ಜೈ ಜಿನೇಂದ್ರ ವೀಕ್ಷಕರೆ, ತಮ್ಮ ಮಂಗಲ ವಿಹಾರದ ಮೂಲಕ ಆತ್ಮಕಲ್ಯಾಣದೊಂದಿಗೆ ಪ್ರಭಾವನ ಕಾರ್ಯವನ್ನು ಯುವ ಪೀಳಿಗೆಗೆ ಧರ್ಮಾಸಕ್ತಿ ಬಿತ್ತುವ ಸಂಕಲ್ಪವನ್ನು ಹೊತ್ತಂತಹ ಮಹಾನ್ ಮುನಿವರ್ಯರಾದ ಪರಮ ಪೂಜ್ಯ ಮುನಿ ಶ್ರೀ 108 ಅಮೋಘ ಕೀರ್ತಿ ಮುನಿಮಹಾರಾಜರು, ಪರಮ ಪೂಜ್ಯ ಮುನಿ ಶ್ರೀ 108 ಅಮರ ಕೀರ್ತಿ ಮುನಿ ಮಹಾರಾಜರು. 15-06-2022ರಂದು ದೊಡ್ಡ ಬಳ್ಳಾಪುರದ ಕಡೆಹಿಂದ ಬೆಂಗಳೂರು ಯಲಹಂಕ ಅವಲಹಳ್ಳಿಗೆ ಆಗಮಿಸಿದ ಮಹೋನ್ನತ ಘಳಿಗೆಯನ್ನು ಚಂದ್ರನಾಥ ದಿಗಂಬರ ಜೈನ ಟ್ರಸ್ಟ್ ಮತ್ತು ಯಲಹಂಕ ಜೈನ ಸಮಾಜದ ವತಿಯಿಂದ ವಿಜೃಂಭಣೆಯಿಂದ ಸಂಭ್ರಮಿಸುವುದರ ಮೂಲಕ ಮಂಗಲ ಪ್ರವೇಶ ಅಮೋಘವಾಗಿ ನಡೆಯಿತ್ತು.
ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಕೂಡ ಪಾಲ್ಗೊಂಡು ಸಮಾಜ ಭಾಂದವರ ಭಕ್ತಿ ಶ್ರದ್ಧೆಯನ್ನು ಶ್ಲಾಘೀಸಿದರು.
ಮತ್ತು ಚಾತುರ್ಮಾಸ ಎಂದರೆ ನಾಲ್ಕು ತಿಂಗಳು ಈ ನಾಲ್ಕು ತಿಂಗಳನ್ನು ಸಮಾಜದವರಾದ ನಾವು ಉಪಯೋಗಿಸಿಕೊಳ್ಳ ಬೇಕು ಎಂದರು.
ಯುವಕ ಯುವತಿಯರು ಕೂಡ ಕಾರ್ಯಕ್ರಮದಲ್ಲಿ ಅಭಿಷೇಕಾಧಿ ಆಹಾರ ವಿಧಿವಿಧಾನದಲ್ಲಿ ಪ್ರಮುಖವಾಗಿ ಭಾಗವಹಿಸಿದ್ದು ಆಶಾಕಿರಣ ಮೂಡಿಸುವಂತಿತ್ತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














