ಐತಿಹಾಸಿಕ ಪ್ರಸಿದ್ದ ಶ್ರೀಕ್ಷೇತ್ರ ಶ್ರವಣಬೆಳಗೂಳದಲ್ಲಿ ನಡೆಯುತ್ತಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಈ ಪಾವನ ಸಂದರ್ಭದಲ್ಲಿ 19-08-2018ರಂದು ನಡೆಯಲಿದೆ ಇಂದಿನ ಸಂಪ್ರದಾಯ ಪದ್ಧತಿಯಂತೆ ಭವ್ಯ ಸಂಪ್ರದಾಯಕ ಮಹಾಮಸ್ತಕಾಭಿಷೇಕ. ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ 1967ರಲ್ಲಿ ನಡೆದ ಮಸ್ತಕಾಭಿಷೇಕದ ಇತಿಹಾಸ ಮತ್ತೆ ನೆನಪಿಸಿಕೊಡುವ ಭಾಗ್ಯವನ್ನು ಶ್ರೀಗಳವರು ಕರುಣಿಸಿದ್ದು ಆಚಾರ್ಯಶ್ರೀ 108 ವರ್ಧಮಾನ ಸಾಗರರೊಡನೆ ಒಟ್ಟು 126 ಪಿಂಚಿದಾರಿಗಳ ದಿವ್ಯಸಾನಿದ್ಯದಲ್ಲಿ ಶ್ರವಣ ಬೆಳಗೊಳ ಶ್ರೀ ದಿಗಂಬರ ಜೈನ ಸಮಾಜ ಮತ್ತು ಶ್ರೀ ಕುಶಮಾಂಡಿನಿ ಸಮಾಜದ ವತಿಯಿಂದ ಜರುಗಲ್ಲಿರುವ ಮಹೋನ್ನತ ಮಹೋತ್ಸವ. ಎಂದಿನಂತೆ ನಡೆಯುತ್ತಿದ್ದ ದ್ರವ್ಯಗಳೊಡನೆ ಇಂದಿನ ಪದ್ದತಿಯಂತೆ ಸ್ಥಳಿಯ ಮನೆ-ಮನೆಗಳಿಂದ ಸಂಗ್ರಹಿಸಿದ ದ್ರವ್ಯಗಳೊಡನೆ ಹಣ್ಣಿನ ರಸ, ತುಪ್ಪ, ತೆಂಗಿನ ತುರಿ, ಬೆಲ್ಲದ ಹುಡಿ, ಮೊಸರು, ಕಡಲೆ ಬೇಳೆ, ಹೆಸರು ಬೇಳೆ, ಒಣ ಹಣ್ಣುಗಳು, ಮಲೈಗಿರಿ ಚಂದನ, ಭತ್ತದರಳು ಇತ್ಯಾದಿಗಳಿಂದ ಅಭಿಷೇಕ ನಡೆಯಲಿದೆ, ನಿಮ್ಮಗಿದೊಂದು ಅಪರೂಪದ ಅವಕಾಶ. ಸಮಾಜದ ವತಿಯಿಂದ ಕೊನೆಯ ಅಭಿಷೇಕ ಮತ್ತು ನೆನಪಿನ ಕಾಣಿಕೆಯೊಂದು ಪಡೆಯುವ ಕಳಸಗಳನ್ನು ಪಡೆಯಲು ಜಲಾಭಿಷೇಕ ಮಾಡಲು ಮರೆಯದಿರಿ. ಈ ಅವಕಾಶಕ್ಕಾಗಿ 12ವರ್ಷಗಳ ಕಾಲ ಕಾಯಬೇಕು ಸೌಭಾಗ್ಯ ನಿಮ್ಮನ್ನು ಕರೆಯುತ್ತಿದೆ.
ಸಾಂಪ್ರದಾಯಿಕ ಮಸ್ತಕಾಭಿಷೇಕ ಪ್ರೋಮೊ













