ಭ. ಶ್ರೀ 1008 ಕಲ್ಪದ್ರುಮ ಆದಿನಾಥ ಸ್ವಾಮಿ ಜಿನಮಂದಿರ

ಕರ್ನಾಟಕದ ಮಧ್ಯಭಾಗದಲ್ಲಿರುವ ದಾವಣಗೆರೆಯ ದಿಗಂಬರ ಜೈನ ಸಮಾಜದ ಶ್ರೀ ಮಹಾವೀರ ಸಂಘದ ಆಶ್ರಯದಲ್ಲಿ ಭಗವಾನ್ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನ ಮಂದಿರದಲ್ಲಿ 8 ನೇ ವರ್ಷದ ಅನಂತನೋಂಪಿ ಪೂಜಾ ಕಾರ್ಯಕ್ರಮಗಳು 105 ಗಣನಿ ಆರಿಕ ಮುಕ್ತಿಮತಿ ಮಾತಾಜಿ ಮತ್ತು ಸೋಂದಾ ಮಠದ ಸ್ವಸ್ತಿ ಶ್ರೀ ಪರಮ ಪೂಜ್ಯ ಜಗದ್ಗುರು ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಬಹಳ ವೈಭವ ಪೂರ್ವಕವಾಗಿ ನೆರವೇರಿತು.

ನೋಂಪಿಯ ಮೂರನೇ ದಿನ 24 ತೀರ್ಥಂಕರರಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. 60 ಜನ ವ್ರತದಾರಿಗಳು ಮತ್ತು ಜೈನ ಬಾಂಧವರು ನೋಂಪಿಯಲ್ಲಿ ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಸಂಘದ ಪದಾಧಿಕಾರಿಗಳಾದ ಶ್ರೀ ಅಜಿತ್ ಕುಮಾರ್, ಶ್ರೀ ಸುನೀಲ್ ಕುಮಾರ್, ಶ್ರೀ ಚಂದ್ರ ಪ್ರಭು, ಶ್ರೀ ಧನ್ಯಕುಮಾರ್, ಶ್ರೀ ನೇಮಿರಾಜ್, ಶ್ರೀ ಅಶೋಕ್ ಬೇತೂರು, ಶ್ರೀ ಪ್ರೀತಮ್ ದುಂಡಶಿ ಮತ್ತು ಇತರರು ಮುಂದಾಳತ್ವವನ್ನು ವಹಿಸಿದ್ದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

          ಜ್ವಾಲಮಾಲ ಡಾಟ್ ನ್ಯೂಸ್