ಧರ್ಮಯಾತ್ರೆ
ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸುವ ಶ್ರೀ ಎಸ್ ಜಿತೇಂದ್ರ ಕುಮಾರ್ ರವರ ಕಿರು ಪರಿಚಯ. ನಿಕಟ ಪೂರ್ವ ಅಧ್ಯಕ್ಷರಾದ ಎಸ್ ಜಿತೇಂದ್ರ ಕುಮಾರ್ ರವರು ಕರ್ನಾಟಕ ಸರ್ಕಾರದ ಭೂ ಇಲಾಖೆಯಲ್ಲಿ ಚಿಫ್ ಡ್ರಿಲಿಂಗ್ ಇಂಜಿನಿಯರಿಂಗ್ ಉದ್ದೆಯಿಂದ 1991 ರಲ್ಲಿ ಸ್ವಯಂ ನಿವೃತ್ತಿ ಪಡೆದು ಅವರ ತಂದೆ ಪಂಡಿತ ರತ್ನ ಎತ್ತೂರು ಶಾಂತಿ ರಾಜ ಶಾಸ್ತ್ರಿಗಳ ಹೆಸರಿನಲ್ಲಿ 1988ರಲ್ಲಿ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಅವರ ಮಹಾಪುರಾಣ ಸೇರಿದಂತೆ ಎಲ್ಲ ಧಾರ್ಮಿಕ ಕೃತಿಗಳ ಪುನರ್ ಮುದ್ರಣ ಮಾಡಿಸಿ ಸುಮಾರು 3 ಕೋಟಿ ರೂ ವೆಚ್ಚದಲ್ಲಿ ಕನ್ನಡ ಸಾರಸತ ಲೋಕಕ್ಕೆ ಸಮರ್ಪಿಸಿ ಮಹತ್ತರ ಕೊಡುಗೆ ನೀಡಿರುತ್ತಾರೆ. ಶ್ರವಣ ಬೆಳಗೊಳ ಹೊಂಬುಜ ಮಠದ ಮತ್ತು ಪರಮ ಪೂಜ್ಯ 108 ಶ್ರೀ ಚಿನ್ಮಯ ಸಾಗರಜೀ ಮಹಾರಾಜರಿಂದ ಶ್ರಾವಕ ರತ್ನ, ರತ್ನಾಕರ ವರ್ಣಿ ಪ್ರಶಸ್ತಿ, ಕರ್ಮ ವೀರ ಬಾಹುರಾವ್ ಪಾಟೀಲ ಸಮಾಜ ಸೇವಾ ಪ್ರಶಸ್ತಿ, ಸಾರ್ಥಕ ಸೇವಾ ಭೂಷಣ, ಸಮಾಜ ಭೂಷಣ, ಧರ್ಮ ದಿವಾಕರ, ಯಶಸ್ವಿ ಕಾರ್ಯಕರ್ತ, ಚಾವುಂಡರಾಯ ಪ್ರಶಸ್ತಿ, ಜಿನ ಧರ್ಮ ಭೂಷಣ ಇತ್ಯಾದಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. ಶ್ರವಣಬೆಳಗೊಳದ ಶ್ರೀಗಳ ಅಪೇಕ್ಷೆಯಂತೆ 40 ಬೃಹತ್ ಸಂಪುಟಗಳ ದವಳ ಗ್ರಂಥಗಳ ಮುದ್ರಣದ ಜವಾಬ್ದಾರಿ ಹೊತ್ತು ಪೂರೈಸಿಕೊಟ್ಟಿದ್ದಕ್ಕಾಗಿ ಸುಪ್ರೀತರಾದ ಶ್ರೀಗಳವರು ಶ್ರೀಯುತರಿಗೆ ಬೆಳ್ಳಿ ಕೀರಿಟ ಹಾಗೂ ಬಂಗಾರದ ಸರ ಹಾಕಿಸಿ ಸನ್ಮಾನಿಸಿದ್ದು ವಿಶೇಷ. ಅಂತರ್ಜಲ ಹಾಗೂ ಹಲವಾರು ಕೃತಿಗಳನ್ನು ಭಾರತೀಯ ಭೂ ವಿಜ್ಞಾನ ಸಂಸ್ಥೆಯ ಮೂಲಕ ಪ್ರಕಟಿಸಿರುತ್ತಾರೆ. ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಬುದಿಮಾಂದ್ಯ ಮಹಿಳೆಯರಿಗೆ ಸಹಾಯ ಧನ, ಪ್ರವಾಹ ಮತ್ತು ಬರ ಸಂತ್ರಸ್ಥರಿಗೆ ಪರಿಹಾರ, ಇತ್ಯಾದಿ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇಂತಹ ಮಹಾನ್ ಕಾರ್ಯಗಳನ್ನು ನಡೆಸಿಕೊಂಡು ಬಂದು ನಾಡಿನ ಸಮಸ್ತ ಭಟ್ಟಾರಕರುಗಳ ಆತ್ಮಿಯರು ಪ್ರೀತಿ ವಿಶ್ವಾಸಗಳಿಗೆ ಪಾತ್ರರು ಆದ ಇವರು ಕರ್ನಾಟಕದ ಸಕಲ ಜೈನ ಸಮಾಜದ ಗೌರವಾನ್ವಿತರು ಇವರಿಗೆ ಹಾಗೂ ಇವರ ತಂಡದವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ವಿಜೇತರನ್ನಾಗಿಸ ಬೇಕಾಗಿ ಶ್ರೀ ಎಸ್ ಜಿತೇಂದ್ರ ಕುಮಾರ್ ರವರ ತಂಡ ವಿನಂತಿಸುತ್ತಿದೆ. ಭಗವಂತನಲ್ಲಿ ಪ್ರಾರ್ಥಿಸುವುದರ ಮೂಲಕ ಶ್ರೀಯುತ ಎಸ್ ಜಿತೇಂದ್ರ ಕುಮಾರ್ ರವರು ತಮ್ಮ ತಂಡದೊಡನೆ 2ನೇ ಹಂತದ ಪ್ರಚಾರವನ್ನು ಆರಂಭಿಸಿದ್ದಾರೆ.
ಇದು ಸಭೆಯಲ್ಲಿ ತಮ್ಮ ತಂಡದ ಅಭ್ಯರ್ಥಿಗಳ ಕಾರ್ಯವನ್ನು ಗುರುತಿಸಿ ಪರಿಚಯಿಸುವುದರ ಮೂಲಕ ಜಿತೇಂದ್ರ ಕುಮಾರ್ ರವರು ತಂಡದವರನ್ನು ಗೌರವದಿಂದ ಕಂಡ ಒಂದು ಪರಿ. ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಸಮಾಜದ ಒಳಿತಿಗೆ ಮುನ್ನುಡಿ ಬರೆಯಿರಿ ಎಂದು ಶ್ರೀ ಎಸ್ ಜಿತೇಂದ್ರ ಕುಮಾರ್ ರವರು ತಮ್ಮ ತಂಡದ ಪರವಾಗಿ ವಿನಂತಿಸಿದ್ದಾರೆ.
ಎಸ್ ಜಿತೇಂದ್ರ ಕುಮಾರ್ ರವರು :- ಆತ್ಮೀಯ ಜೈನ ಧರ್ಮದ ಬಂಧುಗಳೇ, ಬಗಿನೀಯರೇ, ಇವತ್ತಿನ ದಿನ ತಮಗೆ ತಿಳಿದಿರುವ ಹಾಗೆ ನಮ್ಮ ಕರ್ನಾಟಕ ಜೈನ್ ಅಸೋಸಿಯೇಷನ್ ನ 110 ವರ್ಷಗಳ ಇತಿಹಾಸ ಇರುವಂತಹ ಜೈನ್ ಅಸೋಸಿಯೇಷನ್ ನ ಚುನಾವಣ ಕಾರ್ಯಗಳ ಪ್ರಕ್ರಿಯೆ ನಡೆಯುತ್ತಿದೆ. ಇದೇ 29 ನೇ ತಾರೀಖು ಕರ್ನಾಟಕ ಜೈನ ಭವನದಲ್ಲಿ ಈ ಚುನಾವಣ ಪ್ರಕ್ರಿಯೆ ನಡೆಯುತ್ತದೆ. ಈ ಒಂದು ಸಂದರ್ಭದಲ್ಲಿ ನಾನು ಈ ಕರ್ನಾಟಕ ಜೈನ ಭವನದ ನಿರ್ಮಾಣದ ರುವಾರಿಯಾಗಿ ಶ್ರಮವಯಿಸಿ ನಿರ್ಮಾಣ ಮಾಡಿದ ನಂತರ ಸುಮಾರು 20 ವರ್ಷಗಳ ಕಾಲ ಅದ್ಯಕ್ಷನಾಗಿ ಸೇವೆ ಸಲ್ಲಿಸಿ ನಂತರ ನಿವೃತ್ತಿ ತೆಗೆದುಕೊಳ್ಳೊಣ ಎಂದು ಹೇಳಿ 2019 ರಲ್ಲಿ ನಾನು ಅಧ್ಯಕ್ಷ ಸ್ಥಾನವನ್ನು ತೆರವು ಮಾಡಿಕೊಂಡೆ ನಂತರ ಹೀಗ ಎಲ್ಲ ಭಟ್ಟಾರಕರು ಹಾಗೂ ಶ್ರವಣ ಬೆಳಗೊಳದ ಹಿಂದಿನ ಸ್ವಾಮೀಜಿಯವರು ಹಸ್ತಂಗತರಾದ ಅವರ ಆತ್ಮ ಶಾಂತಿಗಾಗಿ ಸಮಾಜದ ಅಭಿವೃದ್ಧಿಗಾಗಿ ಕರ್ನಾಟಕ ಜೈನ ಅಸೋಸಿಯೇಷನ್ ನ ಏಳಿಗೆಗಾಗಿ ಮತ್ತೊಮ್ಮೆ ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ಅಧ್ಯಕ್ಷರಾಗಿ ಬರಬೇಕು ಎಂದು ಅಪೇಕ್ಷೆ ಪಟ್ಟಿದ್ದರಿಂದ ನಾನು ಈ ಬಾರಿ ಚುನಾವಣೆಗೆ ನಾಮಪತ್ರವನ್ನ ಅಧ್ಯಕ್ಷಸ್ಥಾನಕ್ಕೆ ಸಲ್ಲಿಸಿದ್ದೀನಿ. ತಮಗೆಲ್ಲ ನಡೆದಿರುವಂತಹ ಕೆಲಸ ಕಾರ್ಯಗಳು ಅಭಿವೃದ್ಧಿ ಕಾರ್ಯಗಳು ಸಮಾಜಕ್ಕಾಗಿರುವಂತಹ ಸೇವೆ, ನಮ್ಮ ಸಮಾಜದಿಂದ ಕರ್ನಾಟಕದ್ಯಾಂತ ಮಾಡಿರುವಂತಹ ಸೇವೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಒಂದು ಚುನಾವಣೆ ಸಂದರ್ಭದಲ್ಲಿ ನನ್ನ ಜೊತೆಗೆ ಬೆಳಗಾವಿಯ ಶೀತಲ್ ಪಾಟೀಲ್ ರವರು ಉಗಾರ್ ನವರು ಅವರು ಉಪಾಧ್ಯಕ್ಷ ಸ್ಥಾನಕ್ಕೆ ಅವರು ಸ್ಪರ್ಧಿಸಿದ್ದಾರೆ. ರಾಜಕೀರ್ತಿ ಯವರು ಉಪಾಧ್ಯಕ್ಷ ಕೇಂದ್ರ ಸ್ಥಾನಕ್ಕೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಜೊತೆಗೆ ಜಂಟಿ ಕಾರ್ಯದರ್ಶಿಗಳಾಗಿ ಸುನಿಲ್ ಕುಮಾರ್ ಡಿ ದಾವಣಗೆರೆ ಯವರು ಅವರು ಸಹ ಸ್ಪರ್ಧಿಸಿದ್ದಾರೆ. ವಿ ಪ್ರಶಾಂತ್ ರವರು ವಿಮಾನ ಪುರದ ಸಂಘದ ಅಧ್ಯಕ್ಷರು ಅವರು ಸ್ಪರ್ಧಿಸುತ್ತಿದ್ದಾರೆ. ಆಶಾ ಪ್ರಭು ಅನ್ನುವವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆಅವರ ಜೊತೆಗೆ ನಮ್ಮ ಜೈನ್ ಅಸೋಸಿಯೇಷನ್ ನ ಕೋಶಾಧಿಕಾರಿಯಾಗಿ ಮಹವೀರ್ ಜೈನ್ ರವರು ಆಯ್ಕೆಯಾಗಿದ್ದಾರೆ. ಸಹ ಕೋಶಾಧಿಕಾರಿ ಎ ಸಿ ಧರಣೇಂದ್ರಯ್ಯ ರವರು ಸ್ಪರ್ಧಿಸುತ್ತಿದ್ದಾರೆ. 8 ಜನ ಪದಾಧಿಕಾರಿಗಳ ಜೊತೆಗೆ 13 ಜನ ನಮ್ಮ ಜೊತೆಯಲ್ಲಿ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ತಮ್ಮಲ್ಲಿ ನನ್ನ ಕಳಕಳಿಯ ವಿನಂತಿ ಏನು ಎಂದರೆ ತಾವು ನಮ್ಮ ಎಲ್ಲ ಮಾಡಿರುವ ಸಾಧನೆ ಮತ್ತು ಇದುವರೆಗು ಮಾಡಿರುವಂತಹ ಕಾರ್ಯ ವೈಕರಿಯನ್ನು ತಾವು ನೋಡಿದ್ದೀರ ನಮ್ಮ ಇಡೀ ತಂಡಕ್ಕೆ ತಾವೇಲ್ಲರು ತಮ್ಮ ಅಮೂಲ್ಯವಾದ ಮತವನ್ನ ಚಲಾಯಿಸಿ ನಮ್ಮನ್ನು ಜಯಶೀಲರನ್ನಾಗಿ ಮಾಡಿ ತಮ್ಮ ಸೇವೆ ಮಾಡುವುದಕ್ಕೆ ಅನುಕೂಲ ಮಾಡಿಕೊಡ ಬೇಕು ಎಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಲ್ಲರೀಗೂ ಜೈ ಜಿನೇಂದ್ರ ಎಲ್ಲರಿಗೂ ಒಳ್ಳೆಯದಾಗಲಿ ಶುಭಮಸ್ತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













