ಹಾಚಡಿ

ಜೈ ಜಿನೇಂದ್ರ ವೀಕ್ಷಕರೆ, ಹಚ್ಚಾಡಿ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ಈ ಬಸದಿಯು ಹಚ್ಚಾಡಿ ಮನೆತನದ ಹಿರಿಯರಿಂದ ಆರಾಧಿಸಿಕೊಂಡು ಬಂದು ಹಚ್ಚಾಡಿ ಮನೆತನಕ್ಕೆ ಸೇರಿದ ಬಸದಿಯಾಗಿದೆ. ಇಲ್ಲಿನ ವಿಶೇಷತೆ ಎಂದರೆ ಮೂರು ಗರ್ಭಗುಡಿಯುಳ್ಳ ಬಸದಿ ತ್ರಿಕೂಟ ಜಿನಾಲಯವಾಗಿದ್ದು ಕ್ರಮವಾಗಿ ಇಲ್ಲಿನ ಮೂಲ ಸ್ವಾಮಿ ಪಾರ್ಶ್ವನಾಥ ಸ್ವಾಮಿ, ಶ್ರೀ ಅದಿನಾಥ ಸ್ವಾಮಿ ಹಾಗೂ ಶ್ರೀ ಚಂದ್ರಪ್ರಭ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದ್ದು ಪ್ರಕೃತಿದತ್ತ ಈ ಅಮೋಘ ಪರಿಸರದಲ್ಲಿರುವ ಸುಂದರ ಜಿನ ಬಸದಿ ಇದಾಗಿದೆ.

1992ನೇ ಇಸವಿಯಲ್ಲಿ ಜೀರ್ಣಾವಸ್ತೆಯಲ್ಲಿದ ಈ ಬಸದಿಯನ್ನು ಜಿನ ರಾಜ ಭಲ್ಲಾಳರು ಧರ್ಮ ಶ್ರದ್ಧೆ ಮೇರೆದು ಬಹಳ ಆಸಕ್ತಿಯಿಂದ 1996ರವರೆಗೆ ಜೀರ್ಣೋದ್ಧಾರವನ್ನು ಕೈಗೊಂಡು ಡಿಸೆಂಬರ್ ತಿಂಗಳಲ್ಲಿ ಶುದ್ದ ಸಂಪ್ರೋಕ್ಷಣೆ ಕಾರ್ಯವನ್ನು ಮಾಡಲಾಗಿದೆ. 1558ರಲ್ಲಿ ಇಲ್ಲಿನ ಮೂಲ ಮೂರ್ತಿ ಖಡ್ಗಾಸನದಲ್ಲಿರುವ ಪಂಚಲೋಹದ್ದಾಗಿರುವ ಪಾರ್ಶ್ವನಾಥಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಪೀಠದಲ್ಲಿರುವ ಶಾಸನದಲ್ಲಿ ನಮೂದಿಸಲಾಗಿದೆ.

ಇಲ್ಲಿನ ಅರ್ಚಕರು ಹಾಗೂ ಪ್ರತಿಷ್ಠಾಚಾರ್ಯರು ಶ್ರೀ ಯುತ ಅಜಿತ್ ಕುಮಾರ್ ಇಂದ್ರ ಅವರು, ಮೇಲೆನ ನೆಲೆಗಳಲ್ಲಿ ಭಗವಾನ್ ಆದಿನಾಥ ಮೂರ್ತಿ ಚಂದ್ರನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ಮಾತೆ ಪದ್ಮಾವತಿ ದೇವಿ ಇಲ್ಲಿನ ಆರಾಧ್ಯದೇವತೆ. ಶ್ರಾವಣ ಮಾಸದ ಪೂಜೆ ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಹಾಗೂ ಪ್ರತಿ ಶುಕ್ರವಾರ ಮನೆತನದ ಪೂಜೆ ಬಹಳ ಅಚ್ಚಕಟ್ಟಾಗಿ ನಡೆಯುತ್ತದೆ. ಇಲ್ಲಿ ಡಿಸೆಂಬರ್ ತಿಂಗಳಲ್ಲಿ ರಥೋತ್ಸವವನ್ನು ವೈಭವವಾಗಿ ನಡೆಸಲಾಗುತ್ತದೆ ಎಂದು ಸ್ವರ್ಗಿಯ ಶ್ರೀ ಜಿನರಾಜ ಭಲ್ಲಾಳ್ ರವರ ನಂತರ ಈ ಬಸದಿಯನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ನವೀನ್ ಚಂದ್ ಭಲ್ಲಾಳ್ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಶ್ರೀ ನವೀನ್ ಚಂದ್ ಭಲ್ಲಾಳ್ ಅವರು ಮತನಾಡಿ ಹಚ್ಚಾಡಿ ಮನೆತನದ ಬಸದಿಯಾದ ಹಚ್ಚಾಡಿ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯನ್ನು ಕುರಿತು ಜೀರ್ಣೋದ್ದಾವನ್ನು ಹಚ್ಚಾಡಿ ಮನೆತನದವರೆ ಮಾಡಿಕೊಂಡಂತಹ ಸಂದರ್ಭವನ್ನು ಕುರಿತು ಹಾಗೂ ಈ ಬಸದಿಯಲ್ಲಿ ನಡೆಸುವ ಪೂಜಾ ಕಾರ್ಯಕ್ರಮವನ್ನು ಕುರಿತು ತಿಳಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್