ಧರ್ಮ ಬಂಧುಗಳೇ ಪ್ರಸ್ತುತ 20/12/2024 ರಂದು ನಡೆಯುತ್ತಿರುವ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಸಹೃದಯಿ ಜನನಾಯಕ ಶ್ರೀ ಬಿ.ಆರ್ ಶೀತಲ್ ಕುಮಾರ್ ರವರು ಭಾಗವಹಿಸುತ್ತಿದ್ದು ಅವರ ಒಂದು ಸಂಕ್ಷೀಪ್ತ ಪರಿಚಯ.
ಶ್ರೀ ಬಿ.ಆರ್ ಶೀತಲ್ ಕುಮಾರ್ ಇವರು ಮೂಲತಃ ಬೆಂಗಳೂರಿನವರು ಬೆಂಗಳೂರಿನ ಕಾಲೇಜಿನಲ್ಲಿ ಬಿಎಸ್ಸ್ ಸಿ ಪದವಿ ಮುಗಿಸಿ ಆರಂಭಿಸಿದ್ದು ಟ್ರಾವೆಲ್ ಏಜೆನ್ಸಿ. 2012 ರಲ್ಲಿ ಎಸ್ ಆರ್ ಎಫ್ ಡಿಟೆಕ್ಟಿವ್ ಅಂಟ್ ಸೆಕ್ಯುರಿಟಿ ಸಂಸ್ಥೆ ಆರಂಭಿಸಿದರು. ಬಲವಾಗಿ ಕಟ್ಟಿ ಬೆಳೆಸಿದರು. ಈಗ ಇವರ ಸಂಸ್ಥೆ ಸುಮಾರು 8000ಕ್ಕೂ ಮೀರಿ ಸಿಬ್ಬಂದಿಗಳಿಗೆ ಉದ್ಯೋಗ ನೀಡುತ್ತಾ ಅಗ್ರಪಥ್ಯ ಸಂಸ್ಥೆಯಾಗಿದೆ. ದಕ್ಷಿಣ ಭಾರತದ್ಯಂತ ಶಾಖೆಗಳಿವೆ ಭಾರತದ್ಯಂತ ವಿಸ್ತರಿಸುವ ಮಹತ್ವಾಕಾಂಕ್ಷೆಯೂ ಕೂಡ ಇದೆ. ಇದೆಲ್ಲಾ ಮೀರಿ ಹೃದಯವಂತರು, ವಿನಯಶೀಲರೂ , ಜೀವನೋತ್ಸಾಹಿಗಳು ಮತ್ತು ಸಮಾಜಸೇವಕರು. ಅತ್ಯಂತ ಚಟುವಟಿಕೆ ಉತ್ಸಾಹದಿಂದ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿ ದಾನಧರ್ಮ ಮತ್ತು ಸನ್ಮಾರ್ಗದಲ್ಲಿ ಸಾಗುತ್ತಿರುವವರು ಅವರ ಕೆಲವು ಸಾಧನೆಗಳನ್ನು ಗಮನಿಸುವುದಾದರರೆ ಕೋವಿಡ್ ಸಮಯದಲ್ಲಿ ಅತ್ಯಂತ ಶ್ರದ್ಧೆಯಿಂದ ಜೈನ್ ಅಸೋಸಿಯೇಷನ್ಸ್ ಅಧ್ಯಕ್ಷರ ಜೊತೆ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾದರು. 30 ದಿನಗಳ ಕಾಲ 20 ಜನ ಸಿಬ್ಬಂದಿಯನ್ನು ಕೋವಿಡ್ ಕಾರ್ಯಕ್ಕಾಗಿ ವೇತನಸಹಿತ ಕಳುಹಿಸಿಕೊಟ್ಟರು. ವೈಯುಕ್ತಿಕ ಕೊಡುಗೆಯಾಗಿ 15 ಲಕ್ಷ ರೂಗಳನ್ನು ಸಂಗ್ರಹಿಸಿ ನೀಡಿದ್ದಾರೆ. ಜೈನ ಸಮಾಜದ ಹಾಸ್ಟೆಲ್ ಹುಡುಗರ ಮೂಲಭೂತ ಸೌಲಭ್ಯಗಳನ್ನು ಉತ್ತಮಗೊಳಿಸಿದ್ದಾರೆ ಮತ್ತು ತಕ್ಕನಾದ ಬಂದೋಬಸ್ತು ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಯಾವುದೇ ಜೈನಮಠದ ಕಾರ್ಯಕ್ರಮಗಳು ಜರುಗಿದಾಗ ಐದಾರು ದಿನಗಳು ಇದ್ದರೂ ಪ್ರತಿಬಾರಿಯೂ ಅಷ್ಟುದಿನ ಉಚಿತವಾಗಿ ಸೆಕ್ಯುರಿಟಿ ಸೇವೆಯನ್ನು ನೀಡುತ್ತಿದ್ದಾರೆ . ಜೈನ ಸಮಾಜದ ಯಾವುದೇ ಸಂಘಸಂಸ್ಥೆಗಳು ಅಥವಾ ಯಾವುದೇ ರೀತಿಯ ಕಟ್ಟಡ ನಿಧಿ ಅಥವಾ ವಿದ್ಯಾನಿಧಿ ಇತ್ಯಾದಿಗಳೆಂದು ಮುಂದು ಬಂದಾಗ ಅಪಾರವಾಗಿ ವೈಯುಕ್ತಿಕವಾಗಿ ದೇಣಿಗೆಯನ್ನು ನೀಡಿದ್ದಾರೆ. ತುಮಕೂರಿನ ಮಂದಾರಗಿರಿ ಬೆಟ್ಟದಲ್ಲಿ ಹಲವು ದಿನಗಳ ಕಾಲ ಉಚಿತ ಸೆಕ್ಯುರಿಟಿಯನ್ನು ನೀಡಿರುತ್ತಾರೆ. ಮಂದಾರಗಿರಿ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕಾಗಿ ಎತ್ತಿನಹೊಳೆ ಪ್ರಾಜೆಕ್ಟ್ ಮೂಲಕ 5 ಕೋಟಿ ರೂಗಳನ್ನು ಅನುದಾನ ತರುವಲ್ಲಿ ಮತ್ತು ವೈಯುಕ್ತಿಕವಾಗಿ ಪರಿಶ್ರಮಿಸಿದ್ದಾರೆ. ಬಸದಿ ಹೊಸಕೋಟೆಯ ದೇವಸ್ಥಾನದ ಯೋಜನೆಗೆ ಸ್ನೇಹಿತರ ಮೂಲಕ 1 ಕೋಟಿ ೧೧ ಸಾವಿರರೂ.ಗಳ ದಾನವನ್ನು ನೀಡಿರುತ್ತಾರೆ. ಯುಗಳ ಮುನಿಗಳು ಬೆಂಗಳೂರಿಗೆ ಆಗಮಿಸಿದಾಗ ಎಲ್ಲಾ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿರುತ್ತಾರೆ. ಅಲ್ಲದೇ ಸಂಪೂರ್ಣ ಭದ್ರತೆಯನ್ನು ಕೂಡ ನೀಡಿದ್ದಲ್ಲದೇ ಅದ್ದೂರಿಯಾದ ಸ್ವಾಗತ ಮತ್ತು ಮೆರವಣಿಗೆ ಕಾರ್ಯಕ್ರಮಗಳಲ್ಲಿ ಸಮರ್ಪಿಸಿಕೊಂಡಿರುತ್ತಾರೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳ ಕ್ಷೇತ್ರಕ್ಕೆ 4 ಲಕ್ಷ ರೂ. ಬೆಲೆಬಾಳುವ ಡೋರ್ ಫ್ರೇಂ ಮತ್ತು ಹ್ಯಾಂಡ್ ಡಿಟೆಕ್ಟರ್ ದಾನ ಮಾಡಿರುತ್ತಾರೆ. ಇದೀಗ ನಡೆಯುತ್ತಿರುವ ಜೈನರ ಅತಿಶಯ ಕ್ಷೇತ್ರ ಜೈನರ ಗುತ್ತಿ ಅಡಗೂರು ಕಾರ್ಯಕ್ರಮದಲ್ಲಿ ಸಂಪೂರ್ಣ ಸೆಕ್ಯುರಿಟಿ ಬಸ್ ಸಂಪೂರ್ಣ ಉಚಿತವಾಗಿ ಮಾಡಿಸಿರುತ್ತಾರೆ.ಡಿಸೆಂಬರ್ 6 ನೇ ತಾ ರೀಖು ಶ್ರವಣಬೆಳಗೊಳದ ನಿಶಿದ್ದಿ ಮಂಟಪದ ಉದ್ಘಾಟನೆಯಲ್ಲಿಯೂ ಕೂಡ ಭದ್ರತಾ ವ್ಯವಸ್ಥೆಯನ್ನು ಮಾಡಿಸಿರುತ್ತಾರೆ.
ಜೀತೋ ಸಂಸ್ಥೆಯ ಸದಸ್ಯ ಹಾಗೂ ಜೈನ್ ಬಿಸಿನೆಸ್ ನೆಟವರ್ಕ್ ಉಪಾಧ್ಯಕ್ಷರಾಗಿ ಎಷ್ಟೋ ಸಮುದಾಯದ ಮಕ್ಕಳಿಗೆ ವಿದ್ಯೆ ಮತ್ತು ವಿದ್ಯಾರ್ಥಿ ವೇತನಕ್ಕೆ ಸಹಕರಿಸಿರುತ್ತಾರೆ. ಸಮುದಾಯದ ಮತ್ತು ಧಾರ್ಮಿಕ ಹಿತರಕ್ಷಣಾ ವೇದಿಕೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ತಂಡ ಕಟ್ಟಿ ಪ್ರತಿಭಟನೆ ಮಾಡುವುದರಲ್ಲಿ ಸದಾ ಮುಂದಿರುತ್ತಾರೆ. ಶ್ರವಣಬೆಳಗೊಳದ ಸ್ವಾಮೀಜಿಯವರ ಪುರಪ್ರವೇಶದಲ್ಲಿ ಅದ್ದೂರಿ ಮೆರವಣಿಗೆ ಸ್ವಾಗತ ಪ್ರಚಾರ ಇತ್ಯಾದಿಗಳನ್ನು ಸ್ವತಃ ನಿರ್ವಹಿಸಿದ್ದಾರೆ. ತಮ್ಮ ನಿಸ್ವಾರ್ಥ ಸಮಾಜಸೇವೆಯಿಂದ ಎಲ್ಲಾ ಮಠ ಮಾನ್ಯಗಳ ಭಟ್ಟಾರಕರ ವಿಶ್ವಾಸವನ್ನು ಗಳಿಸಿರುತ್ತಾರೆ. ಅವರ ಭವಿಷ್ಯದ ಮುನ್ನೋಟಗಳು ಹೀಗಿವೆ. ಜೈನ ಸಮುದಾಯದ ಯಾವುದೇ ಶ್ರಾವಕ ಶ್ರಾವಕಿಯರು ಬಂದರೆ ಉಳಿದುಕೊಳ್ಳಲು, ಊಟ ಮತ್ತು ದಾಸೋಹಗಳು ನಡೆಯುವ ಹಾಗೆ ಬಲವಾದ ವ್ಯವಸ್ಥೆಗಳನ್ನು ಮಾಡಲು ಯೋಚಿಸಿದ್ದಾರೆ. ಸರ್ಕಾರದ ಅನುಮತಿ ಪಡೆದು ಜೈನ ಸಮುದಾಯದ ಕಟ್ಟಡದಲ್ಲಿ ಇನ್ನೂ 2 ಅಂತಸ್ತು ಹೆಚ್ಚು ನಿರ್ಮಿಸಿ ಅದರಲ್ಲಿ ತ್ಯಾಗಿ ನಿವಾಸ ವಿದ್ಯಾರ್ಥಿಗಳ ಕೊಠಡಿಗಳು ಜೈನ ಕಾರ್ಯಕ್ರಮಕ್ಕೆ ಬೇಕಾದ ಸಭಾಂಗಣ ಇತ್ಯಾದಿಗಳನ್ನು ನಿರ್ಮಿಸುವ ಯೋಜನೆಯಲ್ಲಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿಯೂ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸುವ ಮತ್ತು ಜೈನ ಸಮುದಾಯದ ಪ್ರವಾಸಿಗರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನಿಟ್ಟುಕೊಂಡಿದ್ದಾರೆ. ಇವರ ಈ ನಿಷ್ಠೆಯುತ ಕೆಲಸಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸೋಣ ಮತ್ತು ದಿನಾಂಕ 29/12/2024ರಂದು ಕೆ.ಜೆ. ಎ ಬೆಂಗಳೂರು ಇಲ್ಲಿ ನಡೆಯುವ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಶ್ರೀ ಬಿ.ಆರ್ ಶೀತಲ್ ಕುಮಾರ್ ರವರಿಗೆ ನೀಡಿ ಆಶೀರ್ವದಿಸಿ ಹರಸಿ ಜಯಗೊಳಿಸಬೇಕೆಂದು ಈ ಮೂಲಕ ತಮ್ಮ ಸೇವಾಕಾಂಕ್ಷಿ ಶ್ರೀ ಬಿ.ಆರ್ ಶೀತಲ್ ಕುಮಾರ್ ರವರು ವಿನಂತಿಸಿಕೊಳ್ಳುತ್ತಿದ್ದಾರೆ.













