ಭಗವಾನ್ ಶ್ರೀ 1008 ಮಹಾವೀರ ತೀರ್ಥಂಕರ 2543ನೇ ಮೋಕ್ಷ ಕಲ್ಯಾಣ

ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾನಳಿಯ ಸಂಭ್ರಮ ದೀಪಾವಳಿ ಸಂದರ್ಭದ ಕಾರ್ತಿಕ ಅಮಾವಾಸ್ಯೆ ಜೈನಧರ್ಮಿಯರಿಗೆ ಅತ್ಯಂತ ಪವಿತ್ರ ಮತ್ತು ಮಹತ್ವದ ದಿನ. ಅಂದು ಭಗವಾನ್ ಮಹಾವೀರ ತೀರ್ಥಂಕರರು ನಿರ್ವಾಣವನ್ನು ಪ್ರಾಪ್ತಮಾಡಿಕೊಂಡು ಮೋಕ್ಷಗಾಮಿಗಳಾದ ದಿನ.

ಈ ಹಿನ್ನೆಲೆಯಲ್ಲಿ ನಾವು ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಅಚರಿಸುತ್ತೆವೆ. ಈ ನಿಮಿತ್ತವಾಗಿ ಚಾಮರಾಜನಗರ ಜಿಲ್ಲೆ ಉಮತ್ತುರು ಗ್ರಾಮದಲ್ಲಿ ಇದೆ 30-10-2016ನೇ ಭಾನುವಾರದಂದು ಭಗವಾನ್ ಶ್ರೀ 1008 ಮಹಾವೀರ ತೀರ್ಥಂಕರ 2543ನೇ ಮೋಕ್ಷ ಕಲ್ಯಾಣ ಪೂಜೆ ಮತ್ತು ದೀಪೋತ್ಸವ ಹಾಗೂ ಜಿನ ಮಂದಿರದ 12ನೇ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ 6:30ರಿಂದಲೇ ನಿತ್ಯಪೂಜೆ ಸಹಿತ ವಿಧಿ ವಿಧಾನಗಳು ಪ್ರಾರಂಭಗೊಂಡಿದವು. ನಂತರ ಜಿನ ಮಂದಿರದ ಮೂಲ ಸ್ವಾಮಿಯವರಾದ ಭಗವಾನ್ ಶ್ರೀ ಮಹಾವೀರ ತೀರ್ಥಂಕರರಿಗೆ 108 ಕಳಶಗಳ ವಿಶೇಷ ಪಂಚಾಮೃತ ಅಭಿಷೇಕ ಏರ್ಪಡಿಸಲಾಗಿತ್ತು.

ಭಗವಂತರಿಗೆ ಜಲ, ಏಳನೀರು, ಕಷಾಯ, ತುಪ್ಪ, ಶೀರ, ಮೊಸರು, ಗಂಧ, ಶ್ರೀಗಂಧ, ಚಂದನ, ಸೇರಿದಂತೆ ವಿವಿಧ ದ್ರವ್ಯಗಳಿಂದ ಅತ್ಯಂತ ಭಕ್ತಿ ಭಾವದಿಂದ ಅಭಿಷೇಕ ಪೂಜೆಯನ್ನು ನೆರೆವೇರಿಸಲಾಯಿತ್ತು. ನಂತರ ಕನಕ ವೃಷ್ಟಿ, ಪುಷ್ಪವೃಷ್ಟಿ,  ಶಾಂತಿಧಾರೆಯೊಂದಿಗೆ  ಪೂಜೆ ಸಂಪನ್ನಗೊಂಡಿತು.

ಮೋಕ್ಷ ಕಲ್ಯಾಣ ನಿಮಿತ್ತ ನಿರ್ವಾಣ ಲಾಡು ಸಮರ್ಪಣೆ ಸಹಿತ ಮಹಾವೀರ ಅಷ್ಟಕದೊಂದಿಗೆ ಮಹಾಮಂಗಳಾರತಿಯನ್ನು ನೆರೆವೇರಿಸಲಾಯಿತ್ತು. ದೀಪಾವಳಿ ದೀಪೋತ್ಸವ ಶುಭಸಂದರ್ಭ ನಿಮಿತ್ತ, ಜಿನ ಮಂದಿರದಲ್ಲಿ ವಿಶೇಷ ದೀಪಾರಧನೆಯನ್ನು ಆಯೋಜಿಸಲಾಯಿತು.

ಶ್ರೀಕ್ಷೇತ್ರ ಕನಕ ಗಿರಿಯ ಪರಮಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಪಟ್ಟಚಾರ್ಯ ಮಹಾಸ್ವಾಮೀಜಿ ರವರ ಪಾವನ ಸಾನಿಧ್ಯದಲ್ಲಿ ಈ ಎಲ್ಲಾ ಪೂಜಾ ವಿಧಾನಗಳುನಡೆದವು. ನಂತರ ನಡೆದಂತಹ ಧಾರ್ಮಿಕ ಸಭೆಯು ಪೂಜ್ಯರ ಪಾವನ ಉಪಸ್ಥಿತಿಯಲ್ಲಿ ಜರುಗಿತು.

ಚಾಮರಾಜನಗರ ಧಿಗಂಬರ ಜನ್ಮ ಸಮಾಜದ ಅಧ್ಯಕ್ಷರಾದ ಶ್ರೀ ಆರ್. ಎಸ್. ವರ್ಧಮಾನಯ್ಯನವರ ಅಧ್ಯಕ್ಷತೆಯ ಈ ಧಾರ್ಮಿಕ ಸಭೆಯಲ್ಲಿ ಮೈಸೂರು ವಿಶ್ವವಿಧ್ಯಾನಿಲಯದ ಜೈನ ಶಾಸ್ತ್ರ ಪ್ರಾಕೃತ ವಿಭಾಗದ ಅಧ್ಯಾಪಕಿಯಾದ ಡಾಕ್ಟರ್ ಎಮ್, ಎಸ್, ಪದ್ಮರವರು ಮುಖ್ಯ ಅಥಿತಿಗಳಾಗಿ ಅಗಮಿಸಿ, ಭಗನಾನ್ ಮಹಾವೀರರ ಜೀವನ ಚರಿತ್ರೆ ಮತ್ತು ಸಂದೇಶ ಕುರಿತಾಗಿ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮಕ್ಕೆ ಸಹಕರಿಸಿದಂತಹ ಮಹಾನಿಯರನ್ನು ಗೌರವಿಸಲಾಯಿತು.

ಶ್ರೀಮತಿ ಜೋತಿ ಮತ್ತು ಶ್ರೀಮತಿ ಭವ್ಯ ಪ್ರರ್ಥಿಸಿದರು . ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಣೆಮಾಡಿದ ಶ್ರೀ ಎಲ್. ವಿಜಯ್ ಕುಮಾರ್ ರವರು ಸ್ವಾಗತಿಸಿದರ. ಶ್ರೀ ಪುನೀತ್ ಎನ್. ಸಿದ್ಧಾರ್ಥ ರವರ ವಂದಣಾರ್ಪಣೆ ಮತ್ತು ಶ್ರೀಮತಿ ಕುಮುದಾ ನಾಗಭೂಷಣ್ ರವರ ನಿರೂಪಣೆ ಸಭೆಯು ಯಶಸ್ವಿಯಾಗಿ ನಡೆಯಿತು.