ಶ್ರಾವಣಬೆಳಗೋಲದಲ್ಲಿ ಪೂಜಾ ಸಮಿತಿ / ಜ್ವಾಲಮಲಾನ್ಯೂಸ್ / 2018

ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂಜಾ ಉಪ ಸಮಿತಿ ವತಿಯಿಂದ  ಪರಮ ಪೂಜ್ಯ ಜಗದ್ಗುರು  ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳ  ಪಾವನ ಸಾನಿಧ್ಯದಲ್ಲಿ  ಪರಮ ಪೂಜ್ಯ ಶ್ರೀಗಳವರಿಗೆ  ಭಕ್ತಿ ಪೂರ್ವಕ ಗೌರವ  ಸಮರ್ಪಣೆ  ಪದಾದಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಗೌರವ ಸಮರ್ಪಣೆ ಕಾರ್ಯಕೃಮ ಹಮ್ಮಿಕೊಳ್ಳಲಾಗಿತ್ತು . ದಿನಾಂಕ : 6/9/2018 ರಂದು ನಡೆದ  ಕಾರ್ಯಕ್ರಮದಲ್ಲಿ ಮಹಾ ಮಸ್ತಕಾಭಿಷೇಕದ ರಾಷ್ಟ್ರೀಯ ಕಮಿಟಿಯ ಅಧ್ಯಕ್ಷರಾದ ಶ್ರೀಮತಿ  ಸರಿತಾ ಜೈನ್ , ಸಮಿತಿಯ ಅಧ್ಯಕ್ಷರಾದ ಬಿ.ವಿ. ಶಾಂತಿಪ್ರಸಾದ್ ಉಪಸ್ಥಿತರಿದ್ದು ಕಾರ್ಯಕ್ರಮ ಬಾಹುಬಲಿ ಸ್ತುತಿಯೊಂದಿಗೆ ಪ್ರಾರಂಭಗೊಂಡಿತು.

 

ಶ್ರೀಗಳವರು  ಪಟ್ಟಾಭಿಶಿಕ್ತನಾದಾಗಿನಿಂದ  4 ಮಸ್ತಕಾಭಿಷೇಕಗಳನ್ನು ಅವರ ನೇತೃತ್ವದಲ್ಲಿ  ವಿಶ್ವವೇ ಗುರುತಿಸುವ ರೀತಿಯಲ್ಲಿ  ಜಗತ್ತಿನಲ್ಲಿ ಸುದೀರ್ಘ ಸಾಂಸ್ಕೃತಿಕ  ಬೃಹತ್ ಮಹೋತ್ಸವವನ್ನು  ಪರಿಕಲ್ಪಿಸಿ ಅತ್ಯಂತ ಶಿಸ್ತಿನಿಂದ  ಸತತ ಪರಿಶ್ರಮದಿಂದ ಯಶಸ್ವಿಯಾಗಿ ವಿಜೃಂಭಣೆಯಾಗಿ  ನಡೆಸಿದ ಧರ್ಮ ದಿವಾಕರ.  ಇಂತಹ ಒಂದು ಅಮೋಘ ಪೂಜಾ ಮಹೋತ್ಸವದ ಕಾರ್ಯಕ್ರಮದಲ್ಲಿ

ತಮಗೂ ಸೇವೆಯ ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಕೃತಕಭಾವ ದಿಂದ ಶ್ರೀಗಳವರಿಗೆ ಸಮಿತಿಯ ಸದಸ್ಯರೆಲ್ಲರೂ ಸೇರಿ ಪಾದ ಪೂಜೆ ಮೂಲಕ ಗೌರವ ಸಲ್ಲಿಸಿದರು.

ಶ್ರೀ ಗಳವರು ಸಮಿತಿ ಸದಸ್ಯರುಗಳಿಗೆ ಆಶೀರ್ವಚನ ನೀಡಿ ಇದು ಭಕ್ತಿಯ ಕಾರ್ಯಕ್ರಮ ಎಲ್ಲರೂ ಜೊತೆಗೂಡಿ ಒಗ್ಗಟ್ಟಿನಿಂದ ಎಷ್ಟು ಭಕ್ತಿಯಿಂದ ಜೋಡಿಸಿಕೊಳ್ಳುತ್ತೇವೇಯೋ  ಅಷ್ಟು ಶಕ್ತಿ ಬರುತ್ತದೆ. ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ನುಡಿದರು.  ಕಾರ್ಯಕ್ರಮದಲ್ಲಿ ಸಮಿತಿಯ ಮುಖ್ಯ ಸಂಯೋಜಕರಾದ  ಜಿ.ಡಿ ಸಂತೋಷ್ ಕುಮಾರ್ , ಸಮಿತಿಯ ಪದಾದಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಅತ್ಯುತ್ತಮ ಕಾರ್ಯಕ್ರಮವಾಗಿ ಜರುಗಿತು.  ನಿರಂತರ ವಿಶೇಷ ಸುದ್ದಿಗಾಗಿ ವೀಕ್ಷಿಸುತ್ತಿರಿ ಜ್ವಾಲಾಮಾಲಾ ನ್ಯೂಸ್ .