ಅಶೋಕ ಕಲಸ ಪ್ರವೇಶ

ಜೈ ಜಿನೇಂದ್ರ ವೀಕ್ಷಕರೆ, ತಮ್ಮ ಅದ್ಬುತ ಪ್ರವಚನ ಧರ್ಮ ಪ್ರಭಾವನೆಯ ಸಂಕಲ್ಪ ರಾಜ್ಯಾಧ್ಯಂತ ಮಂಗಲ ವಿಹಾರ ಕ್ಷೇತ್ರಗಳ ಅಭಿವೃದ್ಧಿಯ ಚಿಂತನೆ, ವಾತ್ಸಲ್ಯ ಹಾಗೂ ಸ್ನೇಹಮಹಿ ಗುಣಗಳಿಂದ ಪ್ರಭಾವಿತ ಅನೇಕ ಅನುಯಾಯಿ ಭಕ್ತರನ್ನು ಸಂಪಾದಿಸಿರುವ ಯುಗಳ ಮುನಿ ಮಹಾರಾಜರ 2022ರ ಚಾತುರ್ಮಾಸ ಪ್ರಯುಕ್ತ ಬೆಂಗಳೂರು ಮಹಾನಗರ ಪುರ ಪ್ರವೇಶ ಜನಸಾಗರದಿಂದ ತುಂಬಿ ಸಂಭ್ರಮಯುತ ಅದ್ದೂರಿ ಮಂಗಲ ಪ್ರವೇಶವಾಯಿತು. ದಿನಾಂಕ 19-06-2022ರಂದು ಪರಮ ಪೂಜ್ಯ 108 ಅಮೋಘ ಕೀರ್ತಿ ಮುನಿ ಮಹಾರಾಜರು, ಪರಮ ಪೂಜ್ಯ 108 ಅಮರ ಕೀರ್ತಿ ಮುನಿ ಮಹಾರಾಜರು ವಿಲ್ಸನ್ ಗಾರ್ಡನ್ ನಿಂದ ಹೊರಟು ಬೆಂಗಳೂರು ನಗರಕ್ಕೆ ಆಗಮನವಾದಾಗ ನಡೆದ ಸಂಭ್ರಮಾಚರಣೆ ಇದು. ಈ ಸಂಭ್ರಮದಲ್ಲಿ ನೇತೃತ್ವವಹಿಸಿದ ಶ್ರೀ ಡಿ ಸುರೇಂದ್ರ ಕುಮಾರ್ ರವರು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ವಸತಿ ಸಚಿವರಾದ ವಿ. ಸೋಮಣ‍್ಣ, ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯರವರು, ಮಾಜಿ ಸಚಿವರಾದ ಶ್ರೀ ಅಭಯ್ ಚಂದ್ರ ಜೈನ್ ರವರು, ಐ ಪಿ ಎಸ್ ಜಿನೇಂದ್ರ ಕಣಗಾವಿಯವರು, ಕರ್ನಾಟಕ ಜೈನ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ವಿ ಪ್ರಸನ್ನಯ್ಯನವರು ಹಾಗೂ ಪದಾಧಿಕಾರಿಗಳು. ಚಕ್ರೇಶ್ವರಿ ಮಹಿಳಾ ಸಮಾಜ ಹಾಗೂ ಸಕಲ ಜೈನ ಸಮಾಜ ಬೆಂಗಳೂರು ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರುಗಳು ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರಾವಕ ಶ್ರಾವಕಿಯರು ಕೂಡ ಬೆಂಗಳೂರಿನ ವರೆಗುಬಂದು ಮುನಿ ಮಹಾರಾಜರನ್ನು ಸಡಗರದಿಂದ ಬರಮಾಡಿಕೊಂಡರು. ನಿಮ್ಮಮುಂದಿದೆ ಈ ಅದ್ಬುತ ದೃಶ್ಯಾವಳಿಗಳು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್