ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ 2018 ಎಂಬ್ಲಮ್ ಅನಾವರಣ

ಜೈ ಜಿನೆಂದ್ರ ಜ್ವಾಲಾಮಾಲಾ ನ್ಯೂಸ್ ಡಾಟ್ ಗೆ ಸ್ವಾಗತ : –

ಶ್ರೀ ಪಿ. ವೈ. ರಾಜೆಂದ್ರ ಕುಮಾರ್ ರವರು ಸ್ವಾಗತಿಸಿದ  ಕಾರ್ಯಕ್ರಮದಲ್ಲಿ ಶ್ರೀ ಎಸ್ ಜಿತೇಂದ್ರ ಕುಮಾರ್ ರವರು  ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಲಾಂಛನವು  ಗುಳ್ಳಕಾಯಿ ಅಜ್ಜಿಯು ಬಾಹುಬಲಿ ಮೂರ್ತಿಗೆ  ಅಭಿಷೇಕ  ಮಾಡಿದ 10ನೇ ಶತಮಾನದ ಸಂದರ್ಭದ ಚಿತ್ರಣವನ್ನು ಹೊಂದಿದೆ.  ಹಾಗೂ  ವಿಶ್ವ,, ಭಾರತ,, ಕರ್ನಾಟಕ  ಮತ್ತು ಹಾಸನದ ನಕ್ಷೆಯನ್ನು ಒಳಗೊಂಡಿದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ  ಸಂದೇಶವನ್ನು  ಹೊಂದಿದ್ದು , ಇದನ್ನು ಹಾಸನದ  ಕಲಾವಿದ ಶಂಕರಪ್ಪರವರಿಂದ ರಚಿಸಲಾಗಿದ್ದು  ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಏ. ಮಂಜುರವರು  ಕೇಂದ್ರ ಸರ್ಕಾರದಿಂದ ಮಸ್ತಕಾಭಿಷೇಕಕ್ಕೆ ಅನುದಾನ ದೊರೆಯದಿದ್ದರೆ ರಾಜ್ಯ ಸರ್ಕಾರ ಎಲ್ಲಾ ಸಹಕಾರವನ್ನು  ನೀಡಲಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ  ಬಜೆಟ್ ನಲ್ಲಿ ರಾಜ್ಯ ಸರ್ಕಾರ  175 ಕೋಟಿ ರೂ ಅನುದಾನ ಘೋಷಿಸಿದ್ದು ಜೈನ ಸಮುದಾಯದ ಪರವಾಗಿ  ಸರ್ಕಾರದ ಈ ಕಾಳಜಿಗೆ ತುಂಬು ಹೃದಯದ  ಧನ್ಯವಾದಗಳು.  ಅಲ್ಲದೇ  10ನೇ ಶತಮಾನದಲ್ಲಿ ಗಂಗರ ದಂಡನಾಯಕ ಚಾವುಂಡರಾಯನು ಬಾಹುಬಲಿ ಮೂರ್ತಿಗೆ ಮಸ್ತಕಾಭಿಷೇಕ ಮಾಡುವ ಸಂದರ್ಭದಲ್ಲಿ  ಅಭಿಷೇಕ ಅಪೂರ್ಣವಾಯಿತು . ಈ ಸಮಯದಲ್ಲಿ ಕ್ಷೇತ್ರದ ಅದಿದೇವತೆ ಕೂಷ್ಮಾಂಡಿನೀ ಮಾತೆ  ಗುಳ್ಳಕಾಯಿ ಅಜ್ಜಿಯ ರೂಪದಲ್ಲಿ

ಬಂದು  ಭಕ್ತಿಯಿಂದ ಅಭಿಷೇಕ  ಮಾಡುತ್ತಾರೆ.  ಆಗ ಕ್ಷೀರವು ಅಕ್ಷಯವಾಗಿ  ಹೊಳೆಯಂತೆ ಹರಿಯಿತು ಎಂದು ಸ್ಮರಿಸಿದರು.

ಕಾರ್ಯಕ್ರಮದ  ಅಧ್ಯಕ್ಷರಾಗಿ ಶ್ರೀ ಸಿ. ಎನ್ ಬಾಲಕೃಷ್ಣರವರು  ಮಾತ ನಾಡಿದರು ಹಾಗೂ ಕಾರ್ಯಕ್ರಮದಲ್ಲಿ  ಜಿಲ್ಲಾಧಿಕಾರಿಗಳಾದ ವಿ. ಚೈತ್ರ ರವರು , ರಾಹುಲ್ ಕುಮಾರ್ ರವರು , ಆರ್. ವೆಂಕಟೇಶ್ ಕುಮಾರ್ ರವರು , ಎನ್. ಕೆ. ಜಾನಕಿರವರು , ಮಮತಾ ರಮೇಶ್ , ಮಹಾಲಕ್ಷ್ಮೀ ಶಿವರಾಮ್, ಹೇಮ ಪ್ರಭಾಕರ್ ರವರು ಉಪಸ್ಥಿತರಿದ್ದರು.