ಬಸದಿ ಹೊಸಕೋಟೆ

ಜೈ ಜಿನೇಂದ್ರ ನಾನು ಒಂದು ತೀರ್ಥಕ್ಷೇತ್ರ, ಜನರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಬರುವ ಪುಣ್ಯ ಭೂಮಿ ನಾನು, ನನ್ನನ್ನು ಹಲವಾರು ಹೆಸರುಗಳಿಂದ ಗುರುತಿಸುತ್ತಾರೆ. ಜಿನಾಲಯ, ಬಸದಿ, ಜಿನ ಮಂದಿರ, ಸಿದ್ದ ಕ್ಷೇತ್ರ, ತಪೋಭೂಮಿ, ಪಾವನ ಭೂಮಿ ಈಗೆ.

ನಾನು ಭಗವಂತನು ನೆಲೆಸಿರುವಂತಹ ಸ್ಥಳ, ಭಕ್ತನ್ನು ಭಗವಂತನ್ನು ಭೇಟಿಯಾಗುವ ಸ್ಥಳ, ಆ ಭಗವಂತನು ತನ್ನ ವಾತ್ಸಲ್ಯವನ್ನು ಧಾರೆ ಏರೆಯಲು ಆರಿಸಿಕೊಂಡ ವಿಶಾಲವಾದ ಭೂಮಿಯ ಭಾಗನಾನು.

ನನಗೆ ಹೆಮ್ಮೆಯ ಇತಿಹಾಸವಿದೆ, ನನ್ನನ್ನು ಶ್ರೇಷ್ಟ ಶಿಲ್ಪಿಗಳು ಕೆತ್ತಿದ್ದಾರೆ, ನನ್ನ ಗೊಡೆಗಳಲ್ಲಿ ಪ್ರಕೃತಿದತ್ತ ವರ್ಣಗಳಿಂದ ಚಿತ್ರಕಲೆಗಳು ಚಿತ್ರಿತಗೊಂಡವು. ವಿಭಿನ್ನ ಪ್ರಕಾರದ ಲೋಹ ಗಳು ಮತ್ತು ಶಿಲೆಗಳಿಂದ ನಿರ್ಮಿತ ವಿಗ್ರಹಗಳನ್ನು ನನ್ನ ಅಂಗಳದಲ್ಲಿ ಪ್ರತಿಷ್ಠಾಪಿಸಲಾಯಿತು.

 ಈಗಲು ನನ್ನ ಗತಕಾಲದ ವೈಭವ ನನಗೆ ನೆನಪಿದೆ, ನನ್ನ ಪ್ರಾಂಗಣದಲ್ಲಿ ಯಾವಗಲು ಭಕ್ತರ ದಂಡಿರುತ್ತಿತ್ತು. ಭಜನೆಗಳು ನಡೆಯುತ್ತಿದ್ದವು, ಗೀತೆ ಸಂಕೀರ್ತನೆಗಳು ಕೇಳುತ್ತಿದ್ದವು, ಇಲ್ಲಿ ತುಂಬಿದ ಕಣ್ಣುಗಳಿಂದ ಪ್ರಾರ್ಥನೆಯನ್ನ ಮಾಡಲಾಗುತ್ತಿತ್ತು.

ನಾನು ಒಂದು ತೀರ್ಥಕ್ಷೇತ್ರ ಒಬ್ಬ ಭಕ್ತನನ್ನು ಭಗವಂತನಲ್ಲಿ ಬೇಟಿ ಮಾಡಿಸುವ ಒಂದು ನಿಮಿತ್ತ ಮಾತ್ರವಾಗಿದೇನೆ, ಆತ್ಮನನ್ನು ಪರಮಾತ್ಮನಲ್ಲಿ ಲೀನವಾಗಿಸುವ ಪುಷ್ಪಮಾತ್ರವಾಗಿದ್ದೇನೆ. ನನ್ನಲ್ಲಿ ಪ್ರಾರ್ಥನೆಗಳನ್ನು ಆಲಿಸಲಾಗುತ್ತದೆ, ಅವುಗಳನ್ನು ನೆರವೇರಿಸಲಾಗುತ್ತದೆ. ಖಾಲಿ ಕೈಗಳಲ್ಲಿ ಬರುವ ಭಕ್ತರ ಜೊಲಿಗಳನ್ನು ತುಂಬಿಸಲಾಗುತ್ತದೆ, ಬಾಳನ್ನು ಅಸನಾಗಿಸಲಾಗುತ್ತದೆ.

ನಾನಿರುವಲ್ಲಿ ಸಾಧುಗಳು ಮುನಿಗಳು ಆಚಾರ್ಯರುಗಳ ಮೇಳವೆ ಇರುತ್ತಿತ್ತು. ಆದರೆ ಕಾಲ ಬದಲಾಯಿತು, ಭಕ್ತರು ನಿಧಾನವಾಗಿ ನನ್ನನ್ನು ಮರೆತರು. ನಾನು ಸಮಯದೊಂದಿಗೆ ತೀವ್ರ ಸಂಕಟವನ್ನ ಸಹಿಸಿದೆ, ನನ್ನ ದೇಶದಂತೆ ನಾನು ಕೂಡ ಪರದೇಶಿಗಳಿಂದ ಹಿಂಸೆಗೊಳಗಾದೆ, ನಾನು ಅಜ್ಞಾತವಾಸವನ್ನ ಅನುಭವಿಸ ಬೇಕಾಯಿತು. ನಾನು ಏಕಾಂಗಿ ಜೀವನವನ್ನ ಕಳೆದೆ.

ನಾನು ಒಂದು ತೀರ್ಥಕ್ಷೇತ್ರ ಎಷ್ಟು ಜನಗಳ ಪ್ರಾರ್ಥನೆಯನ್ನು ಕೇಳಿದೆ ಅವರಿಗೆ ಅವರ ಸೂರನ್ನು ನೀಡಿದೆ, ಅವರ ಮನೆಗಳನ್ನು ಮಹಲನ್ನಾಗಿಸಿದೆ, ಆದರೆ ಇವತ್ತು ನನ್ನ ಅಂಗಳವೆ ಏಕೆ ಬರಡಾಗಿದೆ, ನನ್ನ ಬೇರುಗಳು ಏಕೆ ಬತ್ತಿ ಹೋಗಿದೆ, ನನ್ನನ್ನು ಏಕೆ ಇಂದು ಉಪೇಕ್ಷಿಸಲಾಗಿದೆ. ಮರವೆ ಹಸಿರಾಗಿಲ್ಲದಿದ್ದರೆ ಹೂ ಹಣ್ಣಾಗುವುದಾದರು ಹೇಗೆ, ನದಿಗಳೆ ಬತ್ತಿಹೊದರೆ ಪಾವನ ಜಲ ಸಿಗುವುದಾದರು ಹೇಗೆ, ಅತಿ ಪ್ರಾಚೀನವಾದ ಈ ತೀರ್ಥಕ್ಷೇತ್ರಗಳು ನಿಮ್ಮಿಂದ ನ್ಯಾಯವನ್ನು ಬೇಡುತ್ತಿವೆ. ಉಪೇಕ್ಷೆಗೆ ಒಳಗಾಗಿರುವ ಆಧ್ಯಾತ್ಮಯುತ ಕಲ್ಲುಗಳು ಉತ್ತರವನ್ನು ಬಯಸುತ್ತಿವೆ.

ನಿಮ್ಮಿಂದ ನಿಮ್ಮಿಂದ ಮತ್ತು ನಿಮ್ಮಿಂದ ಕೂಡ ಉತ್ತರವನ್ನು ಬಯಸುತ್ತಿವೆ. ತಾಯಿ ಹಸಿವಿನಿಂದ ಬಳಲುತ್ತಿದ್ದರೆ ಮಗನಿಗೆ ಹೊಟ್ಟೆತುಂಬಿಸಿಕೊಳ್ಳುವ ಹಕ್ಕು ಇದೇಯ.

ಈ ಜಿನ ಮಂದಿರಗಳು ಜೀರ್ಣಾವಸ್ಥೆಯಲ್ಲಿ ಇರುವಾಗ ಭಕ್ತನಿಗೆ ತನ್ನ ಮನೆಗಳನ್ನು ಶೃಂಗರಿಸಿಕೊಳ್ಳುವ ಹಕ್ಕು ಇದೇಯ. ಹೇಳಿ, ನೀವು ಹೇಳಿ, ಮಂದಿರಗಳು ಮರುಗುತ್ತಿರುವಾಗ ಭಕ್ತರಿಗೆ ನಗುವ ಹಕ್ಕಾದರು ಎಲ್ಲಿಂದ. ಹೃದಯ ವೀಣೆ ತಂತಿ ಮುರಿದಾಗ ಆತ್ಮವು ಪರಮಾತ್ಮನನ್ನು ಕರೆಯುವುದಾದರು ಹೇಗೆ. ಪ್ರಾರ್ಥನೆಗಳು ಕಳೆದು ಹೋಗಿದೆ ಹರಕೆಗಳು ಮುಗಿದಿವೆ.

ನಾನು ಒಂದು ತೀರ್ಥಕ್ಷೇತ್ರ  ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ, ನನ್ನ ಸ್ವಪ್ನಗಳನ್ನ ಸಕಾರಗೊಳಿಸಿ, ನನ್ನನ್ನು ಜೀರ್ಣೋದ್ಧಾರಗೊಳಿಸಿ, ಮಲಗಿರುವ ಸಮಾಜವನ್ನ ಬಡಿದೆಬ್ಬಿಸಿ ನನ್ನನ್ನು ಜೀರ್ಣೋದ್ಧಾರಗೊಳಿಸಿ, ಆಧ್ಯಾತ್ಮಿಕ ವಾತವರಣವನ್ನು ಸೃಷ್ಟಿಸಿ ನನ್ನನ್ನು ಜೀರ್ಣೋದ್ಧಾರಗೊಳಿಸಿ, ನನ್ನನ್ನು ಜೀರ್ಣೋದ್ಧಾರಗೊಳಿಸಿ.

ಕೇಳಿದ್ರಲ್ಲಾ ಬಂಧುಗಳೆ, ಭಾತರದಲ್ಲಿ ಇಂತಹ ಬಸದಿಗಳು ಅದರಲು ಜೈನ ಪರಂಪರೆಯ ಮೂಲಸ್ಥಾನವಾದ ಕರ್ನಾಟಕದಲ್ಲಿ ಪ್ರಾಚೀನ ರಾಜ ಮನೆತನಗಳಿಂದ ಅನೇಕ ತ್ಯಾಗಿ ತಪಸ್ವಿಗಳಿಂದ ನಿರ್ಮಿತಗೊಂಡು ಪರಕೀಯರ ಆಕ್ರಮಣಕ್ಕೆ ತುತ್ತಾಗಿ ದುಸ್ತಿತಿಯನ್ನು ತಲುಪಿದ ಬಸದಿಗಳನ್ನು ಕಂಡು ಅವುಗಳ ಅಳಲನ್ನು ಆಲಿಸಹೊರಟ ನಮ್ಮ ಯುಗಳ ಮುನಿ ಮಹಾರಾಜರಾದ ಪರಮಪೂಜ್ಯ 108 ಅಮೋಘ ಕೀರ್ತಿ ಮುನಿ ಮಹಾರಾಜರು, ಪರಮ ಪೂಜ್ಯ 108 ಅಮರ ಕೀರ್ತಿ ಮುನಿ ಮಹಾರಾಜರು ಇವುಗಳ ಜೀರ್ಣೋದ್ಧಾರದ ಸಂಕಲ್ಪವನ್ನು ಮಾಡಿ ಕಳೆದ 13 ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯಪ್ರೌವೃತ್ತರಾಗಿದ್ದಾರೆ.

ಯುಗಳ ಮುನಿಗಳ ಆಶೀರ್ವಾದದಿಂದ ಮುಂಬೈನಲ್ಲಿ ಶ್ರೀ ವೀರಶಾಸನ ಪ್ರಭಾವನ ಟ್ರಸ್ಟ್ ಸ್ಥಾಪಿತವಾಗಿದೆ. ಇದರಲ್ಲಿ ಸುಮಾರು 200ಕ್ಕು ಹೆಚ್ಚು ಕುಟುಂಬಗಳು  ತಮ್ಮ ದಾನವನ್ನು ನೀಡಿದ್ದಾರೆ. ಈ ಟ್ರಸ್ಟ್ ನ ಸಹಯೋಗದೊಂದಿಗೆ ಮುನಿ ಮಹಾರಾಜರ ಪ್ರೇರಣೆಯಲ್ಲಿ ನಮ್ಮ ತೀರ್ಥರಾಜ ಸಂವೇದ ಶಿಕರ್ಜಿಯ 24 ಕೂಟಗಳಿಗು ಗುಡುಗು ಮಿಂಚು ನಿರೋಧಕಗಳನ್ನ ಅಳವಡಿಸಲಾಗಿರುವುದಲ್ಲದೇ ದುಸ್ಥಿತಿಯಲ್ಲಿದ  ಭಗವಾನ್ ಶ್ರೀ ಪಾರ್ಶ್ವನಾಥ ಸುವರ್ಣ ಭದ್ರ ಕೂಟದ ಸಂಪೂರ್ಣ ಜೀರ್ಣೋದ್ದಾರ ಕೂಡ ಉಚ್ಚಮಟ್ಟದಲ್ಲಿ ಆಗಿದೆ.

ಬಹು ಪ್ರಾಚೀನವಾದ ತುಮಕೂರಿನ ಮಂದರಗಿರಿ ಬೆಟ್ಟ ಸಮಪೂರ್ಣ ನಿರ್ಲಕ್ಷಕೊಳಗಾಗಿದಲ್ಲದೆ, ಬೆಟ್ಟದ ಮೇಲಿನ ಜೀರ್ಣೋದ್ಧಾರ ಕಾರ್ಯ ಕಷ್ಟ ಸಾಧ್ಯವಾಗಿದ್ದ ಕಾರಣ ಬೆಟ್ಟದ ಭಗವಾನ್ ಪಾರ್ಶ್ವನಾಥ ಸುಪಾರ್ಶ್ವನಾಥ ಹಾಗೂ ಚಂದ್ರ ಪ್ರಭಾ ಜಿನ ಮಂದಿರಗಳು ಪಾಳು ಬಿದಂತ್ತಾಗಿ ಅವಸಾನದತ್ತ ಸಾಗಿತ್ತು. ಇಂತಹ ಕ್ಷೇತ್ರದ ಜೀರ್ಣೋದ್ಧಾರವನ್ನು ಯೋಚಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತುಮಕೂರಿಗೆ ಚಾತುರ್ಮಾಸಕ್ಕಾಗಿ ಯುಗಳ ಮುನಿಗಳ ಆಗಮನವಾಗುತ್ತಲೆ ಇಲ್ಲಿನ ಅವಶ್ಯಕತೆಯನ್ನು ಮನಗಂಡು ಬೆಟ್ಟದಲ್ಲಿಯೆ ವಾಸ್ತವ್ಯ ಹೂಡಿ ಶ್ರೀ ವೀರ ಶಾಸನ ಪ್ರಭಾವನ ಟ್ರಸ್ಟ್ ಸಹಯೋಗದೊಂದಿಗೆ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರ ಮತ್ತು ಚಾತುರ್ಮಾಸ ಸಮಿತಿ ತುಮಕೂರು ಹಾಗೂ ಮುನಿ ಮಹಾರಾಜರ ಪ್ರೇರಣೆಯಂತೆ ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರ ಕೈಗೊಂಡು ಇದೀಗಾ ಸುಂದರ ಯಾತ್ರಾ ಸ್ಥಳವಾಗಿ ಹೊರ ಹೊಮ್ಮಿದೆ. ಬೆಟ್ಟದ ಮುಂಭಾಗದಲ್ಲಿ ಬೃಹತ್ ದಿವ್ಯಾಕಾಶ ಸಂವತ್ಸರಣದ ನಿರ್ಮಾಣವಾಗುತ್ತಿದೆ.

ಈಗೆ ಮುನಿಗಳು ಈ ಬಾರಿಯು ಚಾತುರ್ಮಾಸದ ಮೂಲಕ ಅನೇಕ ಮಹತ್ಕಾರ್ಯಗಳನ್ನ ಸಂಪನ್ನಗೊಳಿಸಲಿದ್ದು ಅದರಲ್ಲಿ ಪ್ರಮುಖವಾದದ್ದು ಬಸದಿಯ ಹೊಸಕೋಟೆ ಯೋಜನೆ, ಒಂದೊಮ್ಮೆ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದ ಜೈನ ಸಂಸ್ಕೃತಿಯನ್ನು ಪ್ರತಿನಿಧಿಸಿ ಮಾಣಿಕ್ಯದೊಡಲೂರು ಎಂಬ ಹೆಸರಿನಿಂದ ರಾಜ ಪೂಜಿತವಾದ ಸ್ಥಳ ಕಾಲ ಚಕ್ರಕ್ಕೆ ಸಿಲುಕಿ ತನ್ನ ವೈಭವವನ್ನು ಕಳೆದುಕೊಂಡು ಅವನತಿಹೊಂದಿ ಈಗಾ ಅವಶೇಷಗಳಾಗಿ ಬದಲಾಗಿವೆ.  ಸುಂದರ ಬಾಹುಬಲಿ ಮೂರ್ತಿ, ಮನೋಗ್ಞ ಕೆತ್ತನೆ ಹಾಗೂ ಶಿಲ್ಪ ಕೃತಿಗಳುಳ್ಳ ಬಸದಿ ಇಂದು ಭಗ್ನಾವಶೇಷಗಳಾಗಿ ಉಳಿದಿರುವ ಬಸದಿ ಹೊಸಕೋಟೆಯ ಕಥೆ ಇದು.

ಜಗದ್ವಿಖ್ಯಾತ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಸರಳ ದಾರಿ ಕಾಣದೆ ಭಕ್ತರಿಂದ ದೂರವಾಗಿ ಬಾಹುಬಲಿ ಮೂರ್ತಿನಿಂತಿದೆ. ಜಲಾಶಯ ನಿರ್ಮಾಣಕ್ಕಾಗಿ ಸ್ಥಳಾಂತರ ಕಾರಣದಿಂದಲೋ ಅಥವ ಮುಳುಗಡೆಯಿಂಲೊ ಅವಶೇಷವಾಗಿರುವ ಕಾವೇರಿ ಹೇಮಾವತಿ ಲಕ್ಷ್ಮಣ ತೀರ್ಥ ಸಂಗಮದಲ್ಲಿ ಇರುವಂತಹ ಮನೋಗ್ಞವಾದಂತಹ ಸ್ಥಳ. ಹೊಯ್ಸಳ ದೊರೆ ವಿಷ್ಣುವರ್ಧನನ ಮಹಾನ ಪ್ರಧಾನ ದಂಡನಾಯಕ ಹುಣಿಸನ್ಮಯನ್ನು ನಿರ್ಮಿಸಿದನೆಂದು ಕ್ರಿಶ 1147ರ ಹೊಯ್ಸಳರ ಕಾಲದ ಶಿಲಾ ಶಾಸನ ತಿಳಿಸುತ್ತದೆ. ಪಂಚ ಬಸದಿಗಳೊಂದಿಗೆ ಜೈನರ ಪೂಣ್ಯಕ್ಷೇತ್ರವಾಗಿ ಬೆಳಗಿ ಬಾಳಿದ ಈ ಸ್ಥಳದ ಗತಕಾಲದ ವೈಭವವನ್ನು ಮತ್ತೆ ತರುವ ಸಂಕಲ್ಪ ಹೊತ್ತು ಮತ್ತೆ ಈ ಸುಂದರ ಪ್ರಾಂಗಣದಲ್ಲಿ ಬಸದಿಗಳು ನಿರ್ಮಾಣವಾಗಬೇಕು, ಮೂರ್ತಿಗಳು ಪ್ರತಿಷ್ಠಾಪಿತವಾಗ ಬೇಕು ಮಂತ್ರಗೊಶಗಳು ಮೊಳಗ ಬೇಕು, ಭಜನೆ ಕೀರ್ತನೆಗಳು ಕೆಳಬೇಕು, ಮತ್ತೊಂಮ್ಮೆ ಇಲ್ಲಿ ಭಕ್ತಿ ರಾರಾಜಿಸಿ ಪ್ರಾರ್ಥನೆಗಳು ಇಲ್ಲಿ ಸಲ್ಲಿಕೆಯಾಗ ಬೇಕು. ಈ ತೀರ್ಥ ಕ್ಷೇತ್ರ ಮತ್ತೊಂಮ್ಮೆ ಮೇರೆಯ ಬೇಕು ಎನ್ನುವ ಧ್ಯೆಯದೊಂದಿಗೆ ಯುಗಳ ಮುನಿಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.

ಬನ್ನಿ ನಿಮ್ಮ ಪೂರ್ವಜರ ಕನಸನ್ನು ಸಾಕರಗೊಳಿಸೋಣ, ಬನ್ನಿ ಭವಿಷ್ಯದ ಪೀಳಿಗೆಗೆ ಪರಂಪರೆಯ ಸಂಸ್ಕೃತಿಯನ್ನು ನೀಡೋಣ, ಇವುಗಳ ಹೊರತಾಗಿ ನಮ್ಮ ಜೀವನವಿಲ್ಲ. ಜೀರ್ಣಾವಸ್ಥೆಯಲ್ಲಿರುವ ಬಸದಿಗಳನ್ನ ಜೀರ್ಣೋದ್ಧಾರ ಮಾಡುವುದು ಜೈನ ಧರ್ಮದ ಪರಮ ಶ್ರೇಷ್ಟ ಕೆಲಸವಾಗಿದೆ.

ನಮ್ಮ ಯುಗಳ ಮುನಿಗಳ ಸಂಕಲ್ಪಕ್ಕೆ ನಾವು ಕೈ ಜೋಡಿಸಿ ಈ ಕ್ಷೇತ್ರಗಳ ಜೀರ್ಣೋದ್ಧಾರ ಮಾಡೋಣ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್