗೆ ಕಮಿಟಿಯಲ್ಲಿ ಕೆಲಸಮಾಡಲಿಕೆ ಅವಕಾಶ ಸಿಕ್ಕಿತು ಇದಾದ ನಂತರ ಒಂದು ವಿಚಾರ ಹೇಳಬೇಕು ದೊಡ್ಡ ದೊಡ್ಡ ಸಭೆ ಸಮಾರಂಭಗಳ ಜವಬ್ದಾರಿ ವಹಿಸಿದ್ದರು ಹಾಗ ಕುಮಾರಸ್ವಾಮಿ ಬಂದಿದ್ದಾಗಲಿ ಅಬ್ದುಲ್ ಕಲಾಂ ರವರು 2006ರ ಮಸ್ತಕಾಭಿಷೇಕಕ್ಕೆ ಬೆಳಗೊಳಕ್ಕೆ ಬಂದಿದ್ದರು ಆ ಸ್ಟೇಟ್ ಮ್ಯಾನೆಜ್ ಮೆಂಟ್ ಆ ಕಾರ್ಯಕ್ರಮ ಸ್ಟೇಟ್ ಮ್ಯಾನೇಜ್ ಮೆಂಟ್ ಆ ದೀಪ ಪ್ರಜ್ವಲನೆ ಮಾಡುವುದು ಇವೆಲ್ಲಾ ನನ್ನ ಜೀವನದಲ್ಲಿ ಮೆಮೊರೆಬಲ್ ಮೂಮೆಂಟ್ಸ್ ಎಂದು ಹೇಳಬಹುದು ಮತ್ತೇ ಶ್ರವಣಬೆಳಗೊಳದ ಮಸ್ತಾಭಿಷೇಕದಲ್ಲಿ ರೇವಣ್ಣರವರ ಇನ್ವಾಲ್ ಮೆಂಟ್ ತುಂಬಾ ಇತ್ತು ಏನೇ ಸ್ವಾಮೀಜಿಯಿಂದ ಆಗ ಬೇಕೇಂದರೆ ಅದು ತಂದು ಕೊಡಮ್ಮ ಇದು ತಂದು ಕೊಡಮ್ಮ ಇಷ್ಟು ಜನ ಬರುತ್ತಾ ಇದ್ದಾರೆ ಇಷ್ಟು ಕಳಸಗಳು ಬೇಕಮ್ಮ ಇದರ ಮಾಹಿತಿ ಕೊಡಮ್ಮ ಸ್ವಾಮೀಜಿಗೆ ನನ್ನ ಮೂಲಕ ಹೇಳಿಸುತ್ತಿದ್ದರು. 2006 ನನಗೆ ಮೆಮೋರೇಬಲ್ ಟೈಮ್ ಆಗಿತ್ತು ನನ್ನ ಕೆಲಸ ನೋಡಿ ಅದಾದ ಮೇಲೆ ನನಗೆ ಅನಿಲ್ ಕುಮಾರ್ ಸರ್ ಹೇಳಿದರು ನೀವು ನಮ್ಮ ಕಂಪನಿಗೆ ಸೇರಲು ರೈಟ್ ಪರ್ಸನ್ ಅಂತ ಹೇಳಿದರು ನನ್ನ ಕಂಪನಿಯಲ್ಲಿ ಪಿ ಆರ್ ಒ ಆಗಿ ಕೆಲಸಕ್ಕೆ ಸೇರಕೋ ಎಂದು ಹೇಳಿದರು ನನಗೆ ಮೊದಲಿನಿಂದಲೂ ಯಾರ ಕೈಕೆಳಗೆ ಕೆಲಸಮಾಡಿ ಅಭ್ಯಾಸ ಇಲ್ಲ ಒಬ್ಬ ಕೈ ಕೆಳಗೆ ಹೇಗೆ ಇರುವುದು ಎನ್ನುವಾಗ 2006 ಏಪ್ರಿಲ್ 23ನೇ ತಾರೀಖು ನಾನು ಅನಿಲ್ ಕುಮಾರ್ ಸರ್ ಹತ್ತಿರ ಕೆಲಸಕ್ಕೆ ಸೇರಿಕೊಂಡರು ಅವರು ಏನಕ್ಕೆ ಕರೆದಿದ್ದರು ಅಂದರೆ ಅವರು ಏನು ವಿಲ್ಸನ್ ಗಾರ್ಡನ್ ದೇವಸ್ಥಾನ ಇದೆ ಆ ದೇವಸ್ಥಾನದ ಪಂಚಕಲ್ಯಾಣ ಮಾಡಬೇಕಿತ್ತು ಅವರಿಗೆ ಬೆಂಗಳೂರು ಕನ್ನಡ ಸಮಾಜ ಮತ್ತು ಹಿಂದಿ ಸಮಾಜ ಇದೆ ಎರಡನ್ನು ಮರ್ಜ್ ಮಾಡಿ ಅವರನ್ನು ಕೊವಡಿನೆಟ್ ಮಾಡಲು ಒಬ್ಬ ವ್ಯಕ್ತಿಯ ಅವಶ್ಯಕತೆ ಬೇಕಿತ್ತು ಹಾಗಾಗಿ ಆ ಅವಕಾಶ ಸಿಕ್ಕಿತು ಕಂಪನಿಯಲ್ಲಿ ಕೆಲಸ ಸಿಕ್ಕಿತು ಅವರು ಕರೆದಿದ್ದು ಫಿಲಾಸಿಫಿಕಲ್ ವರ್ಕ್ ಅಂತ ಹೇಳಿ ಆಮೇಲೆ ವರ್ಧಮಾನ ಸಾಗರ್ ಬೆಂಗಳೂರಿಗೆ ಬಂದರು ಅವರನ್ನ ಹಿಡಿದುಕೊಂಡು ವಿಲ್ಸನ್ ಗಾರ್ಡನ್ನಲ್ಲಿ ಒಳ್ಳೆ ಪಂಚಕಲ್ಯಾಣ ಮಾಡಿದ್ದೇವು ಅದರಲ್ಲೂ ಸುರೇಂದ್ರಣ್ಣ ಬಹಳ ಸಹಕಾರ ಕೊಟ್ಟರು ಅವಾಗ ಸುರೇಂದ್ರಣ್ಣನಿಗೆ ಶುರು ಇಂದಲೇ ತುಂಬಾ ಆರ್ಶೀವಾದ ಕೊಟ್ಟರು 2006ರಲ್ಲಿ ಮಸ್ತಾಭಿಷೇಕ ಆಯಿತು ವಿಲ್ಸನ್ ಗಾರ್ಡನ್ನಲ್ಲಿ ಪಂಚಕಲ್ಯಾಣ ಆಯಿತು ಇನ್ನು ನನ್ನದು ಏನು ಕೆಲಸ ಎಂದಾಗ ಅನಿಲ್ ಸರ್ ಗೆ ಕೇಳಿದಾಗ ಅವರದೇ ಒಂದು ಟ್ರಸ್ಟ್ ಇತ್ತು ಪೂನಮ್ ಚಾರಿಟೇಬಲ್ ಟ್ರಸ್ಟ್ ಇತ್ತು ಆ ಟ್ರಸ್ಟ್ ಯಿಂದ ಕರ್ನಾಟಕದ ಎಲ್ಲಾ ಕಡೆ ಮೆಡಿಕಲ್ ಕ್ಯಾಂಪ್ ಮಾಡಲಿಕೆ ನಿನಗೆ ಜವಬ್ದಾರಿ ಕೊಡುತ್ತಿನಿ ಯಾವ ಯಾವ ಜೈನ ಸಂಸ್ಥೆಗಳಿವೆ ಅವುಗಳ ಜೊತೆ ಕೊವಾಡಿನೆಟ್ ಮಾಡಿಕೊಂಡು ಹಳ್ಳಿಗಳಿಗೆ ಹೋಗಿ ಕೆಲಸಗಳನ್ನು ಮಾಡಿಕೊಂಡು ಬರಬೇಕಾಗುತ್ತದೆ ಎರಡು ದಿನ ಮೂರುದಿನ ಹೊರಗೆ ಆಗತ್ತೆ ಏನಮ್ಮ ಎಂದು ಕೇಳಿದರು ನಾನು ಮಾಡುತ್ತೇನೆ ತೊಂದರೆ ಇಲ್ಲ ಮಗನೂ ದೊಡ್ಡವನಾಗಿದ್ದ ಅವನು ಎಸ್.ಎಸ್.ಎಲ್.ಸಿ ಮುಗಿಸಿದ್ದ ಅವನು ತುಂಬಾ ಫೋಕಸ್ ಮಾಡಬೇಕು ಎಂಬ ಅವಶ್ಯಕತೆ ಇರಲಿಲ್ಲ ಪಿ.ಯು.ಸಿ ಓದುತ್ತಿದ್ದ ಅನಿಲ್ ಕುಮಾರ್ ಸರ್ ಜೊತೆ ಟೈ ಅಪ್ ಆಗಿದ್ದು ನಮ್ಮ ಶಿವರಾಜ್ ಪಾಟೀಲ್ ಜಸ್ಟೀಸ್ ಶಿವರಾಜ್ ಪಾಟೀಲ್ ಅವರ ಟ್ರಸ್ಟ್ ಅವರು ನಮಗೆ ಕ್ಯಾಂಪ್ ಗಳು ಮಾಡಿ ಎಂದು ಹೇಳುತ್ತಿದ್ದರು ಗುಲ್ಬರ್ಗ ಬೀದರ್ ಬಿಜಾಪುರ ದೂರ ದೂರ ಹೋಗಿ ಮೆಡಿಕಲ್ ಕ್ಯಾಂಪ್ ಮಾಡಿಕೊಂಡು ಬರುತ್ತಿದ್ದರು. 2006 ರಿಂದ 2009ರ ವರೆಗೆ ಜೊತೆಗೆ ಇ ಸಿ ಮೆಂಬರ್ ಆಗಿದ್ದೆ ನಮ್ಮ ಬೆಂಗಳೂರು ಜನತೆ ಮಾಡುತ್ತಾರೆ ಎಂದು ಗೆಲ್ಲಿಸಿಕೊಳ್ಳುತ್ತಾ ಬಂದರು ಹಿಂಗೆ ನೆಡೆಯುತ್ತಾನೆಡೆಯುತ್ತಾ 2020ರ ತನಕ 4ರಿಂದ 5ಬಾರಿ ಗೆಲ್ಲಿಸಿದ್ದಾರೆ 2019ರಲ್ಲಿ ಜಾಯಿಂಟ್ ಸೆಕರೆಟರಿಯಾಗಿ ಕೆಲಸಕ್ಕೆ ಸೇರಿಕೊಂಡೆ ಇದರಕ್ಕಿಂತ ಹಿಂದೆ 2018ರಲ್ಲಿ ಮತ್ತೆ ಮಸ್ತಾಭಿಷೇಕದ ಅವಕಾಶ ಸಿಕ್ಕಿತು ಅದೇ ಮಸ್ತಕಾಭಿಷೇಕದಲ್ಲಿ ಕನ್ವಿನರ್ ಆದೇ ಅನಿಲ್ ಕುಮಾರ್ ಸರ್ ಸ್ವಾಮೀಜಿಯವರ ಆಶೀರ್ವಾದ ಜೀತೇಂದ್ರಕುಮಾರ್ ಆಂಕಲ್ ಇವರೆಲ್ಲರೂ ನನ್ನನ್ನ ಮೋಲ್ಡ್ ಮಾಡುತ್ತಾ ಬಂದರು ನಾನು ಎಷ್ಟು ಕೆಲಸ ಮಾಡಬಹುದು ಸಮಾಜಕ್ಕೆ ನನ್ನ ಅವಶ್ಯಕತೆ ಎಷ್ಟಿದೆ ಯಾವ ಯಾವ ತನಕ ಹೋಗಬಹುದು ಹಾಗಾಗಿ ಈಡೀ ಕರ್ನಾಟಕದಲ್ಲಿ ಇರುವ ದೊಡ್ಡ ದೊಡ್ಡ ಜೈನ ಮುಖ್ಯಸ್ಥರ ಜೊತೆಗೆ ಬೇಟಿ ಮಾತುಕತೆ ಎಲ್ಲಾ ನೆಡೆಯುತ್ತಾ ಬಂತು 2018 ಮಸ್ಥಕಾಭಿಷೇಕ ತುಂಬಾ ಚೆನ್ನಾಗಾಯಿತು 2019ರಲ್ಲಿ ನಾನು ಜಾಯಿಂಟ್ ಸೆಕರೇಟರಿಯಾಗಿ ಕೆಲಸಮಾಡಿದೆ 2009ರಲ್ಲಿ ಹೇಳಬೇಕೆಂದರೆ ಗುಡುಬಂಡೆಯಲ್ಲಿ ಒಂದು ಹಳೇ ದೇವಸ್ಥಾನ ಇತ್ತು 35ವರ್ಷ ಹಿಂದೆಯಿಂದಾನು ಆ ದೇವಸ್ಥಾನ ಬಾಗಿಲು ಹಾಕಿತ್ತು ಜೈನರು ಯಾರಾದರು ಬಂದರೆ ಓಪನ್ ಮಾಡಿ ತೋರಿಸುತ್ತಾ ಇದ್ದರು 2009ರಲ್ಲಿ ಡಾಕ್ಟರ್ ಪುಟ್ಟಣ್ಣಯ್ಯ ಮತ್ತು ಆರ್.ಪಿ ಚಂದ್ರಕೀರ್ತಿ ಮತ್ತು ಜಸ್ಟೀಸ್ ವಸಂತಕುಮಾರ್ ಒಂದು ಟ್ರಸ್ಟ್ ಓಪನ್ ಮಾಡಿದರು ಆ ಟ್ರಸ್ಟ್ ಅಲ್ಲಿ ನಮ್ಮ ಫ್ಯಾಮಿಲಿಗೂ ನಮ್ಮ ಅಪ್ಪನ ಮನೆದೇವರು ಅದು ನಮ್ಮಗೂ ಅವಕಾಶಸಿಕ್ಕಿತು ನಮ್ಮ ಫ್ಯಾಮಿಲಿಯಿಂದ ಸುರೇಶ್ ಕುಮಾರ್ ಜೈನ್ ಧನಿಕುಮಾರ್ ಜೈನ್ ನಮ್ಮ ಚಿಕ್ಕಪ್ಪ ನನ್ನ ತಮ್ಮ ಇವರೆಲ್ಲಾ ಫೌಂಡ್ ಟ್ರಸ್ಟಿ ಆಗಿ ಅದರೊಳಗೆ ಸೇರಿಕೊಂಡಾಗ ಇವಳು ಕೆಲಸಮಾಡುತ್ತಾಳೆ ಎಂದು ನನಗೆ ಅದರ ಸೆಕರೇಟರಿಯಾಗಿ ಮಾಡಿದರು 2009ರಿಂದ 2013ರ ತನಕ ಅದನ್ನು ಹೇಗೆ ಮಾಡಬೇಕು ಹೇಗೆ ಮುಂದೆ ತರಬೇಕು ಹೇಗೆ ರೆಡಿ ಮಾಡಬೇಕು ಅದರ ಬಗ್ಗೆ ಸಾಕಷ್ಟು ಮೀಟೀಂಗ್ ಗಳನ್ನು ನೆಡೆಸಿದ್ದೇವೆ ಪ್ರಸನ್ನಣ್ಣಯ್ಯ ಕೂಡ ಟ್ರಸ್ಟಿ ಅವರ ಜೊತೆಗೆ ಮಾತನಾಡುತ್ತಾ ಇದರ ಬಗ್ಗೆ ಮೀಟಿಂಗ್ ಗಳು ನೆಡೆದಿದ್ದವು ಅಂದಾಜು ವೆಚ್ಚ ಆಗಿನ ಕಾಲದಲ್ಲಿ ಒಂದು ಕೋಟಿ ಒಂದುಕಾಲು ಕೋಟಿ ಯಾರಿಗಾದರು ಕೇಳಿದರೆ ಒಂದು ಲಕ್ಷ 50 ಸಾವಿರ ಕೊಡಬಹುದು ಅಷ್ಟೇ ಈ ಚಿಂತೆಯಲ್ಲಿದ್ದಾಗ ನಾನು ಬೆಂಗಳೂರು ಜೈನ್ ಮಿಲನ್ ಅಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆ ಒಂದು ದಿನ ಜೈನ್ ಮಿಲನ್ ಮೀಟಿಂಗ್ ಸುರೇಂದ್ರಣ್ಣ ನವರ ಮನೆಯಲ್ಲಿ ಇತ್ತು ಆಗ 187 ದೇವಸ್ಥಾನಗಳ ಜೀರ್ಣೋಧ್ದಾರಗಳ ಧರ್ಮೋತ್ತರ ವೀಡಿಯೋ ತೋರಿಸುತ್ತಿದ್ದರು ಯಾವ ಯಾವ ದೇವಸ್ಥಾನಗಳು ಯಾವ ಸ್ಥಿತಿಯಲ್ಲಿವೆ ಹೇಗೆ ಡೆವಲಪ್ ಮಾಡುವುದು ಎಂದು ಧರ್ಮೋತ್ತರ ಟ್ರಸ್ಟ್ ಮೂಲಕ ತೋರಿಸುತ್ತಿದ್ದರು ಆ ಮೀಟಿಂಗ್ ಅಲ್ಲಿ ಡೈರೆಕ್ಟಾಗಿ ಎದ್ದು ನಿಂತು ಕೇಳಿದೆ ಅಣ್ಣ ನಮ್ಮದು ಒಂದು ದೇವಸ್ಥಾನ ಇದೆ ಗುಡಿ ಬಂಡೆ ದೇವಸ್ಥಾನ ಇದೆ ನಮಗೂ ಧರ್ಮೋತ್ತರ ಟ್ರಸ್ಟ್ ಮೂಲಕ ಡೆವಲಪ್ ಮಾಡಿಕೊಡಿ ಅಮೇಲೆ ಅವರ ಮೂಲಕ ಹರಿರಾಮ ಶೆಟ್ಟರು ಅಂತ ಅದನ್ನು ನೋಡಿಕೊಳ್ಳುತ್ತಿದ್ದಂತಹ ಮುಖ್ಯಸ್ಥರು ಅವರು ದೇವಸ್ಥಾನಕ್ಕೆ ಬಂದು ಅಲ್ಲಿಗೆ ಬಂದು ಸರ್ವೆಮಾಡಿ ಯಾವಸ್ಥಿತಿಯಲ್ಲಿದೆ ಅದು ಏನು ಮಾಡಬಹುದು ಎಂದು 48ಲಕ್ಷ ಖರ್ಚು ಬರುತ್ತೆ ಎಂದಾಗ 40% ಧರ್ಮೋತ್ತರ ಟ್ರಸ್ಟ್ 40%ಸ್ಟೇಟ್ ಗೌರ್ಮೆಂಟ್ ಆಫ್ ಕರ್ನಾಟಕ 20% ನಾವು ಟ್ರಸ್ಟ್ ಇಂದ ಹಾಕಬೇಕು ಅಂತ ಇತ್ತು ನಮ್ಮ ಪ್ರಕಾರ ಅಂದಾಜು ವೆಚ್ಚ 8ರಿಂದ9ಲಕ್ಷ ಕೊಡಬೇಕಿತ್ತು ನಮ್ಮ ಟ್ರಸ್ಟ್ ನಲ್ಲಿ ಕನಿಷ್ಟ ಪಕ್ಷ ಒಂದು ಲಕ್ಷನೂ ಬ್ಯಾಲೆನ್ಸ್ ಇಲ್ಲ ಹೇಗಪ್ಪ ಹೊಂಚೊದು ಎಂದು ಯೋಚನೆ ಮಾಡಿದಾಗ 2014 ಜನವರಿ 27 ತಾರೀಖು ಸ್ವಾಮೀಜಿಯವರು ಎಲ್ಲರನ್ನು ಒಂದು ಮೀಟಿಂಗ್ ಕರೆಯಿರಿ ಕನಕಗಿರಿ ಸ್ವಾಮೀಜಿಯವರು ಹೇಳಿದಾಗ ಸ್ಥಾನದಲ್ಲಿದ್ದಂತಹ ಗೋಪಾಲ್ ಅಂತ ಆರ್ಕಲಾಜಿಕಲ್ ಡಿರ್ಪಾಂಟ್ಮೆಂಟ್ ಹೆಡ್ ಆಗಿದ್ದರು ಅವರನ್ನು ಕರೆಸಿದ್ದರು ಮತ್ತು ಅನಿಲ್ ಕುಮಾರ್ ಸರ್ ಜೀತೇಂದ್ರಕುಮಾರ್ ನಾವು ಎಲ್ಲಾ ಸೇರಿ ಆ ದೇವಸ್ಥಾನ ಡೆವಲಪ್ ಮಾಡಬೇಕು ಎಂಬ ಉದ್ದೇಶದಿಂದ ಕಂಕಣ ಕಟ್ಟಿ ಹೇಳಿದರು ಒಂದು ವರ್ಷದಲ್ಲಿ ಈ ದೇವಸ್ಥಾನ ಕಟ್ಟಿ ಮುಗಿಸಬೇಕು ಅಲ್ಲಿ ಗುಡಿ ಬಂಡೆ ದೇವಸ್ಥಾನ ಡೆವಲಪ್ ಮಾಡೋ ದೊಂದೆ ನಿಮ್ಮ ಉದ್ದೇಶ ಆಗಿರಬೇಕು ನಮ್ಮ ಅಪ್ಪ ಪ್ರಭು ಇಲ್ಲ ಇದು ನಮ್ಮ ಮನೆತನಕ್ಕೆ ಸೇರಿದ್ದು ನಾನು ಒಂದು ಲಕ್ಷ ಕೊಡುತ್ತೇನೆ ಎಂದು ತೆಗೆದುಕೊಟ್ಟರು ದೇವಸ್ಥಾನಕ್ಕೆ ಹಣ ಕಲೆಕ್ಷನ್ ಶುರು ಮಾಡಿದೆವು 8 ಲಕ್ಷ ಅಮೌಂಟ್ ಧರ್ಮೋತ್ತರ ಟ್ರಸ್ಟ್ ಗೆ ಪೇ ಮಾಡಿದಮೇಲೆ ಕೆಲಸ ಸ್ಟಾಟ್ ಆಯಿತು 2013 ಏಪ್ರಿಲ್ ಲ್ಲಿ ಕೆಲಸ ಶುರುವಾಯಿತು 2015 ಮೇ 1 2 3 ಆ ದೇವಸ್ಥಾನದ ಪಂಚಕಲ್ಯಾಣದಲ್ಲಿ ಸುರೇಂದ್ರಣ್ಣ ನವರ ಪಾತ್ರ ತುಂಬಾ ಮುಖ್ಯವಾದದ್ದು ಅವರ ಸಹಕಾರದಿಂದ ತುಂಬಾ ಒಳ್ಳೆಯ ಕಾರ್ಯಕ್ರಮ ತುಂಬಾ ಚನ್ನಗಾಯಿತು ಇದು ಹೆಮ್ಮೆಯ ವಿಚಾರ ಎಂದು ಹೇಳಬಹುದು 35 ವರ್ಷದಿಂದ ದೇವಸ್ಥಾನ ಮುಚ್ಚೋಗಿತ್ತು ಈಗ ದಿನ ನಿತ್ಯ ಪೂಜೆ ನೆಡೆಯುತ್ತಿದೆ ಜನರು ಅದಕ್ಕೆ ಒಂದು ರೂಪ ರೇಷೇ ಬಂದಿದೆ ಎಂದು ಹೇಳಿದ್ದಾರೆ ಹಿಂದೆ ಅದು ಪುಂಡ ಪೋಕರಿಗಳ ಅಡ್ಡ ಆಗಿತ್ತು ನಮ್ಮ ಅದೃಷ್ಟ 2015 ರಿಂದ ಇವತ್ತಿನವರೆಗೂ ತುಂಬಾ ಚೆನ್ನಾಗಿ ನೆಡೆದುಕೊಂಡು ಬಂದಿದೆ 2015.ಮೇ 1ಮತ್ತು2,3 ಪಂಚಕಲ್ಯಾಣ ಆಯಿತು ಮತ್ತು ಪ್ರತಿ ವರ್ಷ ವಾರ್ಷಿಕ ಪೂಜೆ ನೆಡೆಯುತ್ತಾ ಬಂತು ಇದಾದನಂತರ 2017 ಮತ್ತು 2018ರಲ್ಲಿ ಹುಲು ದೇವನಹಳ್ಳಿ ದೇವಸ್ಥಾನ ಫೇಸ್ ಬುಕ್ ಲ್ಲಿ ದೇವರು (ಬಿಂಬ) ರೋಡ್ ಲ್ಲಿ ಇದೆ ಎಂಬ ವಿಷಯ ಬಂತು ಜೈನರ ಬಿಂಬ ರೋಡ್ ಲ್ಲಿ ಸೈಡ್ ಲ್ಲಿ ಇದೆ ಎಂದು ಸ್ಪೂರ್ತಿ ಎನ್ನುವ ಹುಡುಗಿ ಫೇಸ್ ಬುಕ್ ಲ್ಲಿ ಹಾಕಿದ್ದಳು ಅದಾದನಂತರ ಅದನ್ನ ನೋಡಿ ಮಾಲೂರು 10 ಮತ್ತು15 ಕಿಲೋ ಮೀ ಅತ್ತಿರ ಅಲ್ಲೋಂದು ಸಂಘಟನೆ ಹೋಗೋಣ ಎಂದರು ಸ್ವಾಮೀಜಿಯವರಿಗೆ ಇನಫರ್ ಮೇಷನ್ ಕೊಟ್ಟು ಕನಕಗಿರಿ ಸ್ವಾಮೀಜಿಯವರು ಮತ್ತೇ ಜೈನ ಸಮುದಾಯದ ಎಲ್ಲಾ ಜನಗಳು ಗಾಡಿ ಮಾಡಿಕೊಂಡು ಊರಿನ ಮುಖ್ಯಸ್ಥರ ಹತ್ತಿರ ಮಾತನಾಡಿಕೊಂಡು ಇದೇನು ಆಗಿತ್ತು ಅಂದರೆ ರೋಡ್ ಲ್ಲಿ ಒಂದು ಮಟನ್ ಶಾಪ್ ಇದೆ ಆ ರೋಡ್ ಸೈಡ್ ಲ್ಲಿ ದೇವರನ್ನು ಇಟ್ಟುಬಿಟ್ಟಿದ್ದಾರೆ ಅದು ಯಾರದೋ ಕಾಂಪೌಡ್ ಒಳಗೆ ಇತ್ತು ಅವರು ಮನೆ ಕಟ್ಟಿಕೊಳ್ಳೋ ಉದ್ದೇಶದಿಂದ ಅದನ್ನು ರೋಡ್ ಲ್ಲಿ ತಂದು ಇಟ್ಟಿದ್ದಾನೆ ಆ ರೋಡ್ ಲ್ಲಿ ಕಾಂಕ್ರೀಟ್ ಹಾಕಿದ್ದಾರೆ ಒಂದು ಲೈಟ್ ಕಂಬದ ಹತ್ತಿರ ಆ ವಿಗ್ರಹ ಇದೆ ಅದರ ಮೇಲೆ ಕಾಂಕ್ರಿಟ್ ಹಾಕಿದ್ದಾರೆ ಕೊನೆಗೆ ಊರವರ ಹತ್ತಿರ ರಿಕ್ವೆಸ್ಟ್ ಮಾಡಿಕೊಂಡು ಅವರ ಹತ್ತಿರ ಗಲಾಟೆಮಾಡಿ ಕೊಡಿ ಅದನ್ನು ನಮ್ಮ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿ ಸ್ಥಾಪನೆ ಮಾಡುತ್ತಿವಿ ಎಂದರೆ ಕೊಡುವುದಕ್ಕೆ ಇಷ್ಟ ಇಲ್ಲ ಬೇರೆ ಹೆಸರಿಟ್ಟು ಗುಡ್ಡಪ್ಪ ಅಂತ ಹೆಸರಿಟ್ಟು ಪೂಜೆ ಮಾಡುತ್ತಿದ್ದರು ನಿಮ್ಮ ರೀತಿ ಮಾಡಿರಲಿಲ್ಲ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು ಆಯಿತು ಎಂದು ರಿಕ್ವೆಸ್ಟ್ ಮಾಡಿಕೊಂಡು ಆ ವಿಗ್ರಹವನ್ನು ನಾಡಕಛೇರಿ ಆಫೀಸ್ ಲ್ಲಿ ಒಂದು ಪೀಠದ ತರ ಮಾಡಿ ಅದರಲ್ಲಿ ಇಟ್ಟೆವು ಇದು ಒಂದು ನನಗೆ ರೋಚಕವಾದಂತಹ ವಿಷಯ ಈ ತರ ನೋಡೋಕೋದರೆ ಸಾಕಷ್ಟು ಕಡೆ ನಮ್ಮ ದೇವರುಗಳು ಬಿದ್ದಿವೆ ಕೆಲವೂಂದು ಸಾರಿ ನಾವು ಕಂಡು ಕಾಣದ ರೀತಿ ಕಣ್ಮುಚ್ಚಿ ಕೂತಿರುತ್ತೆವೆ ಎಂದು ನಮ್ಮನ್ನ ನಾವು ಇನ್ವಾಲ್ ಮಾಡಿಕೊಳ್ಳಬೇಕು ನನ್ನ ಜೀವನದ ದಾರಿ ಹೇಳುತ್ತಿದ್ದೇನೆ ಸ್ವಾಮೀಜಿಯವರು ಕನಕಗಿರಿ ಸ್ವಾಮೀಜಿ ಎನ್ ಆರ್ ಪುರ ಸ್ವಾಮೀಜಿ ಶ್ರವಣಬೆಳಗೊಳ ಸ್ವಾಮೀಜಿ ಎಲ್ಲಾ ಸ್ವಾಮೀಜಿ ನನಗೆ ಸಾಕಷ್ಟು ಬಾರಿ ನನಗೆ ಏನೇ ತೊಂದರೆಯಲ್ಲಿದ್ದಾಗಲೂ ಕೂಡ ಅವರು ಆರ್ಶೀರ್ವಾದ ಕೊಟ್ಟಿದ್ದಾರೆ ದೇವರ ಆ ನನ್ನ ತಂದೆ ತಾಯಿಯ ಆರ್ಶೀರ್ವಾದ ಮತ್ತು ನನ್ನ ಅತ್ತೆ ನಮ್ಮ ಮನೆಯವರ ಸಹಾಯದಿಂದ ನೆಡೆದುಕೊಂಡು ಬಂದಿದೆ ಧನ್ಯವಾದಗಳು 2024 ಮತ್ತು 29 ಕರ್ನಾಟಕ ಜೈನ್ ಅಸೋಸಿಯೇಷನ್ ಚುನಾವಣೆಗೆ ಕಾರ್ಯದರ್ಶಿಯಾಗಿ ಆಯ್ಕೆಮಾಡಿದ ತಮ್ಮೆಲ್ಲರಿಗೂ ಅಭಿನಂದನೆಗಳು ಧನ್ಯವಾದಗಳು ಇನ್ನೋಂದು ವಿಷಯ ಹೇಳಬೇಕೆಂದರೆ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗಲೂ ಮುಖ್ಯ ಕಾರಣ ಜೀತೇಂದ್ರಕುಮಾರ್ ರವರು ಮತ್ತೆ ಎಲ್ಲಾ ಭಟ್ಟಾರಕರ ಆರ್ಶೀರ್ವಾದದಿಂದ ಈ ಸ್ಥಾನವನ್ನು ಅಲಂಕರಿಸಿದ್ದೇನೆ ಇದಕ್ಕೆಲ್ಲಾ ತಮ್ಮೆಲ್ಲರ ಸಹಕಾರ ಇದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.













