ಶ್ರೀ ಜಿತೇಂದ್ರ ಕುಮಾರ್ ಜೈನ್

ಎಲ್ಲರೀಗೂ ಜೈ ಜಿನೇಂದ್ರ, ಇವತ್ತು ವಿಶೇಷವಾಗಿ ಮಂಗಳವಾರ ಬಹಳ ಮಂಗಳಕರವಾದಂತಹ ದಿನ. ನಮ್ಮ ಕೆ ಜೆ ಎ ಕರ್ನಾಟಕ ಜೈನ್ ಅಸೋಸೊಯೇಷನ್ ಎಲೆಕ್ಷನ್ 2024 ಇಂದು ನಡೆದು ಎಲೆಕ್ಷನ್ ಪ್ರಕ್ರಿಯೆ ಮುಗಿದು ಏಣಿಕೆ ನಡೆಯುತ್ತಿದೆ. ಈಗಾ ಕಛೇರಿ ಸಿಬ್ಬಂದ್ಧಿಯವರ ಏಣಿಕೆ ಮುಗಿತು ಅದರಲ್ಲಿ ನಮ್ಮ ತಂಡದವರು ನಾನು ಜಿತೇಂದ್ರ ಕುಮಾರ್ ಅಧ್ಯಕ್ಷನಾಗಿ ಹಾಗೂ ಶೀತಲ್ ಪಾಟೀಲ್ ಉಪಾಧ್ಯಕ್ಷರಾಗಿ, ರಾಜಕೀರ್ತಿಯವರು ಉಪಾಧ್ಯಕ್ಷರಾಗಿ, ಆಶಾ ಪ್ರಭು ಕಾರ್ಯದರ್ಶಿಯಾಗಿ ಜೊತೆಗೆ ಮಹಾವೀರ್ ಜೈನ್ ಅವರು ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಇದು ಬಹಳ ಸಂತೋಷದ ವಿಷಯ, ನಾವು ಜಯಶೀಲರಾಗಿದ್ದಕ್ಕೆ ಪ್ರಮುಖ ಕಾರಣ ಎಂದರೆ ನಮ್ಮ ಎಲ್ಲ ಪೀಠಾಧೀಶರು. ನಮ್ಮ ಎಲ್ಲ ಅಕಾಂಕ್ಷೇ ಅಪೇಕ್ಷೆ ಎನ್ನು ಇತ್ತು ಎಂದರೆ ನಮ್ಮ ಹಿಂದಿನ ಶ್ರವಣ ಬೆಳಗೊಳದ ಪೂಜ್ಯ ಸ್ವಾಮೀಜಿಗಳವರ ಆತ್ಮಶಾಂತಿ, ಅವರು ಬಹಳ ನೋಂದಿದ್ದರು ಹಿಂದೆ ನಡೆದಿದ್ದ ಕೆಲವು ಘಟನೆಗಳಿಂದ ಎಲ್ಲರಿಗೂ ಶುಭಮಸ್ತು.

ನಾವು ಈ ಒಂದು ಎಲೆಕ್ಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ನಾವು ಜಯಶೀಲರಾಗಿದ್ದಕ್ಕೆ ನಮ್ಮ ಪುಣ್ಯ, ನೀತಿ, ನ್ಯಾಯ, ಧರ್ಮ ಯಾವತ್ತು ಶಾಶ್ವತವಾಗಿ ಇರಬೇಕು ಪೀಠಾಧೀಶರ ಒಂದು ಮಾರ್ಗ ದರ್ಶನದಲ್ಲಿ ಮುಂದುವರೆಯ ಬೇಕು. ಮಠಾಧೀಶರಿಲ್ಲದೆ ಸಮಾಜ ಇಲ್ಲ ಸಮಾಜ ಇಲ್ಲದೆ ಮಠಾಧೀಶರಿಲ್ಲಾ ಎನ್ನುವುದು ತಮಗೆಲ್ಲರಿಗೂ ಗೊತ್ತಿರುವ ವಿಷಯ. ಈ ಒಂದು ಸಂದರ್ಭದಲ್ಲಿ ಮಠಾಧೀಶರು ನಮಗೆ ಏನು ಪ್ರೋತ್ಸಹ ಪ್ರೇರಣೆ ನೀಡಿದರು ಅವರಿಗೆಲ್ಲಾ ನಮೋಸ್ತುಗಳನ್ನು ಹೇಳುತ್ತ ಇದು ಧರ್ಮಕ್ಕೆ, ನ್ಯಾಯಕ್ಕೆ, ನೀತಿಗೆ ಹಾಗೂ ಸಮಾಜಕ್ಕೆ ಕರ್ನಾಟಕ ಜೈನ ಅಸೋಸಿಯೇಷನ್ ಏಳಿಗೆಗೆ ಸಂದಂತಹ ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ.

ಈ ಒಂದು ಪ್ರಕ್ರಿಯೆಯಲ್ಲಿ ಎಲೆಕ್ಷನ್ ಅಧಿಕಾರಿಗಳು ಚುನಾವಣಾಧಿಕಾರಿಯವರು ಅವರ ಸಿಬ್ಬಂದ್ಧಿ ವರ್ಗ ಬಹಳ ಅಸಾಧ್ಯವಾದ ಕೆಲಸ ಮಾಡಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತ ನಮ್ಮ ಸಮಾಜ ನಮ್ಮ ಹಿಂದೆ ನಿಂತು ಅಭಿವೃದ್ದಿ ಮಾಡುವುದಕ್ಕೆ ಈ ಮಟ್ಟಕ್ಕೆ ಬರುವುದಕ್ಕೆ ಸಮಾಜ ಕಾರಣ ಅದ್ದರಿಂದ ಈ ಗೆಲುವು ಸಮಾಜಕ್ಕೆ ಸಮರ್ಪಣೆ. ಸಮಾಜಕ್ಕೆ ಏಳಿಗೆಯಾಗಲಿ, ಸಮಾಜ ಮುಂದುವರೆಯಲ್ಲಿ ಎಲ್ಲ ಭಟ್ಟಾರಕರುಗಳು ನಮಗೆ ಆಶೀರ್ವಾದ ಮಾಡುತ್ತಿರಲಿ, ನಮಗೆ ಇದೇ ರೀತಿ ಮುಂದುವರೆಯುವುದಕ್ಕೆ ನಮಗೆ ಪ್ರೇರಣೆ ಪ್ರೋತ್ಸಹ ನಮ್ಮ ಹಿಂದಿನ ಶ್ರವಣ ಬೆಳಗೊಳ ಸ್ವಾಮಿಗಳ ಆಶೀರ್ವಾದ ಚಿರಕಾಲ ನಮ್ಮ ಮೇಲೆ ಇರಲಿ ಎಂದು ನಾನು ಬಾವಿಸುತ್ತ ಈ ಒಂದು ಕಾರ್ಯಕ್ರಮವನ್ನ ಬಹಳ ವಿಶೇಷವಾಗಿ ಬಿತ್ತರಿಸುತ್ತಿರುವಂತಹ ಜ್ವಾಲಮಾಲ ನ್ಯೂಸ್ ವೈಶಾಲಿ ಚಂದ್ರ ಪ್ರಭು ಅವರಿಗೆ ಹಾಗೂ ಅವರ ಸಿಬ್ಬಂದ್ಧಿ ವರ್ಗದವರಿಗೆ ಎಲ್ಲರಿಗೂ ಅನಂತ ಕೃತಜ್ಞತೆಗಳನ್ನ ನಮ್ಮ ಎಲ್ಲ ಕರ್ನಾಟಕ ಜೈನ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವವರ ಪರವಾಗಿ ನಾನು ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಈಗ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಅವರೇಲ್ಲರ ಪರವಾಗಿ ಹಾರ್ದಿಕ ಅಭಿನಂದನೆಯನ್ನು ಶುಭಾಷಯಗಳನ್ನ ಹೇಳುವುದಕ್ಕೆ ಇಷ್ಟಪಡುತ್ತೇನೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್