ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ವೇದಿಕೆಯಲ್ಲಿ ವಸಂತ ಗಿಳಿಯಾರ ರವರು ಜೈನ ಧರ್ಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಒಂದು ಧರ್ಮ ಎನ್ನುವುದು ಅದು ಬದುಕಿನ ಒಂದು ಹಂತವಾಗಿದೆ. ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಬದುಕನ್ನು ಗರ್ಭೀಕರಿಸಿಕೊಂಡಿರುವಂತಹ ಹೇಗೆ ಬದುಕಬೇಕು ಎಂಬುದನ್ನು ತೋರಿಸುವಂತಹ ಜೀವನದ ಕ್ರಮ ಅದು ಧರ್ಮ. ಹಲವಾರು ಧರ್ಮಗಳಿವೆ ಜಗತ್ತಿನಲ್ಲಿರುವ ಹಲವಾರು ಧರ್ಮಗಳಲ್ಲಿ ಅದರ ಪರಿಪಾಲನೆ ಯನ್ನು ಮಾಡುತ್ತಿರುವುದ ಜೈನ ಧರ್ಮವೆಂದು ನಾನು ಹೇಳುತ್ತೇನೆ. ಇತ್ತೀಚಿನ ದಿನಗಳಲ್ಲಿ ಹಲವಾರು ಜೈನ ಧರ್ಮದ ಸ್ನೇಹಿತರುಗಳು ನನಗೆ ಸಿಕ್ಕಿದ್ದಾರೆ. ಅವರೆಲ್ಲರ ಜೀವನ ಕ್ರಮಗಳು ಅಷ್ಟೇ ಅಲ್ಲ ಕೆಲವು ವಿಚಾರಗಳನ್ನು ಮಾತಾಡಿದಷ್ಟು ಅದನ್ನು ಅನುಸರಿಸುವುದು ಬಹಳ ಕಷ್ಟ ಹಾಗೆಯೇ ಹಿರಿಯರು ಹೇಳಿದಂತಹ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವ ಪರಂಪರೆ ಅಂದರೆ ಅದು ಜೈನ ಧರ್ಮ ಹಾಗೂ ಜೈನ ಪರಂಪರೆ ಆಗಿದೆ.
ಜೈನ ಧರ್ಮದ ಅಧಿದೇವತೆಯಾದ ಶ್ರೀ ಪದ್ಮಾವತಿ ಅಮ್ಮನವರನ್ನು ನಾನು ದರ್ಶನ ಮಾಡಿದೆ ನನಗೆ ಏನೋ ಒಂಥರ ನಾನು ಅಂದು ಕೊಂಡ ಕೆಲಸಗಳು ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ನನ್ನ ಕಾರ್ಯಗಳು ನೆರವೇರಿದೆ. ಹಾಗೆಯೇ ನಾನು ಹಲವಾರು ಬಸದಿಗಳನ್ನು ಸುತ್ತಿದ್ದೇನೆ. ಯಾವ ಬಸದಿಗೆ ಹೋದರೂ ಸಹ ನನಗೆ ಏನೋ ಗೊತ್ತಿಲ್ಲ ಮನಸ್ಸಿಗೆ ಸಮಾಧಾನ ಹಾಗೂ ರೋಮಾಂಚನವಾಗುತ್ತದೆ ಎಂದು ಜೈನ ಧರ್ಮದ ಪದ್ದತಿಗಳನ್ನು ಕೂಲಂಕುಷವಾಗಿ ಸಭೆಯಲ್ಲಿ ಮಾತನಾಡಿದರು . ನಂತರ ಅವರನ್ನು ಶಾಲು ಹೊದಿಸಿ ಗೌರವಪೂರ್ವಕವಾಗಿ ಬೀಳ್ಕೋಡುಗೆಯನ್ನು ಮಾಡಲಾಯಿತು.













