ನಂದಿಶ್ವರ ಅಷ್ಟಾನಿಕ ಪರ್ವ

ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಹಾಗೂ ಪದ್ಮಶ್ರೀ ಜೈನ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 8-2016ರಿಂದ 14ರವರೆಗೆ ನಡೆಯಲ್ಲಿರುವ ಶ್ರೀ ದುರ್ಮುಖಿ ನಾಮ ಸಂವತ್ಸರದ ಕಾರ್ತಿಕ ಮಾಸದ ನಂದಿಶ್ವರ ಅಷ್ಟಾನಿಕ ಪರ್ವದ ಉದ್ಘಾಟನ ಸಮಾರಂಭ ನವೆಂಬರ್ 8ರಂದು ಮೈಸೂರಿನ ಶ್ರೀ ಶಾಂತಿನಾಥ ಬಸದಿಯಲ್ಲಿ ನಡೆಯಿತು.

ಶ್ರೀ ಪದ್ಮಶ್ರೀ ಜೈನ ಮಹಿಳಾ ಸಮಾಜದ ಕಾರ್ಯದರ್ಶಿಗಳಾದ ಲತಾ ಸುದರ್ಶನ್ ರವರು ಸ್ವಾಗತಿಸಿದರು. ವೇದಿಕೆಯಲ್ಲಿ ಅಖಿಲಾಕರ್ನಾಟಕ ಜೈನ ಮಹಿಳಾ ಒಕ್ಕೂಟ ಮತ್ತು ಪದ್ಮಶ್ರೀ ಜೈನ ಮಹಿಳಾ ಸಮಾಜ ಅಧ್ಯಕ್ಷರಾದ ಶ್ರೀಮತಿ ಶೀಲಾ ಅನಂತರಾಜ್ ರವರು, ದಿಗಂಬರ ಸಮಾಜದ ಉಪಾಧ್ಯಕ್ಷರಾದ ಶ್ರೀ ಮಹೇಶ್ ಪ್ರಸಾದ್ ರವರು, ಶ್ರೀ ಶಾಂತಿನಾಥ ಸೇವಾ ಸಮಿತಿಯ ಉಪಾಧ್ಯಕ್ಷರಾದ ಸುರೇಶ್ ಜೈನ್ ಅಂದಿನ ಸೇವಾರ್ಥದಾರರಾದ ಪದ್ಮದನ್ಯಕುಮಾರ್ ಹಾಗೂ ನಿವೃತ್ತ ಪ್ರಧಾನ ಅಭ್ಯಂತರರಾದ ಶ್ರೀ ಎ. ಅನಂತಕುಮಾರ ರವರು ಉಪಸ್ಥಿತರಿಂದರು. 

ಶ್ರೀಮತಿ ನಾಗರತ್ನರಾಜ್ ರವರ ಪ್ರಾರ್ಥನೆಯಿಂದ ಕಾರ್ಯಕ್ರಮ ಪ್ರಾರಂಭಗೊಂಡಿತ್ತು. ವೇದಿಕೆ ಗಣ್ಯರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಮಾಡಿದ ಶೀಲಾ ಅನಂತರಾಜ್ ರವರು ಮಾತನಾಡಿ ಅಷ್ಟಾನಿಕ ಪರ್ವದ ದಿನಗಳಲ್ಲಾದರೂ ಬಸದಿಗೆ ಜೈನ ಬಾಂಧರು ಅಗಮಿಸಿ ಪುಣ್ಯ ಭಾಗಿಗಳಾಗಿ ಎಂದು ಕೋರಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ಜ್ವಾಲ ಸುರೇಶ್ ರವರು ಸಿದ್ಧಪಡಿಸಿದ ಕನ್ನಡ ನಾಡಿನ ವೀರ ಮಹಿಳೆಯರ ಕುರಿತು, ಪ್ರಶ್ನಾವಳಿಯನ್ನು ಬಿಡುಗಡೆ ಮಾಡಲಾಯಿತು. ಜ್ವಾಲ ಸುರೇಶ್ ರವರು ಮಾತನಾಡಿ ಪದ್ಮಾಂಬ ಮಹಿಳಾ ಸಮಾಜದಿಂದ ಜೈನ ಸಂಸ್ಕೃತಿ ಯನ್ನು ಬೆಳೆಸುವ ಸಲುವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ 20ನೇ ಶತಮಾನದ ಪ್ರಥಮ ಆಚಾರ್ಯರಾದ 1008 ಶಾಂತಿ ಸಾಗರ ಚಕ್ರವರ್ತಿ ಜೀವನ ಚರಿತ್ರೆಯನ್ನುಕುರಿತು  ಪ್ರಶ್ನಾವಳಿಯನ್ನು ಸಿದ್ಧಮಾಡಿ ಜನರಮುಂದಿಟ್ಟಾಗ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬಂದಿದ್ದರಿಂದ ಪ್ರೇರಿತರಾಗಿ ನಾವು ಇಂದು ಕನ್ನಡನಾಡಿನ ವೀರ ಮಹಿಳೆಯರ ಕುರಿತು ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿದ್ದವೆ. ಇದರಿಂದ ಎಲ್ಲರೂ ಕರ್ನಾಟಕದ ವೀರ ಜೈನ ಮಹಿಳೆಯರ ಬಗ್ಗೆ ತಿಳಿದು ಅದರಿಂದ ಪ್ರೇರಣೆ ಪಡೆಯುತ್ತಾರೆ ಎಂಬುದು ನಮ್ಮ ಅಶಯವಾಗಿದೆ ಎಂದರು. ಮಹೇಶ್ ಪ್ರಸಾದ್ ರವರು ಸುರೇಶ್ ಜೈನ್ ರವರು ಹಾಗೂ ಸಮಾಜದ ಕಾರ್ಯದರ್ಶಿಗಳಾದ ಅಜಿತ್ ಕುಮಾರ್ ರವರು ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆ ಗಣ್ಯರಿಗೆ ಅಭಿನಂದಿಸಲಾಯಿತು.