ಮಹಿಳಾ ಸಮಾರಂಭ ಉದ್ಘಾಟನೆ ಹಿಂದಿಯಲ್ಲಿ

ಹಿಂದಿ ನುಡಿಗಳು.

(ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಭಗವಾನ್ ಶ್ರೀ ಶ್ರೀ ಶ್ರೀ ಗೊಮ್ಮಟೇಶ್ವರ ಮಹಾ ಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ನಡೆದ ರಾಷ್ಟ್ರಮಟ್ಟದ ಜೈನ ಮಹಿಳಾ ಸಮಾವೇಶ ದಿನಾಂಕ ಆಗಸ್ಟ್ 11, 12, 13ರಂದು ಗೊಮ್ಮಟ ನಗರದ ಪಟ್ಟಮಹಾದೇವಿ ಶಾಂತಲ ಸಭಾ ಮಂಟಪದಲ್ಲಿ ವೈಭವಯುತವಾಗಿ ನಡೆಯಿತು. ಸಂಸ್ಕೃತಿ ಸಂರಕ್ಷಣೆ ನಮ್ಮ ಕರ್ತವ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಅಯೋಜಿಸಲಾದ ಸಮ್ಮೇಳನಕ್ಕೆ ದೇಶದ ವಿವಿಧೆಡೆಯಿಂದ ಸಾವಿರಾರು ಮಂದಿ ಆಗಮಿಸಿದರು.

ಪೂಜ್ಯ ಜಗತ್ ಗುರು ಕರ್ಮ ಯೋಗಿ ಸ್ವಸ್ತಿಶ್ರೀ ಚಾರು ಕೀರ್ತಿ ಭಟಾರಕ ಸ್ವಾಮೀಜಿಯವರು ಪಾವನ ನೇತೃತ್ವ ವಹಿಸಿದ ಸಮ್ಮೇಳನದಲ್ಲಿ ಮಾತೃಶ್ರೀ ಹೇಮಾವತಿ ವಿರೇಂದ್ರ ಹೆಗ್ಗಡೆಯವರು ಸಮ್ಮೇಳನ ಅಧ್ಯಕ್ಷರಾಗಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಮತಿ ಶೀಲಾ ಅನಂತರಾಜ್ ರವರು ಮಾತನಾಡಿ ಗಣ್ಯರುಗಳನ್ನು ಸ್ವಾಗತಿಸಿದರು, ಮಹಾ ಮಸ್ತಕಾಭಿಷೇಕದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮತಿ ಸರಿತಾ ಎಂ.ಕೆ ಜೈನ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕರ್ನಾಟಕದ ಸನ್ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮಕ್ಕಳ ಅಭಿವೃಧ್ದಿ ಸಚಿವರಾದ ಶ್ರೀಮತಿ ಉಮಾ‍ಶ್ರೀ ಯವರು ಮರುದೇವಿಯ ಮೂರ್ತಿ ಅನಾವರಣ ಮಾಡುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು  ಜೈ ಜಿನೇಂದ್ರ ಎಂದು ಪ್ರಾರಂಭಿಸಿ ಕನ್ನಡ ಭಾಷೆ ಬೆಳವಣಿಗೆಗೆ ಜೈನ ಧರ್ಮದ ಕೊಡುಗೆ ಅಪಾರ ಧರ್ಮದ ಮಹಿಳೆಯರ ಪಾತ್ರ ಹಿರಿಯದಾಗಿದೆ,

ಸಮಾಜವನ್ನು ಕಟ್ಟುವ ಕೆಲಸವನ್ನು ಮಹಿಳೆಯರು ಮಾಡಬೇಕೆಂದು ಸಲಹೆ ನೀಡಿದರು.

ಮಾತೃಶ್ರೀ ಹೇಮಾವತಿ ವಿರೇಂದ್ರ ಹೆಗ್ಗಡೆಯವರು ಮಾತನಾಡಿ ಸಮ್ಮೇಳನದ ವಿಜೃಂಭಣೆಯನ್ನು ಹಿನ್ನೆಲೆಯನ್ನು ಗಮನಿಸಿದರೆ ಬಾಹುಬಲಿ ಮೂರ್ತಿ ಸ್ಥಾಪನೆಗೆ ಕಾರಣಳಾದ ಕಾಳಲದೇವಿಯೆ ಇಲ್ಲಿಯ ಮೂಲ ನಾಯಕಿ ಹಾಗೂ ಚಾವುಂಡ ರಾಯನ ಮಾನಕ-ಶಾಹಿಗಳನ್ನು ನಾಶ ಮಾಡಿ ಅಭಿಷೇಕವನ್ನು ಪೂರ್ಣಗೊಳಿಸುವ ಮೂಲಕ ಆತನಾ ಮಾನ ಉಳಿಸಿದ ಗುಳ್ಳಕಾಯಿಜಿ ರೂಪದ ಕುಷ್ಮಾಡಿನಿ ದೇವಿಯು ಈ ಸಮಾರಂಭದ ಅಧಿನಾಯಕಿ ಎಂದರು. ಅಲ್ಲದೆ ಧಾರ್ಮಿಕ ಸಮಾಜಿಕ ಸಾಂಸ್ಕೃತಿಕ ಕೌಟುಂಬಿಕ ಎಲ್ಲಾ ನೇಲೆಯಲು ಎಲ್ಲಾ ಕಾಲದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ರವರ ಪತ್ನಿ ತಾರ ಎ. ಮಂಜು ಮಾಧವಿ ನಾಲ್ಕು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು.

ಭೂಪಾಲದ ಡಾ|| ಸುಧಾ ಮಲ್ಲಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಹಾಲಕ್ಷ್ಮಿ ಶಿವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಹೇಮಾ ಪ್ರಬಾಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸಿ.ಕೆ. ಕುಸುಮ ರಾಣಿ, ಜಿ.ಅರ್. ಗೀತಾ ಗೋಪಾಲ ಸ್ವಾಮಿ, ರತ್ನ ಪ್ರಭಾ ಸೇಟಿ, ಸುರೇಂದ್ರ ಹೆಗ್ಗಡೆ, ಜಿತೇಂದ್ರ ಕುಮಾರ್, ವಿನೋದ್ ದೊಡ್ಡಣ್ಣನವರ್, ಸಿ.ಎನ್. ಬಾಲಕೃಷ್ಣರವರು ಉಪ-ಸ್ಥಿತರಿದರು).