ಧರ್ಮಯಾತ್ರೆ
ಆತ್ಮೀಯ ಬಂಧುಗಳೇ, ಕರ್ನಾಟಕದ ಜೈನ ಸಮಾಜದ ಸರ್ವತೋಮುಖ ಅಭಿವೃದ್ದಗಾಗಿ ಕರ್ನಾಟಕ ಜೈನ್ ಅಸೋಸಿಯೇಷನ್ ಸತತವಾಗಿ ಜೂಲೈ 1999 ರಿಂದ 2019ರ ವರೆಗೆ ಸಮಾಜ ರತ್ನ, ಶ್ರಾವಕ ರತ್ನ ಇತ್ಯಾದಿ ಪ್ರಶಸ್ತಿಗಳಿಂದ ಅಲಂಕೃತರಾದ ಶ್ರೀ ಎಸ್ ಜಿತೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಗಲು ರಾತ್ರಿ ಶ್ರಮಿಸಿ ರಾಜಧಾನಿ ಬೆಂಗಳೂರಿನಲ್ಲಿ ಭಾರತಾಧ್ಯಂತ ಪ್ರಖ್ಯಾತವಾಗಿರುವ ಜೈನ ಸಮಾಜದ ಹೆಮ್ಮೆಯ ಕರ್ನಾಟಕದ ಜೈನ ಭವನಗಳನ್ನು ಒಳಗೊಂಡ ಮೋತೀಖಾನೆ ತಿಮ್ಮಪಯ್ಯ ಜೈನ ವಿದ್ಯಾರ್ಥಿನಿಲಯದ ಯೋಜನೆಯನ್ನು 6.5 ಕೋಟಿ ರೂಗಳ ವೆಚ್ಚದಲ್ಲಿ ಪೂರೈಸಿ ಬಳಕೆಗೆ ತಂದಿರುವುದು ಸರ್ವವಿಧಿತ. ಇದಕ್ಕೆ ಶ್ರವಣ ಬೆಳಗೊಳದ ಪೂಜ್ಯ ಪಟ್ಟಾಚಾರ್ಯರು ಪೂಜ್ಯ, ಭಟ್ಟಾರಕರುಗಳು, ಡಾ|| ಡಿ ವೀರೇಂದ್ರ ಹೆಗ್ಗಡೆ ಇವರುಗಳ ಪ್ರೇರಣೆ ಶುಭಾಶೀರ್ವಾದ ಮಾರ್ಗದರ್ಶನ ಹಾಗೂ ಧನ ಸಹಾಯ ಮತ್ತು ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರವರ ಸಮರ್ಥ ಮಾರ್ಗದರ್ಶನ, ಬೋರ್ಗಾವ್ ನ ಶ್ರೀ ರಾವ್ ಸಾಹೇಬ್ ಪಾಟೀಲರ ಸೈಯೋಗ ಮತ್ತು ಪಧಾಧಿಕಾರಿಗಳು ಮತ್ತು ಯೋಜನ ಸಮಿತಿಯ ಸಹಕಾರ ಕಾರಣವಾಗಿದೆ. 1999 ರಿಂದ 2019ರ ವರೆಗಿನ ನಮ್ಮ ಸಾಧನೆಯ ಪಕ್ಷಿನೋಟ ಹೇಳುವುದಾದರೆ. ಕರ್ನಾಟಕ ಜೈನ ಭವನದ ಸಂಕೀರ್ಣದ ರಕ್ಷೆಗೆ ಬೆಂಗಳೂರು ಮಹಾನಗರದ ಪಾಲಿಕೆಯ ಅನುಮೋದನೆಗೆ ಶ್ರೀ ಎಂಜೆ ಇಂದ್ರ ಕುಮಾರ್ ರವರ ಸಹಕಾರ. ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು ಚೇರ್ ಮೆನ್ ಆಗಿದ್ದ ಯೋಜನಾ ಕಾರ್ಯಗತ ಸಮಿತಿ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಚಾಲನೆ. ಫೆಬ್ರವರಿ 2002 ರಲ್ಲಿ ಅಭೂತ ಪೂರ್ವ ಶಿಲಾನ್ಯಾಸ ಕಾರ್ಯವನ್ನು ಶ್ರವಣ ಬೆಳಗೊಳದ ಶ್ರೀಗಳವರ ಅರಹಂತಗಿರಿ ಭಟ್ಟಾರಕರ ಹಾಗೂ ಡಾ|| ವೀರೇಂದ್ರ ಹೆಗ್ಗಡೆ ಯವರ ಉಪಸ್ಥಿತಿಯಲ್ಲಿ ಸಂಪನ್ನ. ಅಧುನಿಕ ಸೌಲಭ್ಯಗಳ 2 ಸಭಾ ಭವನ ನಿರ್ಮಾಣ ಶ್ರೀ ಹೆಚ್ ಡಿ ಪಾರ್ಶ್ವನಾಥ ರವರ ಪರಿಶ್ರಮದಿಂದ 2003 ರ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭ ಅನೇಕ ಗಣ್ಯಾತಿ ಗಣ್ಯರೆಲ್ಲ ಪಾಲ್ಗೊಂಡು ಭವನ ಕುರಿತು ಮೆಚ್ಚುಗೆಯ ಮಾತು. ಯೋಜನೆಗೆ ಹಣವನ್ನು ಒಟ್ಟುಗೂಡಿಸಲು 2001, 2003 ಮತ್ತು 2006 ರಲ್ಲಿ ವೇಣುರು ಕಾರ್ಕಳ ಹಾಗೂ ಶ್ರವಣ ಬೆಳಗೊಳದಲ್ಲಿ ಮಹಾಮಸ್ತಾಕಾಭಿಷೇಕಗಳನ್ನು ನೆರವೇರಿಸಿ 6.56 ಲಕ್ಷ ರೂಗಳ ಉಳಿತಾಯ ಸಾಧಿಸಿ ಹುಡ್ಕೋ ಸಂಸ್ಥೆಯಿಂದ 2 ಕೋಟಿ ರೂಗಳ ಸಾಲವನ್ನು ದಾನಿಗಳ ಮತ್ತು ಸರ್ಕಾರದಿಂದ ಪಡೆದ ದನ ಸಹಾಯದ ಜೊತೆಗೆ 1 ಕೋಟಿ ರೂಪಾಯಿಗಳ ಕಾಲ್ಡ್ ಡಿಪಾಸಿಟ್ ಪಡೆಯುವಲ್ಲಿ ಭೋರ್ಗಾವ್ ನ ಶ್ರೀ ರಾವ್ ಸಾಹೇಬ್ ಪಾಟೀಲರ ಪಾತ್ರ ಅವಿಸ್ಮರಣಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಗಲಿರುಳು ಎನ್ನದೆ ರಾಜ್ಯಾದ್ಯಂತ ಮನೆಮನೆಗೆ ಭೇಟಿ ನೀಡಿ ಧನ ಸಂಗ್ರಹಿಸಿ ಜೈನ ಭವನ ನಿರ್ಮಾಣದ ಯಶಸ್ಸು, ಈ ಸಮಯದಲ್ಲಿ ಹುಡ್ಕೋ ಸಂಸ್ಥೆಯ ಸಾಲವನ್ನು ಸಹ ತೀರಿಸಲಾಗಿತ್ತು. 12 ಕೊಠಡಿಗಳಿದ್ದ ಹಳೆ ವಿದ್ಯಾರ್ಥಿನಿಲಯದ ಸ್ಥಳದಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ 72 ಕೊಠಡಿಗಳ 4 ಅಂತಸ್ತಿನ ಮೋತಿಖಾನೆ ತಿಮ್ಮಪಯ್ಯ ಜೈನ ವಿದ್ಯಾರ್ಥಿನಿಲಯದ ನಿರ್ಮಾಣ 2004ರಿಂದ 130 ವಿದ್ಯಾರ್ಥಿಗಳಿಂದ ಅದರ ಬಳಕೆ ಭಗವಾನ್ ಶ್ರೀ ಮಹಾವೀರ ಜಿನ ಮಂದಿರವನ್ನು ನಿರ್ಮಾಣ ಮಾಡಿ 2006 ಏಪ್ರಿಲ್ ತಿಂಗಳಲ್ಲಿ ಅದರ ಲೋಕಾರ್ಪಣೆ. ಜೈನ ಮಂದಿರದ ಉತ್ಪತಿಯಿಂದ ಅದರ ಜಿನ ಮಂದಿರ, ಅತಿಥಿ ಗೃಹ, ವಿದ್ಯಾರ್ಥಿನಿಲಯ ಇತ್ಯಾದಿ ನಿರ್ವಹಣೆ ಪ್ರತಿವರ್ಷ 8 ಲಕ್ಷ ರೂಗಳ ವಿದ್ಯಾರ್ಥಿ ವೇತನ ಮಂಜೂರಾತಿ ಅದರಲ್ಲು ವಿಶೇಷವಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಕೊಡುಗೆ. 2013 ರಲ್ಲಿ ಭವನದ ಉತ್ಪತಿ ಮತ್ತು ವಿಜಯ ಬ್ಯಾಂಕ್ ನಿಂದ ಪಡೆದ 1ಕೋಟಿ ರೂಗಳ ಸಾಲದಿಂದ 2ಕೋಟಿ ರೂಗಳ ವೆಚ್ಚದಲ್ಲಿ ಕಟ್ಟಡ ಖರೀದಿಸಿ 31 ಮಹಿಳಾ ವಿದ್ಯಾರ್ಥಿಗಳ ವಾಸ್ಥವ್ಯಕ್ಕೆ ಅವಕಾಶ. ಸಂಘದ ನಿಬಂಧನೆ ತಿದ್ದುಪಡಿಮಾಡಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ 13 ವಿಭಾಗಗಳನ್ನು ಸ್ಥಾಪಿಸಿ ಪ್ರಾತಿ ನಿದ್ಯತೆ ಕಲ್ಪಿಸಿದ್ದು ಅಲ್ಪಸಂಖ್ಯಾತ ಜೈನ ಸಮುದಾಯದವರಿಗೆ ಸರ್ಕಾರದಿಂದ ಸೌಲಭ್ಯಗಳ ಕೈಪಿಡಿಯನ್ನು ಪ್ರಕಟಿಸಿ ಸಮಾವೇಶಗಳ ಮೂಲಕ ಜಾಗೃತಿ ಮೂಡಿಸಿರುವುದು 2014 ರಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ 18 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿ ಮಾಡಿಸಿದ್ದು. ಜೈನ ಸಮುದಾಯದವರನ್ನು ಅಲ್ಪಸಂಖ್ಯಾತರು ಎಂದು ವರ್ಗಿಕರಿಸಲು ಒತ್ತಾಯಿಸಿದ್ದರಿಂದ ಕೇಂದ್ರ ಸರ್ಕಾರವು ಜೈನರನ್ನು 2014 ರಲ್ಲಿ ಅಲ್ಪಸಂಖ್ಯಾತರೆಂದು ಘೋಷಿಸಿದ ಆದೇಶ ಜಾರಿ ಮಾಡಿಸಿದ್ದು. ಅದಾಯ ತೆರಿಗೆ ಇಲಾಖೆಯಲ್ಲಿ ನೋಂದಣಿ ಅದಾಯಕ್ಕೆ ತೆರಿಗೆ ವಿನಾಯಿತಿ, ಟಿ ಡಿ ಎಸ್ ನೋಂದಣಿ ಪ್ರಮಾಣ ಪತ್ರ, ಲೆಗ್ಜೂರಿ ಟ್ಯಾಕ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ ನೋಂದಣಿಗೆ ಪ್ರಮಾಣ ಪತ್ರ, ಪ್ರೋಫೆಶ್ನಲ್ ಟ್ಯಾಕ್ಸ್ ನೋಂದಣಿ ಪ್ರಮಾಣ ಪತ್ರ. ಜೈನ್ ಹಾಸ್ಟೆಲ್ ಹೆಸರಿನಲ್ಲಿದ್ದ ಸಂಸ್ಥೆಯ ಖಾತ ಪ್ರಮಾಣ ಪತ್ರವನ್ನು ಸಂಘದ ಹೆಸರಿಗೆ ವರ್ಗಾವಣೆ. ಎಲೆಕ್ಟ್ರಿಕಲ್ ಇನ್ಸ್ಪೆಕ್ಟೋರೈಟ್ ವತಿಯಿಂದ ಪ್ರಮಾಣ ಪತ್ರ ಮತ್ತು ಅನುಮತಿ ಪತ್ರ, ಎಕ್ಸಕ್ಲೂಸಿವ್ ಇನ್ಸ್ಪೆಕ್ಟೋರೈಟ್ ವತಿಯಿಂದ ಪ್ರಮಾಣ ಪತ್ರ ಹಾಗೂ ಕಾಲ ಕಾಲಕ್ಕೆ ಅನುಮತಿ ಪತ್ರ. ಸಭಾ ಭವನಗಳನ್ನು ನಡೆಸಲು ಬೆಂಗಳೂರು ಮಹಾನಗರ ಪಾಲಿಕೆ ಯಿಂದ ಟ್ರೇಡ್ ಲೈಸೆನ್ಸ್ ಮತ್ತು ಪ್ರತಿ ವರ್ಷ ಅದರ ನವೀಕರಣ. ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಭಾಗಕ್ಕು ಆಸ್ತಿ ತೆರಿಗೆ ವಿನಾಯಿತಿ ಮುಂದುವರೆಸಿಕೊಂಡು ಹೋಗಲು ಬೆಂಗಳೂರು ಮಹಾನಗರ ಪಾಲಿಕೆಯ ಪ್ರಮಾಣಪತ್ರ ಪಡೆದದ್ದು. ಶ್ರವಣ ಬೆಳಗೊಳದ ಪೂಜ್ಯ ಶ್ರೀಗಳವರ ಹೆಸರಿನಲ್ಲಿ ಚಾರು ಶ್ರೀ ವಿದ್ಯಾರ್ಥಿ ವೇತನ ನಿಧಿ ಸ್ಥಾಪಿಸಿ ಅದರ ಅದಾಯದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿ. ನೂತನವಾಗಿ ಪಟ್ಟಾಭಿಷಕ್ತರಾದ ಪೂಜ್ಯ ಭಟ್ಟಾರಕರುಗಳ ಪೂರ ಪ್ರವೇಶ ಆಯೋಜನೆ. 2009 ರ ಜೂನ್ ತಿಂಗಳಲ್ಲಿ 11 ದಿನಗಳ ಕಾಲ ಅಭೂತ ಪೂರ್ವ ಜೈನ ಸಂಸ್ಕೃತಿ ಮಹೋತ್ಸವವನ್ನು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆಯೋಜನೆ. ಈ ಶುಭ ಸಂದರ್ಭದಲ್ಲಿ ಪೂಜ್ಯ ಶ್ರೀಗಳವರಿಗೆ ಕೆ ಜೆ ಎ ವತಿಯಿಂದ ಸ್ಯಾದ್ವಾದ ಸಿದ್ದಾಂತ ಚಕ್ರವರ್ತಿ ಎಂದ ಉಪಾದಿಯನ್ನು ಭಕ್ತಿಪೂರ್ವಕ ಸಮರ್ಪಿಸಿ ಧನ್ಯತಭಾವ ಪ್ರಕಟಿಸಿದ್ದು. 2010 ರಲ್ಲಿ ಪರಮ ಪೂಜ್ಯ ಶ್ರೀ ಜ್ಞಾನಸಾಗರಜಿ ಮುನಿ ಮಹರಾಜರ ಮಾರ್ಗದರ್ಶನದಲ್ಲಿ ರಾಷ್ಟ್ರ ಮಟ್ಟದ ಜೈನ್ ವೈದ್ಯರುಗಳ, ಜೈನ ವಕೀಲರುಗಳ, ಜೈನ ವಿಜ್ಞಾನಿಗಳ ಸಮಾವೇಶ. ಪ್ರತಿಭಾ ಪುರಸ್ಕಾರ ಮತ್ತು ಗುರುವಂಧನ ಕಾರ್ಯಕ್ರಮಗಳ ಅಯೋಜನೆ. ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಮವತ್ಸರಣ ಆರಾಧನೆ. ಶುಲಕ ರತ್ನ ಶ್ರೀ ಸುಧರ್ಮಗುತಿ ಮಹಾರಾಜರ ನೇತೃತ್ವದಲ್ಲಿ ಶ್ರೀ ಧರ್ಮ ಚಕ್ರ ಆರಾಧನೆ. 2014 ಡಿಸೆಂಬರ್ ತಿಂಗಳಲ್ಲಿ ಶ್ರವಣ ಬೆಳಗೊಳದ ಪೂಜ್ಯ ಶ್ರೀಗಳವರ ಮಾರ್ಗ ದರ್ಶನದಲ್ಲಿ ಜಿನ ಗುಣ ಸಂಪತ್ತಿ ಆರಾಧನೆ. ಜೈನ ಶಾಸನ ಸಾಹಿತ್ಯ ಸಮಾವೇಶ ಮತ್ತು ಪೂಜ್ಯ ಪಟ್ಟಚಾರ್ಯರುಗಳ ಸಮಾವೇಶ ಆಯೋಜನೆ ಐತಿಹಾಸಿಕ ದಾಖಲೆ ನಿರ್ಮಾಣ. ಪ್ರತಿ ವರ್ಷವು ಮಹಾವೀರ ಜಯಂತಿ ದಶಲಕ್ಷಣ ಪರ್ವ ಆಚರಣೆ ಸಂದರ್ಭಗಳಲ್ಲಿ ರಕ್ತದಾನ, ಕೃತಕ ಕಾಲು ಜೋಡಣೆ, ನೇತ್ರ ತಪಾಸಣೆ, ಆರೋಗ್ಯ ತಪಾಸಣೆ, ಸ್ತ್ರೀ ಆರೋಗ್ಯ ತಪಾಸಣೆ, ಜೀವಮಾನದ ವಿಶಿಷ್ಠ ಸೇವೆ ಸಲ್ಲಿಸಿರುವ ವ್ಯಕ್ತಿಯೊಬ್ಬರಿಗೆ ಪ್ರತಿ ವರ್ಷ ಮಹಾವೀರ ಪ್ರಶಸ್ತಿ ಪ್ರಧಾನ ಹಾಗೂ ವಿಶಿಷ್ಠ ಜೈನ ಸಾಧಕರನ್ನುಗೌರವಿಸುತ್ತಿರುವುದು. 2015ರಲ್ಲಿ ಪುರಾತನ ಜೈನ ಬಸದಿಗಳ ಜೀರ್ನೋದ್ದಾರ ಹಾಗೂ ಧಾರ್ಮಿಕ ಕಾರ್ಯಗಳಿಗೆ ಆರ್ಥಿಕ ನೆರವು ನೀಡಲು ಕೆ ಜೆ ಎ ಚಾರ್ಟಿ ಫಂಡ್ ಸ್ಥಾಪನೆ. 2016 ರಲ್ಲಿ ಶ್ರವಣ ಬೆಳಗೊಳದಲ್ಲಿ ಜರುಗಿದ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ 7 ಲಕ್ಷಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳಿಗೆ ಅಧ್ಯಕ್ಷರ ನೇತೃತ್ವದಲ್ಲಿ ವಸತಿ ಊಟೋಪಚಾರ ವ್ಯವಸ್ಥೆ ಆಯೋಜನೆ. ಪ್ರತಿವರ್ಷ ಮಹಾವೀರ ಶಾಂತಿ ಪ್ರಶಸ್ತಿ ನೀಡಲು 2015ರಲ್ಲಿ ಮಹಾವೀರ ಫಂಡ್ ಸ್ಥಾಪಿಸಿ 8.50 ಲಕ್ಷ ರೂಗಳ ಸಂಗ್ರಹಣೆ. 2016 ರಲ್ಲಿ ಶ್ರವಣ ಬೆಳಗೊಳದ ಶ್ರೀಗಳವರ ಮಾರ್ಗ ದರ್ಶನದಲ್ಲಿ ಕರ್ನಾಟಕದ ಜೈನ ಸಮಾಜದವರು ಅಭಿಮಾನಿಗಳು ಕೆ ಜೆ ಎ ಅಧ್ಯಕ್ಷ ಎಸ್ ಜಿತೇಂದ್ರ ಕುಮಾರ್ ರವರಿಗೆ ರಾಜ್ಯಮಟ್ಟದ ಅಭಿನಂದನಾ ಸಮಾರಂಭವನ್ನು ಎಲ್ಲ ಜೈನ ಮಠದ ಪೂಜ್ಯ ಮಠಾಧೀಶರು ಗೌರವಾನ್ವಿತ ಡಾ|| ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಮೈಸೂರಿನಲ್ಲಿ ಆಯೋಜಿಸಿ ರೂವಾರಿ ಅಭಿನಂದನ ಗ್ರಂಥ ಸಮರ್ಪಣೆ ಮಾಡಿದ್ದು. 2018 ರಲ್ಲಿ ಶ್ರವಣ ಬೆಳಗೊಳದಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಕಾರ್ಯದ್ಯಕ್ಷರನ್ನಾಗಿ ಕೆ ಜೆ ಎ ಅಧ್ಯಕ್ಷರಾದ ಜಿತೇಂದ್ರ ಕುಮಾರ್ ರವರನ್ನು ಶ್ರೀಗಳವರು ನಿಯೋಜಿಸಿ ಮಸ್ತಕಾಭಿಷೇಕ ಮಹೋತ್ಸವ ಯಶಸ್ವಿ ನಿರ್ವಹಣೆ. 2018ರ ಜೂನ್ ತಿಂಗಳಲ್ಲಿ ಕೆ ಜೆ ಎ ಶತಮಾನೋತ್ಸವದ ಉದ್ಘಾಟನ ಸಮಾರಂಭವನ್ನು ಶ್ರವಣ ಬೆಳಗೊಳದ ಪೂಜ್ಯ ಶ್ರೀಗಳವರ ಸಾನಿಧ್ಯ ಮತ್ತು ಗೌರವಾನ್ವಿತ ಡಾ|| ಡಿ ವೀರೇಂದ್ರ ಹೆಗ್ಗಡೆಯವರು, ಶ್ರೀಧರ್ಮಸ್ಥಳ ಡಿ ಸುರೇಂದ್ರ ಕುಮಾರ್ ಹಾಗೂ ಬೋರ್ಗಾವ್ ನ ರಾವ್ ಸಾಹೇಬ್ ಎ ಪಾಟೀಲ್ ಅವರುಗಳ ಉಪಸ್ಥಿತಿಯಲ್ಲೂ 2019ರ ಅಕ್ಟೋಬರ್ ತಿಂಗಳಲ್ಲಿ ಮುಕ್ತಾಯ ಸಮಾರಂಭವನ್ನು ಶ್ರವಣ ಬೆಳಗೊಳ ಪೂಜ್ಯ ಶ್ರೀಗಳವರು ಎಲ್ಲ ಮಠಗಳ ಭಟ್ಟಾರಕರುಗಳ ಸಾನಿಧ್ಯದಲ್ಲಿ ಮತ್ತು ಸರ್ವೋಚ್ಛ ನ್ಯಾಯಾಲಯದ ನ್ಯಾಯ ಮೂರ್ತಿ ಶ್ರೀ ರಾಜೇಂದ್ರ ಬಾಬು, ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್, ಡಾ|| ಹಂಪ ನಾಗರಾಜಯ್ಯ, ಶ್ರೀ ವಿನೋದ್ ದೊಡ್ಡಣ ನವರ್, ಡಾ|| ಪದ್ಮರಾಜ್ ದಂಡಾವತಿ ಅವರುಗಳ ಉಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದು ಒಂದು ಇತಿಹಾಸ. ಹೀಗೆ ಇನ್ನು ಹತ್ತು ಹಲವು ಕೆಲಸ ಕಾರ್ಯಗಳನ್ನು ಇಡೇರಿಸಲು ಪೂಜ್ಯ ಭಟ್ಟಾರಕರುಗಳ, ಪೂಜ್ಯ ಹೆಗ್ಗಡೆಯವರ, ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್, ಶ್ರೀ ರಾವ್ ಸಾಹೇಬ್ ಎ ಪಾಟೀಲ್ ಅವರ ಗಣ್ಯ ಮಹನೀಯರ ಹಾಗೂ ಸಮಸ್ತ ಜೈನ ಜೈನೇತರ ಬಂಧುಗಳ ಸಹಾಯ ಸಹಕಾರದಿಂದ ಸಾಧ್ಯವಾಯಿತು. ಈ ಎಲ್ಲ ಮಹನೀಯರಿಗಳಿಗು ಶತ ಶತ ನಮನಗಳು.
2024 ಮತ್ತು 29 ರ ಅವಧಿಯಲ್ಲಿ ನಾವು ಸಾಧಿಸ ಬೇಕೆಂದಿರುವ ಯೋಜನೆಗಳು. ಮೈಸೂರಿನ ಚಂದ್ರ ಗುಪ್ತ ರಸ್ತೆಯಲ್ಲಿರುವ ಜೈನ್ ಅಸೋಸಿಯೇಷನ್ ಹೆಸರಿನಲ್ಲಿರುವ ಕಟ್ಟಡವನ್ನು ವಶಕ್ಕೆ ಪಡೆದು ಅಭಿವೃದ್ದಿ ಪಡಿಸುವ ಯೋಜನೆ. ಬೆಳ್ಳೂರಿನಲ್ಲಿರುವ ಅಸೋಸಿಯೇಷನ್ ನ ಖಾಲಿ ನಿವೇಶನದಲ್ಲಿ ಜೈನ ವಿಧ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿ ನಿರ್ವಹಿಸುವ ಯೋಜನೆ. ಅಸೋಸಿಯೇಷನ್ ನ ವಿದ್ಯಾರ್ಥಿ ನಿಲಯಗಳ ಎಲ್ಲ ವಿದ್ಯಾರ್ಥಿಗಳಿಗೆ ಅದರಲು ವಿಶೇಷ ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು 8 ಲಕ್ಷ ರೂಗಳಿಗೆ ಕಡಿಮೆ ಇಲ್ಲದಂತೆ ವಿದ್ಯಾರ್ಥಿ ವೇತನವನ್ನು ನಿರಂತರವಾಗಿ ನೀಡುವ ಯೋಜನೆ. ಅಲ್ಪಸಂಖ್ಯಾತ ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸಹಾಯ ಸೌಲಭ್ಯಗಳನ್ನು ದೊರಕಿಸಿಕೊಡುವ ಜೈನ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲು ಸರ್ಕಾರದ ಮೇಲೆ ಒತ್ತಡ ತರುವ ಯೋಜನೆ. ತ್ಯಾಗಿ ಸೇವೆ ಸೇರಿ ಧಾರ್ಮಿಕ, ಸಮಾಜಿಕ, ಮಠಮಾನ್ಯಗಳ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಶ್ರಮಿಸುವ ಯೋಜನೆ. ಜೈನ ಸಮುದಾಯದ ಅಭಿವೃದ್ದಿಗಾಗಿ ಸೂಕ್ತ ಯೋಜನೆಗಳನ್ನು ಸೋಶಿಯಲ್ ಮೀಡಿಯಾ, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮೂಲಕ ಕಾರ್ಯ ರೂಪಕ್ಕೆ ತರುವ ಯೋಜನೆ. ಧಾರ್ಮಿಕ ಹಾಗೂ ಸಮಾಜಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸುವ ಯೋಜನೆ. ಹಾಲಿ ಇರುವ ಜೈನ ಭವನದ ಕಟ್ಟಡಗಳ ದುರಸ್ತಿ, ಸೂಕ್ತ ನಿರ್ವಹಣೆ, ವಿಸ್ತರಣೆ, ಅಭಿವೃದ್ದಿ ಪಡಿಸಿ ಸಾಧ್ಯವಾದಷ್ಟು ಮಟ್ಟಿಗೆ ಹೋರಗಿನಿಂದ ಬರುವ ಜೈನ ಯಾತ್ರಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡುವ ಯೋಜನೆ. ಜೈನ್ ಎಂಡೋಮೆಂಟ್ ಆಕ್ಟ್ ಅಸ್ತಿತ್ವಕ್ಕೆ ತರಲು ಹಾಗೂ ಅಲ್ಪ ಸಂಖ್ಯಾತ ಜೈನ ಸಮಾಜದವರನ್ನು 2ಬಿ ಪ್ರವರ್ಗದ ವ್ಯಾಪ್ತಿಗೆ ತರಲು ಸರ್ವ ಪ್ರಯತ್ನ ಮಾಡುವ ಯೋಜನೆ. ವಿಭಾಗಿಯ ಸಮಿತಿಗಳನ್ನು ರಚಿಸಿ ಸಕ್ರಿಯಗೊಳಿಸಿ ಆಯ ವಿಭಾಗದ ಜೈನ ಸಮಾಜದವರನ್ನು ಕ್ಷೇಮಾಭಿವೃದ್ದಿಗೆ ಶ್ರಮಿಸುವ ಯೋಜನೆ. ಜೈನ ಸಮಾಜದ ಎಲ್ಲ ಅರ್ಹ ವ್ಯಕ್ತಿಗಳಿಗು ಹೆಚ್ಚಿನ ಸಂಖ್ಯೆಯಲ್ಲಿ ಕೆ ಜೆ ಎ ಸದಸ್ಯತ್ವ ಸುಲಭವಾಗಿ ಪಡೆಯಲು ಅವಶ್ಯಕವಾದ ನಿಯಮವಳಿಗಳನ್ನು ಸರಳಿಕರಿಸುವ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಹಾಗೂ ಅಸೋಸಿಯೇಷನ್ ನ ಚಟುವಟಿಕೆಗಳನ್ನು ಡಿಜಿಟಲಿಕರಿಸಿ ಕನಿಷ್ಠ ತಿಂಗಳಿಗೊಮ್ಮೆ ಯಾದರು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುವ ಯೋಜನೆ. ಈಗೆ ಇನ್ನೂ ಹೆಚ್ಚಿನ ಸಮಾಜಮುಖಿ ಕ್ರೀಯಾ ಯೋಜನೆಗಳನ್ನು ರೂಪಿಸಿ ತಮ್ಮಗಳ ಸಹಾಯ ಸಹಕಾರದಿಂದ ಅನುಷ್ಠಾನಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಈ ಆಶ್ವಾಸನೆಗಳೊಂದಿಗೆ ಇದೇ ಡಿಸೆಂಬರ್ 24 ರ ಕೊನೆಯಲ್ಲಿ ನಡೆಯುವ ಚುನಾವಣೆಯಲ್ಲಿ ಈ ಕೆಳಗೆ ನಮೂದಿಸಿರುವ ಪದಾಧಿಕಾರಿಗಳ ಸ್ಥಾನಕ್ಕೆ ಮತ್ತು ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೂ ತಮ್ಮ ಅಮೂಲ್ಯ ಮತಗಳನ್ನು ಹಾಕುವ ಮೂಲಕ ಹೆಚ್ಚಿನ ಬಹುಮತದಿಂದ ಜಯ ಶೀಲರನ್ನಾಗಿ ಮಾಡಿ ಸಮಾಜದ ಸೇವೆ ಸಲ್ಲಿಸಲು ಸಹಕಾರಿಸ ಬೇಕೆಂದು ತಮ್ಮೆಲ್ಲರನ್ನು ಆತ್ಮೀಯವಾಗಿ ವಿನಂತಿಸುತ್ತಿದ್ದೇವೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













