ಜ್ವಲಮಾಲಾ ನ್ಯೂಸ್

ಉತ್ತರ ಕನ್ನಡ ಜಿಲ್ಲೆ ಕುಮ್ಮಟನಗರದಲ್ಲಿ ಬಹಳ ವರ್ಷದ ಕಾಲದಿಂದಲು ಕೂಡ ಬಸದಿ ಚಿಕ್ಕ ಪ್ರಮಾಣದಲ್ಲಿ ಇತ್ತು. ನಮ್ಮಕುಮ್ಮಟ ತಾಲ್ಲೂಕಿನ ಸಮಾಜದವರು ಸೇರಿ ಸ್ವಾಧಿ ಮಠದ ಭಟ್ಟಾಕಲಂಕ ಸ್ವಾಮೀಜಿಯವರ ಆಶೀರ್ವಾದ ಮತ್ತು ಅನುಗ್ರಹದೊಂದಿಗೆ, ಅದಕ್ಕೂ ಪೂರ್ವದಲ್ಲಿ ಮುಂಚಿನ ಬಸದಿ ಮಾಡುವ ಸಂದರ್ಭದಲ್ಲಿ ಚಿಕ್ಕ ಬಸದಿಗಳನ್ನು ನಿತ್ಯ ವಿನಿಯೋಗಕೆಂದು ನಿರ್ಮಾಣ ಮಾಡಿಕೊಂಡಿದ್ದೆವು, ಆ ಸಂದರ್ಭದಲ್ಲಿ ಸ್ವಾಧಿ ಮಠದ ಭಟ್ಟಾಕಲಂಕ ಸ್ವಾಮೀಜಿಯವರು ಬಂದು ಬಸದಿಯನ್ನು ಜೀರ್ಣೋದ್ಧಾರ ಮಾಡಬೇಕು ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ ಎಂದು ಹೇಳಿದರು. ನಂತರ ಪುಣ್ಯಸಾಗರರ ಆಗಮನವಾಯಿತು ಆ ಸಂದರ್ಭದಲ್ಲಿ ಪಂಚಪರಮೇಶ್ಟಿ ಆರಾಧನೆ ಇತ್ಯಾದಿಗಳು ನಡೆದವು, ಆಗ ಸಮಾಜದ ಸಮಸ್ತರು ಕೂಡ ಇಲ್ಲಿ ಭಾಗಿಯಾಗಿ ಜೀರ್ಣೋದ್ದಾರ ಮಾಡಬೇಕು ಎಂಬ ಅಭಿಪ್ರಾಯ ಪಟ್ಟರು. ಫೆಬ್ರವರಿ 2022ಕ್ಕೆ ಶಿಲಾನ್ಯಾಸ ಸ್ವಾಮೀಜಿಯವರ ಮುಂದಾಳತ್ವದಲ್ಲೆ ನೆರವೇರಿತು.

ಹೌದು ವೀಕ್ಷಕರೆ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನಲ್ಲಿ ನಲ್ಲಿಕೆರೆ ಎಂಬ ಒಂದು ಸಣ್ಣ ಗ್ರಾಮ, ಅಲ್ಲಿ ಊರಿಗಾಗಿ ತಾವೆ ಸ್ವತಃ ಬಸದಿಯೊಂದನ್ನು ಮಾಡಿಕೊಂಡು ನಿರ್ವಹಣೆ ಮಾಡುತ್ತ ಈಗಾ ಊರಿನ ಹತ್ತಿರದ ಪರಊರಿನವರ ಸಹಕಾರದಿಂದ ಶ್ರೀಗಳವರ ಇಚ್ಚೆಯಂತೆ ಹಾಗೂ ಸುತ್ತಲಿನ ಗ್ರಾಮಕ್ಕಾಗಿ ಬಸದಿಯ ಜೀರ್ಣೋದ್ಧಾರ ಕಾರ್ಯವನ್ನು ಟ್ರಸ್ಟ್ ಮೂಲಕ ಕೈಗೊಂಡು ನಿರ್ಮಾಣದ ಹಂತದ ಕಾಮಗಾರಿ ಈ ಹಂತದವರೆಗು ತಲುಪಿದ್ದು ಮುಂದಿನ ಕಾರ್ಯಕ್ಕೆ ಧರ್ಮಾತ್ಮರುಗಳ ಸಹಕಾರವನ್ನು ಬಯಸುತ್ತಿದ್ದಾರೆ. ಇಲ್ಲಿಯ ವರೆಗೆ ಜಿನ ಭಗವಂತನ ಕೆಲಸಗಳು ನಿಮ್ಮಂತಹ ದಾನಿಗಳ ಸಹಯೋಗದಲ್ಲಿ ಸಾಂಗವಾಗಿ ನಡೆಯುತ್ತಾ ಬಂದಿದೆ. ಈ ಬಸದಿಯನ್ನು ಸಹ ಪೂರ್ಣಗೊಳಿಸಿ ಪಂಚಕಲ್ಯಾಣದ ಪುಣ್ಯಕಾರ್ಯದಲ್ಲಿ ತಾವುಗಳು ಭಾಗಿಯಾಗುತ್ತಿರೆಂದು ಆಶಯ.

ಗುರುರಾಜ .ಎಮ್. ಇಂದ್ರರು

ಎಲ್ಲ ಸಮಾಜದವರು ಊರಿನವರು ಪರಊರಿನವರೆಲ್ಲಾ ಸೇರಿ ಬಸದಿ ಜೀರ್ಣೋದ್ಧಾರಕ್ಕೆ ಸಹಕಾರ ಕೊಡಬೇಕು ಎಂದು ಕೇಳಿಕೊಂಡರು.

ನಂತರ ಸ್ಥಳಿಯರು ಕೂಡ ವಿನಂತಿಸಿಕೊಂಡರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್