ಕನಕಗಿರಿ, ಮುಕುಟ ಸಪ್ತಮಿ/ಜ್ವಾಲಾಮಲೆನ್ಯೂಸ್/ 2018

ಪುರಾತನ ಕ್ಷೇತ್ರವಾದ ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ಮುಕುಟ ಸಪ್ತಮಿಯ ಪ್ರಯುಕ್ತ ಶ್ರೀ ಪಾರ್ಶ್ವನಾಥ ಸ್ವಾಮಿಗೆ ನಡೆದ ಪೂಜಾಕಾರ್ಯಕ್ರಮ ನಿಮ್ಮಗಾಗಿ ತಂದಿದ್ದೆವೆ. ಹಿಂದೆ ಹೇಮಾಂಕ ದೇಶವಾಗಿದ್ದಕ್ಷೇತ್ರವೇ ಇಂದಿನ ಕನಕ ಗಿರಿ ಕ್ಷೇತ್ರ ಹೆಸರಿಗೆ ತಕ್ಕಂತೆ ಹೊನ್ನ ಕಳಸದಂತ್ತೆ ಸುಂದರ ಪರಿಸರದ ನಡುವೆ ಕಂಗೊಳ್ಳಿಸುತ್ತಿದೆ. ಈ ಗಿರಿಯಲ್ಲಿ ಭಗವಾನ್ ಶ್ರೀ 1008 ವಿಜಯ ಪಾರ್ಶ್ವನಾಥ ಸ್ವಾಮಿ ಜಿನ ಚೈತ್ಯಾಲಯವಿದ್ದು ಗಂಗ ವಂಶದ ರಾಜರಾದ ದುರ್ವಿನಿತರಿಂದ  ನಿರ್ಮಿಸಲ್ಪಟಿದೆಯೆಂದು ಐತಿಯವಿದ್ದೆ. ಈ ಚೈತ್ಯಾಲಯದಲ್ಲಿ ಶ್ರೀ ಕುಷ್ಮಾಂಡಿನಿ ಮಾತೆ ಹಾಗೂ ಪದ್ಮಾವತಿ ದೇವಿಯ ಮೂರ್ತಿಗಳು ಪರಸ್ಪರ ಅಭಿಮುಖವಾಗಿ ಸ್ಥಾಪಿಸಲ್ಪಟಿದೆ.

ಈ ಕ್ಷೇತ್ರ ರಾಹು ಮತ್ತು ಕೇತು ಗ್ರಹಗಳ ದೋಷದಿಂದಾಗುವ ಕಾಳ ಸರ್ಪದೋಷ ನಿವಾರಣೆಗೆ ಸಿದ್ಧಿ ಪಡೆದಿದೆ. ಕ್ರಿ.ಶ 5ನೇ ಶತಮಾನದಲ್ಲಿ ತಮ್ಮ ತಪೊಭೂಮಿಯನ್ನಾಗಿಸಿಕೊಂಡ ಪೂಜ್ಯ ಪಾದಚಾರ್ಯರು ನೆಲೆಸಿದ್ದ ಪೂಣ್ಯ ಭೂಮಿ ಇದು. ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ  ನೇತೃತ್ವದಲ್ಲಿ ಈ ಕ್ಷೇತ್ರ ಅಭಿವೃದ್ಧಿ ಹೊಂದುತ್ತ ಬಂದ್ದಿದು ಕಳೆದ ವರ್ಷವಷ್ಟೆ ಇಲ್ಲಿ ಹೊಸದಾಗಿ ಸ್ಥಾಪಿತವಾದ ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಗೆ ಪ್ರಥಮ ಮಹಾಮಸ್ತಕಾಭಿಷೇಕ ನೆರೆವೇರಿದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದಾಗಿದೆ.

23ನೇ ತೀರ್ಥಂಕರರಾದ ಭಗವಾನ್ ಶ್ರೀ ಪಾರ್ಶ್ವನಾಥರು ಶ್ರಾವಣ ಶುದ್ದ ಸಪ್ತಮಿಯ ದಿನ ಸಂಮೇಲನ ಶೀಕರಜಿಯಲ್ಲಿ ಮುಕ್ತಿಯನ್ನು ಪಡೆದ ಈ ಶುಭದಿನವನ್ನು ಮೂಕ್ಷಸಪ್ತಮಿ ಅಥವ  ಮುಕುಟ ಸಪ್ತಮಿ ಎಂದು

ಅಚರಿಸಲಾಗುವುದು. ಇದರ ಅಂಗವಾಗಿ ದಿನಾಂಕ 17-8-2018ರಂದು ಶ್ರೀ ವಿನಿಶ್ಚಲ ಸಾಗರ ಮಹಾರಾಜರವರ  ಪಾವನ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು. ಇದರ ಚಿತ್ರಿಕೃತ ದೃಷ್ಯಾವಳಿಗಳು ಇಲ್ಲಿವೆ.

ಈ ಮಹೋತ್ಸವದ ಬಗ್ಗೆ ಶ್ರೀಗಳವರು ಜ್ವಾಲಮಾಲ ಡಾಟ್ ನ್ಯೂಸ್ ಗೆ ಮಾತನಾಡಿ (ಪುರಾತನ ವಾಗಿರುವಂತಹ ಈ ಕ್ಷೇತ್ರದಲ್ಲಿ ಪ್ರತಿ ವರ್ಷವು ಕೊಡ ಶ್ರಾವಣ ಮಾಸದ ಶುಕ್ಲಪಕ್ಷದ ಸಪ್ತಮಿಯಂದು ಪಾರ್ಶ್ವನಾಥ ತೀರ್ಥಂಕರರು ನಿರ್ವಹಣ ಮಹೋತ್ಸವವನ್ನಾ ಆಚರಿಸಲಾಗಿದೆ. ಇವತ್ತು ಶುಭದಿನವಾಗಿದ್ದು ಮಹಾಸ್ವಾಮಿಗೆ ಅಭಿಷೇಕವಾಗಿದೆ ಪಂಚಾಮೃತಗಳ ಅಭಿಷೇಕವಾಗಿದೆ, ಜಮುನಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಭಕ್ತ ಶ್ರದ್ಧೆಯಿಂದ ಭಕ್ತಾದಿಗಳು ಬಂದು ನೆರೆವೇರಿಸುತ್ತಿದ್ದಾರೆ. ಈ ನಿಮಿತ್ತವಾಗಿ ಶ್ರೀ ಕ್ಷೇತ್ರದಲ್ಲಿ ಇವತ್ತು ಮತ್ತು ನಾಳೆ ಎರಡುದಿನ  ಧಾರ್ಮಿಕ ಕಾರ್ಯಕ್ರಮಗಳು ಪೂಜಾ ಮಹೋತ್ಸವಗಳು ಭಗವಂತನ ಆರಾಧನೆ ಇತ್ಯಾದಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನ ಪೂಜ್ಯ ಮುನಿಗಳವರ ಪ್ರವಚನಗಳನ್ನ ಭಕ್ತಾದಿಗಳು ಮತ್ತು ಕರ್ನಾಟಕದಲ್ಲಿ ಈ ವರ್ಷ ಶೈಕ್ಷಣಿಕ ಕಾರ್ಯಗಳನ್ನ ಮಾಡಿರುವಂತಹ ವಿಧ್ಯಾರ್ಥಿಗಳಿಗೂ ಕೂಡ ವಿಶೇಷವಾಗಿರುವಂತಹ ಗೌರವ ಅಬಿನಂದನೆ ಪೂರಸ್ಕಾರಗಳನ್ನ ನೀಡುವುದರ ಮೂಲಕವಾಗಿ ಈ ಮೂಕ್ಷಸಪ್ತಮಿ ಅಥವ  ಮುಕುಟ ಸಪ್ತಮಿ ಅನ್ನುವಂತಹ ಪಾರ್ಶ್ವನಾಥ ಸ್ವಾಮಿಯ ನಿರ್ವಹಣ ಮಹೋತ್ಸವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದಲ್ಲಿ ಅಚರಿಸಲಾಗುತ್ತಾಯಿದೆ. ಈ ವರ್ಷವು ಕೂಡ ವಿಶೇಷವಾಗಿ ಧಾರ್ಮಿಕ ಪೂಜೆ ಅನುಷ್ಟಾನಗಳ ಮುಕಾಂತರವಾಗಿ ಮೂಕ್ಷಸಪ್ತಮಿ ಅಥವ  ಮುಕುಟ ಸಪ್ತಮಿ ಕಾರ್ಯಕ್ರಮವನ್ನು ಅಚರಿಸಲಾಗುತ್ತಾಯಿದೆ. ಈ ಸಂದರ್ಭದಲ್ಲಿ ನಮ್ಮ ಸಮಾಜದ ಮತ್ತು ಕರ್ನಾಟಕದ ಜನತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನ ತಲುಪಿಸುವ ಕೆಲಸವನ್ನು ಮಾಡುತ್ತಿರುವಂತಹ ಜ್ವಾಲಮಾಲ ಡಾಟ್ ನ್ಯೂಸ್ ಗೆ ಶುಭ ಹಾರೈಸಿದರು).

ಇದೇ ಮುಕುಟ ಸಪ್ತಮಿ ಮಹೋತ್ಸವದ ಪ್ರಯುಕ್ತ ಮುಂದಿನ ಕಾರ್ಯಕ್ರಮವಾಗಿ ದಿನಾಂಕ 18-8-2018ರಂದು ಮೈಸೂರಿನ ಜೈನ್ ಏಜ್ವುಕೇಷನ್ ಟ್ರಸ್ಟ್ ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಪ್ರಬಂಧ ಸ್ಪರ್ಧೆ ವಿಜೇತರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವಂದನೆಗಳೊಂದಿಗೆ ಮತ್ತೆ ಭೇಟಿಯಾಗೋಣ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.